ಸೈನಿಕನ ಮೇಲೆ ಹಲ್ಲೆ ನಡೆಸಿ ಪಿಎಫ್ ಐ ಬರಹ ಆರೋಪ; ವಿಭಿನ್ನ ತಿರುವು ಪಡೆದ ಪ್ರಕರಣ

ಕೊಲ್ಲಂ: ಕೇರಳದ ಕಡಕ್ಕಲ್ ನಲ್ಲಿ ರಜೆ ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ಸೈನಿಕನ ಮೇಲೆ ಹಲ್ಲೆ ನಡೆಸಿ ಬೆನ್ನಿನ ಮೇಲೆ ‘ಪಿಎಫ್ ಐ’ ಎಂದು ಬರೆಯಲಾಗಿದೆ ಎಂಬ ಸುದ್ದಿ ಇದೀಗ ವಿಭಿನ್ನ ತಿರುವು ಪಡೆದುಕೊಂಡಿದೆ. ಇದೊಂದು ಯೋಧನೇ ಕಟ್ಟಿರುವ ಕಥೆ ಎಂದು ತನಿಖೆ ವೇಳೆ ಸಾಬೀತಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಚನಪಾರಾ ಮೂಲದ ಶೈನ್ ಕುಮಾರ್ (35) ಮತ್ತು ಆತನ ಸ್ನೇಹಿತ ಜೋಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ, ಜನರ … Read more

ಕಡಬ; ಧಾರ್ಮಿಕ ಕೇಂದ್ರದ ಆವರಣದಲ್ಲಿ ಜೈಶ್ರೀರಾಂ ಘೋಷಣೆ; ಇಬ್ಬರ ಬಂಧನ

ಕಡಬ; ಮರ್ದಾಳ ಮಸೀದಿಯ ಆವರಣಕ್ಕೆ ಪ್ರವೇಶಿಸಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ಕೀರ್ತನ್‌ ಹಾಗೂ ಕೈಕಂಬ ನಿವಾಸಿ ಸಚಿನ್‌ ಬಂಧಿತರು. ರಾತ್ರಿ ಬೈಕ್‌ನಲ್ಲಿ ಆಗಮಿಸಿದ ಆರೋಪಿಗಳು ಮಸೀದಿಯ ವರಾಂಡದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದರು. ಸದ್ದು ಕೇಳಿ ಮಸೀದಿಯಿಂದ ಹೊರಬಂದ ಧರ್ಮಗುರುಗಳನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಬೈಕಿನಲ್ಲಿ ಮಸೀದಿಯ ಆವರಣದ ಒಳಗಡೆ ಬಂದು ತೆರಳುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಪೊಲೀಸರು … Read more

ಬದಿಯಡ್ಕ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ಮೃತ್ಯು

-ಅಬ್ದುಲ್ ರೌಫ್, ಬೀಫಾತಿಮ್ಮ, ಬೀಫಾತಿಮ್ಮ ( 60), ಉಮ್ಮು ಫಲಿಮಾ, ನಫೀಸಾ ಮೃತರು. ಕಾಸರಗೋಡು: ಶಾಲಾ ಬಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ. ಮೃತಪಟ್ಟ ನಾಲ್ವರು ಮಹಿಳೆಯರು ಒಂದೇ ಕುಟುಂಬದವಾರಾಗಿದ್ದು, ಮೃತಪಟ್ಟವರನ್ನು ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಅಬ್ದುಲ್ ರೌಫ್ (48), ಉಸ್ಮಾನ್ ರವರ ಪತ್ನಿ ಬೀಫಾತಿಮ್ಮ (50), ಬೀಫಾತಿಮ್ಮ ( 60), ಇಸ್ಮಾಯಿಲ್ ರವರ … Read more