ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರದಿಂದ ಅಡ್ಡಿ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು:ʼಅನ್ನ ಭಾಗ್ಯʼ ಯೋಜನೆ ಅಡಿಯಲ್ಲಿ ಒಟ್ಟು 10 ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರ ಆಹಾರ ನಿಗಮ (FCI) ಅಕ್ಕಿ ಪೂರೈಕೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ನಗರದ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾವು 5 ಗ್ಯಾರಂಟಿ ಘೋಷಿಸಿದ್ದೇವೆ. ಒಂದು ಗ್ಯಾರಂಟಿ ಘೋಷಿಸಿ ಜಾರಿಗೆ ತಂದಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಅನ್ನಭಾಗ್ಯ ನೀಡುವುದಾಗಿ ಹೇಳಿದ್ದೇವೆ.ಈಗ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ.ಜುಲೈ 1 ರಿಂದ … Read more

ಮುಲ್ಕಿ; ಇಬ್ಬರು ಹೆಣ್ಣುಮಕ್ಕಳ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟ ಹೆತ್ತ ತಾಯಿ; ಏನಿದು ಪ್ರಕರಣ?

ಮುಲ್ಕಿ;ಇಬ್ಬರು ಹೆಣ್ಣುಮಕ್ಕಳ ವಿರುದ್ಧ ಹೆತ್ತ ತಾಯಿಯೇ ಪ್ರಕರಣ ದಾಖಲಿಸಿರುವ ಘಟನೆ ಮುಲ್ಕಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಜಾಗದ ವಿಚಾರವಾಗಿ ಮಕ್ಕಳಿಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಬೆದರಿಕೆಯೊಡ್ಡಿದ್ದಾರೆಂದು ಮನೋರಮಾ ಹೆನ್ರಿ ಎಂಬವರು ಮುಲ್ಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮನೋರಮಾ ಅವರ ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ಎಂಬವರು ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದವರು ಎಂದು ದೂರಲಾಗಿದೆ. ಜಾಗದ ವಿಚಾರವಾಗಿ ಮನೋರಮಾ ಮತ್ತು ಮಕ್ಕಳ ನಡುವೆ ಸೋಮವಾರ ಮಧ್ಯಾಹ್ನ … Read more

ಬಾಲಕನಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುಸ್ಲಿಂ ಲೀಗ್ ನ ಹಿರಿಯ ಮುಖಂಡನ ಬಂಧನ

ಕಾಸರಗೋಡು;14 ವರ್ಷದ ಅಪ್ರಾಪ್ತ ಬಾಲಕನನ್ನು ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ ಮುಸ್ಲಿಂ ಲೀಗ್‌ನ ಪ್ರಮುಖ ನಾಯಕ ಎಂ ಮುಹಮ್ಮದ್ ಕುಂಞ ಅವರನ್ನು ಅತ್ತೂರು ಪೊಲೀಸರು ಬಂಧಿಸಿದ್ದಾರೆ. ಮುಳಿಯಾರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕುಂಞ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ. ಹೇಯ ಕೃತ್ಯವನ್ನು ಎಸಗುವ ಮೊದಲು ಸಂತ್ರಸ್ತ ಬಾಲಕನಿಗೆ ಡ್ರಗ್ಸ್ ನೀಡಿದ ಆರೋಪವಿದೆ. ಮುಹಮ್ಮದ್ ಕುಂಞಯ ಬಂಧನಕ್ಕೆ ಕಾರಣವಾದ ಘಟನೆಯು ಏಪ್ರಿಲ್ 11 ರ ರಾತ್ರಿ ಸಂತ್ರಸ್ತರ ನಿವಾಸದ … Read more

200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮುಂದೂಡಿಕೆ; ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ? ಪ್ರಕ್ರಿಯೆ ಹೇಗೆ?ಇಲ್ಲಿದೆ ಮಾಹಿತಿ..

ಬೆಂಗಳೂರು;ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ. ಗೃಹ ಜ್ಯೋತಿ ಯೋಜನೆಗೆ ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭಿಸಲಾಗುವುದು ಎಂದು ಈ ಹಿಂದೆ ರಾಜ್ಯ ಸರ್ಕಾರ ತಿಳಿಸಿತ್ತು. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 18 ಕ್ಕೆ ಮುಂದೂಡಲಾಗಿದೆ. ಜೂನ್ 18 ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. … Read more

ಬೆಳ್ತಂಗಡಿ; ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಹಲ್ಲೆ, ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಜಾತಿ ನಿಂದನೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಮದ್ದಡ್ಕ ಹಾಗೂ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಬಂಧಿತರು. ಇವರನ್ನು ಮಂಗಳೂರು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ಕೆಂಬರ್ಜೆಯ ಶೇಖರ ನಾಯ್ಕ ಎಂಬವರ ಪುತ್ರ ಯಶವಂತ ನಾಯ್ಕ (19)ರವರು … Read more

ಮಂಗಳೂರಿನಲ್ಲಿ ಭೀಕರ ಅಪಘಾತ; ನೆಲ್ಯಾಡಿಯ ಯುವಕ ಮೃತ್ಯು

ಮಂಗಳೂರು;ನಗರದ ಪಂಪುವೆಲ್ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ‌. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತಪಟ್ಟ ಯುವಕ. ಸಂದೇಶ್ ಮಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಸಂದೇಶ್ ಚಿಕಿತ್ಸೆ … Read more

ಬಾಲಕನನ್ನು ಕೊಂದು ತಿಂದ ಮೊಸಳೆಯನ್ನು ಹಿಡಿದು ದೊಣ್ಣೆ, ರಾಡ್ ನಿಂದ ಹತ್ಯೆ ಮಾಡಿದ ಜನ; ವಿಡಿಯೋ ವೈರಲ್..

ಬಾಲಕನನ್ನು ಕೊಂದು ತಿಂದ ಮೊಸಳೆಯನ್ನು ಹಿಡಿದು ಜನ ದೊಣ್ಣೆ, ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೋಕುಲಪುರದ ನಿವಾಸಿ ಧರ್ಮೇಂದ್ರ ದಾಸ್ ಕುಟುಂಬ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಗಂಗಾ ನದಿಯ ದಡಕ್ಕೆ ತೆರಳಿದ್ದರು.ಈ ವೇಳೆ ಅವರು ಪುತ್ರ ಅಂಕಿತ್ ನೀರು ತರಲೆಂದು ನದಿಗೆ ಇಳಿದಿದ್ದಾಗ, ಇದ್ದಕ್ಕಿದ್ದಂತೆ ಮೊಸಳೆ ದಾಳಿ ಮಾಡಿದ ಬಾಲಕನನ್ನು ನೀರಿನೊಳಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. … Read more

ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ; ಬಿಜೆಪಿ ಶಾಸಕರು ಸೇರಿ ಹಲವರು ಪೊಲೀಸ್ ವಶಕ್ಕೆ

ಶಿವಮೊಗ್ಗ; ವಿದ್ಯುತ್ ಬಿಲ್ ಏರಿಕೆ ವಿರೋಧಿಸಿ ಶಾಸಕ ಎಸ್.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಕಿಡಿಗೇಡಿಯೋರ್ವ ಮೆಸ್ಕಾಂ ಕಚೇರಿಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದು ಹಾಕಿದ್ದಾನೆ. ವಿದ್ಯುತ್ ದರ ಏರಿಕೆಯ ವಿರುದ್ಧ ಬಿಜೆಪಿಯಿಂದ ಇಲ್ಲಿನ ರೈಲು ನಿಲ್ದಾಣದ ಬಳಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ.ಈ ವೇಳೆ ಶಾಸಕ ಚೆನ್ನಬಸಪ್ಪ ಸೇರಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಭಾಷಣ ಮುಗಿಯುತ್ತಿದ್ದಂತೆಯೇ ಮೆಸ್ಕಾಂ ಕಚೇರಿಗೆ ಬೀಗ ಹಾಕಲು ಮುಂದಾದ … Read more

ಮತ್ತೊಂದು ಭೀಕರ ದೋಣಿ ದುರಂತ; ಕನಿಷ್ಠ 100 ಮಂದಿ ನೀರುಪಾಲು

ಮದುವೆಯಿಂದ ಹಿಂದಿರುಗುತ್ತಿದ್ದ ಕುಟುಂಬಗಳನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 100 ಕ್ಕೂ ಹೆಚ್ಚು ಜನರು ಮುಳುಗಿರುವ ಘಟನೆ ಉತ್ತರ ಮಧ್ಯ ನೈಜೀರಿಯಾದಲ್ಲಿ ನಡೆದಿದೆ. ಕ್ವಾರಾ ರಾಜ್ಯದಲ್ಲಿ ಓವರ್‌ಲೋಡ್, ಸುರಕ್ಷತಾ ಕಾರ್ಯವಿಧಾನ ಸರಿಯಾಗಿ ಪಾಲಿಸದ ಕಾರಣ ಮಳೆಗಾಲದಲ್ಲಿ ಭಾರೀ ಪ್ರವಾಹದಿಂದಾಗಿ ದೋಣಿ ಮುಳುಗಿದೆ ಎನ್ನಲಾಗಿದೆ. ನೆರೆಯ ನೈಜರ್ ರಾಜ್ಯದಲ್ಲಿನ ಮದುವೆಯಿಂದ ಕ್ವಾರಾ ರಾಜ್ಯದ ಜನರನ್ನು ಕರೆದೊಯ್ಯುತ್ತಿದ್ದಾಗ ದೋಣಿ ನದಿಯ್ಲಲಿ ಮುಳುಗಿದೆ. ಇಲ್ಲಿಯವರೆಗೆ 103 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರನ್ನು ದೋಣಿ ಅಪಘಾತದಿಂದ ರಕ್ಷಿಸಲಾಗಿದೆ ಎಂದು ಕ್ವಾರಾ ರಾಜ್ಯ … Read more

ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ;ರಾಜ್ಯದಲ್ಲಿ ನಡೆದ ಹೃದಯವಿದ್ರಾಹಕ‌ ಘಟನೆ

ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ;ರಾಜ್ಯದಲ್ಲಿ ನಡೆದ ಹೃದಯವಿದ್ರಾಹಕ‌ ಘಟನೆ ರಾಯಚೂರು: ಜೆಸಿಬಿ ಹರಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನಪ್ಪಿರುವ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೃತರನ್ನು ಛತ್ತೀಸಗಢ ಮೂಲದ ವಿಷ್ಣು (26), ಶಿವರಾಮ್ (28) ಹಾಗೂ ಬಲರಾಮ್(30) ಎಂದು ಗುರುತಿಸಲಾಗಿದೆ. ಗ್ರಾಮದ ಜಮೀನೊಂದಲ್ಲಿ ಬೋರ್​ವೆಲ್ ಕೊರೆಯಲು ಇವರು ಆಗಮಿಸಿದ್ದರು. ಬೋರ್‌ವೆಲ್ ಕೊರೆದ ನಂತರ ರಾತ್ರಿಯ ವೇಳೆ ಹೊಲದಲ್ಲಿನ ಕಾಲು ದಾರಿಯಲ್ಲಿ ಮೂವರು ನಿದ್ರೆ ಮಾಡುತ್ತಿದ್ದರು. … Read more