ಮುಸ್ಲಿಂ ಯುವಕನ ಜೊತೆ ಬಿಜೆಪಿ ನಾಯಕನ ಪುತ್ರಿಯ ವಿವಾಹ, ವಿವಾದ ಸೃಷ್ಟಿ; ಏನಿದು ಬೆಳವಣಿಗೆ? ಇಲ್ಲಿದೆ ಡಿಟೇಲ್ಸ್..

ಮುಸ್ಲಿಂ ಯುವಕನ ಜೊತೆ ಬಿಜೆಪಿ ನಾಯಕನ ಪುತ್ರಿಯ ವಿವಾಹ,ವಿವಾದ ಸೃಷ್ಟಿ;ಏನಿದು ಬೆಳವಣಿಗೆ? ಇಲ್ಲಿದೆ ಡಿಟೇಲ್ಸ್.. ಉತ್ತರಾಖಂಡ;ಬಿಜೆಪಿ ಮುಖಂಡರೊಬ್ಬರ ಮಗಳ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಉತ್ತರಾಖಂಡದ ಪೌರಿ ಪ್ರದೇಶದ ಬಿಜೆಪಿ ನಾಯಕ ಯಶಪಾಲ್ ಬೇನಮ್ ಅವರ ಮಗಳ ವಿವಾಹದ ಆಮಂತ್ರಣ ಪತ್ರಿಕೆ ವಿವಾದ ಎಬ್ಬಿಸಿದೆ. ಬಿಜೆಪಿ ನಾಯಕನ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿರುವುದರಿಂದ ಜನಸಾಮಾನ್ಯರಿಂದ ಟೀಕೆಗೆ ಗುರಿಯಾಗಿದ್ದಾರೆ. ವೆಡ್ಡಿಂಗ್ ಕಾರ್ಡ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಬಿಜೆಪಿಯ ಬೆಂಬಲಿಗರು ಮತ್ತು ವಿರೋಧಿಗಳು ಬೇನಾಮನ್ನು ಟೀಕಿಸಿದ್ದಾರೆ. … Read more

ಸಿದ್ದರಾಮಯ್ಯ ಪ್ರಮಾಣವಚನ ಸಮಾರಂಭಕ್ಕೆ ಯಾರೆಲ್ಲಾ ಬರಲಿದ್ದಾರೆ ಗೊತ್ತಾ?

ಬೆಂಗಳೂರು;ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದ್ದೂರಿ ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ಹಲವು ವಿರೋಧ ಪಕ್ಷದ ನಾಯಕರಿಗೆ ಆಹ್ವಾನಿಸಿದೆ.ಹಾಲಿ ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲದೆ, ಸಮಾನ ಮನಸ್ಕ ಪಕ್ಷಗಳ ಪ್ರಮುಖ ನಾಯಕರನ್ನೂ ಆಹ್ವಾನಿಸಿದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ … Read more

BIG NEWS 2000 ಮುಖಬೆಲೆಯ ನೋಟು ಚಲಾವಣೆಯಿಂದ ಹಿಂಪಡೆದ ಆರ್ ಬಿಐ; ನಿಮ್ಮಲ್ಲಿರುವ ನೋಟುಗಳನ್ನು ಬದಲಾಯಿಸಲು ದಿನವೂ ನಿಗದಿ

ನವದೆಹಲಿ;ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ, 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ ಎಂದು ಹೇಳಿದೆ. ಆದರೂ 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿದೆ ಎಂದು ಹೇಳಿದೆ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ರೂ 2,000 ನೋಟುಗಳನ್ನು ಜಮಾ ಮಾಡಬಹುದು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು, ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ … Read more

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ವಿಚಾರ; ಸುಪ್ರೀಂಕೋರ್ಟ್ ನಿಂದ ಇಂದು ಮಹತ್ವದ ಆದೇಶ

ಲಕ್ನೋ;ವಾರಣಾಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೆ.12 ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ಸಮೀಕ್ಷೆಯ ಆದೇಶದ ವಿರುದ್ಧ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಗಣಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ‘ಶಿವಲಿಂಗ’ ಎಂದು ಹಿಂದೂ ಅರ್ಜಿದಾರರು ಹೇಳಿಕೊಳ್ಳುವ ವಾರಣಾಸಿ ಮಸೀದಿಯೊಳಗಿನ ರಚನೆಯ ವೈಜ್ಞಾನಿಕ ಸಮೀಕ್ಷೆಯನ್ನು ತಡೆಹಿಡಿಯುವಂತೆ ಸುಪ್ರೀಂ … Read more

ಬೆಳ್ಳಾರೆ; ತಂದೆ- ಮಗನ ಜಗಳ, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಮೃತ್ಯು

ಬೆಳ್ಳಾರೆ:ತಂದೆ-ಮಗನ ನಡೆದ ಹೊಡೆದಾಟದಲ್ಲಿ ಗಾಯಗೊಂಡಿದ್ದ ತಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ವರದಿಯಾಗಿದೆ. ಕುಕ್ಕುಜಡ್ಕದಲ್ಲಿ ಕಳೆದವಾರ ಕಿಟ್ಟು ಹಾಗೂ ಮಗ ಹರ್ಷಿತ್‌ ಹೊಡೆದಾಟ ನಡೆಸಿಕೊಂಡಿದ್ದರು.ಹರ್ಷಿತ್ ಕಿಟ್ಟುರವರ ಮೊದಲನೆ ಹೆಂಡತಿಯ ಮಗನಾಗಿದ್ದ. ಹರ್ಷಿತ್‌ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ. ಗಾಯಗೊಂಡಿದ್ದ ಕಿಟ್ಟುರವರನ್ನು ಆಂಬ್ಯುಲೆನ್ಸ್‌ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ … Read more

ಪುತ್ತೂರು; ಬಸನಗೌಡ ಯತ್ನಾಳ್ ಜೊತೆ ಗಾಯಾಳುಗಳ ಕೊಠಡಿಗೆ ಪ್ರವೇಶಿಸಿದ ಬಿಜೆಪಿ ಮುಖಂಡನಿಗೆ ಹೊರದಬ್ಬಿದ ಪುತ್ತಿಲ ಬೆಂಬಲಿಗರು; ವಿಡಿಯೋ ವೈರಲ್

ಪುತ್ತೂರು;ಬ್ಯಾನರ್ ನಲ್ಲಿ ಶ್ರದ್ಧಾಂಜಲಿ ಕೋರಿಕೆ ಆರೋಪದಲ್ಲಿ ಬಂಧಿತ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪಿಸಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿದ್ದಾರೆ.ಈ ವೇಳೆ ಪುತ್ತಿಲ ಬೆಂಬಲಿಗರು ಆಸ್ಪತ್ರೆ ಕೊಠಡಿಯಿಂದ ಬಿಜೆಪಿ ಮುಖಂಡರೋರ್ವರನ್ನು ಹೊರದಬ್ಬಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.ಯತ್ನಾಳ್ ಜೊತೆ ಆಸ್ಪತ್ರೆಯ ಕೊಠಡಿಗೆ ಬಂದ ಬಿಜೆಪಿ ಮುಖಂಡ ಅಜಿತ್ ರೈಯನ್ನು ಪುತ್ತಿಲ ಬೆಂಬಲಿಗರು ಆಸ್ಪತ್ರೆಯ ಕೊಠಡಿಯಿಂದ ಹೊರ ದಬ್ಬಿದ್ದಾರೆ. ಬಿಜೆಪಿ ಶಾಸಕ ಬಸನಗೌಡ … Read more

ಕಾಲೇಜಿನಲ್ಲಿ ಚೆನ್ನಾಗಿ ಕಲಿಯುತ್ತಿಲ್ಲ ಎಂದು ಮಗನಿಗೆ ಹೊಡೆದ ತಂದೆ, 18 ವರ್ಷದ ಮಗ ಸಾವು; ಬೈಕ್ ಜೊತೆ ಮೃತದೇಹ ಕೊಂಡೊಯ್ದು ರಸ್ತೆಯಲ್ಲಿ ಎಸೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪೋಷಕರು

ಕಾಲೇಜಿನಲ್ಲಿ ಚೆನ್ನಾಗಿ ಕಲಿಯುತ್ತಿಲ್ಲ ಎಂದು ಮಗನಿಗೆ ಹೊಡೆದ ತಂದೆ, 18 ವರ್ಷದ ಮಗ ಸಾವು; ಬೈಕ್ ಜೊತೆ ಮೃತದೇಹ ಕೊಂಡೊಯ್ದು ರಸ್ತೆಯಲ್ಲಿ ಎಸೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪೋಷಕರು ಛತ್ತೀಸ್ ಗಢ;ಮಗನನ್ನು ಕೊಂದು ಆತನ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ಛತ್ತಿಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಲೈಲುಂಗಾ ಪೊಲೀಸ್ ಠಾಣಾ ವ್ಯಾಪ್ತಿಯ ಲೋಹದಪಾನಿ ಗ್ರಾಮದ ನಿವಾಸಿ ಕುಹ್ರು ಸಿಂಗರ್ ಅವರ ಪುತ್ರ ಟೆಕ್ಮಣಿ ಪೈಕಾರ … Read more

ಕೆಎಸ್ಸಾರ್ಟಿಸಿ ಬಸ್ ನಲ್ಲಿ ಹಸ್ತಮೈಥುನ ಮಾಡಿದ ಆರೋಪ, ಯುವಕನ ಬಂಧನ

-ಸವದ್ ಶಾ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕೊಚ್ಚಿ: ಎರ್ನಾಕುಲಂ ಜಿಲ್ಲೆಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿಯನ್ನು ಎರ್ನಾಕುಲಂನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ರಿಶೂರ್ ಜಿಲ್ಲೆಯವರಾದ ನಂದಿತಾ ಶಂಕರ ಅವರು ದೂರು ನೀಡಿದ ನಂತರ ಮಂಗಳವಾರ ನಡೆದ ಘಟನೆ ಬೆಳಕಿಗೆ ಬಂದಿದೆ ಮತ್ತು ಘಟನೆಯ … Read more

ಮರ್ಕಝ್, ಮದನೀಯಂ ವತಿಯಿಂದ ದಕ್ಷಿಣ ಕನ್ನಡದಲ್ಲಿ 7 ಮನೆ ಸೇರಿ 111 ಮನೆಗಳ ಹಸ್ತಾಂತರ

ಮಂಗಳೂರು;ಮರ್ಕಝ್ ಹಾಗೂ ಮದನೀಯಂ ಚಾನೆಲ್ ಬಳಗವು ಜಂಟಿಯಾಗಿ ಬಡ ಸಯ್ಯದ್ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ವಸತಿ ಯೋಜನೆಯ ಮೊದಲ ಹಂತದ ಮನೆಗಳ ಹಸ್ತಾಂತರ ಮರ್ಕಝ್‌ನಲ್ಲಿ ನಡೆಯಲಿದೆ. ಮದನೀಯಂ ಬಳಗದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಈ ಕುರಿತು ಮಾಹಿತಿಯನ್ನು ನೀಡಿದ್ದು, ಬಡ ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದ ಪ್ರಮುಖ ನಾಯಕರ ನೇತೃತ್ವದಲ್ಲಿ 111 ಮನೆಗಳ ಕೀಲಿ ಕೈಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಗ್ರಾಂಡ್ ಮುಫ್ತ್ತಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂರವರ ನಿರ್ದೇಶನದಂತೆ ಮದನೀಯಂ ಚಾನೆಲ್ ತನ್ನ ಮೊದಲ ವರ್ಷಾಚರಣೆಯ … Read more

ತನ್ನನ್ನು ತಾನೇ ಮದುವೆಯಾದ 77ರ ಅಜ್ಜಿ;ಅಪರೂಪದ ಘಟನೆ ವರದಿ

77 ವರ್ಷದ ಮಹಿಳೆಯೊಬ್ಬರು ತನ್ನನ್ನು ತಾನೇ ಸ್ವಯಂ ವಿವಾಹವಾಗಿ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ. ಅಮೆರಿಕಾದ ಡೊರೊಥಿ ಫಿಡೆಲಿ ಎಂಬ 77 ವರ್ಷ ವಯಸ್ಸಿನ ಮಹಿಳೆ ತನ್ನನ್ನು ತಾನೇ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಸಾಂಕೇತಿಕ ವಿವಾಹವು ಮೇ 13 ರಂದು ಓಹಿಯೋದ ಗೋಶೆನ್‌ನಲ್ಲಿರುವ ಓ’ಬನ್ನಾನ್ ಟೆರೇಸ್ ಸಮುದಾಯ ಭವನದಲ್ಲಿ ನೆರೆಹೊರೆಯವರು, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ. ಇದೊಂದು ಭಾವನಾತ್ಮಕ ದಿನ. ನನಗೆ ಖುಷಿ ಮತ್ತು ರೋಮಾಂಚನವಾಗುತ್ತಿದೆ ಎಂದು ಫಿಡೆಲಿ ಮದುವೆ ಬಗ್ಗೆ ಹೇಳಿದ್ದಾರೆ. ನಾನು ಜೀವನದಲ್ಲಿ ಎಲ್ಲ … Read more