2B ಮೀಸಲಾತಿ ರದ್ದತಿಯನ್ನು ಸಮರ್ಥಿಸಿದ ಅಮಿತ್ ಶಾ; ಕರ್ನಾಟಕ ಚುನಾವಣೆ ಪ್ರಚಾರದಲ್ಲಿರುವ ಅಮಿತ್ ಶಾ ಮೀಸಲಾತಿ ರದ್ಧತಿ ಬಗ್ಗೆ ಹೇಳಿದ್ದೇನು ಗೊತ್ತಾ?

ಬೀದರ್;ಚುನಾವಣೆ ಹಿನ್ನೆಲೆ ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ, ಸಿಎಂ ಬೊಮ್ಮಯಿ ನೇತೃತ್ವದ ಸರಕಾರ ಮುಸ್ಲಿಮರಿಗೆ 2b ಯಲ್ಲಿದ್ದ 4% ಮೀಸಲಾತಿ ರದ್ದತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಗೊರಟಾ ಗ್ರಾಮ ಮತ್ತು ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು.ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಹೊಸ ಒಳಮೀಸಲಾತಿ ಜಾರಿಗೆ ತರುವ ಮೂಲಕ ಪರಿಶಿಷ್ಟ ಜಾತಿಗೆ ಆಗಿರುವ ಅನ್ಯಾಯವನ್ನು ದೂರ … Read more

BIG NEWS ಮಸೀದಿಯೊಂದರಲ್ಲಿ ಇಫ್ತಾರ್ ಸೇವಿಸಿದ 100ಕ್ಕೂ ಅಧಿಕ ಮಂದಿ ಅಸ್ವಸ್ಥ, ಕೆಲವರ ಸ್ಥಿತಿ‌ ಗಂಭೀರ

ಮಸೀದಿಯೊಂದರಲ್ಲಿ ಇಫ್ತಾರ್ ಸೇವಿಸಿದ 100ಕ್ಕೂ ಅಧಿಕ ಮಂದಿ ಅಸ್ವಸ್ಥ, ಕೆಲವರ ಸ್ಥಿತಿ‌ ಗಂಭೀರ ಪ.ಬಂಗಾಳ;ಮಸೀದಿಯೊಂದರಲ್ಲಿ ರಂಜಾನ್ ನ ಇಫ್ತಾರ್ ಆಹಾರ ಸೇವಿಸಿದ 100ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ‌ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಪಖಿರಾಲಯ ಸಮೀಪದ ಮಸೀದಿಯಲ್ಲಿ ಇಫ್ತಾರ್ ಸೇವಿಸಿದ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾದರು.ಕೋಲ್ಕತ್ತಾದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಅವರನ್ನು ದಾಖಲಿಸಲಾಗಿದೆ. ದಾಖಲಾಗಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಕುಲ್ತಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಖಿರಾಲಯ ಗ್ರಾಮದಲ್ಲಿ … Read more

ಪುತ್ತೂರಿನ ಯುವಕ ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ;ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಠ್ಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್(32) ಆತ್ಮಹತ್ಯೆ ಮಾಡಿಕೊಂಡವರು. ಇವರು ಕೆಮ್ಮಿಂಜೆ ನಿವಾಸಿಯಾಗಿದ್ದು, ಪುತ್ತೂರು ಕೋರ್ಟ್ ರೋಡ್ ನಲ್ಲಿ ಜಿನಸಿ ಅಂಗಡಿಯನ್ನು ಕಳೆದ ಹಲವು‌ ವರ್ಷಗಳಿಂದ ನಡೆಸುತ್ತಿದ್ದರು ಎನ್ನಲಾಗಿದೆ. ವಿಘ್ನೇಶ್ ಈ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ನೇತ್ರಾವತಿ ನದಿ ಬಳಿ ಸಂಶಯಾಸ್ಪದ ನೆಲೆಯಲ್ಲಿ ವಾಹನ‌ ಕಂಡ ಹಿನ್ನೆಲೆ ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹ ಬಂಟ್ವಾಳ ಸರಕಾರಿ ಅಸ್ಪತ್ರೆಗೆ … Read more

ಮಂಗಳೂರು; ಕಾರ್ಯಕ್ರಮವೊಂದಕ್ಕೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರಿಂದ ದಾಂಧಲೆ ಆರೋಪ

ಮಂಗಳೂರು;ಹೋಳಿ ಆಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಸಂಘಪರಿವಾರದ ಕಾರ್ಯಕರ್ತರು ತೆರಳಿ ದಾಂಧಲೆ ನಡೆಸಿರುವ ಆರೋಪ ಮರೋಳಿ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹೋಳಿ ಆಚರಣೆಯ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜೆ ಹಾಕಿ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಆಚರಿಸುತ್ತಿದ್ದರು.ಇದನ್ನು ತಿಳಿದು ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಸಂಘಪರಿವಾದ ಕಾರ್ಯಕರ್ತರು ಹೋಳಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.ಸ್ಥಳದಲ್ಲಿ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. … Read more

Shocking ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ದಂಪತಿ ಆತ್ಮಹತ್ಯೆ; ಒಂದೇ ಮನೆಯಲ್ಲಿ ನಾಲ್ವರು ಮೃತ್ಯು

Shocking ಇಬ್ಬರು ಮಕ್ಕಳಿಗೆ ವಿಷ ಉಣಿಸಿ , ದಂಪತಿ ಆತ್ಮಹತ್ಯೆ; ಒಂದೇ ಮನೆಯಲ್ಲಿ ನಾಲ್ವರು ಮೃತ್ಯು ಹೈದರಾಬಾದ್:ಇಬ್ಬರು ಮಕ್ಕಳು ಸೇರಿದಂತೆ ಸಾಫ್ಟ್‌ವೇರ್ ಇಂಜಿನಿಯರ್ ಕುಟುಂಬದ ನಾಲ್ವರು ಶನಿವಾರ ಕುಶೈಗುಡಾದ ಅವರ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳ ಅಸೌಖ್ಯದಿಂದ ದಂಪತಿಗಳು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತರು ತಮ್ಮ ಜೀವನವನ್ನು ಅಂತ್ಯಗೊಳಿಸಲು ವಿಷ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಸತೀಶ್(39) ಅವರ ಪತ್ನಿ ಜಿ ವೇದಾ(35) ಮತ್ತು ಅವರ ಮಕ್ಕಳಾದ ನಿಶಿಕೇತ್(9)ಮತ್ತು ಜಿ ನಿಹಾಲ್ (5) ಕಂದಿಗುಡದಲ್ಲಿರುವ … Read more

ರಾಹುಲ್ ಅಜ್ಜಿ ಇಂದಿರಾ ಗಾಂಧಿ ಕೂಡ 50 ವರ್ಷಗಳ ಹಿಂದೆ ಲೋಕಸಭೆಯಿಂದ ಅನರ್ಹರಾಗಿದ್ದರು!;ಯಾಕೆ? ಏನಿದು ಇತಿಹಾಸ..

ನವದೆಹಲಿ:ಸೂರತ್ ಹೈಕೋರ್ಟ್ ನ ಜೈಲು ಶಿಕ್ಷೆ ತೀರ್ಪಿನ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.ಆದರೆ ಅನರ್ಹತೆ ಶಿಕ್ಷೆ ಗಾಂಧಿ ಕುಟುಂಬಕ್ಕೆ ಇದು ಮೊದಲಲ್ಲ. ಐವತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ಅಜ್ಜಿ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮದಲ್ಲಿ ಅಪರಾಧಿ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಸೋಲಿಸಿದ್ದ ರಾಜ್ … Read more

ಬೆಟ್ಟದ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲೆಂದು ಜಿಗಿದು ಬಂಡೆಗಳ ನಡುವೆ ಸಿಲುಕಿದ ಕಾಲೇಜು ವಿದ್ಯಾರ್ಥಿಗಳು, ಪೊಲೀಸರಿಂದ ಕಾರ್ಯಾಚರಣೆ

ಬೆಟ್ಟದ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲೆಂದು ಜಿಗಿದು ಬಂಡೆಗಳ ನಡುವೆ ಸಿಲುಕಿದ ಕಾಲೇಜು ವಿದ್ಯಾರ್ಥಿಗಳು, ಪೊಲೀಸರಿಂದ ಕಾರ್ಯಾಚರಣೆ ಬೆಂಗಳೂರು;ಬೆಟ್ಟದ ಮೇಲಿನಿಂದ ಜಿಗಿದು ಕಾಲೇಜು ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾಮದೇವರ ಬೆಟ್ಟದ ಮೇಲಿಂದ ಬೆಂಗಳೂರಿನ ಕಾಲೇಜೊಂದರ ಪ್ರಥಮ ಬಿ.ಇ. ವಿದ್ಯಾರ್ಥಿ ಚೇತನ್‌ (19) ಹಾಗೂ ಅದೇ ಕಾಲೇಜಿನ ಪ್ರಥಮ ಬಿ.ಕಾಂ.ವಿದ್ಯಾರ್ಥಿನಿ ಸಾಹಿತ್ಯ(19) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಳಿಗ್ಗೆ ಬೆಟ್ಟದ ಮೇಲಿಂದ ಜಿಗಿದು ಬಂಡೆಗಳ ಮಧ್ಯೆ ಸಿಲುಕಿ ಗಾಯಗೊಂಡಿದ್ದ ಪ್ರೇಮಿಗಳನ್ನು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ. … Read more

ರಂಝಾನ್ ಉಪವಾಸ ಆಚರಿಸುತ್ತಿರುವ ರಾಖಿ ಸಾವಂತ್; ಹಿಜಾಬ್ ಧರಿಸಿ ವಿಡಿಯೋ ಹರಿಯ ಬಿಟ್ಟು ಅವರು ಏನೆಲ್ಲಾ ಹೇಳಿದ್ರು ಗೊತ್ತಾ?

ಬಾಲಿವುಡ್ ನಟಿ ರಾಖಿ ಸಾವಂತ್ ರಂಝಾನ್ ಹಿನ್ನೆಲೆ ಉಪವಾಸ ವೃತ ಆಚರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೊದಲು ಮೈಸೂರಿನ ಯುವಕ ಆದಿಲ್​ ಖಾನ್​ ಗೆ ಮದುವೆಯಾಗಿ ಬಳಿಕ ರಾಖಿ ಸಾವಂತ್ ತನ್ನ ಪತಿಯ ಜೊತೆಗಿನ ಜಗಳದ ವಿಡಿಯೋ ಹಂಚಿಕೊಂಡಿದ್ದರು. ಕೊನೆಗೆ ಆದಿಲ್ ಖಾನ್ ಗೆ ಜೈಲಿಗೆ ಕೂಡ ಕಳುಹಿಸಿದ್ದಾರೆ‌. ಈ ರಂಜಾನ್ ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತೇನೆ ಎಂದಿದ್ದರು.ಪವಿತ್ರ ಉಮ್ರಾ ಯಾತ್ರೆ ನನ್ನ ಕನಸು ಎಂದು ಹೇಳಿದ್ದರು. ಇದೀಗ ಮೊದಲ ಉಪವಾಸದ ವಿಡಿಯೋ … Read more

ವಿಟ್ಲ; ತಾಯಿಗೆ ಹಲ್ಲೆ ನಡೆಸಿ, ಚೂರಿಯಿಂದ ಇರಿಯಲು ಯತ್ನಿಸಿದ ಮಗ

ವಿಟ್ಲ:ಹೆತ್ತ ತಾಯಿಗೆ ಬೆದರಿಸಿ ಹಲ್ಲೆ ಮಾಡಿ, ಚೂರಿಯಿಂದ ಇರಿಯಲು ಯತ್ನಿಸಿ ಮಗ ಪರಾರಿಯಾದ ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಡ್ಕಿದು ಗ್ರಾಮದ ನಾರಾಯಣ ಅವರ ಮಗ ಸಚಿನ್‌ ಎಂಬಾತನು ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿ ತಾಯಿಯ ತಲೆ ಕೂದಲು ಹಿಡಿದು ಮುಖಕ್ಕೆ ಕೈಯಿಂದ ಹೊಡೆದು ಬೆದರಿಕೆ ಹಾಕಿದ್ದಾನೆ. ಹಿರಿಯ ಪುತ್ರ ಚೇತನ್‌ ಕುಮಾರ್ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆಕೋಣೆಯಿಂದ ಅಮ್ಮ ರೋಹಿಣಿ ಅಳುವ ಶಬ್ದ ಕೇಳಿಬರುತ್ತಿತ್ತು.ತಕ್ಷಣ ಅಡುಗೆ … Read more

ಕಾಂಗ್ರೆಸ್ ನ ಮೊದಲ 125 ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಪಡೆದ ತಂದೆ- ಮಕ್ಕಳು ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು;ಕಾಂಗ್ರೆಸ್‌ ಪಕ್ಷದ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ನಾಲ್ಕು ತಂದೆ-ಮಕ್ಕಳ ಜೋಡಿಗಳಿಗೆ ಟಿಕೆಟ್‌ ಘೋಷಿಸಲಾಗಿದೆ. 124 ಕ್ಷೇತ್ರಗಳ ಪೈಕಿ ಒಟ್ಟು ಎಂಟು ಕ್ಷೇತ್ರಗಳಲ್ಲಿ ತಂದೆ-ಮಕ್ಕಳು ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಬಿಟಿಎಂ ಬಡಾವಣೆ ಕ್ಷೇತ್ರದಿಂದ ರಾಮಲಿಂಗಾರೆಡ್ಡಿ ಹಾಗೂ ಜಯನಗರ ಕ್ಷೇತ್ರದಿಂದ ಪುತ್ರಿ ಸೌಮ್ಯಾರೆಡ್ಡಿ ಅವರಿಗೆ ಮತ್ತೊಮ್ಮೆ ಟಿಕೆಟ್‌ ಘೋಷಿಸಲಾಗಿದೆ. ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಪುತ್ರ ಪ್ರಿಯಕೃಷ್ಣ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರದಿಂದ ಪುತ್ರ … Read more