ಪೊಲೀಸರಿಂದ ಉಚಿತ ತರಭೇತಿ; SSLCಯಲ್ಲಿ ಆರು ಸಬ್ಜೆಕ್ಟ್ ನಲ್ಲೂ ಫೈಲ್ ಆಗಿದ್ದ ವಿದ್ಯಾರ್ಥಿ ಮರುಪರೀಕ್ಷೆಯಲ್ಲಿ ಉತ್ತೀರ್ಣ

ಬೆಂಗಳೂರು;ಬೊಮ್ಮನಹಳ್ಳಿಯ ಬಂಡೇಪಾಳ್ಯದ ಪೊಲೀಸರು SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಧ್ಯಾರ್ಥಿಗಳನ್ನು ಗುರುತಿಸಿ ಉಚಿತ ಟ್ಯೂಷನ್​ ವ್ಯವಸ್ಥೆ ಮಾಡಿದ್ದಾರೆ. ಪೊಲೀಸರು 20 ದಿನಗಳ ಕಾಲ 65 ವಿದ್ಯಾರ್ಥಿಗಳಿಗೆ ಟ್ಯೂಷನ್​ ವ್ಯವಸ್ಥೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿದಿನವೂ ಎಲ್ಲಾ ಆರು ಸಬ್ಜೆಕ್ಟ್​ಗನ್ನು ಪಾಠ ಮಾಡಲು ತರಗತಿ ವ್ಯವಸ್ಥೆಯನ್ನು ಪೊಲೀಸರು ಮಾಡಿಸಿಕೊಟ್ಟಿದ್ದಾರೆ. ತರಗತಿಗಳಲ್ಲಿ ನುರಿತ ಶಿಕ್ಷಕರಿಂದ ತರಬೇತಿ ನೀಡಿಸಿದ್ದು, ಮರು ಪರೀಕ್ಷೆಯಲ್ಲಿ 35 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪೊಲೀಸರು ನಗರದ ಶೊಬೋದಿನ ಶಾಲೆಯಲ್ಲಿ ಪ್ರತಿ ದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆರಕ್ಕೆ ಆರೂ … Read more

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮೇಲೆ ಗುಂಡಿನ ದಾಳಿ ಪ್ರಕರಣ; ನಾಲ್ವರ ಬಂಧನ

ಉತ್ತರಪ್ರದೇಶ; ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮೇಲೆ ಗುಂಡು ಹಾರಿಸಿದ ಆರೋಪದಲ್ಲಿ ನಾಲ್ವರನ್ನು ಶನಿವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ‌. ಆರೋಪಿಗಳನ್ನು ವಿಕಾಸ್, ಪ್ರಶಾಂತ್ ಮತ್ತು ಲೋವಿಶ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಯುಪಿಯ ಸಹರಾನ್‌ಪುರದವರಾಗಿದ್ದಾರೆ. ನಾಲ್ಕನೇ ಆರೋಪಿ ವಿಕಾಸ್ ಹರಿಯಾಣದ ಕರ್ನಾಲ್ ಮೂಲದವನಾಗಿದ್ದಾನೆ. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಯುಪಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಂಬಾಲಾ ಎಸ್‌ಟಿಎಫ್ ಘಟಕದ ಉಪ ಪೊಲೀಸ್ ಅಧೀಕ್ಷಕ ಅಮನ್ ಕುಮಾರ್ ತಿಳಿಸಿದ್ದಾರೆ. ಹರಿಯಾಣ ವಿಶೇಷ ಕಾರ್ಯಪಡೆಯ ಅಂಬಾಲಾ ಘಟಕವು ಉತ್ತರ ಪ್ರದೇಶ ಪೊಲೀಸರ … Read more

ಪುತ್ತೂರು ಮೂಲದ ಅಜಿತ್‌ ರೈಗೆ ತಹಶೀಲ್ದಾರ್ ಹುದ್ದೆಯಿಂದ ಅಮಾನತುಗೊಳಿಸಿದ ಸರಕಾರ

ಬೆಂಗಳೂರು:ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಕೆ.ಆರ್‌. ಪುರಂ ತಹಶೀಲ್ದಾರ್‌ ಅಜಿತ್‌ ರೈ ಅವರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಲಾಗಿದೆ. ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದ ಅಜಿತ್‌ ರೈ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಪಡೆದಿದ್ದರು. ಪ್ರಸ್ತುತ ಕೆ.ಆರ್‌. ಪುರಂನಲ್ಲಿ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದಾಯಕ್ಕಿಂತ 69% ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪುತ್ತೂರು ಮೂಲದ ಅಜಿತ್ ರೈಗೆ … Read more

ಕಾಸರಗೋಡು; ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಮೃತ್ಯು

ಕಾಸರಗೋಡು: ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮಂಜೇಶ್ವರ ಮಜಿ ಬೈಲ್ ನ ಖಾದರ್ ರವರ ಮಕ್ಕಳಾದ ನಾಸಿಮ್ (22) ಮತ್ತು ನಾದಿಲ್ (17) ಮೃತಪಟ್ಟವರು. ಸ್ಥಳೀಯ ನಿವಾಸಿಗಳು ನೀರಿನಲ್ಲಿ ಸಹೋದರರು ಮುಳುಗುವುದನ್ನು ಕಂಡು ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿ ಅಸ್ಪತೆಗೆ ಸಾಗಿಸಿದರು.ಆದರೆ ಜೀವ ಉಳಿಸಲಾಗಳಿಲ್ಲ. ಮೃತ ದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಕಂಡೆಕ್ಟರ್: ವಿಡಿಯೋ ವೈರಲ್ ಬೆನ್ನಲ್ಲೇ ಕೆಲಸದಿಂದ ವಜಾ

ಚಲಿಸುತ್ತಿರುವ ಬಸ್ಸಿನಲ್ಲೇ ಕಂಡಕ್ಟರ್ ಓರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಘಟನೆ ಲಕ್ನೋದಲ್ಲಿ ನಡೆದಿದೆ‌. ಲಕ್ನೋಗೆ ತೆರಳುತ್ತಿದ್ದ ಹತ್ರಾಸ್ ಡಿಪೋದ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಂಡಕ್ಟರ್ ಬಸ್‌ ಹಿಂಬದಿ ಸೀಟಿನಲ್ಲಿ ನಡೆಸುವ ರಾಸಲೀಲೆಯನ್ನು ಇತರ ಪ್ರಯಾಣಿಕರು ನೋಡಿದ್ದಾರೆ‌. ಕಂಡಕ್ಟರ್ ವರ್ತನೆ ವಿಚಿತ್ರವಾಗಿ ಕಾಣುತ್ತಿದ್ದರಿಂದ ಪ್ರಯಾಣಿರೊಬ್ಬರು ಮೊಬೈಲ್‌ ನಲ್ಲಿ ಇದನ್ನು ಚಿತ್ರೀಕರಣ ಮಾಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಮಹಿಳೆಯೊಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಪ್ರಯಾಣಿಕ ವಿಡಿಯೋ ಮಾಡುತ್ತಿರುವಾಗಲೇ ಕಂಡಕ್ಟರ್ ಎಚ್ಚೆತ್ತುಕೊಂಡು ಕಂಬಳಿಯಿಂದ … Read more

ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಹೃದಯವಿದ್ರಾಹಕ ಘಟನೆ ವರದಿ

ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಹೃದಯವಿದ್ರಾಹಕ ಘಟನೆ ವರದಿ ತೆಲಂಗಾಣ:ಪತಿಯ ಕಿರುಕುಳ ಸಹಿಸಲಾರದೆ ಹತ್ತು ವರ್ಷದೊಳಗಿನ ತನ್ನ ಮೂವರು ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜಣ್ಣ ಸಿರಸಿಲ್ಲ ಜಿಲ್ಲೆಯ ಬೋಯಿನಪಲ್ಲಿ ತಾಲೂಕಿನ ಕೋಡುರುಪಾಕದಲ್ಲಿ ಘಟನೆ ನಡೆದಿದೆ‌. ರಜಿತಾ(30) ಕಂಪ್ಯೂಟರ್ ಕೋರ್ಸ್ ಕಲಿಯಲು ಕರೀಂನಗರಕ್ಕೆ ಹೋಗುತ್ತಿದ್ದರು. ಅಲ್ಲಿ ಅವರಿಗೆ ಸುಭಾಷನಗರದ ಬಾಳೆಹಣ್ಣು ಮಾರಾಟಗಾರ ಮಹಮ್ಮದ್ ಅಲಿ ಪರಿಚಯವಾಗಿತ್ತು.ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. 10 ವರ್ಷಗಳ ಹಿಂದೆ ರಜಿತಾ ಮನೆ ತೊರೆದು ಅಲಿಯನ್ನು … Read more

ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಮಾಜಿ ಸಿಎಂ ಬೊಮ್ಮಯಿ ಮಹತ್ವದ ಹೇಳಿಕೆ

ಬೆಂಗಳೂರು;ವಿರೋಧ ಪಕ್ಷದ ನಾಯಕ ಯಾರು ಎಂದು ನಾಳೆ ತಿಳಿಯಲಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್ ಅಶೋಕ್ ಹುಟ್ಟು ಹಬ್ಬದ ಆಚರಣೆಗಾಗಿ ಚಿಕ್ಕಮಗಳೂರಿಗೆ ಬಂದಿದ್ದೇವೆ ಬಹಳ ದಿನಗಳ ನಂತರ ಸಮಯ ಸಿಕ್ಕಿದೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯ ಚರ್ಚೆ ನಡೆಸಲು ಇಷ್ಟು ದೂರ ಬರಬೇಕಾ ಎಂದು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷದ ನಾಯಕ ಯಾರು ಎಂಬುದರ ಬಗ್ಗೆ ನಾಳೆ ಮಾಹಿತಿ ನೀಡುತ್ತೇವೆ.ಈ ಕುರಿತ … Read more

ನಿವೃತ್ತ ಉಪನ್ಯಾಸಕ ಹಾಗೂ ಖ್ಯಾತ ಚಿಂತಕ ಪ್ರೊ. ಹೆಚ್.ಪಟ್ಟಾಭಿರಾಮ ಸೋಮಯಾಜಿ ಇನ್ನಿಲ್ಲ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಉಪನ್ಯಾಸಕ ಹಾಗೂ ಖ್ಯಾತ ಚಿಂತಕ ಪ್ರೊ. ಹೆಚ್.ಪಟ್ಟಾಭಿರಾಮ ಸೋಮಯಾಜಿ ಅವರು ನಿಧನರಾಗಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಚ್ ಪಟ್ಟಾಭಿರಾಮ ಸೋಮಯಾಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಅವರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಪಟ್ಟಾಭಿರಾಮ ಸೋಮಯಾಜಿ ಅವರು ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರ ಅವರು ರಾಮಸೇನೆಯನ್ನು ‘ರಾವಣ ಸೇನೆ’ ಎಂದು ಕರೆದಿದ್ದು, ಈ ಹೇಳಿಕೆಯಿಂದ ನಗರದಲ್ಲಿ ಪ್ರತಿಭಟನೆಗಳು … Read more

ಆಟೋ & ಲಾರಿ ನಡುವೆ ಭೀಕರ ಅಪಘಾತ; 7 ಮಂದಿ ಮೃತ್ಯು

ಆಟೋ & ಲಾರಿ ನಡುವೆ ಭೀಕರ ಅಪಘಾತ; 7 ಮಂದಿ ಮೃತ್ಯು ವಿಜಯನಗರ; ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೊದಲ್ಲಿದ್ದ ಏಳು ಮಂದಿ ಮೃತಪಟ್ಟು, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳ್ಳಾರಿಯಿಂದ ತುಂಗಭದ್ರಾ ಅಣೆಕಟ್ಟು ವೀಕ್ಷಿಸಲು ಎರಡು ಆಟೋದಲ್ಲಿ ಒಟ್ಟು 19 ಜನರು ​ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಉಕ್ಕಿನ … Read more

ಉಡುಪಿ; ಕಾರು ಪಲ್ಟಿಯಾಗಿ ಭೀಕರ ಅಪಘಾತ, ವೈದ್ಯ ಮೃತ್ಯು

ಮಣಿಪಾಲ:ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವೈದ್ಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಯ ಡಾ.ಸೂರ್ಯನಾರಾಯಣ ಮೃತರು ಎಂದು ಗುರುತಿಸಲಾಗಿದೆ. ಇವರ ಗೆಳೆಯರಾದ ಕೇರಳದ ಸಂಗೀತ್ ಮತ್ತು ಉತ್ತರಪ್ರದೇಶದ ದಿವಿತ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ಮೂವರು ಊಟ ಮುಗಿಸಿ ತಮ್ಮ ಫ್ಲ್ಯಾಟ್ ಗೆ ವಾಪಾಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ತಲೆಗೆ … Read more