ಟೀಶರ್ಟ್ ಧರಿಸಿ, 50 ಲಕ್ಷ ಹಣದ ಜೊತೆ ಎಸ್ಕೇಪ್ ಆಗಿದ್ದ ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಆಗಿದ್ದೇಗೆ? ಇಲ್ಲಿದೆ ಡಿಟೇಲ್ಸ್..

ಬೆಂಗಳೂರು; ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ ಚೈತ್ರಾ ಕುಂದಾಪುರ ತಂಡದ ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. 50 ಲಕ್ಷರೂ.ಹಣವನ್ನು ತೆಗೆದುಕೊಂಡು ಸ್ವಾಮೀಜಿ ಒಡಿಶಾದ ಕಟಕ್‌ಗೆ ಪರಾರಿಯಾಗಿದ್ದು, ಅಲ್ಲಿಂದ ಕಾಶಿಗೆ ಹೋಗುವಾಗ ಸಿಕ್ಕಿಬಿದ್ದಿದ್ದಾನೆ. ಹಿರೇಹಡಗಲಿಯ ಹಾಲಶ್ರೀ ಮಠದಿಂದ ರಾತ್ರಿ 11 ಗಂಟೆ ವೇಳೆಗೆ ಮೈಸೂರಿಗೆ ತೆರಳಿದ್ದರು. ನಂತರ, ಸೆ.12ರಂದು ಮೈಸೂರಿನ ಹೆಚ್‌ಎಎಲ್‌ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸವಾಗಿದ್ದರು.ಇದಾದ ನಂತರ ಸೆ.3ರಂದು ಬೆಳಗ್ಗೆ ಮೈಸೂರಿನಲ್ಲಿ … Read more

ಸಂಸತ್ತಿನ ಹಳೆಯ ಕಟ್ಟಡಕ್ಕೆ ಹೊಸ ಹೆಸರು ಸೂಚಿಸಿದ ಮೋದಿ

ನವದೆಹಲಿ;ಸಂಸತ್ತಿನ ಹಳೆಯ ಕಟ್ಟಡಕ್ಕೆ ಪ್ರಧಾನಿ ಮೋದಿ ಅವರು ಹೊಸ ಹೆಸರನ್ನು ಸೂಚಿಸಿದ್ದು, ಅದನ್ನು ಸಂವಿಧಾನ ಸದನ(ಸಂವಿಧಾನ ಭವನ) ಎಂದು ನಾಮಕರಣ ಮಾಡಿದ್ದಾರೆ. ಪ್ರಧಾನಿ ಮೋದಿ ಹಳೆಯ ಸಂಸತ್ತಿನಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಹಳೆಯ ಸಂಸತ್ತಿನ ಕಟ್ಟಡಕ್ಕೆ ಈ ಹೆಸರನ್ನು ಘೊಷಿಸಿದ್ದಾರೆ. ಬಳಿಕ ಸಂಸದರ ಜೊತೆ ಕಾಲ್ನಡಿಗೆಯಲ್ಲಿ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಸಂಸತ್ತಿನ ಭಾಷಣದಲ್ಲಿ, ನಾನು ನಿಮಗೆ ಮನವಿ ಮಾಡುತ್ತೇನೆ ಮತ್ತು ನೀವು ಈ ಮನವಿಯನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಈಗ ನಾವು … Read more

ಕಾಸರಗೋಡು; ಸ್ಕೂಟರ್ ಅಪಘಾತ, ಎಂಬಿಬಿಎಸ್ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಎಂಬಿಬಿಎಸ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಾಸರಗೋಡಿನ ಪಿಲಿಕುಂಜೆ ಎಂಬಲ್ಲಿ ನಡೆದಿದೆ. ಕಣ್ಣೂರು ಸೈಂಟ್ ಮೈಕಲ್ ಶಾಲಾ ಸಮೀಪದ ಮಹೇಶ್ಚಂದ್ರ ಬಾಳಿಗಾರವರ ಪುತ್ರಿ ಶಿವಾನಿ ಬಾಳಿಗಾ(20) ಮೃತ ಪಟ್ಟವರು. ಶಿವಾನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇವರು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದರು.

ಹಣದ ರಾಶಿಯ ಮುಂದೆ ಕುಳಿತುಕೊಂಡ ಶಾಸಕ: ವಿಡಿಯೋ ವೈರಲ್

ಹಣದ ರಾಶಿಯ ಮುಂದೆ ಕುಳಿತುಕೊಂಡ ಶಾಸಕ: ವಿಡಿಯೋ ವೈರಲ್ ಛತ್ತೀಸ್‌ಗಢ; ಕಾಂಗ್ರೆಸ್ ಶಾಸಕರೊಬ್ಬರು ಹಣದ ರಾಶಿಯ ಮುಂದೆ ಕುಳಿತಿರುವ ವೀಡಿಯೊ ವೈರಲ್ ಆಗಿದೆ. ಶಾಸಕ ರಾಮ್‌ ಕುಮಾರ್ ಯಾದವ್ ಹಾಸಿಗೆಯ ಪಕ್ಕದಲ್ಲಿ ಸೋಫಾದಲ್ಲಿ ಕುಳಿತಿದ್ದು, ಅದರ ಪಕ್ಕದಲ್ಲೇ ನೋಟುಗಳ ಕಂತೆಗಳನ್ನು ಇಡಲಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೆ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಛತ್ತೀಸ್‌ಗಢ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಾಂಗ್ರೆಸ್ ಛತ್ತೀಸ್‌ಗಢವನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿದೆ … Read more

ಚೈತ್ರಾ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲು!

ಬೆಂಗಳೂರು:ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ಬಿಜೆಪಿ ಟಿಕೆಟ್ ಕೊಡುವುದಾಗಿ ವಂಚನೆ ಮಾಡಿದ್ದ ಚೈತ್ರಾ ಕುಂದಾಪುರ ವಿರುದ್ಧ ಇದೀಗ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಚೈತ್ರಾ ಕುಂದಾಪುರ ಬಟ್ಟೆ ಅಂಗಡಿ ಹಾಕಿಸಿ ಕೊಡುವುದಾಗಿ 5 ಲಕ್ಷ ಪಡೆದು ವಂಚಿಸಿದ ಆರೋಪದ ಸಂಬಂಧ ಉಡುಪಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಬಿಜೆಪಿ ಕಾರ್ಯಕರ್ತ ಸುಧೀನ್​ ಎಂಬುವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್​ ದಾಖಲಿಸಿದ್ದಾರೆ. ಸುಧೀನ್ ಬಿಜೆಪಿ ಕಾರ್ಯಕರ್ತನೆ ಆಗಿದ್ದಾರೆ. ಅವರು ಬಟ್ಟೆ ಅಂಗಡಿ … Read more