ಅಂಗನವಾಡಿಯಿಂದ ಬರುತ್ತಿದ್ದ ಬಾಲಕಿ ಮೇಲೆ ಹರಿದ ಟಿಪ್ಪರ್; ಬಾಲಕಿ ಮೃತ್ಯು

ದಾವಣಗೆರೆ;ಅಂಗನವಾಡಿ ಮುಗಿಸಿ ತನ್ನ ಅಜ್ಜಿಯ ಕೈ ಹಿಡಿದುಕೊಂಡು ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದ ಬಾಲಕಿ ಮೇಲೆ ಟಿಪ್ಪರ್‌ ಲಾರಿ ಹರಿದು ಮೃತಪಟ್ಟ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ. ಚರಸ್ವಿ(3) ಮೃತ ಬಾಲಕಿ. ಈಕೆ ಕುಂದುವಾಡ ಗ್ರಾಮದ ಗಣೇಶ್ ಎಂಬುವವರ ಪುತ್ರಿಯಾಗಿದ್ದಾಳೆ. ಬಾಲಕಿ ಅಂಗನವಾಡಿ ಮುಗಿಸಿ ಮನೆಗೆ ಅಜ್ಜಿ ಜತೆ ಹೊರಟಿದ್ದಳು.ಈ ವೇಳೆ ವೇಗವಾಗಿ ಬಂದ ಟಿಪ್ಪರ್‌ ಲಾರಿಯು ಬಾಲಕಿಗೆ ಢಿಕ್ಕಿಯಾಗಿ ಬಾಲಕಿಯ ತಲೆ ಮೇಲೆ ಹರಿದಿದೆ. ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲಾರಿ ಚಾಲಕನ … Read more

ಮಂಗಳೂರು;ಜೆಡಿಎಸ್ ಗೆ ರಾಜೀನಾಮೆ ಬೆನ್ನಲ್ಲೇ ಸುಮತಿ ಹೆಗ್ಡೆ SDPIಗೆ ಸೇರ್ಪಡೆ

ಮಂಗಳೂರು:ಜೆಡಿಎಸ್ ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆಯವರು SDPI ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಸುಮತಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. SDPI ಪಕ್ಷದ ಸಂಸ್ಥಾಪನಾ ದಿನಾಚರಣೆ ಸಂಬಂಧಿಸಿದ ನಾಯಕರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸುಮತಿ ಹೆಗ್ಡೆ Sdpiಗೆ ಸೇರ್ಪಡೆಗೊಂಡಿದ್ದಾರೆ. ಸುಮತಿ ಹೆಗ್ಡೆಯವರೊಂದಿಗೆ ಮಹಿಳಾ ಜೆಡಿಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕವಿತಾ ಜೆಡಿಎಸ್ ಮಂಗಳೂರು … Read more

ಬಂಟ್ವಾಳದ ಸವಾದ್ ಗೆ ಕೊಲೆ ಮಾಡಿ ದೇವರಮನೆ ಗುಡ್ಡೆಯಲ್ಲಿ ಸುಟ್ಟು ಹಾಕಿದ್ದ ಪ್ರಕರಣ; ಇಬ್ಬರು ಆರೋಪಿಗಳ ಬಂಧನ, ತನಿಖೆ ವೇಳೆ ಮಹತ್ವದ ಅಂಶಗಳು ಬಯಲು…

ಬಂಟ್ವಾಳ;ಬಂಟ್ವಾಳದ ಸವಾದ್ ಗೆ ಕೊಲೆ‌ ಮಾಡಿ ಮೂಡಿಗೆರೆ ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬುವವರು ಬಂಧಿತರು.ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಶವ ಪತ್ತೆ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ನಿನ್ನೆ ಆರೋಪಿಗಳನ್ನು ಗುರುವಾಯನಕೆರೆ … Read more

ಬಕ್ರೀದ್ ಬರ್ತಾ ಇದೆ ಯಾರೋ ಶಾಲು ಹಾಕಿಕೊಂಡು ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗಾಕಿ- ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು;ಗೋವುಗಳ ರಕ್ಷಕರು ಎಂದು ಹೇಳಿಕೊಂಡು ಶಾಲು ಹಾಕಿಕೊಂಡು ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಂತವರನ್ನು ಒದ್ದು ಒಳಗಾಕಿ ಎಂದು ಸಚಿವ ಪ್ರಿಯಾಂಕ ಖರ್ಗೆ ಪೊಲೀಸರಿಗೆ ಸೂಚಿಸಿದರು. ಬಕ್ರೀದ್ ಬರ್ತಾ ಇದೆ ಯಾರೋ ಶಾಲು ಹಾಕಿಕೊಂಡು ಆ ದಳ ಈ ದಳ ಅಂದುಕೊಂಡು ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗಾಕಿ ಎಂದು ಸಚಿವರು ಸೂಚನೆ ನೀಡಿದ್ದಾರೆ. ಪೊಲೀಸರು ಕೆಲಸವನ್ನು ಅವರಿಗೆ ಕೊಟ್ಟು ನೀವು ಠಾಣೆಯಲ್ಲಿ ಇರುತ್ತೀರಾ ಎಂದು ಪ್ರಶ್ನಿಸಿದ್ದಾರೆ.ಹಿಂದಿನ ಸರ್ಕಾರ ಇರುವಾಗ ಕೆಲವರು ರೈತರ ಮನೆಗಳಿಗೆ ನುಗ್ಗಿ … Read more

ಇಡಿ ಬಂಧಿಸಿದ್ದ ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್‌ ಸರ್ಜರಿ

ತಮಿಳುನಾಡು; ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಾವೇರಿ ಆಸ್ಪತ್ರೆಯ ಕಾರ್ಡಿಯೋ ಥೊರಾಸಿಕ್ ಸರ್ಜನ್ ಡಾ.ಎ.ಆರ್.ರಘುರಾಮ್ ಮತ್ತು ಅವರ ತಂಡ ಸಚಿವರಿಗೆ ಬೀಟಿಂಗ್ ಹಾರ್ಟ್ ಕರೋನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡಿದೆ. ಸೆಂಥಿಲ್ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಕಾರ್ಡಿಯೋಥೊರಾಸಿಕ್ ತೀವ್ರ ನಿಗಾ ಘಟಕದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿದೆ. ಬಾಲಾಜಿ ಅವರ ಅಪ್‌ಡೇಟ್‌ಗಳ ಬಗ್ಗೆ ತಿಳಿಯಲು ವೈದ್ಯರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದೇನೆ ಎಂದು ತಮಿಳುನಾಡು ಆರೋಗ್ಯ … Read more

ಮಂಗಳೂರು;10ನೇ ತರಗತಿ ಬಾಲಕಿ ನೇಣು ಬಿಗಿದು ಆತ್ಮಹತ್ಯೆ; ಕ್ಷುಲ್ಲಕ ಕಾರಣಕ್ಕೆ ದುಡುಕಿದ ಬಾಲಕಿ?

ಮಂಗಳೂರು:ಶಾಲಾ ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಪಾಲ್ದಾನೆ ಬಳಿ ನಡೆದಿದೆ. ನೀರುಮಾರ್ಗ ಸಮೀಪದ ಪಾಲ್ದಾನೆಯ ತೇಜತ್(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. Sslc ಕಲಿಯುತ್ತಿದ್ದ ಬಾಲಕಿ ತೇಜತ್ ಮಂಗಳವಾರ ಸಂಜೆ ಶಾಲೆಯಿಂದ ಬಂದ ಬಳಿಕ ಕ್ಷುಲ್ಲಕ ಕಾರಣಕ್ಕೆ ಮನೆಯವರ ಜತೆ ಜಗಳ ಮಾಡಿದ್ದಾಳೆ ಎನ್ನಲಾಗಿದೆ. ಅದೇ ಕೋಪದಿಂದ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮ-ಗೃಹಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರು;ಪ್ರಚೋದಾನಾತ್ಮಕ ಹಾಗೂ … Read more

ಯುವತಿಯ ಗ್ಯಾಂಗ್ ರೇಪ್ & ಮರ್ಡರ್; ಆರೋಪಿಗಳಲ್ಲಿ ಇಬ್ಬರು ಪೊಲೀಸರು?ಏನಿದು ಶಾಕಿಂಗ್ ಬೆಳೆವಣಿಗೆ?

ಯುವತಿಯ ಗ್ಯಾಂಗ್ ರೇಪ್ & ಮರ್ಡರ್; ಆರೋಪಿಗಳಲ್ಲಿ ಇಬ್ಬರು ಪೊಲೀಸರು? ಜೈಪುರ:ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದ್ದು, ಘಟನೆಯಲ್ಲಿನ ಶಂಕಿತ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಖಾಜುವಾಲಾ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಓಂ ಪ್ರಕಾಶ್ ತಿಳಿಸಿದ್ದಾರೆ. ಖಾಜುವಾಲಾ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೆಬಲ್ಗಳು ಸೇರಿದಂತೆ ಮೂವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆಯ … Read more

ಅಪ್ಪನಿಂದ ಮಗಳಿಗೆ ಅಧಿಕಾರ ಹಸ್ತಾಂತರ; ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರೂಪದ ಘಟನೆ

ಮಗಳಿಗೆ ಅಧಿಕಾರ ಹಸ್ತಾಂತರಿಸಿದ ಅಪ್ಪ; ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರೂಪದ ಘಟನೆ ಮಂಡ್ಯ; ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ.ಎಸ್. ವೆಂಕಟೇಶ್ ವರ್ಗಾವಣೆಗೊಂಡಿದ್ದು ಅವರು ಠಾಣೆಯ ನೂತನ ಎಸ್‌ಐ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ವಿಶೇಷ ಏನೆಂದರೆ ಬಿ.ಎಸ್. ವೆಂಕಟೇಶ್ ಅವರ ಪುತ್ರಿಯಾಗಿದ್ದು ವರ್ಷಾ, ಇದೀಗ ಅಪ್ಪ- ಮಗಳಿಗೆ ಅಧಿಕಾರ ಹಸ್ತಾಂತರಿಸಿ ಸುದ್ದಿಯಾಗಿದ್ದಾರೆ‌. ತುಮಕೂರು ಜಿಲ್ಲೆ ಹುಲಿಯೂರುದುರ್ಗದವರಾದ ವೆಂಕಟೇಶ್ 16 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮಾಜಿ ಸೈನಿಕರ ಕೋಟಾದಲ್ಲಿ 2010ರಲ್ಲಿ … Read more

ಪುತ್ತೂರು; ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಮಹಿಳೆ ಮೃತ್ಯು

ಪುತ್ತೂರು; ಹೆರಿಗೆ ವೇಳೆ ತೀವ್ರ ರಕ್ತ ಸ್ರಾವವಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ‌ ನಡೆದಿದೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಮುರ ನಿವಾಸಿ ಬಾಲಕೃಷ್ಣ ಗೌಡ ಎಂಬವರ ಪತ್ನಿ ಭವ್ಯ (28)ಮೃತರು.ಇವರು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಹೆರಿಗೆ ವೇಳೆ ಭವ್ಯ ಮೃತಪಟ್ಟಿದ್ದು ಗಂಡು ಮಗು ಆರೋಗ್ಯವಾಗಿದೆ. ಭವ್ಯ ಅವರಿಗೆ 3ನೇ ಹೆರಿಗೆಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ನಿನ್ನೆ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ … Read more

ಬೆಳ್ತಂಗಡಿ; ಬೈಕ್ ಗೆ ಬಸ್ ಢಿಕ್ಕಿ; ಹುಟ್ಟು ಹಬ್ಬದ ದಿನವೇ ಯುವಕ ಮೃತ್ಯು

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗರ್ಡಾಡಿ ಗ್ರಾಮದ ನಂದಿಬೆಟ್ಟ ಬಳಿ ನಡೆದಿದೆ. ಓಡೀಲು ನಿವಾಸಿ ದೀಕ್ಷಿತ್ ಮೃತ ಯುವಕ ಎಂದು ಗುರುತಿಸಲಾಗಿದೆ. ಇಂದು ದೀಕ್ಷಿತ್ ನ ಹುಟ್ಟುಹಬ್ಬವಾಗಿದ್ದು ಈ ಹಿನ್ನಲೆಯಲ್ಲಿ ಬೆಳಿಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವೇಣೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.