ಮೂಡಿಗೆರೆ ಬಣಕಲ್ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕ ಕೇಸ್ ಗೆ ಟ್ವಿಸ್ಟ್, ಬಂಟ್ವಾಳದ ಯುವಕನ ಕೊಲೆ ಮಾಡಿ ಎಸೆದ ದುಷ್ಕರ್ಮಿಗಳು?

-ಸವಾದ್ ಮೃತದೇಹ ಎನ್ನುವ ಶಂಕೆ ವ್ಯಕ್ತವಾಗಿದೆ ಬಂಟ್ವಾಳ:ಮೂಡಿಗೆರೆ ತಾಲೂಕು ಬಣಕಲ್ ಠಾಣಾ ವ್ಯಾಪ್ತಿಯ ದೇವರಮನೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕೊಳೆತ ಮೃತದೇಹಕ್ಕೆ ಸಂಬಂಧಿಸಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಬಣಕಲ್ ನಲ್ಲಿ ಸಿಕ್ಕಿದ ಕೊಳೆತ ಶವ ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಫಿಕಾಡ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬವರದ್ದು ಎಂಬುವ ಶಂಕೆ ಮೂಡಿದೆ. ಮೃತದೇಹದ ಗುರುತು ಸಿಗದಂತೆ ಮುಖಕ್ಕೆ ಬೆಂಕಿಹಚ್ಚಿ ಸುಟ್ಟು ಹಾಕಲಾಗಿದ್ದು, ಮಾದಕ ವ್ಯಸನಿಗಳ ತಂಡ ಈ ಕೊಲೆಗೈದಿದೆ ಎನ್ನಲಾಗುತ್ತಿದೆ. ಗಾಂಜಾ … Read more

ಆರೆಸ್ಸೆಸ್ & ಅದರ ಅಂಗ ಸಂಸ್ಥೆಗಳಿಗೆ ಬಿಜೆಪಿ ಸರಕಾರ ನೀಡಿದ್ದ ಎಕ್ರೆ ಗಟ್ಟೆಲೆ ಜಮೀನು ವಾಪಾಸ್ ಪಡೆಯಲಿದೆಯಾ ಸಿದ್ದರಾಮಯ್ಯ ಸರಕಾರ?ಏನಿದು ಬೆಳವಣಿಗೆ?

ಬೆಂಗಳೂರು;ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳಿಗೆ ‘ನೂರಾರು ಎಕರೆ ಭೂಮಿ’ ಮಂಜೂರು ಮಾಡಿದ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸರ್ಕಾರ ಪರಿಶೀಲಿಸಲಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಿಜೆಪಿ ಸರ್ಕಾರವು ನೀಡಿದ್ದ ಕೆಲವು ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದ್ದು ಇತರವುಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತು ಕಂದಾಯ ಇಲಾಖೆ ಮತ್ತು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸುತ್ತಾರೆ. ಹೇಗಾಯಿತು ಎಂಬುದನ್ನು ನೋಡಬೇಕು ಸರ್ಕಾರದ ಮಟ್ಟದಲ್ಲಿ ಇದು ಆಗಬೇಕು, ಇದು ಕಾನೂನುಬದ್ಧವಾಗಿ ನಡೆದಿದೆಯೇ ಮತ್ತು ಎಷ್ಟು ಬೆಲೆಗೆ … Read more

BREAKING ಕಲ್ಲಿದ್ದಲು ಗಣಿ ಕುಸಿದು ದುರಂತ, ಮೂವರ ಮೃತದೇಹ ಪತ್ತೆ, ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆ

BREAKING ಕಲ್ಲಿದ್ದಲು ಗಣಿ ಕುಸಿದು ದುರಂತ, ಮೂವರ ಮೃತದೇಹ ಪತ್ತೆ, ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಜಾರ್ಖಂಡ್; ಧನ್‌ಬಾದ್ ಬಳಿ ಅಕ್ರಮ ಕಲ್ಲಿದ್ದಲು ಗಣಿ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಧನ್‌ಬಾದ್‌ನಿಂದ ಸುಮಾರು 21 ಕಿಮೀ ದೂರದಲ್ಲಿರುವ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನ (BCCL) ಭೌರಾ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಬೆಳಗ್ಗೆ 10.30ಕ್ಕೆ ಈ ಘಟನೆ ಸಂಭವಿಸಿದೆ. ಸಾವಿಗೀಡಾದವರ ಸಂಖ್ಯೆ ಮತ್ತು ಗಾಯಗೊಂಡವರ ನಿಖರವಾದ … Read more

ಸುಳ್ಳು ಕೇಸ್ ನಲ್ಲಿ ಠಾಣೆಯಲ್ಲಿ ಕೂಡಿ ಹಾಕಿ ಮೂತ್ರ ಕುಡಿಯುವಂತೆ ಬಲವಂತ ಮಾಡಿದ್ರು, ಥಳಿಸಿದ್ರು- ಪೊಲೀಸರ ವಿರುದ್ಧ ಆರೋಪ ಮಾಡಿದ ಕಾಲೇಜು ವಿದ್ಯಾರ್ಥಿ

ಸುಳ್ಳು ಕೇಸ್ ನಲ್ಲಿ ಠಾಣೆಯಲ್ಲಿ ಕೂಡಿ ಹಾಕಿ ಮೂತ್ರ ಕುಡಿಯುವಂತೆ ಬಲವಂತ ಮಾಡಿದ್ರು, ಥಳಿಸಿದ್ರು- ಪೊಲೀಸರ ವಿರುದ್ಧ ಆರೋಪ ಮಾಡಿದ ಕಾಲೇಜು ವಿದ್ಯಾರ್ಥಿ ಉತ್ತರಪ್ರದೇಶ; 22 ವರ್ಷದ ಕಾನೂನು ವಿದ್ಯಾರ್ಥಿಯು ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಸುಲಿಗೆ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಜೈಲು ಪಾಲಾಗುವಂತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಎರಡನೇ ವರ್ಷದ ಬಿಎ ಎಲ್‌ಎಲ್‌ಬಿ ವಿದ್ಯಾರ್ಥಿ, ಪೊಲೀಸರು ತನಗೆ ಬಲವಂತವಾಗಿ ಮೂತ್ರ ಕುಡಿಸಿದ್ದರು ಮತ್ತು ಗೌತಮ್ ಬುದ್ಧ ನಗರ … Read more

BREAKING ಮೆಲ್ಕಾರ್; ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು

-ಶಾಫೀ(29) ಮೃತ ಯುವಕ ಬಂಟ್ವಾಳ;ತೋಟದಲ್ಲಿ ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಆಲಂಪಾಡಿ ಬಳಿ ನಡೆದಿದೆ. ಬೋಳಿಯಾರ್ ನಿವಾಸಿ ಇಬ್ರಾಹೀಂ ಅವರ ಮಗ ಶಾಫೀ(29) ಮೃತ ಯುವಕ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಆಲಂಪಾಡಿ ಬಳಿ ತೋಟದ ಕೆಲಸಕ್ಕೆ ತೆರಳಿದ ಶಾಫೀ ಅಡಿಕೆ ತೆಗೆಯಲೆಂದು ಉದ್ದನೆಯ ಸಲಾಖೆಯನ್ನು ಕತ್ತಿ ಕಟ್ಟಿ ಮೇಲಕ್ಕೆತ್ತಿದಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು‌ ಬಂಟ್ವಾಳದ ಶವಾಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಮರಣೋತ್ತರ … Read more

BREAKING ನೂತನ ಸರಕಾರದಿಂದ ಉಸ್ತುವಾರಿ ಸಚಿವರ ನೇಮಕ; ದ.ಕನ್ನಡ ಜಿಲ್ಲೆಗೆ ದಿನೇಶ್ ಗುಂಡೂರಾವ್, ತುಮಕೂರಿಗೆ ಪರಮೇಶ್ವರ್, ಯಾವ್ಯಾವ ಜಿಲ್ಲೆಗೆ ಯಾರ್ಯಾರು ಉಸ್ತುವಾರಿಗಳು? ಇಲ್ಲಿದೆ ಪಟ್ಟಿ

ಬೆಂಗಳೂರು;ನೂತನ ಸರಕಾರದಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಉಸ್ತುವಾರಿ ಸ್ಥಾನಕ್ಕೆ ಸಚಿವರು ಲಾಬಿ ನಡೆಸಿದ್ದರು.ಇದೀಗ ಎಲ್ಲಾ ಪ್ರಕ್ರಿಯೆ ನಡೆದು ಉಸ್ತುವಾರಿ ಸಚಿವರ ನೇಮಕ‌ ನಡೆದಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಡಿ.ಕೆ.ಶಿವಕುಮಾರ್​ ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್ ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ ರಾಮಲಿಂಗಾರೆಡ್ಡಿ-ರಾಮನಗರ, ಕೆ.ಜೆ.ಜಾರ್ಜ್​-ಚಿಕ್ಕಮಗಳೂರು ಎಂ.ಬಿ.ಪಾಟೀಲ್​-ವಿಜಯಪುರ ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ. ಹೆಚ್​.ಸಿ.ಮಹದೇವಪ್ಪ-ಮೈಸೂರು, ಸತೀಶ್ ಜಾರಕಿಹೊಳಿ-ಬೆಳಗಾವಿ,ಪ್ರಿಯಾಂಕ್​ ಖರ್ಗೆ-ಕಲಬುರಗಿ, ಶಿವಾನಂದಪಾಟೀಲ್-ಹಾವೇರಿ ಜಮೀರ್​ ಅಹ್ಮದ್ … Read more

ಸೌದಿ ಅರೇಬಿಯಾದಲ್ಲಿ ಮಾಣಿ ನಿವಾಸಿ ಮೃತ್ಯು

ಬಂಟ್ವಾಳ;ಮಾಣಿ ನಿವಾಸಿ ವ್ಯಕ್ತಿಯೋರ್ವರು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಾಣಿ ಸಮೀಪದ ಸೂರಿಕುಮೇರ್ ನಿವಾಸಿ ಅಬೂಬಕರ್ ಎಂಬವರ ಪುತ್ರ ಅಬ್ದುಲ್ ರಝಾಕ್ (52) ಮೃತರು. ರಝಾಕ್ ಅವರು ಸೌದಿ ಅರೇಬಿಯಾದಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.ಇತ್ತೀಚೆಗೆ ಊರಿಗೆ ಬಂದು‌ ಮರಳಿ ಸೌದಿ ಅರೇಬಿಯಾಗೆ ತೆರಳಿದ್ದರು. ಆದರೆ ‌ನಿನ್ನೆ ಹೃದಯಾಘಾತದಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ‌.ಮೃತದೇಹ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಈ … Read more

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಗಾಯಕ ಅರೆಸ್ಟ್

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಗಾಯಕ ಅರೆಸ್ಟ್ ಹರ್ಯಾಣ;ಹೊಟೇಲ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭೋಜ್‌ಪುರಿ ಗಾಯಕನನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಿಹಾರ ಮೂಲದ ಅಭಿಷೇಕ್ ಎಂದು ಗುರುತಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. 21 ವರ್ಷದ ಅಭಿಷೇಕ್, ಬಾಬುಲ್ ಬಿಹಾರಿ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿದ್ದಾರೆ.ಅವರ ಯೂಟ್ಯೂಬ್ ಚಾನೆಲ್‌ನಲ್ಲಿ 27,000 ಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಸುಮಾರು 600 ವೀಡಿಯೊಗಳನ್ನು … Read more

ಮಸೀದಿಯಲ್ಲಿ ಧಪನ ಕಾರ್ಯ ನಡೆಯುತ್ತಿದ್ದಾಗ ಸ್ಪೋಟ, ಕನಿಷ್ಟ 11 ಮಂದಿ ಮೃತ್ಯು, ಹಲವರಿಗೆ ಗಾಯ

ಧಪನ ಕಾರ್ಯ ನಡೆಯುತ್ತಿದ್ದಾಗ ಮಸೀದಿಯಲ್ಲಿ ಸ್ಪೋಟ, ಕನಿಷ್ಟ 11 ಮಂದಿ ಮೃತ್ಯು, ಹಲವರಿಗೆ ಗಾಯ ಕಾಬೂಲ್:ಈಶಾನ್ಯ ಅಫ್ಘಾನಿಸ್ತಾನದಲ್ಲಿ ಮಸೀದಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಸಾವುನೋವುಗಳು ಸಂಭವಿಸಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸತ್ತವರು ಅಥವಾ ಗಾಯಗೊಂಡವರಲ್ಲಿ ಹಲವಾರು ಸ್ಥಳೀಯ ತಾಲಿಬಾನ್ ಅಧಿಕಾರಿಗಳು ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ. ಕನಿಷ್ಠ 11 ಮಂದಿ ಘಟನೆಯಲ್ಲಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ವಾರದ ಆರಂಭದಲ್ಲಿ ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟ ಬಡಾಕ್ಷನ್ ಪ್ರಾಂತ್ಯದ ಉಪ ಗವರ್ನರ್ … Read more

ಕುಂಪಲ ಅಶ್ವಿನಿ ಆತ್ಮಹತ್ಯೆ ಕೇಸ್ ಗೆ ಸ್ಪೋಟಕ‌ ಟ್ವಿಸ್ಟ್; ಹೊಸ ಮನೆಯ ಗೃಹಪ್ರವೇಶದಂದು ಮನೆಯಲ್ಲಿ ನಡೆದಿದ್ದೇನು ಗೊತ್ತಾ?

ಉಳ್ಳಾಲ:ಕುಂಪಲದಲ್ಲಿ ಅಶ್ವಿನಿ‌ ಎಂಬ ಯುವತಿಯ ಆತ್ಮಹತ್ಯೆ ಕೇಸ್ ಇದೀಗ ಸ್ಪೋಟಕ ಟ್ಬಿಸ್ಟ್ ಸಿಕ್ಕಿದೆ. ಗೃಹಪ್ರವೇಶ ನಡೆಸಿ ಐದೇ ದಿನದಲ್ಲಿ ಹೊಸ ಮನೆಯಲ್ಲಿ ಅಶ್ವಿನಿ ಬಂಗೇರ (25) ಆತ್ಮಹತ್ಯೆ ಮಾಡಿಕೊಂಡಿದ್ದರು.ಅಶ್ವಿನಿ ತಾಯಿ ಜೊತೆ ವಾಸ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಅತ್ಮಹತ್ಯೆ ಸ್ಥಳದಲ್ಲಿ ಡೆತ್ ನೋಟು ಪತ್ತೆಯಾಗಿತ್ತು. ದುಬೈನಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಕೆಲ ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದರು.ಇವರಿಗೆ ಸಂಗೀತಾ ಎಂಬ ಮಹಿಳೆಯ ಪರಿಚಯವಾಗಿದ್ದು, ಇದರಿಂದ ಸಂಗೀತಾ ಸಲಹೆಯಂತೆ ಕುಂಪಲ ಚಿತ್ರಾಂಜಲಿನಗರದಲ್ಲಿರುವ ಮನೆಯನ್ನು ಖರೀದಿಸುವುದಾಗಿ ವಿಶ್ವಾಸ ನೀಡಿದ್ದರು. ಅದರಂತೆ ಬ್ಯಾಂಕ್ … Read more