ಫ್ಲೈಓವರ್ ಮೇಲೆ ವೇಗವಾಗಿ ಬಂದ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದು ಅಪಘಾತ; ಓರ್ವ ಯುವಕ ಮೃತ್ಯು, ಇನ್ನೋರ್ವ ಗಂಭೀರ

ಬೆಂಗಳೂರು;ಫ್ಲೈಓವರ್ ಮೇಲೆ ವೇಗವಾಗಿ ಬಂದ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಿ 30 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪದ್ಮನಾಭನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಹಿಂಬದಿ ಸವಾರ ಹಾಫ್​ ಹೆಲ್ಮೆಟ್​ ಹಾಕಿದ್ದನು ಎನ್ನಲಾಗಿದೆ. ರಾಮ್​ಕುಮಾರ್ ಮೃತರು.ಯಶವಂತ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ವೀಕೆಂಡ್ ಹಿನ್ನೆಲೆ ನಿನ್ನೆ ರಾಮ್​ಕುಮಾರ್ ಮತ್ತು ಯಶವಂತ್ ಬೈಕ್​ ರೈಡ್​ಗಾಗಿ ಬಂದಿದ್ದರು ಎನ್ನಲಾಗಿದೆ.ತಿರುವಿನಲ್ಲಿ ಬೈಕ್ ನಿಯಂತ್ರಣ … Read more

ಟೊಮೆಟೋ ಕಾಯಲು ಅಂಗಡಿ ಬಳಿ ಇಬ್ಬರು ಬೌನ್ಸರ್ ಗಳನ್ನು ನೇಮಿಸಿದ ತರಕಾರಿ ವ್ಯಾಪಾರಿ

ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರೋರಾತ್ರಿ ಟೊಮ್ಯಾಟೊ ಕದ್ದೊಯ್ಯುತ್ತಿದ್ದಾರೆ. ಹೀಗಾಗಿ ತರಕಾರಿ ವ್ಯಾಪಾರಿ ಟೊಮೆಟೋ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಿಸಿ ಸುದ್ದಿಯಾಗಿದ್ದಾನೆ. ಈ ಕುರಿತ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಿಸಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೇರಿದೆ.ಹಲವೆಡೆ ಟೊಮ್ಯಾಟೊ ಕಳ್ಳತನ ನಡೆದಿವೆ.ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ … Read more

ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಮೃತ್ಯು, ಮಹಿಳೆಗೆ ಗಾಯ

ಬೆಳ್ತಂಗಡಿ; ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಮಹಿಳೆ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಂದಾರು-ಕುಪ್ಪೆಟ್ಟಿ ರಸ್ತೆ ಬನಾರಿ ಬಳಿ ನಡೆದಿದೆ. ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.

ಹತ್ಯೆಗೊಳಗಾಗಿದ್ದ ಜೈನ‌ ಮುನಿಯ ಅಂತ್ಯಸಂಸ್ಕಾರ; ಭಕ್ತರು ಕಣ್ಣೀರು

ಚಿಕ್ಕೋಡಿ:ಹತ್ಯೆಗೊಳಗಾಗಿದ್ದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಅಂತ್ಯ ಸಂಸ್ಕಾರ ಇಂದು ನಡೆದಿದೆ. ಅವರ ಪಾರ್ಥಿವ ಶರೀರ ಮರಣ್ಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದು, ಅಲ್ಲಿಂದ ನೇರವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಹಿರೇಕೋಡಿ ನಂದಿ ಪರ್ವತ ಆಶ್ರಮಕ್ಕೆ ಆಗಮಿಸಿ ಆಶ್ರಮದ ಬದಿಯ ಕೃಷಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಇನ್ನು ಜೈನ ಧರ್ಮದ ಸಂಪ್ರದಾಯದಂತೆ ಮುನಿ ಮಹಾರಾಜರ ಸಹೋಧರನ ಮಗ ಭೀಮಗೌಂಡ ಉಗಾರೆ ಮುನಿಗಳಿಗೆ ಅಗ್ನಿ ಸ್ಪರ್ಶ … Read more

ಮಹಿಳೆಯ ಮೇಲೆ 11 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಮಹಿಳೆಯ ಮೇಲೆ 11 ಮಂದಿಯಿಂದ ಸಾಮೂಹಿಕ ಅತ್ಯಾಚಾರ ಮಹಾರಾಷ್ಟ್ರ: ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಮಹಿಳೆಯೊಬ್ಬರ ಮೇಲೆ 11 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಸತಾರಾ ಜಿಲ್ಲೆಯ ಫಾಲ್ತಾನ್​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಕಾರ್ಖಾನೆಯ ಮಾಲೀಕ ಮತ್ತು ಆರೋಪಿ ಶಂಕಿತ ಬಾಲು ಶೇಖ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮೇಲೆ ಹನ್ನೊಂದು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. … Read more

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ನಾಲ್ವರಿಗೆ ಗಾಯ

ಬಂಟ್ವಾಳ; ಒಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರೊಂದು ಡಿಕ್ಕಿಯಾಗಿ ಒಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ಪರ್ಲ ಚರ್ಚ್ ಸಮೀಪ ನಡೆದಿದೆ. ಒಮ್ನಿ ಕಾರು ಚಾಲಕ ರಾಯಿಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸಹಿತ ಮೂರು ಜನ ಹಾಗೂ ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೂ ಗಾಯವಾಗಿದೆ. ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಒಮ್ನಿ ಕಾರು ಚರ್ಚ್ ಗೆ ಹೋಗುವ ಉದ್ದೇಶದಿಂದ ಕಾರನ್ನು ತಿರುಗಿಸುವ ವೇಳೆ ವೇಗವಾಗಿ … Read more

ತೊಕ್ಕೊಟ್ಟು; ನಿಯಂತ್ರಣ ತಪ್ಪಿದ ಕಾರು ಪಲ್ಟಿ;ನಾಲ್ವರಿಗೆ ಗಂಭೀರ ಗಾಯ

ತೊಕ್ಕೊಟ್ಟು;ಕಾರೊಂದು ಅಪಘಾತಕ್ಕೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಕುತ್ತಾರು ಪಂಡಿತ್ ಹೌಸ್ ಎಂಬಲ್ಲಿ ಇಂದು ಮುಂಜಾನೆ ನಡೆದ ಬಗ್ಗೆ ವರದಿಯಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ಹರಿದು ಬಳಿಕ ರಸ್ತೆಯಲ್ಲೇ ಉರುಳಿಬಿದ್ದಿದೆ. ಕಾರು ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟಿನತ್ತ ಸಂಚರಿಸುತ್ತಿತ್ತು ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಂಗಳೂರು;ಯುವಕನಿಗೆ ಸುಟ್ಟು ಕೊಲೆ, ವಿದ್ಯುತ್ ಸ್ಪರ್ಶ ಎಂದು ಬಿಂಬಿಸಲು ಯತ್ನ

ಮಂಗಳೂರು;ಯುವಕನೋರ್ವನಿಗೆ ಸುಟ್ಟು ಕೊಲೆಗೈದ ಘಟನೆ ನಗರದ ಮುಳಿಹಿತ್ಲುವಿನಲ್ಲಿ ಶನಿವಾರ ಸಂಭವಿಸಿದೆ. ಉತ್ತರ ಭಾರತದ ಕಾರ್ಮಿಕ ಗಜ್ಞಾನ್‌ ಯಾನೆ ಜಗು ಕೊಲೆಯಾದವನು.ಮುಳಿಹಿತ್ಲು ಜಂಕ್ಷನ್‌ನಲ್ಲಿ ಇರುವ ಜನರಲ್‌ ಸ್ಟೋರ್‌ನ ಮಾಲಕ ತೌಸಿಫ್ ಹುಸೈನ್‌ (32)ಬಂಧಿತ ಆರೋಪಿ. ಮೃತ ಗಜ್ಞಾನ್‌ ಆರೋಪಿ ತೌಸಿಫ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.ಶನಿವಾರ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಗಜ್ಞಾನ್‌ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್‌ ಸ್ಪರ್ಶವಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಈ ಕುರಿತು ಮಂಗಳೂರು ದಕ್ಷಿಣ … Read more

ಜೈನಮುನಿಯ ಹತ್ಯೆ ರಹಸ್ಯ ತನಿಖೆಯಲ್ಲಿ ಬಯಲು;ದೇಹವನ್ನು ಕತ್ತರಿಸಿ ಬೋರ್ ವೆಲ್ ಗೆ ಎಸೆದು ಬಳಿಕ ಹುಡುಕಾಟದ ನಾಟಕ ಮಾಡಿದ್ದ ಆರೋಪಿ!

ಬೆಳಗಾವಿ;ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಾರಾಯಣ ಮಾಳಿ, ಢಲಾಯತ್ ಬಂಧಿತ ಆರೋಪಿಗಳು. ರಾಯಭಾಗದ ಖಟಕಬಾವಿಯ ನಾರಾಯಣ ಮಾಳಿ ಜಮೀನು ಗುತ್ತಿಗೆ ಪಡೆದು ಉಳುಮೆ ಮಾಡುತ್ತಿದ್ದ.ಜೈನ ಮುನಿ ಆಶ್ರಮದ ಬಳಿ ಜಮೀನು ಲೀಸ್ ಪಡೆದು ಉಳುಮೆ ಮಾಡಿಕೊಂಡಿದ್ದ. ಇದೇ ವೇಳೆ ಜೈನ ಮುನಿಗೆ ಆತ ಆಪ್ತನಾಗಿದ್ದ.ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನ ಮುನಿಗಳ ವಿಶ್ವಾಸವನ್ನು ಗಳಿಸಿದ್ದ. ವೈಯಕ್ತಿಕ ಕಾರಣಕ್ಕೆ ಅವರಿಂದ 6 ಲಕ್ಷ ರೂಪಾಯಿ ಹಣ … Read more