ಸಂತೋಷ್ ರಾವ್ ತಂದೆಗೆ ಕ್ಷೌರ ಮಾಡಿಸಿ ಪಾದ ಪೂಜೆ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ

ಧರ್ಮಸ್ಥಳ;ಸೌಜನ್ಯ ಕೊಲೆ ಪ್ರಕರಣದಲ್ಲಿ ನಿರ್ದೋಷಿ ಎಂದು ಮಹತ್ವದ ತೀರ್ಪು ನೀಡಿದ ಸಂತೋಷ್ ರಾವ್ ಅವರ ಬೈಲೂರಿನ ಮನೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ ನೀಡಿದ್ದಾರೆ. ಸಂತೋಷ್ ರಾವ್ ಅವರ ತಂದೆ ಶಿಕ್ಷಕ ಸುಧಾಕರ ರಾವ್ ಅವರಿಗೆ ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ, ಹೊಸ ದೋತಿ ತೊಡಿಸಿ, ಪಾದಪೂಜೆ ಮಾಡುವ ಮೂಲಕ ಗುರುವಂದನೆ ಸಲ್ಲಿಕೆ ಮಾಡಿದ್ದಾರೆ. ಸಂತೋಷ್ ರಾವ್ ಅವರ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಅವರ ಮನೆಯ ದುರಸ್ಥಿ ಕಾರ್ಯ ಮಾಡಲು ಪ್ರಾರಂಭಿಸಿದ್ದಾರೆ. ಮನೆಗೆ ಬಣ್ಣ ಬಳಿಯುವ … Read more

ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಆಪ್ತನ ಬರ್ಬರ ಕೊಲೆ

ಹಾಸನ:ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತನಿಗೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೃಷ್ಣೇಗೌಡ(53) ಅವರನ್ನು ಅವರ ಗ್ರಾನೈಟ್ ಫ್ಯಾಕ್ಟರಿ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೃಷ್ಣೇಗೌಡರಿಗೆ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರು ಕೂಡ ತೆರಳಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು … Read more

ರಾಜ್ಯಸಭೆಗೆ ಟೊಮೆಟೊ ಹಾರ ಧರಿಸಿ ದಿಢೀರ್ ಪ್ರವೇಶಿಸಿದ ಸಂಸದ; ಆಕ್ಷೇಪ ವ್ಯಕ್ತಪಡಿಸಿ ಸಭಾಧ್ಯಕ್ಷರು ಹೇಳಿದ್ದೇನು ಗೊತ್ತಾ?

ನವದೆಹಲಿ;ರಾಜ್ಯಸಭೆಗೆ ಟೊಮೆಟೊ ಹಾರವನ್ನು ಹಾಕಿಕೊಂಡು ಎಎಪಿ ಸಂಸದ ಆಗಮಿಸಿದ್ದು, ಸ್ಪೀಕರ್ ಇದಕ್ಕೆ ಆಕ್ಷೇಪಿಸಿದ್ದಾರೆ‌. ಸಂಸದ ಸುಶೀಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿ ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್, ಅವರ ವರ್ತ‌ನೆಯಿಂದ ನನಗೆ ಬೇಸರವಾಗಿದೆ.ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾನು ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. … Read more

ಎಸೆಸೆಲ್ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು

ಎಸೆಸೆಲ್ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು ಚಾಮರಾಜನಗರ:ಎಸ್ಎಸ್ ಎಲ್ ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪಟ್ಟಣದ ಅನಾಥಾಲಯದಲ್ಲಿ ನಡೆದಿದೆ. ವಿದ್ಯಾರ್ಥಿನಿ ಫಿಲಿಶ್(15)ಮೃತ ದುರ್ದೈವಿ.ಪಟ್ಟಣದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಫಿಲಿಸಾ ಏಕಾಏಕಿ ಕುಸಿದುಬಿದ್ದಿದ್ದಾಳೆ.ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ಫಿಲಿಶ್ ಮೃತಪಟ್ಟಿದ್ದಾರೆ. ಫಿಲಿಶ್ ಬೆಂಗಳೂರಿನ ನಿವಾಸಿಯಾಗಿದ್ದು,ಹೆತ್ತವರ ನಿಧನದ ಬಳಿಕ ಐದು ವರ್ಷಗಳ ಹಿಂದೆ ಸಿಎಂಎಸ್ ಅನಾಥಾಲಯಕ್ಕೆ ಇವರು ಸೇರ್ಪಡೆಗೊಂಡಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ … Read more

ವಿಡಿಯೋ ಚಿತ್ರೀಕರಣ ಪ್ರಕರಣ: ಉಡುಪಿಗೆ ಆಗಮಿಸಿದ ಸಿಐಡಿ ತಂಡ

ಉಡುಪಿ;ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಿಐಡಿ ಪೊಲೀಸರು ಉಡುಪಿಗೆ ಆಗಮಿಸಿದ್ದಾರೆ. ಸಿಐಡಿ ವಿಭಾಗದ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತಂಡ ಉಡುಪಿಯಲ್ಲಿ ಬೀಡುಬಿಟ್ಟಿದ್ದು, ಎಸ್ಪಿ ಕಚೇರಿಗೆ ಭೇಟಿ ನೀಡಿ ಎಸ್ಪಿ ಅಕ್ಷಯ್ ಹಾಗೂ ಪ್ರಕರಣದ ಈ ಹಿಂದಿನ ತನಿಖಾಧಿಕಾರಿ ಬೆಳ್ಳಿಯಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿಗೆ ಭೇಟಿ ನೀಡಲಿರುವ ತಂಡ, ಸಂತ್ರಸ್ತೆ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ಮತ್ತು ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸಲಿದೆ. ಇದಲ್ಲದೆ ಸಿಐಡಿ ಎಸ್ಪಿ ಕೂಡ … Read more

ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ; ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು:ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ ರಘು ಮತ್ತು ಮುರುಳಿ ಬಂಧಿತ ಆರೋಪಿಗಳು. ಆ.5 ರಂದು ರಘು ಮತ್ತು ಮುರುಳಿ ಬೈಕ್​​ನಲ್ಲಿ ಕಾರೊಂದನ್ನು ಹಿಂಬಾಲಿಸಿಕೊಂಡು ಬಂದಿದ್ದರು.ವೈಟ್​ ಫಿಲ್ಡ್​​ನ ಸಿದ್ದಾಪುರ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನ ಬಳಿ ಬಂದು ಚಾಲಕನಿಗೆ ಕಾರಿನಿಂದ ಕೆಳೆಗೆ ಇಳಿಯಲು ಹೇಳಿದ್ದರು. ಚಾಲಕ ಕೆಳೆಗೆ ಇಳಿಯದಿದ್ದಾಗ ಕಲ್ಲಿನಿಂದ ಕಾರಿನ ಗಾಜನ್ನು ಒಡೆಯಲು ಯತ್ನಿಸಿದ್ದರು.ನಂತರ ವಿಂಡ್‌ಶೀಲ್ಡ್ ಮುರಿಯಲು ಯತ್ನಿಸಿದ್ದರು. ಘಟನೆಯ ದೃಶ್ಯಗಳನ್ನು ವ್ಯಕ್ತಿಯೋರ್ವರು ಟ್ವೀಟ್​ … Read more

ಸಂದರ್ಶನದಲ್ಲಿ ಮಾತನಾಡುವಾಗ ದಲಿತ ಪದ ಬಳಕೆ; ಬಿಜೆಪಿ ಶಾಸಕನ ವಿರುದ್ಧ ಕೇಸ್ ದಾಖಲು

ಮುಂಬೈ:ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ ‘ದಲಿತ’ಪದ ಬಳಸಿದ ಆರೋಪದ ಮೇಲೆ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಮಹಾರಾಷ್ಟ್ರದ ನವಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಕಂಕವಲಿ ಶಾಸಕರ ವಿರುದ್ಧ ಕಳೆದ ವಾರ ವಕೀಲರೊಬ್ಬರು ದೂರು ದಾಖಲಿಸಿದ್ದರು.ದೂರುದಾರರು ಯೂಟ್ಯೂಬ್‌ನಲ್ಲಿ ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ನಿತೇಶ್ ರಾಣೆ ಅವರು ನೀಡಿದ ಸಂದರ್ಶನದ ವೀಡಿಯೊವನ್ನು ನೋಡಿದ್ದಾರೆ. ಅವರು ವಿಡಿಯೋದಲ್ಲಿ ‘ದಲಿತ’ ಪದವನ್ನು ಬಳಸಿದ್ದಾರೆ, ಅದರ ಬಳಕೆಯನ್ನು ಕೇಂದ್ರ ಸರ್ಕಾರವು ಆಗಸ್ಟ್ 7, 2018 ರಂದು ನಿಷೇಧಿಸಿದೆ … Read more