1 ವರ್ಷದ ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ; ಪ್ರಕರಣ ದಾಖಲು

ತಾಯಿಯೊಬ್ಬಳು 16 ತಿಂಗಳ ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು 10 ದಿನಗಳ ಪ್ರವಾಸಕ್ಕೆ ತೆರಳಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಆಕೆ ವಾಪಸ್ ಬರುವಷ್ಟರೊಳಗೆ ಹೆಣ್ಣು ಮಗು ಡಿಹೈಡ್ರೇಷನ್​ನಿಂದ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ಅಮೆರಿಕಾದ ಓಹಿಯೋದ ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ ತನ್ನ ಹೆಣ್ಣು ಮಗು ಜೈಲಿನ್ ನ್ನು 10 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು.ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರನ್ನು ಕೇಳಿಕೊಂಡಿದ್ದಳು. ಮಗುವನ್ನು ನೋಡಿಕೊಳ್ಳಿ ಎಂದಿದ್ದಳು ಆದರೆ ಮತ್ತೆ ಅವಳು ಯಾರಿಗೂ ಕರೆ ಮಾಡಲಿಲ್ಲ, ಆದ್ದರಿಂದ … Read more

ಕಾಸರಗೋಡು; ಯುವಕನನ್ನು ಚೂರಿಯಿಂದ ಇರಿದು ಕೊಲೆ

ಕಾಸರಗೋಡು:ಯುವಕನನ್ನು ಚೂರಿಯುಂದ ಇರಿದು ಕೊಲೆಗೈದ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮಧೂರು ಅರಂತೋಡಿನ ಸಂದೀಪ್ ಗೆ ಕೊಲೆ ಮಾಡಲಾಗಿದೆ.ಯುವತಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೆರ್ಲ ಕಜಂಪಾಡಿಯ ಪವನ್ ರಾಜ್ ಎಂಬಾತ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನದ ವೇಳೆ ಮೃತಪಟ್ಟಿದ್ದಾರೆ. ಇದೀಗ ಆರೋಪಿಯ ಪತ್ತೆಗೆ ಬದಿಯಡ್ಕ ಪೊಲೀಸರು ಶೋಧ ನಡೆಸುತ್ತಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಉಪ್ಪಿನಂಗಡಿ; ಉದ್ಯಮಿ ಹಾಜಿ ಮುಸ್ತಫಾ ಕೆಂಪಿ ನಿಧನ

ಉಪ್ಪಿನಂಗಡಿ:ಸಾಮಾಜಿಕ ಮುಂದಾಳು, ಉದ್ಯಮಿ ಹಾಜಿ ಮುಸ್ತಫಾ ಕೆಂಪಿ ನಿಧನರಾಗಿದ್ದಾರೆ. 49 ವರ್ಷದ ಮುಸ್ತಫಾ ಕೆಂಪಿ ಅಲ್ಪ ಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದಾರೆ‌. ಮೃತರು ಪತ್ನಿ ಮತ್ತು ಐವರು ಪುತ್ರರು ಹಾಗೂ ಇಬ್ನರು ಪುತ್ರಿಯರನ್ನು ಅಗಲಿದ್ದಾರೆ.

4 ಪಟ್ಟು ಹೆಚ್ಚಾದ ಟೊಮೆಟೋ ಬೆಲೆ; ಜನಸಾಮಾನ್ಯರಿಗೆ ಶಾಕಿಂಗ್ ಸುದ್ದಿ

ಬೆಂಗಳೂರು;ರಾಜ್ಯದಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಟೊಮೆಟೊ ದರ ಕೆಜಿಗೆ 80 ರಿಂದ 120 ರೂಪಾಯಿಗೆ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೆಜಿಗೆ 30-35 ರಿಂದ 65-70 ರೂಪಾಯಿಗೆ ಏರಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಕೆಜಿಗೆ ಕೇವಲ 20-25 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಕೆಜಿಗೆ 120 ರೂಪಾಯಿಗೆ ತಲುಪಿದೆ. ಟೊಮೆಟೊ ಜತೆಗೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.ಬೀನ್ಸ್ ಚಿಲ್ಲರೆ ಮಾರಾಟಕ್ಕೆ ಕೆಜಿಗೆ … Read more

ಕುಂದಾಪುರ; ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರುಪಾಲು

ಕುಂದಾಪುರ;ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕಾಳಾವರ ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ (37)ಮೃತ ದುರ್ದೈವಿ. ಹರೀಶ್ ಪೂಜಾರಿ ಮೀನು ಹಿಡಿಯಲು ಮೂವರು ಸ್ನೇಹಿತರ ಜೊತೆ ಕಾಳಾವಾರ ದೇವಸ್ಥಾನದ ಸಮೀಪದ ಕೆರೆಗೆ ತೆರಳಿದ್ದು ಈ ವೇಳೆ ಮೀನು ಹಿಡಿಯಲು ಹರೀಶ್ ನೀರಿಗಿಳಿದಾಗ ನೀರಿನಲ್ಲಿ ಮುಳುಗಿದ್ದಾರೆ. ಈ ಬಗ್ಗೆ ಸ್ನೇಹಿತರು ಸ್ಥಳೀಯರಿಗೆ ವಿಚಾರ ತಿಳಿಸಿದ್ದು, ರಾತ್ರಿಯೇ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರ ಆಗಮಿಸಿ ಅಗ್ನಿಶಾಮಕ ದಳದವರು, ಸ್ಥಳೀಯರ ಸಹಾಕರದಿಂದ … Read more

ಕೇರಳ; ಖ್ಯಾತ ನಟ ಪೃಥ್ವಿರಾಜ್ ಆಸ್ಪತ್ರೆಗೆ ದಾಖಲು

ಕೇರಳ;ಚಿತ್ರೀಕರಣದ ವೇಳೆ ನಟ ಪೃಥ್ವಿರಾಜ್ ಅವರಿಗೆ ಗಾಯವಾಗಿದ್ದು ಅವರಿಗೆ ಇಂದು ಶಸ್ತ್ರಕ್ರಿಯೆ ನಡೆಯಲಿದೆ. ನಿನ್ನೆ ಕೇರಳದ ಇಡುಕ್ಕಿ ಮರಯೂರ್‌ ಎಂಬಲ್ಲಿ ಮಲಯಾಳಂ ಚಿತ್ರ ‘ವಿಲಾಯತ್‌ ಬುದ್ಧ’ ಇದರ ಚಿತ್ರೀಕರಣದ ವೇಳೆ ನಟ ಪೃಥ್ವಿರಾಜ್ ಅವರಿಗೆ ಗಾಯವಾಗಿದೆ. ಬಸ್‌ ತಂಗುದಾಣವೊಂದರಲ್ಲಿ ಫೈಟ್‌ ದೃಶ್ಯ ಚಿತ್ರೀಕರಣದ ವೇಳೆ ನಟನ ಕಾಲಿಗೆ ಗಾಯವಾಗಿದ್ದು ಅವರನ್ನು ಇಡುಕ್ಕಿಯ ಹತ್ತಿರದ ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ‌. ಶಸ್ತ್ರಕ್ರಿಯೆ ನಂತರ ಅವರಿಗೆ ಎರಡು ಮೂರು ತಿಂಗಳು ವಿಶ್ರಾಂತಿ ಬೇಕಾಗಬಹುದೆಂದು ನಿರೀಕ್ಷಿಸಲಾಗಿದೆ. ʻವಿಲಾಯತ್‌ ಬುದ್ಧʼ ಚಲನಚಿತ್ರವು ಜಯನ್‌ ನಂಬಿಯಾರ್‌ … Read more

ಶಾಲಾ ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿ ಸಾವು- ಕುಟುಂಬಸ್ಥರ ಆರೋಪ

ಬಿಹಾರ;ಶಾಲಾ ಶಿಕ್ಷಕರೋರ್ವರು ಅಮಾನುಷವಾಗಿ ಥಳಿಸಿದ ಕಾರಣ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪೂರ್ವ ಚಂಪಾರಣ್‌ನ ನಿವಾಸಿ ಬಜರಂಗಿ ಕುಮಾರ್ ಮೃತ ವಿದ್ಯಾರ್ಥಿ.ಬಾಲಕ ಖಾಸಗಿ ವಸತಿ ಶಾಲೆಯ ಮಧುಬನ್ ರೈಸಿಂಗ್ ಸ್ಟಾರ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಎಂದು ವರದಿಯಾಗಿದೆ. ಈತ ಶನಿವಾರದಂದು ಹರ್ದಿಯಾ ಸೇತುವೆಯ ಕೆಳಗೆ ಸ್ನೇಹಿತರ ಜತೆಗೂಡಿ ಸಿಗರೇಟ್ ಸೇದಿದ್ದಾನೆ.ಇದನ್ನು ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಗಮನಿಸಿದ್ದರು. ನಂತರ ವಿಜಯ್​ ವಿದ್ಯಾರ್ಥಿಯನ್ನು ಶಾಲೆಗೆ ಕರೆದೊಯ್ದ ಅಲ್ಲಿ ಇತರ ಶಿಕ್ಷಕರೊಂದಿಗೆ ಸೇರಿ ಬೆಲ್ಟ್‌ನಿಂದ ಹೊಡೆದಿದ್ದಾರೆ … Read more

ಬಸ್ ನಿಲ್ಲಿಸಿಲ್ಲ ಎಂದು ಸರಕಾರಿ ಬಸ್ ಗೆ ಕಲ್ಲೆಸೆದ ಮಹಿಳೆ

ಕೊಪ್ಪಳ:ಬಸ್ ನಿಲ್ಲಿಸದ ಕಾರಣ ಮಹಿಳೆಯೊಬ್ಬರು ಸರಕಾರಿ ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ವರದಿಯಾಗಿದೆ. ಇಳಕಲ್ ಪಾಪನಳ್ಳಿ ನಿವಾಸಿ ಲಕ್ಷ್ಮಿ ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ವೇಗದೂತ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಬಸ್‌ನ ಚಾಲಕ ಕಲ್ಲು ಎಸೆದ ಮಹಿಳೆಯನ್ನು ಮುನಿರಾಬಾದ್‌ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ. … Read more

ಎರಡು ಬಸ್‌ಗಳ ನಡುವೆ ಅಪಘಾತ; ಕನಿಷ್ಠ 10 ಮಂದಿ ಮೃತ್ಯು

ಎರಡು ಬಸ್‌ಗಳ ನಡುವೆ ಅಪಘಾತ; ಕನಿಷ್ಠ 10 ಮಂದಿ ಮೃತ್ಯು ಪಾಕಿಸ್ತಾನ;ಎರಡು ಬಸ್‌ಗಳು ಡಿಕ್ಕಿ ಹೊಡೆದು ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಸಿಂಧ್ ಪ್ರಾಂತ್ಯದ ನವಾಬ್ ಶಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಎರಡು ಬಸ್ ಗಳು ಹಿಂದಿಕ್ಕುವ ಬರದಲ್ಲಿ ಅಪಘಾತ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಗಾಯಾಳುಗಳನ್ನು … Read more

ಸುಳ್ಯ; ಅಪ್ರಾಪ್ತ ಬಾಲಕಿ‌ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ ಇಬ್ಬರು ಆರೋಪಿಗಳ‌ ಬಂಧನ

ಸುಳ್ಯ:ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಬಂಧಿತ ಆರೋಪಿಗಳು. ಸುಳ್ಯ ತಾಲೂಕಿನ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಲ್ಮಡ್ಕದ ಚಿದಾನಂದ ಎಂಬಾತನನ್ನು ಬಂಧಿಸಿದ್ದರು.ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಬಾಲಕಿ ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸರು ಫೋಕ್ಸೋ … Read more