ಮಗಳು & ಆಕೆಯ ಪ್ರಿಯಕರನಿಗೆ ಕೊಂದು ಮೊಸಳೆಗಳಿಗೆ ಎಸೆದ ಕುಟುಂಬ; ಭಯಾನಕ ಘಟನೆ ವರದಿ

ಮಗಳು & ಆಕೆಯ ಪ್ರಿಯಕರನಿಗೆ ಕೊಂದು ಮೊಸಳೆಗಳಿಗೆ ಎಸೆದ ಕುಟುಂಬ; ಭಯಾನಕ ಘಟನೆ ವರದಿ ಭೋಪಾಲ್: ಮಧ್ಯಪ್ರದೇಶದಲ್ಲಿ 18 ವರ್ಷದ ಯುವತಿ ಮತ್ತು ಆಕೆಯ 21 ವರ್ಷದ ಪ್ರೇಮಿಯನ್ನು ಗುಂಡಿಕ್ಕಿ ಕೊಂದು, ಅವರ ದೇಹಗಳನ್ನು ಭಾರವಾದ ಕಲ್ಲುಗಳಿಗೆ ಕಟ್ಟಿ ಮೊಸಳೆ ತುಂಬಿದ ನದಿಗೆ ಎಸೆದಿರುವ ಶಂಕಿತ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊರೆನಾ ಜಿಲ್ಲೆಯ ರತನ್‌ಬಸಾಯಿ ಗ್ರಾಮದಲ್ಲಿ ಶಿವಾನಿ ತೋಮರ್ ಮತ್ತು ರಾಧೇಶ್ಯಾಮ್ ತೋಮರ್ ಅವರನ್ನು ಆಕೆಯ ಕುಟುಂಬದವರು ಕೊಂದಿದ್ದಾರೆ. ಪಕ್ಕದ ಗ್ರಾಮದ ಬಲುಪುರದವನಾದ … Read more

ಯುವಕನ ಮೇಲೆ ಹಲ್ಲೆ ಪ್ರಕರಣ; NSA ಕಠಿಣ ಕಾಯ್ದೆಯಡಿ ಪ್ರಕರಣ ದಾಖಲು, ಆರೋಪಿಗಳ ಮನೆ ಒಡೆದು ಹಾಕಲು ಸರಕಾರದಿಂದ ಸೂಚನೆ

-ಸಮೀರ್​, ಸಾಜಿದ್​, ಪೈಜಾನ್ ಬಂಧಿತ ಆರೋಪಿಗಳು ಮಧ್ಯಪ್ರದೇಶ:ಯುವಕನ ಮೇಲೆ ಹಲ್ಲೆ ನಡೆಸಿ ನಾಯಿಯ ಬೆಲ್ಟ್​ ಧರಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಮಲ್​ಪುರದ ಟೀಲಾ ಎಂಬ ಪ್ರದೇಶದಲ್ಲಿ ನಡೆದಿದ್ದು, ವೈರಲ್​ ಆಗಿರುವ ವಿಡಿಯೋದಲ್ಲಿ ದುಷ್ಕರ್ಮಿಗಳು ಯುವಕನಿಗೆ ನಾಯಿಯಂತೆ ವರ್ತಿಸಲು ಹೇಳುತ್ತಿರುವುದು ಕಂಡು ಬಂದಿದೆ. ಹಲ್ಲೆಗೊಳಗಾವನಿಗೆ ವಿಜಯ್​ ಎಂದು ತಿಳಿದು ಬಂದಿದೆ. ಯುವಕನ ಮೇಲೆ ಹಲ್ಲೆ ಮಾಡಿದವರನ್ನು ಬಿಲಾಲ್ ಟೀಲಾ, ಫೈಜಾನ್ ಲಾಲಾ, ಸಾಹಿಲ್ ಬಚ್ಚಾ, ಮೊಹಮ್ಮದ್ … Read more

ಪುತ್ತೂರು; ಯುವಕನೋರ್ವ ಹೃದಯಾಘಾತದಿಂದ ಮೃತ್ಯು

-ಇಮ್ತಿಯಾಝ್ ಮೃತರು. ಪುತ್ತೂರು:ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಬಳಿಯ ಪ್ಲಾಟ್ ನ ನಿವಾಸಿ ಇಮ್ತಿಯಾಝ್ (34) ಮೃತರು. ಇಂಮ್ತಿಯಾಝ್ ಅವರು ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ಶಾಫ್ ನಲ್ಲಿ ಉದ್ಯೋಗದಲ್ಲಿದ್ದರು. ನಿನ್ನೆ ಸಂಜೆ ವೇಳೆ ಮನೆಗೆ ಬಂದ ಇಮ್ತಿಯಾಝ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರ ಆ ವೇಳೆ ಮೃತಪಟ್ಟಿದ್ದಾರೆ. ಇಮ್ತಿಯಾಝ್ ಅವರ ನಿಧನದಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.ಇಮ್ತಿಯಾಝ್ ವಿವಾಹಿತರಾಗಿದ್ದು ಇಬ್ಬರು ಪುಟ್ಟ ಮಕ್ಕಳಿದ್ದಾರೆ … Read more

ಜಗದೀಶ್ ಶೆಟ್ಟರ್ ಸೇರಿ ಮೂವರನ್ನು ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಗಳಾಗಿ ಘೋಷಿಸಿದ ಕಾಂಗ್ರೆಸ್

ಬೆಂಗಳೂರು:ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೆ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು, ಹಾಗೂ ಸಚಿವ ಎನ್.ಎಸ್.ಬೋಸರಾಜು ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ನಾಳೆ ಈ ಮೂವರೂ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.ಜೂ.30 ರಂದು ಚುನಾವಣೆ ನಡೆಯಲಿದೆ. ಇನ್ನು ಜಗದೀಶ್ ಶೆಟ್ಟರ್ ಅವರು ಆಯ್ಕೆಗೊಂಡ ಅವಧಿಯಿಂದ 2028ರ ಜೂ.14ರವರೆಗೆ, ತಿಪ್ಪಣ್ಣಪ್ಪ ಕಮಕನೂರು 2026ರ ಜೂ.30ರವರೆಗೆ ಹಾಗೂ ಸಚಿವ ಎನ್.ಎಸ್.ಬೋಸರಾಜು 2024ರ ಜೂ.17ರವರೆಗೆ ಸದಸ್ಯರಾಗಿರುತ್ತಾರೆ … Read more

8 ತಿಂಗಳ ಮಗು ಹೃದಯಾಘಾತದಿಂದ ಮೃತ್ಯು; ಬೆಚ್ಚಿಬೀಳಿಸುವ ಘಟನೆ ವರದಿ

8 ತಿಂಗಳ ಮಗು ಹೃದಯಾಘಾತದಿಂದ ಮೃತ್ಯು; ಬೆಚ್ಚಿಬೀಳಿಸುವ ಘಟನೆ ಕೊಟ್ಟಾಯಂ; ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಎಂಟು ತಿಂಗಳ ಶಿಶುವಿನ ಕುಟುಂಬ ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದು ಮಗು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ಕೊಟ್ಟಾಯಂ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ವಿರುದ್ಧ ಕೊಟ್ಟಾಯಂ ಮನಾರ್ಕಾಡ್‌ನ ಸ್ಥಳೀಯರಾದ ಜೋಶ್ ಎಬಿ ಅವರ ಕುಟುಂಬವು, ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದೆ. ಹೆಚ್ಚಿನ ಪ್ರಮಾಣದ ಔಷಧಿಯನ್ನು ಮಗುವಿಗೆ ನೀಡಿದ ನಂತರ, ಮಗುವಿನ ಆರೋಗ್ಯವನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲಾಗಿಲ್ಲ, ಇದು ಹೃದಯಾಘಾತಕ್ಕೆ … Read more

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಹಲವು ಮುಖಂಡರ ವಿರುದ್ಧ ಪ್ರಿಯಾಂಕ‌ ಖರ್ಗೆ ದೂರು; ಏನಿದು ಪ್ರಕರಣ?

ನವದೆಹಲಿ;ಬಿಜೆಪಿ ರಾಷ್ಟ್ರೀಯ ಮುಖಂಡರಾದ ಜೆಪಿ ನಡ್ಡಾ, ಅಮಿತ್ ಮಾಳವಿಯಾ, ಅರುಣ್ ಸೂದ್ ವಿರುದ್ಧ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿದೆ. ಸಚಿವ ಪ್ರಿಯಾಂಕ್ ಖರ್ಗೆ, ರಮೇಶ್ ಬಾಬು ಸೂರ್ಯಮುಕುಂದ್ ರಾಜ್ ನೇತೃತ್ವದ ತಂಡ ಹೈ ಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 17ರಂದು ಬಿಜೆಪಿ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ ಎಂಬಂತೆ ಬಿಂಬಿಸಲಾಗಿದೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗೆಲೆಲ್ಲಾ ದೇಶ ಒಡೆಯೋ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಅಂತಾ ತೋರಿಸೋ ರೀತಿ ಪೋಸ್ಟ್ … Read more

ಕಳ್ಳರನ್ನು ಹಿಡಿಯಲು ಬೀದಿ ಬದಿ ಜ್ಯೂಸ್ ಮಾರಾಟಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು!; ಏನಿದು ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣ?

ಪಂಜಾಬ್;ಕಳ್ಳರನ್ನು ಹಿಡಿಯಲು ಪೊಲೀಸ್ ಅಧಿಕಾರಿಗಖು ಜ್ಯೂಸ್ ಮಾರಟಕ್ಕೆ ಇಳಿದು ಕೊನೆಗೆ ಆಪರೇಷನ್ ಸಕ್ಸಸ್ ಆದ ಘಟನೆ ಲೂಧಿಯಾನದಲ್ಲಿ ನಡೆದಿದೆ. ಪಂಜಾಬ್‌ನಲ್ಲಿ ಕಳ್ಳರ ಗುಂಪೊಂದು ಬರೋಬ್ಬರಿ 8 ಕೋಟಿ ಮತ್ತು 49 ಲಕ್ಷ ರೂಪಾಯಿ ದರೋಡೆ ಮಾಡಿತ್ತು.ಪ್ರಕರಣ ಪೊಲೀಸರಿಗೆ ತಲೆನೋವಾಗಿತ್ತು.ಆರೋಪಿಗಳು ಕುಖ್ಯಾತರಾಗಿದ್ದು ಪೊಲೀಸರಿಗೆ ತನಿಖೆ ವೇಳೆ ಸುಳಿವು ಲಭ್ಯವಾಗಿತ್ತು. ಇದಲ್ಲದೆ ಕಳ್ಳತನ ಯಶಸ್ವಿಯಾಗಿದ್ದರಿಂದ ದರೋಡೆಕೋರ ದಂಪತಿ ಸಿಖ್‌ ದೇಗುಲಕ್ಕೆ ತೆರಳುವ ತಂತ್ರ ಪೊಲೀಸರಿಗೆ ತಿಳಿದಿತ್ತು.ಕಳ್ಳತನದ ಬಳಿಕ ದಂಪತಿ ನೇಪಾಳಕ್ಕೆ ಹೋಗಲು ನಿರ್ಧರಿಸಿದ್ದರು. ಆದ್ರೆ ಅದಕ್ಕೂ ಮೊದ್ಲು ಹರಿದ್ವಾರ, ಕೇದಾರನಾಥ … Read more

ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಮಹಿಳಾ ಪೇದೆ ಹೃದಯಾಘಾತದಿಂದ ಮೃತ್ಯು;ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಗು

ಮಹಿಳಾ ಪೇದೆ ಹೃದಯಾಘಾತದಿಂದ ಮೃತ್ಯು;ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಗು ಬೆಂಗಳೂರು;ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಮಹಿಳಾ ಪೊಲೀಸ್‌ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾಂಕ ಭಾನುವಾರ ಎಂದಿನಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋಗಿದ್ದು, ತಡರಾತ್ರಿ ಹೃದಯಾಘಾತದಿಂದ … Read more

ಫಾಝಿಲ್, ಮಸೂದ್ ಸೇರಿ ಹತ್ಯೆಗೀಡಾದ 6 ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರದ ಚೆಕ್ ವಿತರಣೆ; ಚೆಕ್ ವಿತರಿಸಿ ಸಿಎಂ ಹೇಳಿದ್ದೇನು?

ಬೆಂಗಳೂರು;ಕರಾವಳಿಯಲ್ಲಿ ಕೋಮುಗಲಭೆಗಳಿಗೆ ಬಲಿಯಾದ ನಾಲ್ವರ ಕುಟುಂಬಗಳಿಗೆ ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಅವರು ತಲಾ 25 ಲಕ್ಷ ಮೊತ್ತದ ಪರಿಹಾರ ಚೆಕ್ ಗಳನ್ನು ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಅವರು, ಬಿಜೆಪಿ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಬಳಿಕವೂ ಸರ್ಕಾರದ ತಾರತಮ್ಯ ನೀತಿಯಿಂದ ವಂಚನೆಗೆ ಒಳಗಾಗಿದ್ದ ಕುಟುಂಬಗಳಿಗೆ ಚೆಕ್‌ ನೀಡಿದ್ದೇವೆ. ಬಿಜೆಪಿಯ ಸಂವಿಧಾನ ವಿರೋಧಿ ತಾರತಮ್ಯ ನೀತಿಯನ್ನು ಅಳಿಸಿದ್ದೇವೆ. ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು … Read more

ಮದುವೆ ಮನೆಯಲ್ಲಿ ಮೊದಲ ರಾತ್ರಿ ಮಲಗಿದ್ದ ವರನ ಮೈಮೇಲೆ ಬಿದ್ದ ಸೀಲಿಂಗ್ ಫ್ಯಾನ್; ವರನ ಸ್ಥಿತಿ ಗಂಭೀರ

ಮದುವೆ ಮನೆಯಲ್ಲಿ ಮೊದಲ ರಾತ್ರಿ ಮಲಗಿದ್ದ ವರನ ಮೈಮೇಲೆ ಬಿದ್ದ ಸೀಲಿಂಗ್ ಫ್ಯಾನ್;ವರನ ಸ್ಥಿತಿ ಗಂಭೀರ ರಾಜಸ್ಥಾನ; ಮದುಮಗ ಮೊದಲ ರಾತ್ರಿಗೆ ಸಿಂಗರಿಸಿದ್ದ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ವೇಳೆ ಸೀಲಿಂಗ್ ಫ್ಯಾನ್ ಏಕಾಏಕಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಡಿದ್ವಾನಾ ಪ್ರದೇಶದ ಮಕ್ರಾನಾ ಪಟ್ಟಣದಿಂದ ವರದಿಯಾಗಿದೆ. ಘಟನೆಯಲ್ಲಿ ವರನ ಕತ್ತು, ಕೈಗೆ ಗಂಭೀರ ಗಾಯಗಳಾಗಿದೆ. ಕೂಡಲೇ ವರನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಆತನ ಕುತ್ತಿಗೆಗೆ ಹೊಲಿಗೆ ಹಾಕಿದ್ದಾರೆ. ಗೌಡಬಸ್ … Read more