ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷವನ್ನು ತಿಂದು ಹಾಕಿದ ಗೆದ್ದಲು

ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷವನ್ನು ತಿಂದು ಹಾಕಿದ ಗೆದ್ದಲು ಲಕ್ನೋ:ತಾಯಿಯೊಬ್ಬಳು ಮಗಳ ಮದುವೆಗೆಂದು ಜೋಪಾನವಾಗಿ ಕೂಡಿಟ್ಟ 18 ಲಕ್ಷ ರೂ. ಹಣವು ಬ್ಯಾಂಕ್‌ನ ಲಾಕರ್‌ನಲ್ಲಿ ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ ನಿಂದ ವರದಿಯಾಗಿದೆ. ಅಲ್ಕಾ ಪಠಾಕ್‌ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು. ಅಲ್ಕಾ ಪಾಠಕ್ ಅವರು ಬ್ಯಾಂಕ್ ವೊಂದರ ರಾಮಗಂಗಾ ವಿಹಾರ್ ಶಾಖೆಯ ಲಾಕರ್‌ನಲ್ಲಿ ಚಿನ್ನಾಭರಣಗಳ ಜೊತೆಗೆ ಹಣವನ್ನು ಇರಿಸಿದ್ದರು. ಅವರು ತಮ್ಮ ಮಗಳ ಮದುವೆಗಾಗಿ … Read more

ಬಿಪಿಎಲ್ ಪಡಿತರ ಚೀಟಿದಾರರಿಗೆ ಹಣದ ಬದಲು ಅಕ್ಕಿ ವಿತರಣೆ?

ಬೆಂಗಳೂರು; ಅನ್ನಭಾಗ್ಯ ಯೋಜನೆಯಡಿ ಮುಂದಿನ ತಿಂಗಳಿನಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಹಣದ ಬದಲು 10 ಕೆಜಿ ಅಕ್ಕಿ ಸಿಗುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಯಡಿ ಮುಂದಿನ ತಿಂಗಳಿನಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಕಿ ವಿತರಣೆ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಬರ ಪೀಡಿತ ತಾಲೂಕುಗಳಲ್ಲಿ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ … Read more

ಮೊಬೈಲ್ ಪೋನ್ ಚಾರ್ಜ್ ಗಿಟ್ಟು ಮಾತನಾಡುವಾಗ ಮೊಬೈಲ್ ಬ್ಲಾಸ್ಟ್; ಯುವತಿ ಮೃತ್ಯು

ತಿರುಚಿ; ಮೊಬೈಲ್ ಫೋನ್ ಚಾರ್ಜ್ ಇಟ್ಟು ಪೋನ್ ನಲ್ಲಿ ಮಾತನಾಡುವಾಗ ಮೊಬೈಲ್ ಸ್ಪೋಟಗೊಂಡು ಯುವತಿಯೋರ್ವಳು ಮೃತಪಟ್ಟ ಘಟನೆ ತಂಜಾವೂರಿನ ಪಾಪನಾಸಂನಲ್ಲಿ ಬುಧವಾರ ನಡೆದಿದೆ. ತಂಜಾವೂರಿನ ಪಾಪನಾಸಂ ಬಳಿಯ ವಿಸಿತ್ರಾ ರಾಜಪುರಂ ಗ್ರಾಮದ ನಿವಾಸಿ ಪಿ ಗೋಕಿಲಾ (33) ಮೃತರು.ಇವರು ತನ್ನ ಪತಿ ಪ್ರಭಾಕರನ್ ಅವರ ನಿಧನದ ನಂತರ ಮೊಬೈಲ್ ಸೇವಾ ಕೇಂದ್ರವನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಬುಧವಾರ ಗೋಕಿಲಾ ಚಾರ್ಜಿಂಗ್ ಮಾಡುವಾಗ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದರು.ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ … Read more

ವಿಟ್ಲ; ಬಾಲಕಿಗೆ ಕಿರುಕುಳ, ಪ್ರಕರಣ ದಾಖಲು

ವಿಟ್ಲ; ಶಾಲಾ ಬಾಲಕಿಗೆ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಯುವಕ ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದಲ್ಲದೆ ಶಾಲೆ ಸಮೀಪ ಬಂದು ಬಾಲಕಿಯನ್ನು ಬೈಕ್ ನಲ್ಲಿ ಕೂರುವಂತೆ ಹೇಳಿದ್ದು, ಈ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಟ್ಲ … Read more