ಇಂಜೆಕ್ಷನ್ ಪಡೆದ ಬಳಿಕ ಬಾಲಕ ಸಾವು, ವೈದ್ಯ ನಾಪತ್ತೆ

ವೈದ್ಯಕೀಯ ನಿರ್ಲ್ಯಕ್ಷದಿಂದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ಇಲ್ಲಿಯ ತೆಲಂಗಾಣ ನಾಂಪಲ್ಲಿ ಮಂಡಲ್‌ನಲ್ಲಿ ನಡೆದಿದೆ. ಮಂಡಲದ ಜಾಂತಂಡ ಗ್ರಾಮದ ರಾಮಾವತ್ ರತ್ಯಾ ಸಾಲಿ ದಂಪತಿಯ ಪುತ್ರ ಜಸ್ವಾನ್(14) ಎರಡು ದಿನಗಳಿಂದ ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದ. ಇದರಿಂದ ಆತನ ಅಜ್ಜ ಭಾನುವಾರ ಬೆಳಗ್ಗೆ ಮಂಡಲ ಕೇಂದ್ರದ ಶ್ರೀನಿವಾಸ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿದ್ದ ಆರ್ ಎಂಪಿ ಡಾ.ಕೃಷ್ಣ ಬಾಲಕನನ್ನು ಪರೀಕ್ಷಿಸಿ ಇಂಜೆಕ್ಷನ್ ನೀಡಿದ್ದು,ಆ ಬಳಿಕ ಬಾಲಕನಿಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ. ತಕ್ಷಣ ಬಾಲಕನನ್ನು ಕುಟುಂಬಸ್ಥರು … Read more

ಮಂಗಳೂರು; ಹೋಟೆಲ್ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ

ಮಂಗಳೂರು; ಕೇರಳ ಮೂಲದ ಬ್ಯಾಂಕ್ ಅಧಿಕಾರಿ ನಗರದ ಮೋತಿ ಮಹಲ್ ಹೋಟೆಲ್ ಸ್ವಿಮ್ಮಿಂಗ್ ಪೂಲ್‍ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೇರಳದ ತಿರುವನಂತಪುರಂ ನಿವಾಸಿ ಯೂನಿಯನ್ ಬ್ಯಾಂಕ್‍ನ ಅಧಿಕಾರಿ ಗೋಪು ಆರ್ ನಾಯರ್ ಮೃತದೇಹ ಪತ್ತೆಯಾಗಿದೆ‌. ನಿನ್ನೆ ಮಂಗಳೂರಿಗೆ ಬಂದಿದ್ದ ಅವರು ಮೋತಿ ಮಹಲ್ ಹೊಟೇಲ್‍ನಲ್ಲಿ ಉಳಿದು ಕೊಂಡಿದ್ದರು. ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಬಂದು ಸ್ವಿಮ್ಮಿಂಗ್ ಪೂಲ್ ಬಳಿ ವಿಹರಿಸಿದ್ದರು. ಆದರೆ ರಾತ್ರಿ ವೇಳೆ 11 ಅಡಿ ಆಳದಲ್ಲಿದ್ದ ನಾಯರ್ ಮೃತದೇಹವನ್ನು … Read more

ಆರೆಸ್ಸೆಸ್‌ ನ ಮಾಜಿ ಸ್ವಯಂಸೇವಕರಿಂದ ಹೊಸ ಪಕ್ಷ ಸ್ಥಾಪನೆ

ಆರೆಸ್ಸೆಸ್ ನ ಮಾಜಿ ಸ್ವಯಂಸೇವಕರ ಗುಂಪು ಮಧ್ಯಪ್ರದೇಶದಲ್ಲಿ ರಾಜಕೀಯ ಪಕ್ಷ ಜನಹಿತ್ ಪಾರ್ಟಿಯನ್ನು ರಚಿಸುವ ನಿರ್ಧಾರವನ್ನು ಪ್ರಕಟಿಸಿದೆ. ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಅಭಯ್ ಜೈನ್ ಅವರು ಭೋಪಾಲ್ ಬಳಿಯ ಮಿಸ್ರೋಡ್‌ನಲ್ಲಿ ತಮ್ಮ ಮಾಜಿ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ನಂತರ ಮಾದ್ಯಮದ ಜೊತೆ ಮಾತನಾಡಿ ಜನಹಿತ್ ಪಾರ್ಟಿ ರಚಿಸಿರುವ ಬಗ್ಗೆ ಘೋಷಿಸಿದ್ದಾರೆ. ತಮ್ಮ ಇನ್ನೂ ನೋಂದಣಿಯಾಗದ ಪಕ್ಷವು ಬಿಜೆಪಿಯ ಮತಗಳನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಇಳಿಸುವ ಬಗ್ಗೆ … Read more

ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ನ್ಯಾಯಾಂಗ ಬಂಧನ; ರಾಜಮಂಡ್ರಿ ಕಾರಾಗೃಹದ ಸುತ್ತ ಭದ್ರತೆ ಹೆಚ್ಚಳ

ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ಬಂಧಿಸಿದೆ. ಮಾಜಿ ಮುಖ್ಯಮಂತ್ರಿ ನಾಯ್ಡು ಅವರು 14 ದಿನಗಳ ಕಾಲ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನ ಸುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 8 ಮಧ್ಯಾಹ್ನ … Read more

ಬಂಟ್ವಾಳ; ಯುವಕನಿಗೆ ತಂಡದಿಂದ ಹಲ್ಲೆ, ದೂರು ದಾಖಲು

ಬಂಟ್ವಾಳ; ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಮೈಂದಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೈಂದಾಳ ನಿವಾಸಿ ನಿಸಾರ್ ಅಪರಿಚಿತ ವ್ಯಕ್ತಿಗಳ ತಂಡದಿಂದ ಹಲ್ಲೆಗೆ ಒಳಗಾದವರು. ಶನಿವಾರ ರಾತ್ರಿ 9.45ರ ಸುಮಾರಿಗೆ ಅಜ್ಜಿ ಮನೆಯಿಂದ ನಿಸಾರ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ … Read more