ಕಾರ್ಕಳ; ದಂಪತಿಗಳು ಕೆರೆಗೆ ಹಾರಿ ಮೃತಪಟ್ಟ ಪ್ರಕರಣ; ಟಿವಿ ವಿಚಾರಕ್ಕೆ ನಡೆದಿದ್ದ ಜಗಳ!

ಕಾರ್ಕಳ:ಹುರ್ಲಾಡಿ ಎಂಬಲ್ಲಿ ದಂಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ದಂಪತಿಗಳ ನಡುವೆ ಜಗಳ ನಡೆದು ಮೊದಲು ಯಶೋಧಾ (32) ಕೆರೆಗೆ ಹಾರಿದ್ದರು.ಅದರ ಬೆನ್ನಲ್ಲೇ ಪತಿ ಇಮ್ಯಾನುಲ್ ಸಿದ್ಧಿ ಕೆರೆಗೆ ಹಾರಿ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಕೂಡ ಅದೇ ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಇದೀಗ ಅನಾಥರಾಗಿದ್ದಾರೆ. ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮುಂಬಯಿ ಹೋಟೆಲ್ … Read more

ಕೋಚಿಂಗ್ ಸೆಂಟರ್ ನಲ್ಲಿ ನಮಾಜ್ ಮಾಡಿದ ಆರೋಪ; ವ್ಯಕ್ತಿಯೋರ್ವನ‌ ಬಂಧನ

ಕೋಚಿಂಗ್ ಸೆಂಟರ್ ನಲ್ಲಿ ನಮಾಜ್ ಮಾಡಿದ ಆರೋಪ; ವ್ಯಕ್ತಿಯೋರ್ವನ‌ ಬಂಧನ ಉತ್ತರಪ್ರದೇಶ;ಗಾಜಿಯಾಬಾದ್‌ನಲ್ಲಿ ತನ್ನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆಂದು ವ್ಯಕ್ತಿಯೋರ್ವನಿಗೆ ಬಂಧಿಸಲಾಗಿದೆ. ಮೌಲ್ವಿ ಶೌಕತ್ ಅಲಿ ಅವರನ್ನು ಜೂನ್ 23 ರಂದು ಗಾಜಿಯಾಬಾದ್‌ನ ದೀಪಕ್ ವಿಹಾರ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಪೊಲೀಸರು ಬಂದಾಗ ಫ್ಯೂಚರ್ ಟ್ರ್ಯಾಕ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಅಲಿ ವಿರುದ್ಧ ದಾಖಲಾಗಿರುವ ಮೊದಲ ತನಿಖಾ ವರದಿ ಹೇಳುತ್ತದೆ. ಪ್ರಾರ್ಥನೆಗೆ ವಿರೋಧ ವ್ಯಕ್ತಪಡಿಸಿ ಹಿಂದೂ ಸಮುದಾಯದವರಿಂದ ದೂರು ಸ್ವೀಕರಿಸಿದ್ದೇವೆ ಎಂದು … Read more

ಕಾರ್ಕಳ; ಜಗಳವಾಡಿ ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದ ಪತಿ; ಇಬ್ಬರು ಕೂಡ ದುರ್ಮರಣ, ಅನಾಥರಾದ ಮಕ್ಕಳು

ಕಾರ್ಕಳ;ಜಗಳವಾಡಿ ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಬಾವಿಗೆ ಹರಿ ಪತಿ- ಪತ್ನಿ ಇಬ್ಬರು ಕೂಡ ಮೃತಪಟ್ಟ ದುರಂತ ಘಟನೆ ಕಾರ್ಕಳ ತಾಲೂಕು ನಲ್ಲೂರಿನಲ್ಲಿ ವರದಿಯಾಗಿದೆ. ಯಲ್ಲಾಪುರ ಮೂಲದ ಇಮ್ಯಾನುಲ್‌ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ದಂಪತಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ.ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್‌ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. … Read more

ಮದುವೆ ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಲಕಿ ಮೃತ್ಯು

ಮದುವೆ ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಲಕಿ ಮೃತ್ಯು ಪಾಟ್ನಾ:ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ. ನೈನಾ ಕುಮಾರಿ(6) ಮೃತ ಬಾಲಕಿ. ಸಂತ್ರಸ್ತೆ ನೈನಾ ಕುಮಾರಿ ಕುಟುಂಬದವರು ಡೆಕರೇಟರಸ್ ಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ತನ್ನ ಮಗಳು ಆಶಾಕುಮಾರಿಯ ಮದುವೆ ಎಂದು ಬಾಲಕಿಯ ಅಜ್ಜ ಮಹೇಂದ್ರ ಸಿಂಗ್ ಹೇಳಿದ್ದಾರೆ. ಮದುವೆ ಸಮಾರಂಭದಲ್ಲಿ ವಧು ವರರು ಹಾರವನ್ನು ಬದಲಾಯಿಸುವ … Read more

ನಿಷೇಧಿತ PFI ಸಂಘಟನೆ ಕುರಿತ ಸ್ಟಿಕ್ಕರ್ ಅಂಟಿಸಿದ ಆರೋಪ; ಪ್ರಕರಣ ದಾಖಲು

ನಿಷೇಧಿತ PFI ಕುರಿತ ಸ್ಟಿಕ್ಕರ್ ಅಂಟಿಸಿದ ಆರೋಪ; ಪ್ರಕರಣ ದಾಖಲು ಮುಂಬೈ;ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಯನ್ನು ಹೊಗಳಿ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಮತ್ತು ನವಿ ಮುಂಬೈನ ಕೆಲವು ಮನೆಗಳಲ್ಲಿ ಕ್ರ್ಯಾಕರ್ ಬಾಂಬ್‌ಗಳನ್ನು ಕಟ್ಟಿರುವ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸ್ಟಿಕ್ಕರ್‌ಗಳು ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಕೆಲವು ವ್ಯಕ್ತಿಗಳು ಸ್ಟಿಕ್ಕರ್‌ಗಳ ಮೇಲೆ ಹಸಿರು ಶಾಯಿಯಿಂದ … Read more

ಪೊಲೀಸರು ವಿಚಾರಣೆಗೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ; ಘಟನೆ ಬೆನ್ನಲ್ಲೆ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸರು ಅಮಾನತು

ಪೊಲೀಸರು ವಿಚಾರಣೆಗೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ; ಘಟನೆ ಬೆನ್ನಲ್ಲೆ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸರು ಅಮಾನತು ಕಾರವಾರ:ಕಳ್ಳತನ ಆರೋಪದಡಿ ವಿಚಾರಣೆಗೆ ಕರೆ ತಂದಿದ್ದ ಆರೋಪಿಯೋರ್ವ ಪೊಲೀಸ್ ಠಾಣೆಯಲ್ಲಿ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಹಾರ ಮೂಲದ ದಿಲೀಪ ಮಂಡೇಲ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜೂನ್ 24ರಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಪಿಎಸ್​ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಜೂನ್ 24ರಂದು … Read more

ಬಶೀರ್, ಜಲೀಲ್, ನೌಶಿನ್ ಕುಟುಂಬಕ್ಕೆ ಪರಿಹಾರ ನೀಡಲು ಸಚಿವ ದಿನೇಶ್ ಗುಂಡೂರಾವ್ ಗೆ ಭೇಟಿ ಮಾಡಿದ ನಿಯೋಗ

ಮಂಗಳೂರು;ಕೋಮು ದ್ವೇಷಕ್ಕೆ ಬಲಿಯಾದ ಬಶೀರ್, ಪೊಲೀಸ್ ಗೋಲಿಬಾರ್‌ ನಲ್ಲಿ ಮೃತಪಟ್ಟ ನೌಶೀನ್ ಮತ್ತು ಜಲೀಲ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮೃತರ ಕುಟುಂಬ ಸದಸ್ಯರೊಂದಿಗೆ ಸಚಿವರನ್ನು ಭೇಟಿ‌ ಮಾಡಿ ಕುಟುಂಬವು ಮನವಿಯನ್ನು ಸಲ್ಲಿಸಿದೆ. ಸಂತ್ರಸ್ತ ಕುಟುಂಬವು ಪರಿಹಾರ ಪಡೆಯಲು ಅರ್ಹವಾಗಿದೆ ಎಂಬುದರ ಬಗ್ಗೆ ಕೆ.ಅಶ್ರಫ್ ರವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವರಿಸಿದರು. ಈ ವೇಳೆ … Read more

ಭೀಕರ ಬೈಕ್ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಬೈಕ್ ಅಪಘಾತ;ಇಬ್ಬರು ಯುವಕರು ಸ್ಥಳದಲ್ಲೇ ಸಾವು ಮಂಡ್ಯ:ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇನಲ್ಲಿ ಬೈಕ್ ವೊಂದು ಅಪರಿಚಿತ ವಾಹನಕ್ಕೆ ಬೈಕ್​ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಮಣಿ(25), ಜನಾರ್ದನ ಪೂಜಾರಿ(21) ಸಾವನ್ನಪ್ಪಿದ್ದಾರೆ. ಮೃತರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಸ್ಥಳಕ್ಕೆ ಮದ್ದೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ಶವವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಬಸ್ ಢಿಕ್ಕಿ … Read more

ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ

ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಬೆಂಗಳೂರು; ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ‌ಮಾಡಿರುವ ಘಟನೆ ಬೆಂಗಳೂರಿನ ಕಸವನಹಳ್ಳಿ ಮುಖ್ಯರಸ್ತೆಯ ಹರಳೂರು ಬಳಿ ನಡೆದಿದೆ. ಡೇವಿಡ್(20) ಕೊಲೆಯಾದ ಯುವಕ.ಸ್ನೇಹಿತರೊಂದಿಗೆ ಬಾರ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕ ಡೇವಿಡ್ ಹಾಗೂ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ಡೇವಿಡ್ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸ್ನೇಹಿತರು ಪರಾರಿಯಾಗಿದ್ದಾರೆ.ತೀವ್ರ ರಕ್ತಸ್ರಾವದಿಂದ ಡೇವಿಡ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಆರೋಪಿಗಳು ಹಾಗೂ ಮೃತ ಡೇವಿಡ್ ನೇಪಾಳದ ನಿವಾಸಿಗಳಾಗಿದ್ದು … Read more

ಉಳ್ಳಾಲ; ಮಹಿಳೆ & ಮಗಳನ್ನು ಬೆನ್ನಟ್ಟಿಕೊಂಡು ಹೋದ ಪ್ರಕರಣ; ಓರ್ವ ಯುವಕ ಪೊಲೀಸ್ ವಶಕ್ಕೆ

ಉಳ್ಳಾಲ; ಮಹಿಳೆಯೊಬ್ಬರು ತನ್ನ ಮಗಳ ಜೊತೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಇಬ್ಬರು ಬೆನ್ನಟ್ಟಿ ಕೊಂಡು ಬಂದ ಘಟನೆ ಬಗ್ಗೆ ದೂರು ದಾಖಲಾಗಿದೆ. ತಲಪಾಡಿ ನೆಕ್ಕೆಗುಡ್ಡೆ ಮಹಿಳೆ ತನ್ನ ಮಗಳನ್ನು ಕರೆದುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಇಬ್ಬರು ಯುವಕರು ನೆಕ್ಕೆಗುಡ್ಡೆ ಬಳಿ ಕಾರು ನಿಲ್ಲಿಸಿ ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿ ಕೊಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಹೆದರಿದ ಮಹಿಳೆ ಅಂಗಡಿ ಬಳಿ ರಕ್ಷಣೆ ಪಡೆದಿದ್ದು, ಈ ವೇಳೆ ಬೆನ್ನಟ್ಟಿಕೊಂಡು ಬಂದ ಯುವಕರು … Read more