ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ; ಭಯಾನಕ ಘಟನೆ ವರದಿ
ಒಂದೇ ಕುಟುಂಬದ ನಾಲ್ವರನ್ನು ಮೂವರು ದುಷ್ಕರ್ಮಿಗಳು ಇರಿದು ಕೊಲೆ ಮಾಡಿರುವ ಘಟನೆ ತಿರುಪ್ಪುರ ಜಿಲ್ಲೆಯ ಪಲ್ಲದಂ ಬಳಿ ನಡೆದಿದೆ. ಕೊಲೆಗೀಡಾದವರನ್ನು ಸೆಂಥಿಲ್ ಕುಮಾರ್, ಆತನ ತಾಯಿ ಪುಷ್ಪವತಿ,ಸೋದರ ಸಂಬಂಧಿ ಮೋಹನ್ ಹಾಗೂ ಮತ್ತೊಬ್ಬ ಸಂಬಂಧಿಕ ರತಿನಾಂಬೆಲ್ ಎಂದು ಗುರುತಿಸಲಾಗಿದೆ. ಎಲ್ಲರನ್ನು ಕೂಡ ಇರಿದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ವಶಕ್ಕೆ ಪಡೆಯಲಾಗಿದೆ. ಎಲ್ಲಾ ಕೊಲೆಗಾರರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಮೃತದೇಹ ಸ್ವೀಕರಿಸುವುದಿಲ್ಲ ಎಂದು ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಲೇ … Read more