ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂಗಳಾದ ಕುಮಾರಸ್ವಾಮಿ & ಬೊಮ್ಮಯಿ

ಬೆಂಗಳೂರು;ಮಹಾಘಟಬಂಧನ್ ಸಭೆಯ ಕುರಿತು ಮಾಜಿ ಸಿಎಂ ಬೊಮ್ಮಾಯಿ & ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದ ಬಳಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ‘ಮಹಾಘಟಬಂದನ್’ ನಲ್ಲಿ ಬಂಧನವೂ ಇಲ್ಲ ಮಹಾನೂ ಇಲ್ಲ. ಸೊನ್ನೆಗೆ ಸೊನ್ನೆಗೆ ಕೂಡಿದರೆ ಸೊನ್ನೆಯೇ ಬರಲಿದೆ ಎಂದು ಹೇಳಿದ್ದಾರೆ. ಮೋದಿಯನ್ನು ಸೋಲಿಸುವ ಅವರ ಉದ್ದೇಶ ಈಡೇರಲ್ಲ ವಿಪಕ್ಷಗಳು ಕೊಳಕು ರಾಜಕಾರಣ ಮಾಡುತ್ತಿವೆ ಎಂದು ಬೊಮ್ಮಯಿ ಹೇಳಿದ್ದಾರೆ. ಮಹಾಘಟಬಂದನ್‌ ಸಭೆಗೆ ಕುಟುಕಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ನಾನು ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಾಗಲೂ, … Read more

ಕಾಂಗ್ರೆಸ್ ಸರಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಕರಾವಳಿಯ ಬಿಜೆಪಿ ಶಾಸಕ

ಬೆಂಗಳೂರು;ರಾಜ್ಯ ಕಾಂಗ್ರೆಸ್ ಸರಕಾರದ ಅನ್ನಭಾಗ್ಯ ಯೋಜನೆ ಕುರಿತು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಬಿಜೆಪಿಯವನಾದರೂ ಬಡವರ ಮನೆಗೆ ಅಕ್ಕಿಯನ್ನು ಮುಟ್ಟಿಸುವ ಯೋಜನೆಯನ್ನು ಅಭಿನಂದಿಸುತ್ತೇನೆ.ಅನ್ನಭಾಗ್ಯ ಯೋಜನೆ ರೂಪಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಇದನ್ನು ಯಾವುದೇ ಸರಕಾರ ಜಾರಿ ಮಾಡಿರಲಿ ಬಡವನ ಮನೆಗೆ ಅದು ಮುಟ್ಟಿದೆ.ಬಡತನವನ್ನು ಅನುಭವಿಸಿದವನಿಗಷ್ಟೇ ಅದರ ಮೌಲ್ಯ ಗೊತ್ತಾಗುತ್ತೆ ಎಂದು ಹೇಳಿದರು. ಬಡವರ ಮನೆಯ ಒಲೆ ನಿರಂತರ ಉರಿಯುವಂತೆ ಮಾಡುವ … Read more

ಪಡುಬಿದ್ರೆ; ಕಾರನ್ನು ಕಿ.ಮೀವರೆಗೆ ಎಳೆದೊಯ್ದ ಟಿಪ್ಪರ್; ಭಯಾನಕ ಘಟನೆಯ ವಿಡಿಯೋ ವೈರಲ್..

ಪಡುಬಿದ್ರ:ಟಿಪ್ಪರ್‌‌ ಒಂದು ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಎಳೆದೊಯ್ದಿರುವ ಶಾಕಿಂಗ್ ಘಟನೆ ಪಡುಬಿದ್ರಿಯಲ್ಲಿ ನಡೆದಿದ್ದು, ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ.ಈ ವೇಳೆ ಕಾರು ಹಿಂಬದಿ ಸಿಲುಕಿದ್ದರೂ ಟಿಪ್ಪರ್ ಚಾಲಕ ವೇಗವಾಗಿ ಟಿಪ್ಪರ್ ಓಡಿಸಿದ್ದಾನೆ. ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದು ಬೈದು ಸಾರ್ವಜನಿಕರು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ … Read more

ಮಂಗಳೂರು; ಕುಟುಂಬಸ್ಥರು ಸಂಪರ್ಕಕ್ಕೆ ಸಿಗದ ಹಿನ್ನೆಲೆ; ಮಾಲಕನಿಂದ ಕೊಲೆಯಾದ ಯುವಕನ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳೀಯರು

ಮಂಗಳೂರು:ಕೊಲೆಯಾದ ಯುವಕನ ಕುಟುಂಬಸ್ಥರು ಯಾರೆಂದು ತಿಳಿಯದ ಹಿನ್ನೆಲೆ ಸಾರ್ವಜನಿಕರು‌ ಮತ್ತು ಪೊಲೀಸರು ಸೇರಿ ಯುವಕನ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ. ಕೊಲೆಯಾದ ಗಜ್ಞಾನ್ ಜಗುನ ಅಂತ್ಯಸಂಸ್ಕಾರವನ್ನು ಇಂದು ನಗರದ ನಂದಿಗುಡ್ಡೆಯ ಸ್ಮಶಾನದಲ್ಲಿ ಸ್ಥಳೀಯರು ಪಾಂಡೇಶ್ವರ ಪೊಲೀಸರ ಸಮ್ಮುಖದಲ್ಲಿ ನೆರವೇರಿಸಿದರು. ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಕುಟುಂಬಸ್ಥರು ಯಾರೆಂದು ಪತ್ತೆಯಾಗದಿರುವ ಕಾರಣ ಮಹಮ್ಮದ್ ಅಝರ್ ನೇತೃತ್ವದಲ್ಲಿ ನಡೆದ ಇಂದು ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಲಾಗಿದೆ. ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಮುಳಿಹಿತ್ಲು ಜಂಕ್ಷನ್‌ನಲ್ಲಿ ಇರುವ ತೌಸಿಫ್ ಹುಸೈನ್‌ ನ ಎಂಬವನ … Read more

ದೇಶದ ವಿವಿಧ ಭಾಗಗಳಲ್ಲಿ ಬರೊಬ್ಬರಿ 2,416 ಕೋಟಿ ರೂ.ಮೌಲ್ಯದ ಡ್ರಗ್ಸ್ ಗಳ ನಾಶ

ನವದೆಹಲಿ;ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಗಳ (ಎಎನ್‌ಟಿಎಫ್) ಸಮನ್ವಯದಲ್ಲಿ ಇಂದು ದೇಶದ ವಿವಿಧ ಭಾಗಗಳಲ್ಲಿ 2,416 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ನಾಶಪಡಿಸಿರುವ ಬಗ್ಗೆ ವರದಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಡ್ರಗ್ಸ್ ನಾಶವನ್ನು ವಾಸ್ತವಿಕವಾಗಿ ಮೇಲ್ವಿಚಾರಣೆ ಮಾಡಿದರು. ಅವರು ಇಂದು ನವದೆಹಲಿಯಲ್ಲಿ “ಡ್ರಗ್ಸ್ ಟ್ರಾಫಿಕಿಂಗ್ ಮತ್ತು ರಾಷ್ಟ್ರೀಯ ಭದ್ರತೆ” ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಈ ಕಾರ್ಯಾಚರಣೆಯಲ್ಲಿ ಅಂದಾಜು 2,416 ಕೋಟಿ ರೂ.ಮೌಲ್ಯದ 1,44,000 … Read more

ಕ್ರಿಕೆಟ್ ಆಡುವಾಗ ಯುವಕ ಹೃದಯಾಘಾತದಿಂದ ಮೃತ್ಯು

ಕ್ರಿಕೆಟ್ ಆಡುವಾಗ ಯುವಕ ಹೃದಯಾಘಾತದಿಂದ ಮೃತ್ಯು ಗುಜರಾತ್‌; 20 ವರ್ಷದ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಜರಾತಿನ ಅರಾವಳಿಯಲ್ಲಿ ಯುವಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಮಾಹಿತಿಯ ಪ್ರಕಾರ, ಪರ್ವ ಸೋನಿ ಅವರು ಅರವಳ್ಳಿಯ ಮೊಡಸದಲ್ಲಿರುವ ಗೋವರ್ಧನ್ ಸೊಸೈಟಿಯಲ್ಲಿರುವ ಶ್ರೈನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸೋನಿ ಇಂಜಿನಿಯರಿಂಗ್ ಓದುತ್ತಿದ್ದರು.ಘಟನೆಯಿಂದ ಅವರ ಕುಟುಂಬ ದುಃಖತಪ್ತವಾಗಿದೆ.ಉತ್ತಮ ಕ್ರೀಡಾಪಟುವಾಗಿದ್ದ ಸೋನಿ, ಕ್ರಿಕೆಟ್ ಗೆ ಟ್ರೈನಿಂಗ್​ ಸಹ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ

ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ ಉತ್ತರಪ್ರದೇಶ:ರೈಲು ನಿಲ್ದಾಣವೊಂದರ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್‌ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸ್ … Read more

ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಗೆ ನಮ್ಮನ್ನು ಕರೆದಿಲ್ಲ ಎಂದ ಕುಮಾರಸ್ವಾಮಿ; ಜೆಡಿಎಸ್ ಗೆ ಜಾತ್ಯತೀತ ರಾಜಕೀಯದಲ್ಲಿ ನಂಬಿಕೆಯಿಲ್ಲ ಎಂದ ಗುಂಡೂರಾವ್

ಬೆಂಗಳೂರು:ಬಿಜೆಪಿಯನ್ನು ಸೋಲಿಸಲು ಮಹಾ ಘಟಬಂಧನ್ ನಾಯಕರು ಬೆಂಗಳೂರಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.ಪಾಟ್ನಾದಲ್ಲಿ ಕಳೆದ ತಿಂಗಳು ಪ್ರತಿಪಕ್ಷಗಳ ಸಭೆ ನಡೆದಿತ್ತು. ಸಭೆಯಲ್ಲಿ ರಾಹುಲ್‌ ಗಾಂಧಿ, ಮಮತಾ ಬ್ಯಾನರ್ಜಿ ಹಾದಿಯಾಗಿ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜೆಡಿಎಸ್ ಗೆ ಜಾತ್ಯತೀತ ರಾಜಕೀಯದಲ್ಲಿ ನಿಜವಾಗಿ ನಂಬಿಕೆಯಿಲ್ಲ … Read more

ಹರ್ಯಾಣಿ ಹಾಡುಗಳಿಗೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ; ವಿಡಿಯೋ ವೈರಲ್..

ನವದೆಹಲಿ;ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಹರ್ಯಾಣಿ ಹಾಡುಗಳಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ. ಹರ್ಯಾಣದ ಸೋನೆಪತ್‌ನಿಂದ ಕೆಲವು ಮಹಿಳೆಯರನ್ನು ದೆಹಲಿಗೆ ಆಹ್ವಾನಿಸಲಾಗಿದ್ದು, ಅವರ ಜೊತೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಆಗಮಿಸಿದ ಈ ಮಹಿಳೆಯರು ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್‌ ಅವರೊಂದಿಗೆ ಭೋಜನ ಕೂಟದಲ್ಲೂ ಭಾಗಿಯಾಗಿದ್ದಾರೆ.ಬಳಿಕ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಅವರ ಜೊತೆ ಹರ್ಯಾಣಿ ಹಾಡುಗಳಿಗೆ ಹೆಜ್ಜೆ … Read more

ಮಂಗಳೂರು; 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು;9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಕಣ್ಣೂರು ಅಡ್ಯಾರ್‌ ನಿವಾಸಿ ಹಸೈನಾರ್‌ ಆಲಿಯಾಸ್‌ ಹಸೈನ್‌(35) ಬಂಧಿತ ಆರೋಪಿ. ಈತ 2012ರಲ್ಲಿ ಯುವತಿಯೋರ್ವಳು ಲೇಡಿಹಿಲ್‌ ಸಮೀಪ ಫ್ಲ್ಯಾಟ್‌ ಕಡೆಗೆ ಹೋಗುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದಳು. ಈ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು.ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಈತನಿಗೆ 2014ರ ಅ.18ರಂದು 4 ತಿಂಗಳ ಕಾರಾಗೃಹ ಶಿಕ್ಷೆ ತೀರ್ಪು … Read more