ಮಲೇಷ್ಯಾ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿ ವಾಪಾಸ್ಸಾದ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಗೆ ಕೇರಳದಲ್ಲಿ ಅದ್ದೂರಿ ಸ್ವಾಗತ; ವಿಮಾನ ನಿದ್ಧಾಣಕ್ಕೆ ಹರಿದು ಬಂದ ಜನ

ಕಲ್ಲಿಕೋಟೆ:ಮಲೇಷ್ಯಾ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿ ಭಾರತಕ್ಕೆ ವಾಪಾಸ್ಸಾದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಮಲೇಷ್ಯಾ ಸರ್ಕಾರದ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಕಾಂತಪುರಂ ಉಸ್ತಾದ್ ಇಂದು ಬೆಳಿಗ್ಗೆ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ಕಾಂತಪುರಂ ಉಸ್ತಾದ್ ಅವರನ್ನು ಸ್ವಾಗತಿಸಲು ಬೆಳಿಗ್ಗೆ 6 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಖಂಡರಾದ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್, ಸಯ್ಯಿದ್ ಅಲಿ … Read more

ಆಟವಾಡುತ್ತಾ 100 ಅಡಿ ಆಳದ ತೆರೆದ ಬೋರ್‌ ವೆಲ್‌ಗೆ ಬಿದ್ದ ಬಾಲಕ; ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನು ಗೆದ್ದ ಬಂದ ಕಂದ!

ಆಟವಾಡುತ್ತಾ 100 ಅಡಿ ಆಳದ ತೆರೆದ ಬೋರ್‌ ವೆಲ್‌ಗೆ ಬಿದ್ದ ಬಾಲಕ; ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನು ಗೆದ್ದ ಬಂದ ಕಂದ! ನಳಂದ;ಮೂರು ವರ್ಷದ ಮಗುವೊಂದು 100 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದ್ದು, ಮಗುವಿನ ತಾಯಿ ಹೊಲದ ಕೆಲಸಕ್ಕೆ ಬಂದಿದ್ದ ವೇಳೆ ಮಗವಿನ ಜತೆಗೆ ಬಂದಿದ್ದಳು. ಆಟವಾಡುತ್ತಾ ಬಾಲಕ ಶಿವಂ 100 ಅಡಿ ಆಳದ ತೆರೆದ ಬೋರ್‌ ವೆಲ್‌ ಗೆ … Read more

ಕಾಂಗ್ರೆಸ್ ಸೇರ್ಪಡೆ ಸುದ್ದಿ ಬಗ್ಗೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದೇನು ಗೊತ್ತಾ?

ಬೆಂಗಳೂರು;ಕಾಂಗ್ರೆಸ್ ಪಕ್ಷ ಸೇರ್ಪಡೆಯ ಸುದ್ದಿಯ ಬಗ್ಗೆ ದಿ.ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದೇನೆ.ಅನಂತ್ ಕುಮಾರ್ ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿ.ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ.ಇತ್ತೀಚಿನ ದಿನಗಳಲ್ಲಿ ಯಾರೋ ಏನೋ ಮಾತನಾಡುತ್ತಾರೆ.ಸೋಷಿಯಲ್ ಮೀಡಿಯಾಗಳ ಮೂಲಕ ನಾವು ಹೇಳಿದ ವಿಷಯ ಒಂದಾದ್ರೆ, ಅದು ಗುರಿ ತಲುಪುವ ವೇಳೆಗೆ ಬೇರೆ ವಿಷಯ ಬದಲಾಗಿರುತ್ತೆ.ನಾನು ಪಕ್ಷದ ಜೊತೆ ಇದ್ದೇನೆ, ಪಕ್ಷನು ಕೂಡ ನನ್ನ ಜೊತೆ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ … Read more

ಆನ್ ಲೈನ್ ಗೇಮ್ ನಲ್ಲಿ 5 ಕೋಟಿ ಗೆದ್ದು ಕೊನೆಗೆ 58 ಕೋಟಿ ಕಳೆದುಕೊಂಡ ಉದ್ಯಮಿ

ಮುಂಬೈ:ಆನ್‍ಲೈನ್ ಗೇಮ್‌ನಲ್ಲಿ ಉದ್ಯಮಿಯೊಬ್ಬರು ಕೋಟ್ಯಾಂತರ ರೂ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಿಂದ ವರದಿಯಾಗಿದೆ. ಮೊದಲು ಉದ್ಯಮಿ ಗೇಮ್ ನಲ್ಲಿ 5 ಕೋಟಿ ಗೆದ್ದಿದ್ದು ಬಳಿಕ ಸುಮಾರು 58 ಕೋಟಿ ರೂ.ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಉದ್ಯಮಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ದೂರಿನ ಆಧಾರದ ಮೇಲೆ ಶಂಕಿತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ 14 ಕೋಟಿ ರೂಪಾಯಿ ಹಣ, 4 ಕೆಜಿ ಚಿನ್ನ ಪತ್ತೆಯಾಗಿರುವುದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚಿಸಿದ ಆರೋಪಿ ಅನಂತ್ ಅಲಿಯಾಸ್ … Read more

ಪ್ರೀತಿಸಿ ಕೈಕೊಟ್ಟ ಯುವಕ; ಕಾಲೇಜು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಮೈಸೂರು;ಯುವತಿಯೋರ್ವಳು ತಾನು ಪ್ರೀತಿ ಮಾಡಿದ ಯುವಕ ಕೈಕೊಟ್ಟಿದ್ದಕ್ಕೆ ಮನನೊಂದು ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದ ಯುವತಿ ನಿಸರ್ಗ(20) ಮೃತಪಟ್ಟಿದ್ದಾರೆ. ಪ್ರೀತಿಸಿದ ಹುಡುಗ ಮತ್ತೊಬ್ಬಳ ಹಿಂದೆ ಸುತ್ತಾಡಿದ ಹಿನ್ನಲೆಯಲ್ಲಿ ಡೆತ್ ನೋಟ್ ಬತೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು ಇಲಿ ಪಾಷಾಣ ತಿಂದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ. ಮೃತ ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ … Read more

ತಂದೆ-ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಡಿಕೇರಿ ಕಾಡಿನಲ್ಲಿ ಪತ್ತೆ!

ಬೆಂಗಳೂರು;ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪರಾರಿಯಾಗಿದ್ದ ಆರೋಪಿ ಮಗನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಶರತ್ ಬಂಧಿತ ಆರೋಪಿಯಾಗಿದ್ದು, ರಾಡ್ ನಿಂದ ಹೊಡೆದು ಅಪ್ಪ-ಅಮ್ಮನನ್ನ ಹತ್ಯೆ ಮಾಡಿ ಈತ ಪರಾರಿಯಾಗಿದ್ದ. ಬ್ಯಾಟರಾಯನಪುರ ನಿವಾಸಿ ಭಾಸ್ಕರ್ ಹಾಗೂ ಶಾಂತಾ ಅವರನ್ನು ತಲೆಗೆ ರಾಡ್‌ನಿಂದ ಹೊಡೆದು ಜುಲೈ 17ರಂದು ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿ ಪರಾರಿಯಾಗಿದ್ದ ಶರತ್‌, ಮಂಗಳೂರು ಮೂಲಕ ಮಡಿಕೇರಿಗೆ ಹೋಗಿ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ.ಈತನನ್ನು ಪತ್ತೆ ಮಾಡಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ವರದಿಯಾಗಿದೆ. ಮಂಗಳೂರಿನ … Read more

ಮಂಗಳೂರು; ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಕಾರು ಚಾಲಕ ಪರಾರಿ; ಕೇಸ್ ದಾಖಲು

ಮಂಗಳೂರು:ಪೆಟ್ರೋಲ್ ಬಂಕ್ ನಲ್ಲಿ ವ್ಯಕ್ತಿಯೋರ್ವ ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೆ ಪರಾರಿಯಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 20ರಂದು ರಾತ್ರಿ 11.19ಕ್ಕೆ ಕಾವೂರಿನ ಪೆಟ್ರೋಲ್ ಪಂಪ್‌ನಲ್ಲಿ ನೀಲಿ ಬಣ್ಣದ ಕಾರಿಗೆ ಫುಲ್‌ಟ್ಯಾಂಕ್ ಪೆಟ್ರೋಲ್ ತುಂಬಿಸಿದ ಅಪರಿಚಿತ 4,100.60 ರೂ. ಬಿಲ್ ಪಾವತಿಸದೆ ವೇಗವಾಗಿ ಕಾವೂರು ಜಂಕ್ಷನ್ ಕಡೆಗೆ ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ. ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರನ್ನು ಬೆನ್ನಟ್ಟಿ ನೋಡಿದಾಗ ಕಾರಿನ ಎದುರು ಮತ್ತು ಹಿಂಬದಿ ನೋಂದಣಿ ಸಂಖ್ಯೆ ಇರಲಿಲ್ಲ … Read more

ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದುರ್ಮರಣ

ಮೈಸೂರು;ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನಗರದ ಹೂಟಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಸಹಾಯಕ ಲೈನ್‌ಮ್ಯಾನ್​​​ ಸಂತೋಷ್​(26) ಮೃತ ರ್ದುದೈವಿ. ಟ್ರಾನ್ಸ್​ಫಾರ್ಮರ್​​ ದುರಸ್ತಿ ವೇಳೆ ವಿದ್ಯುತ್​ ಹರಿದು ಘಟನೆ ನಡೆದಿದೆ. ಇನ್ನು ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತ ಸಂತೋಷ್ ಪೋಷಕರು, ಸ್ನೇಹಿತರು ಆರೋಪಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ಕುರಿತು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸಿ ತೆಂಗಿನ ಕಾಯಿ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ತೆಂಗಿನಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಪ್ರತಿನಿತ್ಯ ತೆಂಗಿನಕಾಯಿ ಬಳಕೆಯಿಂದ ನಿಮಗೆ ಉತ್ತಮ ಆರೋಗ್ಯ ಪ್ರಯೋಜನಗಳು ಸಿಗಲಿದೆ. ದೇಹದಲ್ಲಿನ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ತೆಂಗಿನಕಾಯಿ ಸಹಕಾರಿಯಾಗಿದೆ. ಹಸಿ ತೆಂಗಿನಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ತೆಂಗಿನ ಕಾಯಿಯಲ್ಲಿನ ಅಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಉಪಯುಕ್ತವಾಗಿವೆ. ಹಸಿ ತೆಂಗಿನಕಾಯಿಯಲ್ಲಿ ನಾರಿನಂಶ ಅಧಿಕವಾಗಿದೆ. ಆದ್ದರಿಂದ, ಜೀರ್ಣಕಾರಿ ಸಮಸ್ಯೆಗಳು ಸಹ ಸುಲಭವಾಗಿ ನಿವಾರಣೆಯಾಗುತ್ತವೆ. ಆದ್ದರಿಂದ ಹಸಿ ಕೊಬ್ಬರಿ ತಿನ್ನುವುದು ಉತ್ತಮ. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ … Read more

ಕಳೆದ 6 ತಿಂಗಳಲ್ಲಿ ಪೌರತ್ವ ತ್ಯಜಿಸಿದ ಬರೊಬ್ಬರಿ 87,000 ಭಾರತೀಯ ಪ್ರಜೆಗಳು; ಶಾಕಿಂಗ್ ಅಂಕಿಅಂಶಗಳು ಬಹಿರಂಗ

ನವದೆಹಲಿ;ಈ ವರ್ಷದ ಜೂನ್‌ವರೆಗೆ 87,026 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ, 2011 ರಿಂದ 17.50 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ 2022 ರಲ್ಲಿ 2,25,620 ಭಾರತೀಯರು, 2021 ರಲ್ಲಿ 1,63,370, 2020 ರಲ್ಲಿ 85,256, 2019 ರಲ್ಲಿ 1,44,017 ಜನ ಪೌರತ್ವ ತ್ಯಜಿಸಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಲೋಕಸಭೆಗೆ ತಿಳಿಸಿದರು. ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ ಉದ್ಯೋಗ ಅನ್ವೇಷಿಸುವ ಭಾರತೀಯ ಪ್ರಜೆಗಳ ಸಂಖ್ಯೆ ಗಣನೀಯವಾಗಿದೆ.ಅವರಲ್ಲಿ ಹಲವರು ವೈಯಕ್ತಿಕ ಅನುಕೂಲಕ್ಕಾಗಿ … Read more