ಯುದ್ದಪೀಡಿತ ಗಾಝಾ ಸ್ಥಿತಿ ಹೇಗಿದೆ? ನಿರಾಶ್ರಿತರ ಶಿಬಿರಗಳಿಂದ ಭಯಾನಕತೆ ಬಿಚ್ಚಿಟ್ಟ UNRWA ಸಿಬ್ಬಂದಿಗಳು

ಪ್ಯಾಲೆಸ್ತೀನ್ ನಿರಾಶ್ರಿತರ ರಕ್ಷಣೆಗೆ ಕಾರ್ಯಚರಿಸುತ್ತಿರುವ UNRWA ಇಸ್ರೇಲ್ ದಾಳಿಯ ಮಧ್ಯೆ ಗಾಝಾದಲ್ಲಿ ಸೃಷ್ಟಿಯಾದ ವಿಪತ್ತಿನ ಪರಿಸ್ಥಿತಿಯಿಂದ ಜನರನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಯುಎನ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಪ್ಯೂಜೀಸ್ ನಿಯರ್ ಈಸ್ಟ್ (ಯುಎನ್‌ಆರ್‌ಡಬ್ಲ್ಯುಎ) ಗಾಝಾದಲ್ಲಿನ ಪ್ಯಾಲೆಸ್ತೀನ್ ನಿರಾಶ್ರಿತರನ್ನು ರಕ್ಷಿಸಲು ತುರ್ತು ಮನವಿಯನ್ನು ಮಾಡಿದೆ. ದಯವಿಟ್ಟು ಗಾಝಾವನ್ನು ಉಳಿಸಿ, ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಗಾಝಾವನ್ನು ಉಳಿಸಿ. ಅದು ನಾಶವಾಗುತ್ತಿದೆ ಎಂದು ಯುಎನ್‌ಆರ್‌ಡಬ್ಲ್ಯುಎ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೋದಲ್ಲಿ ಯುಎನ್‌ಆರ್‌ಡಬ್ಲ್ಯುಎ ಆಶ್ರಯ ತಾಣಗಳ ಮುಖ್ಯಸ್ಥ … Read more

ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡುತ್ತೀರಾ? ಈ ಪ್ರಶ್ನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹೀಂ ಹೇಳಿದ್ದೇನು ಗೊತ್ತಾ?

ಬೆಂಗಳೂರು; ನಾವು ಜನತಾದಳ ಒರಿಜಿನಲ್‌, ನಾನು ಅದರ ಅಧ್ಯಕ್ಷ, ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, INDIA ಮೈತ್ರಿ ಒಕ್ಕೂಟಕ್ಕೆ ನಮ್ಮ ಬೆಂಬಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ಅವರು ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ಮಾತನಾಡಿ, ಇಂಡಿಯಾ ಮೈತ್ರಿ ಕೂಟದ ನಾಯಕರು ನಮ್ಮ ಜೊತೆ ಮಾತನಾಡಿದ್ದಾರೆ. ಜೈಲಿನಲ್ಲಿ ಹುಟ್ಟಿದವರು ನಾವು, ಪ್ರಾಣ ಕೊಡುತ್ತೇವೆ ಆದರೆ ಸಿದ್ದಾಂತ ಎಂದು ಬಿಟ್ಟುಕೊಡಲ್ಲ ಎಂದು ಸಿಎಂ ಇಬ್ರಾಹೀಂ ಹೇಳಿದ್ದಾರೆ.  ಕುಮಾರಸ್ವಾಮಿಗೆ ಚೆನ್ನಪಟ್ಟಣದಲ್ಲಿ 20,000 ಜನ … Read more

ಪುತ್ತೂರು; ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ತಸ್ಲೀಮ್ ಮೃತದೇಹ ಪತ್ತೆ

ಪುತ್ತೂರು:ಗೌರಿ ಹೊಳೆಗೆ ಈಜಲು ತೆರಳಿ ಬಳಿಕ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ತಸ್ಲೀಮ್ (17) ಮೃತದೇಹ ಪತ್ತೆಯಾಗಿದೆ. ತಸ್ಲೀಮ್ ಸುಳ್ಯದ ಅರಂತೋಡಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ರಜೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ. ತಸ್ಲೀಮ್ ಅ.15ರಂದು ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ನಡೆದಿದೆ. ತಸ್ಲೀಮ್ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು. ತಕ್ಷಣ ಸ್ಥಳೀಯರು,ಮುಳುಗು ತಜ್ಞರು ಬಂದು ಹುಡುಕಾಟ ಮುಂದುವರಿಸಿದ್ದರು.ಅದರೂ ನಿನ್ನೆ … Read more

ಪಾಕ್ ಆಟಗಾರನ ಮುಂದೆ ಜೈ ಶ್ರೀ ರಾಂ ಘೋಷಣೆ; ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ

ಭಾರತ ಮತ್ತು ಪಾಕ್ ನಡುವಿನ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ತೆರಳುವಾಗ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ತಮಿಳುನಾಡಿನ ಕ್ರೀಡಾ ಸಚಿವ ಉದಯ್ ನಿಧಿ ಸ್ಟಾಲಿನ್ ಹೇಳಿದ್ದಾರೆ. ಪಾಕ್ ಆಟಗಾರ ರಿಜ್ವಾನ್ ಔಟಾಗಿ ಡ್ರೆಸ್ಸಿಂಗ್ ರೂಂಗೆ ತೆರಳುವಾಗ ಅಲ್ಲಿದ್ದವರು ಜೈ ಶ್ರೀರಾಮ್ ಘೊಷಣೆ ಕೂಗಿರುವ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಈ ಘಟನೆಯನ್ನು ಖಂಡಿಸಿದ್ದಾರೆ. ಪ್ರೇಕ್ಷಕರ ಈ … Read more

ಸಂಸದೆ ಮಹುವಾ ಮೊಯಿತ್ರಾ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದ ಬಿಜೆಪಿ ಸಂಸದ

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಣ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಕುರಿತು ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿರುವ ನಿಶಿಕಾಂತ್ ದುಬೆ, ಮಹುವಾ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಡಿಸೆಂಬರ್ 12, 2015ರಂದು ಉದ್ಯಮಿ ಹೀರಾನಂದನಿ ಹಿತಾಸಕ್ತಿಯನ್ನು ಕಾಪಾಡಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ದುಬೆ ಆರೋಪ ಮಾಡಿದ್ದಾರೆ. ಸಂಸತ್ತಿನಲ್ಲಿ ಸಂಸದೆ ಮಹುವಾ ಮೊಯಿತ್ರಾ ಕೇಳಿರುವ 65 … Read more