ಸಚಿವ ಈಶ್ವರ ಖಂಡ್ರೆ ಕೇಳಿದ ಸಾಮಾನ್ಯ ಪ್ರಶ್ನೆಗೆ ತಪ್ಪು ಉತ್ತರ ಹೇಳಿದ ಶಿಕ್ಷಕರು; ಸಚಿವರು ಗರಂ

ಸಚಿವ ಈಶ್ವರ ಖಂಡ್ರೆ ಕೇಳಿದ ಸಾಮಾನ್ಯ ಪ್ರಶ್ನೆಗೆ ತಪ್ಪು ಉತ್ತರ ಹೇಳಿದ ಶಿಕ್ಷಕರು; ಸಚಿವರು ಗರಂ ಬೀದರ್;ಸಚಿವ ಈಶ್ವರ್ ಖಂಡ್ರೆ ಕೇಳಿದ ಸಣ್ಣ ಪ್ರಶ್ನೆಗೆ ಶಾಲಾ ಮಕ್ಕಳು ಮಾತ್ರವಲ್ಲ ಶಿಕ್ಷಕರು ಕೂಡ ತಪ್ಪು ಉತ್ತರ ನೀಡಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿದ್ದಾರೆ‌. ಸಚಿವ ಈಶ್ವರ್ ಖಂಡ್ರೆ ಶಿಕ್ಷಕನಿಗೆ ಸಾಮಾನ್ಯ ಪ್ರಶ್ನೆ ಕೇಳಿದ್ದಕ್ಕೆ ಶಿಕ್ಷಕರೋರ್ವರು ಉತ್ತರಿಸಲು ತಡ ಬಡಾಯಿಸಿದ್ದಾರೆ. … Read more

ಶಾಸಕರಿಗೆ 3 ದಿನ ತರಬೇತಿ ಶಿಬಿರ; ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಬಗ್ಗೆ ಸ್ಪೀಕರ್ ಖಾದರ್ ನಡೆಗೆ ಭಾರೀ ವಿರೋಧ

ಬೆಂಗಳೂರು;ಕರ್ನಾಟಕ ವಿಧಾನಸಭಾ ಸದಸ್ಯರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ.ಆದರ ಅದರಲ್ಲಿ ನೂತನ ಶಾಸಕರಿಗೆ ತರಭೇತುದಾರರ ಆಯ್ಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.ಸ್ಪೀಕರ್ ಯುಟಿ ಖಾದರ್ ನಡೆಗೆ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ.ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರಗತಿಪರ ಚಿಂತಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಅಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯ ಅವರಲ್ಲೂ ಈ ವಿಚಾರವನ್ನು ಕೆಲ ಸಾಹಿತಿಗಳು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಜೂನ್ 26 ರಿಂದ 28 ರವರೆಗೆ ನೆಲಮಂಗಲದಲ್ಲಿ ಮೂರು … Read more

ಬಂಟ್ವಾಳ; ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಬಂಟ್ವಾಳ:ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿದೆ. ಪುರಸಭಾ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ಬಂಟ್ವಾಳ ಪೇಟೆ ಕಡೆ ಹೋಗುವಾಗ ಕೂಟೇಲು ಸೇತುವೆ ಸಮೀಪದಲ್ಲಿ ಮಹಿಳೆಯ ಚಪ್ಪಲಿ ಕಂಡು ಬಂದಿದೆ. ಇದರಿಂದಾಗಿ ಅವರು ಸ್ವಲ್ಪ ಮುಂದಕ್ಕೆ ಹೋಗಿ ನೋಡಿದಾಗ ಮಹಿಳೆಯ ಮೃತದೇಹ ಕಂಡು ಬಂದಿದೆ. ಕೂಡಲೇ ಅವರು ಈ ಕುರಿತು ಬಂಟ್ವಾಳ ನಗರ … Read more

ಪ್ರತಿಪಕ್ಷದ ನಾಯಕ‌ನ ಆಯ್ಕೆ ಬಗ್ಗೆ ಸದಾನಂದ ಗೌಡರು ಹೇಳಿದ್ದೇನು?

ಚಾಮರಾಜನಗರ; ಜುಲೈ 3ರ ಒಳಗೆ ವಿರೋಧಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಹೇಳಿದ್ದಾರೆ. ಇಂದು ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲು ಹಾಕುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ಜುಲೈ 3ರ ಒಳಗೆ ಆಯ್ಕೆ ಮಾಡಲಾಗುವುದು ಎಂದರು. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರಿಗೆ ಸವಾಲು ಹಾಕುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ನಾವು ಕೊಡುತ್ತೇವೆ. ಅಳೆದು ತೂಗಿ ರಾಷ್ಟ್ರೀಯ … Read more

ಅಂಗಡಿಗೆ ಬಂದು ಚಾಕು ತೋರಿಸಿ ಬೆದರಿಸಿದ ಯುವಕನಿಗೆ ಅಂಗಡಿ ಒಳಗೆ ಕೂಡಿ ಹಾಕಿದ ಮಾಲಕ; ದರೋಡೆಗೆ ಬಂದವ ಕಂಗಾಲು, ವಿಡಿಯೋ ವೈರಲ್..

ಚಾಕು ಹಿಡಿದು ಬೆದರಿಸಿದ ದರೋಡೆಕೋರನನ್ನು ಅಂಗಡಿಯ ಮಾಲಕ ಉಪಾಯದಿಂದ ಅಂಗಡಿಯೊಳಗೆ ಬಂಧಿಸಿದ ಘನಟೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊವನ್ನು ಜೂನ್ 15 ರಂದು ಪೋಸ್ಟ್ ಮಾಡಲಾಗಿದೆ.ಆದರೆ ಘಟನೆ ಎಲ್ಲಿ ನಡೆದಿರುವುದು ಎಂದು ಸ್ಪಷ್ಟವಾಗಿಲ್ಲ.ವಿಡಿಯೋವನ್ನು ಸುಮಾರು 46,000 ಜನರು ವೀಕ್ಷಿಸಿದ್ದಾರೆ.ಜೊತೆಗೆ 1,100 ಕ್ಕೂ ಹೆಚ್ಚು ಲೈಕುಗಳನ್ನು ಕಾಣಬಹುದು. ವೀಡಿಯೋಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅಂಗಡಿ ಮಾಲೀಕನ ಧೈರ್ಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ದರೋಡೆಕೋರ ಗ್ರಾಹಕನಂತೆ ಸಾಮಾಗ್ರಿ ಖರೀದಿಸಲು ಅಂಗಡಿಗೆ ಬಂದಿರುವುದನ್ನು ಕಾಣಬಹುದು.ಬಳಿಕ ಬಿಲ್​​ ಕೌಂಟರ್​​​​ಗೆ ಬಿಲ್​ … Read more

ಕಾಂಗ್ರೆಸ್ ನಾಯಕರು ಮುಂದೆ ನಮ್ಮ ಮೈಂಡ್ ಹ್ಯಾಕ್ ಆಗಿದೆ ಎನ್ನಬಹುದು- ಸಿಟಿ ರವಿ; ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಏನೆಲ್ಲಾ ಹೇಳಿದ್ರು?

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಇಂದು ಕರಾವಳಿ ನಗರ ಮಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಮಂಗಳೂರಿನಲ್ಲಿ ಮಾತನಾಡಿರುವ ಸಿಟಿ ರವಿ, ಸತೀಶ್ ಜಾರಕಿಹೊಳಿ ನೀಡಿರುವ ಕೇಂದ್ರ ಸರಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ ನಾಯಕರ ಹೇಳಿಕೆಗಳು ಮುಂದೆ ಬೇರೆ ಬೇರೆ ರೀತಿಯಾಗಿ ತಿರುಗಿ, ನಮ್ಮ‌ ಮೈಂಡ್ ಹ್ಯಾಕ್ ಮಾಡಿದ್ದಾರೆ, ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದೇವೆ ಎನ್ನಬಹುದು ಎಂದು ಹೇಳಿದ್ದಾರೆ. ಮೋದಿಯವರು ಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಮೋದಿ ಹಲವು ಯೋಜನೆ … Read more

ಬಂಟ್ವಾಳ; ಬೈಕ್ ಗೆ ಬಸ್ ಢಿಕ್ಕಿ, ಯುವಕ ಮೃತ್ಯು

ಗುರುಪುರ: ಬೈಕ್ ಗೆ ಬಸ್ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುಪುರದಲ್ಲಿ ನಡೆದಿದೆ. ಕೈರಂಗಳ ನಿವಾಸಿ ಅಣ್ಣಿ ಪೂಜಾರಿ ಎಂಬವರ ಮಗ ಸಂತೋಷ್ (38)ಮೃತರು. ಸಂತೋಷ್ ಅವರು ವಾಮಂಜೂರಿನ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಮನೆಯಿಂದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಗುರುಪುರದ ಬ್ಯಾಂಕ್ ಬಳಿ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಕುರಿತು ಬಜ್ಪೆ ಪೊಲೀಸ್ … Read more

ಸುತ್ತಿಗೆಯಿಂದ ಹೊಡೆದು ಇಬ್ಬರು ಮಕ್ಕಳ ಬರ್ಬರ ಹತ್ಯೆ, ತಂದೆಯಿಂದಲೇ ಕೃತ್ಯ: ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ

ಸುತ್ತಿಗೆಯಿಂದ ಹೊಡೆದು ಇಬ್ಬರು ಮಕ್ಕಳ ಬರ್ಬರ ಹತ್ಯೆ, ತಂದೆಯಿಂದಲೇ ಕೃತ್ಯ:ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ ಮಂಡ್ಯ:ತಂದೆಯೋರ್ವ ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ನಡೆದಿದೆ. ಅದರ್ಶ್ (4) ಹಾಗೂ ಅಮೂಲ್ಯ (3) ಕೊಲೆಯಾಗಿರುವ ಮಕ್ಕಳು.ಶ್ರೀಕಾಂತ್ ಎಂಬಾತ ಸುತ್ತಿಗೆಯಿಂದ ಹೊಡೆದು ಮಕ್ಕಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಇದಲ್ಲದೆ ಪತ್ನಿ ಲಕ್ಮೀ ಮೇಲೂ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. … Read more

ಕಡಬ;ಯುವಕನೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ‌‌‌ಹೊಸ ಚಿನ್ನದ ಅಂಗಡಿ ತೆರೆಯುವ ಸಿದ್ದತೆಯಲ್ಲಿದ್ದ ಯುವಕನ ಸಾವಿನ ಬಗ್ಗೆ ಸಂಶಯ

ಕಡಬ;ಯುವಕನೋರ್ವನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಕಡಬ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಮೃತಪಟ್ಟ ಯುವಕ.ನಾಗಪ್ರಸಾದ್ ಇಂದು ಚಿನ್ನದ ಅಂಗಡಿ ಉದ್ಘಾಟನೆಯ ತಯಾರಿಯಲಿದ್ದ. ಮರ್ಧಾಳದ ಬಿಲ್ಡಿಂಗ್ ವೊಂದರಲ್ಲಿ ಐಶ್ವರ್ಯ ಗೋಲ್ಡ್ ಎಂಬ ಹೆಸರಿನ ಅಂಗಡಿ ಇಂದು ಉದ್ಘಾಟನೆಯಾಗಬೇಕಿತ್ತು.ಆದರೆ ನಾಗಪ್ರಸಾದ್ ಮೃತಪಟ್ಟಿದ್ದಾರೆ. ಇಂದು ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ … Read more

ಬೆಳ್ತಂಗಡಿ;ನೆರಿಯಾ ನಿವಾಸಿ ವಿದ್ಯಾರ್ಥಿನಿ ಮಂಗಳೂರಿನಲ್ಲಿ ಅತ್ಮಹತ್ಯೆ

ಬೆಳ್ತಂಗಡಿ; ಮಂಗಳೂರಿನ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯ ನೆರಿಯದಿಂದ ವರದಿಯಾಗಿದೆ. ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ದಾಸ್ ಎಂಬವರ ಮಗಳು ಆದೀರಾ (19) ಸಾವನ್ನಪ್ಪಿದ್ದ ಯುವತಿ. ಆದೀರಾ, ಸಹೋದರರಾದ ನರೇಂದ್ರ ಮತ್ತು ರೋಹಿತ್ ಅವರ ಜೊತೆ ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದರು‌. ಅಲ್ಲಿಂದಲೇ ತೆರಳಿ ಪ್ಯಾರಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಳೆದ ಆದಿತ್ಯವಾರ ರಾತ್ರಿ ಮೂವರು ಒಟ್ಟಿಗೆ ಊಟ ಮಾಡಿ ಒಂದು ಕೋಣೆಯಲ್ಲಿ ಅದಿರಾ … Read more