ಪಡುಬಿದ್ರಿ; ವ್ಯಕ್ತಿಯೋರ್ವರಿಗೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ;ದೂರು

ಪಡುಬಿದ್ರಿ;ವ್ಯಕ್ತಿಯೋರ್ವರಿಗೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪಡುಬಿದ್ರಿ;ನಿವೃತ್ತ ಬಿಎಸ್ಸೆನ್ನೆಲ್‌ ಉದ್ಯೋಗಿಯನ್ನು ಮರವೊಂದಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ಪೂಂದಾಡು ನಿವಾಸಿ ಲಕ್ಷ್ಮಿ ನಾರಾಯಣ ಅವರ ಮೇಲೆ ಆರೋಪಿಗಳಾದ ಶೈಲೇಶ್‌, ವಿಠ್ಠಲ್, ರಂಜಿತ್‌ ಹಾಗೂ ಇನ್ನಿಬ್ಬರು ಕೈಯಿಂದ, ಹೆಲ್ಮೆಟ್‌, ಬೆಲ್ಟ್‌ಗಳಿಂದ ಹೊಡೆದಿರುವ ಆರೋಪ ಮಾಡಲಾಗಿದೆ. ಈ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾರಾಯಣ ಅವರ ತಂದೆಯ ತಂಗಿ ಮನೆಯೂ ಇನ್ನಾ ಗ್ರಾಮದ ಗುರ್ಮೇರು ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಅವರು ಸೋದರತ್ತೆಯ ಮಗಳು ಮೋಹಿತಾಳ … Read more

BIG NEWS ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ;ಸಿಎಂ ಬೊಮ್ಮಯಿ ವಿರುದ್ಧ ಘೋಷಣೆಯಾಗಿದ್ದ ಅಭ್ಯರ್ಥಿ ಬದಲಾವಣೆ

ಬೆಂಗಳೂರು; ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಕೆಆರ್ ಪುರಂ ಕ್ಷೇತ್ರ- ಡಿ.ಕೆ. ಮೋಹನ ಬಾಬು ಪುಲಿಕೇಶಿ ನಗರ -ಎ.ಸಿ.ಶ್ರೀನಿವಾಸ್ ಮುಳಬಾಗಿಲು ಕ್ಷೇತ್ರ- ಡಾ. ಬಿ.ಸಿ. ಮುದ್ದು ಗಂಗಾಧರ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ, ಯೂಸುಫ್ ಸವಣೂರು ಬದಲಿಗೆ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಮಂಗಳೂರು;ನೆಹರು ಮೈದಾನದ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಬಂಧನ, ಕೃತ್ಯಕ್ಕೆ ಕಾರಣ ತನಿಖೆಯಲ್ಲಿ ಬಹಿರಂಗ…

ಮಂಗಳೂರು;ನೆಹರೂ ಮೈದಾನದ ಬಳಿ ಬಂಟ್ವಾಳದ ನಿವಾಸಿ ಜನಾರ್ದನ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು‌ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ಪ್ರಶಾಂತ್ (40), ಕುಶಲನಗರದ ಜಿ.ಕೆ ರವಿಕುಮಾರ್ (38), ಕೊಣಾಜೆಯ ವಿಜಯ ಕುಟಿನ್ಹಾ (28) ಬಂಟ್ವಾಳದ ಶರತ್.ವಿ (36) ಎಂದು ಗುರುತಿಸಲಾಗಿದೆ. ಜನಾರ್ದನ ಪೂಜಾರಿ ನಿನ್ನೆ ಸಂಜೆ ಸ್ಟೇಟ್ ಬ್ಯಾಂಕ್ ಬಳಿಯ ಮೈದಾನದ ಬಳಿ ಮಲಗಿದ್ದರು.ಅವರ ಹತ್ತಿರ ಬಂದು ಆರೋಪಿಗಳು ಮೊಬೈಲ್‌ ಕೊಡುವಂತೆ ಕೇಳಿದ್ದಾರೆ. ಕೊಡದಿದ್ದಾಗ ಮಾತಿಗೆ ಮಾತು ಬೆಳೆದು ಆರೋಪಿಗಳಲ್ಲಿ ಓರ್ವ ಜನಾರ್ದನ ಪೂಜಾರಿ … Read more

ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿದ್ದ ಸುಳ್ಯದ ಯುವಕ ಮೃತ್ಯು

ಸುಳ್ಯ;ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಿಸದೆ ಮಂಗಳೂರಿನ‌ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕಳಂಜ ಗ್ರಾಮದ ಮಣಿಮಜಲು ನಿವಾಸಿ ಧರ್ಣಪ್ಪ ಅವರ ಪುತ್ರ ಯತೀಶ್(29)ಮೃತ ಯುವಕ.ಯತೀಶ್ ಎ.13ರಂದು ಬೆಂಗಳೂರಿನಲ್ಲಿ ತಾನು ವಾಸಿಸುತ್ತಿದ್ದ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ಅಲ್ಲಿನ‌ ಜನ ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಗ್ಗೆ ಬೆಂಗಳೂರು ಪೊಲೀಸರು ಯುವಕನ ಕುಟುಂಬಕ್ಕೆ‌ಮಾಹಿತಿ ನೀಡಿದ್ದರು.‌ಕುಟಂಬಸ್ಥರು ಬೆಂಗಳೂರಿಗೆ ತೆರಳಿ ಅಲ್ಲಿಂದ ಚಿಕಿತ್ಸೆಗೆ ಮಂಗಳೂರಿನ‌ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಯತೀಶ್ ಚಿಕಿತ್ಸೆ … Read more

ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದ ಭಾರತ; ಭಾರತದ ಜನಸಂಖ್ಯೆ ಕುರಿತು ಇಲ್ಲಿದೆ ಕೆಲ ಇಂಟ್ರಿಸ್ಟಿಂಗ್ ಅಂಕಿ- ಅಂಶಗಳು…

ನವದೆಹಲಿ:ಭಾರತವು ಇದೇ ಮೊದಲ‌ ಬಾರಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಚೀನಾದ ಜನಸಂಖ್ಯೆ ಇದೀಗ 142.57 ಕೋಟಿಯಷ್ಟಿದ್ದರೆ, ಭಾರತದ ಜನಸಂಖ್ಯೆ 142.86 ಕೋಟಿಯಷ್ಟಾಗಿದೆ. 1960ರಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ವರದಿಯ ಪ್ರಕಾರ, ಭಾರತವು ಈಗ ಚೀನಾಕ್ಕಿಂತ 2.9 ಮಿಲಿಯನ್ ಹೆಚ್ಚು ಜನರನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ‘ದಿ ಸ್ಟೇಟ್ … Read more

ಭೀಕರ ಅಪಘಾತ; ಮಾಜಿ ಕ್ರಿಕೆಟಿಗನಿಗೆ ಗಂಭೀರ ಗಾಯ, ಪತ್ನಿ ಸಾವು

ಮಹಾರಾಷ್ಟ್ರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮಾಜಿ ರಣಜಿ ಕ್ರಿಕೆಟಿಗ ಪ್ರವೀಣ್ ಹಿಂಗ್ನಿಕರ್ ಗಾಯಗೊಂಡಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ರಣಜಿ ಕ್ರಿಕೆಟಿಗ ಮತ್ತು ಕೋಚ್ ಪ್ರವೀಣ್ ಹಿಂಗ್ನಿಕರ್ ಅವರು ಗಾಯಗೊಂಡಿದ್ದು, ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಹಿಂಗ್ನಿಕರ್ ಅವರನ್ನು ಚಿಕಿತ್ಸೆಗಾಗಿ ಮೆಹಕರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ದಂಪತಿ ಪುಣೆಯಲ್ಲಿರುವ ತಮ್ಮ ಮಗನ ಮನೆಗೆ ಭೇಟಿ ನೀಡಿ ಪುಣೆಯಿಂದ … Read more

ಹಳೆಯ ಅಂಬಾಸಿಡರ್ ಕಾರಿನಲ್ಲಿ ಮಗನ ನಾಮಪತ್ರ ಸಲ್ಲಿಕೆಗೆ ತೆರಳಿದ ಯಡಿಯೂರಪ್ಪ!; ಬಿಎಸ್ ವೈ ನಾಮಪತ್ರ ಸಲ್ಲಿಕೆಗೆ ಬಳಸುತ್ತಿದ್ದರು ಇದೇ ಕಾರು!

ಶಿವಮೊಗ್ಗ; ಮಗನ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಂತ್ರಿ ಯಡಿಯೂರಪ್ಪ ತಮ್ಮ ಹಳೆಯ ಅಂಬಾಸಿಡರ್ ಕಾರ್ ನಲ್ಲಿ ತೆರಳಿ ಸುದ್ದಿಯಾಗಿದ್ದಾರೆ. ಮಗ ಬಿ ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಇಂದು ಅವರು ಹಿಂದೆ ಬಳಸುತ್ತಿದ್ದ ಹಳೆಯ ಅಂಬಾಸಿಡರ್ ಕಾರ್ ನಲ್ಲಿ ತೆರಳಿದ್ದಾರೆ. ಯಡಿಯೂರಪ್ಪ ಅವರು ತಮ್ಮ ತೋಟದ ಮನೆಯಿಂದ ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಅಂಬಾಸಿಟರ್​ ಕಾರಿನಲ್ಲಿ ತೆರಳಿದರು. ಬಿಎಸ್ ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಳಸಿದಂತಹ ಅಂಬಾಸಿಡರ್ ಕಾರಿನಲ್ಲಿ ಮಗನ ನಾಮಪತ್ರ ಸಲ್ಲಿಕೆಗೆ ಹೊರಟಿದ್ದಾರೆ.ಇವರೊಂದಿಗೆ ಸಂಸದ ಬಿ … Read more

ಸುಳ್ಯ; ಸಂಪಾಜೆ ಬಳಿ ಮರದಿಂದ ಬಿದ್ದು ಯುವಕ ಮೃತ್ಯು

ಸುಳ್ಯ;ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸಂಪಾಜೆಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕರಿಕೆ ಮೂಲದ ವಿಜಯ್ ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದರು.ಸಂಪಾಜೆಯಲ್ಲಿ ಜೇನು ತೆಗೆಯುತ್ತಿದ್ದ ಸಂದರ್ಭ ವಿಜಯ್ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಆ ವೇಳೆಗೆ ಮೃತಪ್ಪಟ್ಟನೆಂದು ತಿಳಿದು ಬಂದಿದೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ; ಆರೋಗ್ಯ ರಕ್ಷಣೆಗೆ ಇಲ್ಲಿದೆ ಮಹತ್ವದ ಸಲಹೆ…

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಿದೆ.ಮಳೆಯ ನಿರೀಕ್ಷಿಸಿದ್ದರು ಮಳೆ ಬರದೆ ಜನರು ಕಂಗಾಲಾಗಿದ್ದಾರೆ. ಬಿಸಿಲಿನ ತೀವ್ರತೆ ಕಂಡು ಬಂದ ಹಿನ್ನಲೆಯಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಕೆಲ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ಶುದ್ಧ ಕುಡಿಯುವ ನೀರನ್ನು ಹಾಗೂ ಛತ್ರಿ ತೆಗೆದುಕೊಂಡು ಹೋಗಬೇಕು. ಬಿಸಿಲಿನಲ್ಲಿ ಜಮೀನು ಕೆಲಸ,ರಸ್ತೆ ಕಾಮಗಾರಿ ಮುಂತಾದ ಹೊರಗಡೆ … Read more

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮುಖಂಡನ ಬರ್ಬರ ಕೊಲೆ

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮುಖಂಡನ ಬರ್ಬರ ಕೊಲೆ ಧಾರವಾಡ; ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷನಿಗೆ ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಟೂರು ಗ್ರಾಮದಲ್ಲಿ ವರದಿಯಾಗಿದೆ. ಪ್ರವೀಣ್ ಕಮ್ಮಾರ ಎಂಬವರೇ ಹತ್ಯೆಯಾದ ಯುವಕ.ಪ್ರವೀಣ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಜಗಳ ನಡೆದು ದುಷ್ಕರ್ಮಿಗಳು ಪ್ರವೀಣ್ ಕಮ್ಮಾರನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ … Read more