ಪುರುಷ, ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿದ ವಿಜ್ಞಾನಿಗಳು!

ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ ಆ ಮೂಲಕ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೀವಂತ ಕೋಶವಿಲ್ಲದೆ ಮಾನವ ಭ್ರೂಣವನ್ನು ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲಿ ವಿಜ್ಞಾನಿಗಳು ಪವಾಡ ಮಾಡಿದ್ದಾರೆ. ಇಸ್ರೇಲಿನ ವೈಜ್​ಮಾನ್ ಇನ್​ಸ್ಟಿಟ್ಯೂಟ್​ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೆ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ. ವಿಜ್ಞಾನಿಗಳ ತಂಡ ತಯಾರಿಸಿರುವ ಈ ಭ್ರೂಣ ಮಾದರಿಯನ್ನು 14 ದಿನಗಳ ಕಾಲ ಇರಿಸಲಾಗಿತ್ತು. ಈ ಭ್ರೂಣ ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ … Read more

ಸಚಿವರ ಮೇಲೆ ಅರಿಶಿನ ಎರಚಿದ ಪ್ರತಿಭಟನಾಕಾರ; ಭದ್ರತಾ ಸಿಬ್ಬಂದಿಗಳಿಂದ ಥಳಿತ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್​ ಮೇಲೆ ಅರಿಶಿನ ಎರಚಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್​ ಸೊಲ್ಲಾಪುರದಲ್ಲಿರುವ ಸರ್ಕಾರಿ ಗೆಸ್ಟ್​​ ಹೌಸ್​ನಲ್ಲಿ ಮೀಸಲಾತಿಗೆ ಒತ್ತಾಯಿಸಿ ದಂಗರ್​ (ಕುರುಬ) ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ … Read more

ಪುತ್ತೂರು; ಬಸ್ ನಲ್ಲಿ ಯುವತಿ ಜೊತೆ ಅನುಚಿತ ವರ್ತನೆ, ಯುವಕ ವಶಕ್ಕೆ

ಪುತ್ತೂರು:ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುವ ಬಸ್ಸಿನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೋರ್ವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಮಹಿಳೆ ಪುತ್ತೂರಿನಿಂದ ನಿಂತಿಕಲ್ಲಿಗೆ ಬಸ್ಸಲ್ಲಿ ಸಂಜೆ ಬರುತ್ತಿರುವಾಗ ಯುವಕನೋರ್ವ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಬಳಿಕ ಫೋನ್ ನಂಬರನ್ನು ಮಹಿಳೆಗೆ ನೀಡಿದ್ದು ಬಳಿಕ ಸವಣೂರಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದರು. ಈ ಬಗ್ಗೆ … Read more

ಬಾಗಲಗುಂಟೆ ತಾಯಿ, ಮಗನ ಕೊಲೆ‌ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು; ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ-ಮಗನ ಕೊಲೆ ಪ್ರಕರಣದಲ್ಲಿ ಬೆಳವಣಿಗೆ ನಡೆದಿದ್ದು, ಪ್ರಕರಣದ ಆರೋಪಿ ಶೇಖಪ್ಪ(29)ನನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದ್ರನಗರದಲ್ಲಿ ವಾಸವಿದ್ದ ನವನೀತಾ(33) ಹಾಗೂ ಮಗ ಸೃಜನ್‌ನನ್ನು(11) ಮಂಗಳವಾರ ರಾತ್ರಿ ಕೊಲೆ ಮಾಡಲಾಗಿತ್ತು. ನವನೀತಾ ಅವರ ಪತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆ ಕೈಗೊಂಡಾಗ ನವನೀತಾ ಪ್ರಿಯಕರ ಶೇಖಪ್ಪ ಆರೋಪಿ ಎಂಬುವುದು ತಿಳಿದು ಬಂದಿದೆ. ಗದಗ ಜಿಲ್ಲೆಯ ನರಗುಂದದ ಶೇಖಪ್ಪ ಎಲೆಕ್ಟ್ರಿಷಿಯನ್ ಆಗಿದ್ದು, ಜಾಲಹಳ್ಳಿ ಬಳಿಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಂಧ್ರಪ್ರದೇಶದ ನವನೀತಾ, … Read more