ಮಂಗಳೂರು;ಅನೈತಿಕ ಪೊಲೀಸ್ ಗಿರಿ ಪ್ರಕರಣ, ಇಬ್ಬರ ಬಂಧನ

ಮಂಗಳೂರು:ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ಕಾಲೇಜು ವಿದ್ಯಾರ್ಥಿಯ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು‌ ಬಂಧಿಸಿರುವ ಬಗ್ಗೆ ವರದಿಯಾಗಿದೆ. ದೀಕ್ಷಿತ್‌(32) ಹಾಗೂ ಲಾಯ್ಡ್‌ ಪಿಂಟೋ(32)ಬಂಧಿತರು. ಆರೋಪಿಗಳಿಂದ ಸ್ಕೂಟರ್‌ ಮತ್ತು ಮೊಬೈಲ್‌ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಅಲ್ಲದೆ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲಾಗಿದೆ. 6 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಣಂಬೂರು ಬೀಚ್ ಗೆ ವಿಹಾರಕ್ಕೆ ತೆರಳಿದ ವೇಳೆ ಹಿಂಬಾಲಿಸಿಕೊಂಡು ಬಂದ ತಂಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ … Read more

ಜಿಮ್ ನಲ್ಲಿ ಭಾರ ಎತ್ತುವಾಗ ಖ್ಯಾತ ಬಾಡಿ ಬಿಲ್ಡರ್ ದುರ್ಮರಣ;ಶಾಕಿಂಗ್ ವಿಡಿಯೋ ವೈರಲ್..

ವಿಶ್ವವಿಖ್ಯಾತ ಬಾಡಿ ಬಿಲ್ಡರ್ ಒಬ್ಬರು ವೇಟ್ ಲಿಫ್ಟಿಂಗ್ ಮಾಡುವಾಗ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷಿಯಾದ ಬಾಡಿಬಿಲ್ಡರ್ ಮತ್ತು ಫಿಟ್ನೆಸ್ ಪ್ರಭಾವಿ ಜಸ್ಟಿನ್ ವಿಕ್ಕಿ ಜಿಮ್ ಮಾಡುವಾಗ ನಿಧನರಾಗಿದ್ದಾರೆ. ಭಾರ ಎತ್ತುವಾಗ ಅವರ ಸಾವಿನ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. 33 ವರ್ಷ ವಯಸ್ಸಿನ ಈ ತರಬೇತುದಾರ, ಸುಮಾರು 400 ಪೌಂಡ್ (210 ಕೆಜಿ) ತೂಕವನ್ನು ಎತ್ತುವಾಗ ಕುತ್ತಿಗೆ ಮುರಿದು ಸಾವನ್ನಪ್ಪಿದ್ದಾರೆ. ಈ ಘಟನೆ ಜುಲೈ 15ರಂದು ನಡೆದಿದ್ದು,ಜಸ್ಟಿನ್ ವಿಕ್ಕಿ, ಕುತ್ತಿಗೆ ಮುರಿತದ ಜೊತೆಗೆ, ಹೃದಯ ಮತ್ತು … Read more

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ; NIAಯಿಂದ ಡೇಟಾ ಎಂಟ್ರಿ ಆಪರೇಟರ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಇದಾಗಿದ್ದು, NIA 34 ಡೇಟಾ ಎಂಟ್ರಿ ಆಪರೇಟರ್ (DEO) ಪೋಸ್ಟ್‌ಗಳಿಗೆ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. NIA ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹುದ್ದೆಗಳ ಸಂಖ್ಯೆ: 34 ಉದ್ಯೋಗ ಸ್ಥಳ: ಅಖಿಲ ಭಾರತ ಪೋಸ್ಟ್ ಹೆಸರು: ಡೇಟಾ ಎಂಟ್ರಿ ಆಪರೇಟರ್ (DEO) ವೇತನ: ರೂ.29200-92300/- ಪ್ರತಿ ತಿಂಗಳು ಅರ್ಹತಾ ವಿವರಗಳು ವಯಸ್ಸಿನ ಮಿತಿ:ಅಭ್ಯರ್ಥಿಯ ಗರಿಷ್ಠ ವಯಸ್ಸು 22-Aug-2023 ರಂತೆ 56 … Read more

ಬಂಟ್ವಾಳ;ನಿಯಂತ್ರಣ ಕಳೆದುಕೊಂಡು ಮನೆಯ ಅಂಗಳಕ್ಕೆ ಬಿದ್ದ ಲಾರಿ

ಬಂಟ್ವಾಳ;ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಮನೆಯ ಅಂಗಳಕ್ಕೆ ಬಿದ್ದು ಚಾಲಕ ಗಾಯಗೊಂಡ ಘಟನೆ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ. ಬಾಂಬಿಲ ಆಶ್ಬಕ್ ಎಂಬವರ ಮನೆಯ ಅಂಗಳಕ್ಕೆ ಲಾರಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಲಾರಿ ಪಲ್ಟಿಯಾಗಿದ್ದು ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಲಾರಿ ಮಧ್ಯ ರಾತ್ರಿ 12.45 ರ ಸುಮಾರಿಗೆ ಬಿದ್ದಿದೆ ಎನ್ನಲಾಗಿದೆ.ಬಾಂಬಿಲ ತಿರುವಿನಲ್ಲಿ ಚಾಲಕನಿಗೆ ನಿಯಂತ್ರಣ ಕಳೆದುಕೊಂಡು ಮನೆಯ ಅಂಗಳಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಯಾವುದೇ ಪ್ರಕರಣ … Read more

ಪತ್ರಿಕಾಗೋಷ್ಟಿಯಲ್ಲಿ ಕಣ್ಣೀರಿಟ್ಟ ಬಿಜೆಪಿ ಸಂಸದೆ

ನವದೆಹಲಿ;ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮಣಿಪುರ ಘಟನೆಯನ್ನು ಖಂಡಿಸಿದ್ದು ಮಣಿಪುರದ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲೂ ಇದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಲಾಕೆಟ್ ಚಟರ್ಜಿ ವಾಗ್ದಾಳಿ ನಡೆಸಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದರು. ಮಣಿಪುರ ಘಟನೆಯನ್ನು ನಾವು ಖಂಡಿಸುತ್ತೇವೆ, ಇದು ದುಃಖದ … Read more

ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌ ಪುತ್ರಿ ಜೋಸೆಫಿನ್‌ ಚಾಪ್ಲಿನ್‌ ನಿಧನ

ಹಾಲಿವುಡ್‌ ದಂತಕಥೆ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌ ಪುತ್ರಿ ನಟಿ ಜೋಸೆಫಿನ್‌ ಚಾಪ್ಲಿನ್‌ ನಿಧನ ಹೊಂದಿರುವುದಾಗಿ ಅಮೆರಿಕ ಮೂಲದ ವೆರೈಟಿ ಡಾಟ್‌ ಕಾಮ್‌ ವರದಿ ಮಾಡಿದೆ ಚಾಪ್ಲಿನ್‌ ಕುಟುಂಬ ಹೊರಡಿಸಿರುವ ಪ್ರಕಟಣೆ ಪ್ರಕಾರ, ಜೋಸೆಫಿನ್‌ ಚಾಪ್ಲಿನ್‌(77) ಜುಲೈ 13ರಂದು ಪ್ಯಾರೀಸ್‌ ನಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ. 1949ರ ಮಾರ್ಚ್‌ 28ರಂದು ಜೋಸೆಫಿನ್‌ ಕ್ಯಾಲಿಫೋರ್ನಿಯಾದ ಮೋನಿಕಾದಲ್ಲಿ ಜನಿಸಿದ್ದರು. ಜೋಸೆಫಿನ್‌, ಚಾರ್ಲಿ ಚಾಪ್ಲಿನ್‌ ಮತ್ತು ಊನಾ ಓನೀಲ್‌ ಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೇಯವರಾಗಿದ್ದಾರೆ. ಜೋಸೆಫಿನ್‌ ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದ್ದರು. … Read more

ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ; ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ

ಮಂಗಳೂರು;ಕಾಲೇಜೊಂದರ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆದಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ಸಂಜೆ 5:30 ಸುಮಾರಿಗೆ ಪಣಂಬೂರು ಬೀಚ್ ಗೆ ಬಂದಿದ್ದ ವಿದ್ಯಾರ್ಥಿಗಳನ್ನು ವೀಕ್ಷಿಸುತ್ತಿದ್ದ ಇಬ್ಬರು ಅಪರಿಚಿತರು ತಮ್ಮ ಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಚಲನವಲನಗಳನ್ನು ಚಿತ್ರೀಕರಿಸಿದ್ದರು. ಆದರೆ ಇದನ್ನು ಗಮನಿಸಿದ್ದ ವಿದ್ಯಾರ್ಥಿಗಳು ತಮ್ಮ ಪಾಡಿಗೆ ಇದ್ದರು ಎನ್ನಲಾಗಿದೆ. ಬಳಿಕ ವಿದ್ಯಾರ್ಥಿಗಳನ್ನು ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ಅಪರಿಚಿತರು ತಡೆದಿದ್ದಾರೆ.ಈ ವೇಳೆ ವಿದ್ಯಾರ್ಥಿ ಮಹಮ್ಮದ್ ಹಫೀಸ್ (20) ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಬೀಚ್ … Read more

ಮಳೆಗಾಲದಲ್ಲಿ ಹೆಚ್ಚಿದ ಡೆಂಗ್ಯೂ ಭೀತಿ;ಮಕ್ಕಳಲ್ಲಿ ಹೆಚ್ಚು ಪ್ರಕರಣ ವರದಿ

ನಿರಂತರ ಮಳೆ ಮತ್ತು ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಮತ್ತು ರೋಗಕಾರಕಗಳಿಂದ ಹರಡುವ ರೋಗಗಳು ಹೆಚ್ಚಾಗಿ ಹರಡುವ ಅಪಾಯವಿದೆ. ಕಳೆದ ಕೆಲವು ದಿನಗಳಿಂದ ಮಕ್ಕಳಲ್ಲಿ ಡೆಂಗ್ಯೂ ಹೆಚ್ಚುತ್ತಿದೆ ಮತ್ತು ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳ ಹೆಚ್ಚಳವು ಸುಮಾರು 15-20% ಆಗಿದೆ ಎಂದು ವರದಿ ತಿಳಿಸಿದೆ. ಹಠಾತ್ ಜ್ವರ, ಕಣ್ಣುಗಳ ಹಿಂದೆ ನೋವು, ತೀವ್ರ ತಲೆನೋವು, ಸ್ನಾಯು ನೋವು, ದದ್ದುಗಳು ಮಕ್ಕಳಲ್ಲಿ ಡೆಂಗ್ಯೂನ ಆರಂಭಿಕ ಲಕ್ಷಣಗಳಾಗಿವೆ. ಪೋಷಕರು ಈ ಎಚ್ಚರಿಕೆಯ ಚಿಹ್ನೆಗಳಿಗೆ ಗಮನ ಕೊಡಬೇಕು … Read more

ಸೌಜನ್ಯ ಪ್ರಕರಣ; ಧರ್ಮಸ್ಥಳ ಕ್ಷೇತ್ರ, ವಿರೇಂದ್ರ ಹೆಗ್ಡೆ ಕುರಿತು ಆಧಾರ ರಹಿತ ಆರೋಪ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ

ಬೆಂಗಳೂರು:ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಹಾಗೂ ಅವರ ನೇತೃತ್ವದ ಸಂಸ್ಥೆಗಳ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಹಾಗೂ ಅದನ್ನು ಪ್ರಕಟಿಸದಂತೆ ಬೆಂಗಳೂರಿನ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧಕಾಜ್ಞೆ ನೀಡಿ ಆದೇಶ ಹೊರಡಿಸಿದೆ. ಧರ್ಮಸ್ಥಳ ದೇವಾಲಯ, ದೇವಾಲಯದ ಅಧೀನದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ಶೀನಪ್ಪ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ … Read more

ಸಹೋದರಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಬೀದಿಯಲ್ಲಿ ತಿರುಗಾಡಿದ ಅಣ್ಣ;ಭಯಾನಕ ಕೃತ್ಯ ವರದಿ

-ಆರೋಪಿ ರಿಯಾಝ್ ಗೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ;24 ವರ್ಷದ ಯುವಕನೊಬ್ಬ ತನ್ನ ಸಹೋದರಿಯ ಶಿರಚ್ಛೇದ ಮಾಡಿದ ಪ್ರಕರಣ ಬಾರಾಬಂಕಿ ಜಿಲ್ಲೆಯ ಹಳ್ಳಿಯೊಂದರಿಂದ ವರದಿಯಾಗಿದೆ. ರಿಯಾಜ್ ಎಂದು ಗುರುತಿಸಲಾದ ಆರೋಪಿಯು ತನ್ನ ಸಹೋದರಿ ಆಶಿಫಾಳ ಶಿರಚ್ಛೇದ ಮಾಡಿದ್ದಾನೆ.ತಂಗಿಯ ಪ್ರೇಮ ಸಂಬಂಧವನ್ನು ವಿರೋಧಿಸಿ ಈ ಕೃತ್ಯ ಎಸಗಿದ್ದು ಆರೋಪಿ ರಿಯಾಝ್ ಗೆ ಬಂಧಿಸಲಾಗಿದೆ. ಮಿತ್ವಾರಾ ಗ್ರಾಮದಲ್ಲಿ ರಿಯಾಜ್ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ.ಆಕೆ ತನ್ನ ಗ್ರಾಮದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು.ಈ ಸಂಬಂಧ … Read more