ದಲಿತ ಮಹಿಳೆ ತಯಾರಿಸಿದ ಊಟ ಮಾಡಲು ನಿರಾಕರಿಸಿದ ಮಕ್ಕಳು; ಸರಕಾರಿ ಶಾಲೆಯಲ್ಲಿ ಘಟನೆ

ತಮಿಳುನಾಡು; ದಲಿತ ಮಹಿಳೆ ತಯಾರಿಸಿದ ಉಪಹಾರ ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯ ಅರವಾಕುರಿಚಿ ಬಳಿಯ ವೆಲಾಂಚೆಟ್ಟಿಯೂರ್ ಪಂಚಾಯತ್‌ನ ಶಾಲೆಯೊಂದರಲ್ಲಿ ನಡೆದಿದೆ. 30 ಮಕ್ಕಳಲ್ಲಿ 15 ಮಕ್ಕಳು ದಲಿತ ಮಹಿಳೆ ಅಡುಗೆ ತಯಾರಿಸಿದ್ದಾರೆಂದು ಊಟ ಮಾಡಲು ನಿರಾಕರಿಸಿದ್ದಾರೆ. ಮಂಗಳವಾರ ಶಾಲೆಗೆ ಭೇಟಿ ನೀಡಿ ಉಪಹಾರ ಯೋಜನೆ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ವಿದ್ಯಾರ್ಥಿಗಳ ಪೋಷಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಕ್ಕಳ ಪೋಷಕರು ದಲಿತ ಮಹಿಳೆ ಸುಮತಿ ಅವರು ಆಹಾರವನ್ನು ತಯಾರಿಸುತ್ತಿದ್ದಾರೆ.ದಲಿತ ಮಹಿಳೆ ಆಹಾರ … Read more

ಸುರತ್ಕಲ್; ಚೂರಿ ಇರಿತ ಪ್ರಕರಣ, ಇನ್ನೋರ್ವ ಆರೋಪಿಯ ಬಂಧನ

ಮಂಗಳೂರು: ಸುರತ್ಕಲ್‌ನ ಕಳವಾರು ಬಸ್ ನಿಲ್ದಾಣದ ಬಳಿ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಿನ್ನಿಕಂಬಳ ಕೈಕಂಬ ನಿವಾಸಿ ಪುನೀತ್ (29)ಬಂಧಿತ ಆರೋಪಿ. ಪುನೀತ್ ಬಂಧನದಿಂದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಬಿಜೆಪಿ ಆಸ್ತಿಯಲ್ಲಿ ಭಾರೀ ಹೆಚ್ಚಳ; ದೇಶದ ಶ್ರೀಮಂತ ಪಕ್ಷ ಬಿಜೆಪಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ; 2021-22ರ ಆರ್ಥಿಕ ವರ್ಷದಲ್ಲಿ ಬಿಜೆಪಿಯ ಆಸ್ತಿ 21.17% ರಷ್ಟು ಹೆಚ್ಚಳವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ. ಬಿಜೆಪಿ ಬಳಿ ಒಟ್ಟು 6,046.81 ಕೋಟಿ ಆಸ್ತಿ ಇದ್ದು 2021–22ರಲ್ಲಿ ಅತೀ ಶ್ರೀಮಂತ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ. ದೇಶದ ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಯ ಮೌಲ್ಯ 8,829.15 ಕೋಟಿ. ಈ ಮೊತ್ತದಲ್ಲಿ ಬಿಜೆಪಿಯದ್ದೇ ಹೆಚ್ಚಿನ ಪ್ರಮಾಣವಾಗಿದೆ. ಒಟ್ಟು … Read more

“ಪ್ರೈಮ್ ಮಿನಿಸ್ಟರ್ ಆಫ್ ಭಾರತ್”; ಮತ್ತೊಂದು ಪೋಸ್ಟ್ ವೈರಲ್..

ನವದೆಹಲಿ: ಜಿ20 ಸಭೆಗೆ ಆಗಮಿಸುವ ಅತಿಥಿಗಳಿಗೆ ರಾಷ್ಟ್ರಪತಿ ಭವನದಿಂದ ಆಯೋಜಿಸಿರುವ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಬಳಕೆ ಮಾಡಲಾಗಿತ್ತು.ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿಯ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಎಕ್ಸ್ ನಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬರೆದಿರುವುದು ಕಂಡು ಬಂದಿದೆ. ಸೆಪ್ಟೆಂಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಔತಣಕೂಟದ ಲೆಟರ್ ಹೆಡ್‌ನಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಾಗಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು … Read more

ಪ್ರಿಯಕರನಿಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ; ಆತನಿಗೆ ಮದುವೆಯಾಗಿದೆ, ನಾವು ಸೇರಿಸಿಕೊಳ್ಳಲ್ಲ ಎಂದ ತಾಯಿ

ಪ್ರಿಯಕರನಿಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ; ಆತನಿಗೆ ಮದುವೆಯಗಿದೆ, ನಾವು ಸೇರಿಸಿಕೊಳ್ಳಲ್ಲ ಎಂದ ತಾಯಿ ರಾಜಸ್ಥಾನ; ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಗಡಿ ದಾಟಿ ಬಂದು ಸುದ್ದಿಯಾಗಿದ್ದಾರೆ. ಹಬೀಬಾ ಅಲಿಯಾಸ್​ ಹನಿ ಬಾಂಗ್ಲಾದೇಶದಿಂದ ಬಂದ ಯುವತಿ. ಈಕೆ ಕಳೆದ ಎರಡು ದಿನಗಳ ಹಿಂದೆ ಅನೂಪ್​ಗಢ ಜಿಲ್ಲೆಯ 13 ಡಾಲ್​ ಗ್ರಾಮದ ರಾವ್ಲ ಮಂಡಿಗೆ ಆಗಮಿಸಿದ್ದು, ಗೆಳೆಯನ ಮನೆಯಲ್ಲಿ ವಾಸವಿದ್ದಳು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಹನಿ ಮತ್ತು ರೋಶನ್​ … Read more

ಉಳ್ಳಾಲ; ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ

-ಪೈಝಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಉಳ್ಳಾಲ; ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ. ಫೈಝಲ್ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಫೈಸಲ್ ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.