ಮಂಗಳೂರು; ಚೂರಿಯಿಂದ ಇರಿದುಕೊಂಡು ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ

ಮಂಗಳೂರು; ಚಾಕುವಿನಿಂದ ಇರಿದುಕೊಂಡು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಾದಿರಾಜ್(55) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಅಧಿಕಾರಿ. ವಾದಿರಾಜ್ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಹೊಟ್ಟೆ ಹಾಗೂ ಕೊರಳಿಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ವಾದಿರಾಜ್ ಅವರು ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪೇದೆ

ಬೆಂಗಳೂರು: ಬಾಣಂತಿ ಪತ್ನಿಯನ್ನು ಕೊಲೆ ಮಾಡಿ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ವರದಿಯಾಗಿದೆ. ಕೊಳತೂರು ಗ್ರಾಮದ ಪ್ರತಿಭಾ (28) ಕೊಲೆಯಾದವರು. ಪೇದೆ ಕಿಶೋರ್(31) ಕೊಲೆ ಆರೋಪಿ. ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ ಮತ್ತು ಪ್ರತಿಭಾಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಕುಟುಂಬಸ್ಥರು ಇಬ್ಬರಿಗೂ ಹಲವು ಸಲ ಬುದ್ದಿ ಹೇಳಿದ್ದರು. 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ … Read more

ಅಮೆರಿಕಾದಲ್ಲಿ ಚೂರಿ ಇರಿತ; ಭಾರತೀಯ ವಿದ್ಯಾರ್ಥಿ ಸಾವು

ಅಮೆರಿಕದಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಲಂಗಾಣದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ತೆಲಂಗಾಣದ ಖಮ್ಮಂ ಮಾಮಿಲಗುಡೆಂ ಪ್ರದೇಶದ ಪುಚ್ಚಾ ವರುಣ್‌ರಾಜ್(29) ಇಂಡಿಯಾನಾ ರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದು, ಅರೆಕಾಲಿಕ ಕೆಲಸವನ್ನು ಕೂಡ ಮಾಡುತ್ತಿದ್ದರು. ಅ.30ರಂದು ಅವರು ಜಿಮ್‌ನಿಂದ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಇದರ ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ವರುಣ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಕಳೆದ ತಿಂಗಳು 30ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣರಾಜ್ … Read more