ಮಂಗಳೂರು; ಬ್ಯಾನರ್ ತೆರವು ವೇಳೆ ನಿಂದನೆ ಆರೋಪ, ದೂರು ದಾಖಲು

ಮಂಗಳೂರು;ಬ್ಯಾನರ್ ತೆರವುಗೊಳಿಸುತ್ತಿದ್ದಾಗ ಪಾಲಿಕೆ ಅಧಿಕಾರಿಗಳಿಗೆ ಯುವಕರ ತಂಡವೊಂದು ನಿಂದಿಸಿದ ಆರೋಪ ಕೇಳಿ ಬಂದಿದ್ದು ಈ ಕುರಿತು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಪಾಲಿಕೆ ಕಂದಾಯ ನಿರೀಕ್ಷಕ ರವೀಂದ್ರ ಎಂಬವರು ಜಿಲ್ಲಾಧಿಕಾರಿಯ ಸೂಚನೆಯಂತೆ ಮಾ.24ರಂದು ರಾತ್ರಿ ವೇಳೆ ಅತ್ತಾವರ ಚಕ್ರಪಾಣಿ ದೇವಸ್ಥಾನದ ಹತ್ತಿರವಿರುವ ಅನಧಿಕೃತ ಬ್ಯಾನರ್ ತೆರವುಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ 4 ಮಂದಿಯ ತಂಡ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರವೀಂದ್ರ ಅವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪಾಂಡೇಶ್ವರ ಪೊಲೀಸರು … Read more

BIG NEWS ದಾವಣಗೆರೆಯಲ್ಲಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ; ಪ್ರಧಾನಿ ವಾಹನದ ಬಳಿ ಓಡಿ ಹೋದ ಯುವಕ; ವಿಡಿಯೊ ವೈರಲ್…

ದಾವಣಗೆರೆ;ಪ್ರಧಾನಿ ಮೋದಿ ರೋಡ್ ಶೋ ವೇಳೆ ಯುವಕನೋರ್ವ ಭದ್ರತೆ ಮೀರಿ ಪ್ರಧಾನಿ ವಾಹನದ ಬಳಿ ಓಡಿರುವ ಘಟನೆ ನಡೆದಿದೆ. ಪ್ರಧಾನಿ ವಾಹನದ ಕಡೆ ಓಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.ವ್ಯಕ್ತಿ ಓಡಿಕೊಂಡು ಬರುವಾಗ ಪೊಲೀಸರು ಆತನಿಗೆ ತಡೆದಿದ್ದಾರೆ. ಇದೀಗ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದೊಂದು ಗಂಭೀರವಾದ ಭದ್ರತಾ ಲೋಪ ಎಂದು ಹೇಳಲಾಗಿದೆ.ಪ್ರಧಾನಿಯವರ ರೋಡ್ ಶೋ ಹಿನ್ನೆಲೆ ರಸ್ತೆಯ ಎರಡೂ ಬದಿಗಳಲ್ಲಿ … Read more

ಪಡುಬಿದ್ರಿ; ಬೈಕ್ ಗೆ ಟ್ಯಾಂಕರ್ ಢಿಕ್ಕಿ, ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಪಡುಬಿದ್ರಿ:ಬೈಕ್ ಗೆ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ‌ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ನಡೆದಿದೆ. ಬೈಕ್ ಗೆ ಹಿಂದಿನಿಂದ ಬಂದು ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮೃತರ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕರು ಹಾಗೂ ಪಡುಬಿದ್ರಿ ಠಾಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ … Read more

ಒಂದೂವರೆ ವರ್ಷದಿಂದ ಮೂತ್ರ ವಿಸರ್ಜಿಸದ ಮಹಿಳೆ; ಏನಿದು ಅಪರೂಪದ ಖಾಯಿಲೆ?

ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸದೆ ಮಹಿಳೆಯೋರ್ವರು ವಿಚಿತ್ರ ಖಾಯಿಲೆಯಿಂದ ಬಳಲಿದ ಬಗ್ಗೆ ವರದಿಯಾಗಿದೆ. ಯುನೈಟೆಡ್​ ಕಿಂಗ್​​ಡಮ್​​ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಲ್ಲ, ಆದರೂ ಬದುಕಿದ್ದಾರೆ ಎನ್ನುವ ಅಚ್ಚರಿ ಸುದ್ದಿ ವರದಿಯಾಗಿದೆ. ಆಡಮ್ಸ್ ನೀರಿನ‌ ಪದಾರ್ಥ ಕುಡಿದರೂ ಮೂತ್ರ ಹೊರಹೋಗುತ್ತಿರಲಿಲ್ಲ.ಮೂತ್ರಕ್ಕೆ ಹೋದರೂ, ಮೂತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ. ‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಇದಾಗಿದ್ದು, ಈ … Read more

ಉಳ್ಳಾಲ; ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಳ್ಳಾಲ:ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕುಂಪಲ ಮೂರು ಕಟ್ಟೆ ನಿವಾಸಿ ಅಕ್ಷಯ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಕ್ಷಯ್‌, ತಾಯಿ ಬೀಡಿ ತೆಗೆದುಕೊಂಡು ತೆರಳಿದ್ದ ವೇಳೆ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅಕ್ಷಯ್ ತೊಕ್ಕೊಟ್ಟಿನ ಮೊಬೈಲ್ ಸೆಂಟರ್ ವೊಂದರಲ್ಲಿ ಕೆಲಸಕ್ಕಿದ್ದು ಕಳೆದ 20 ದಿನಗಳಿಂದ ಕೆಲಸಕ್ಕೆ ಹೋಗಿಲ್ಲ ಎನ್ನಲಾಗಿದೆ.ಖಿನ್ನತೆಯಿಂದ ಅಕ್ಷಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಪಲ ಈ … Read more

BREAKING ಸುಳ್ಯ; ಬರೆ ಜರಿದು ಬಿದ್ದು ಮಣ್ಣಿನಡಿ ಸಿಲುಕಿ ಮೂವರು ಮೃತ್ಯು

ಸುಳ್ಯ:ಬರೆ ಜರಿದು ಬಿದ್ದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇದೀಗ ಮೂವರ ಮೃತದೇಹ ಹೊರ ತೆಗೆಯಲಾಗಿದೆ. ಸುಳ್ಯದ ಗುರುಂಪು ಬಳಿ ಗಾಂಧಿನಗರ-ಆಲೆಟ್ಟಿ ರಸ್ತೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಬರೆ ಜರಿದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಈ ವೇಳೆ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಜೆಸಿಬಿ ಮುಖಾಂತರ ಮಣ್ಣು ತೆಗೆಯುವ ಕೆಲಸ ನಡೆದಿದ್ದು, ಮೂವರ ಮೃತದೇಹ ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ತಕ್ಷಣಾ ಕಾರ್ಯ ನಡೆದಿದೆ. ಸ್ಥಳಕ್ಕೆ ಸಚಿವ ಅಂಗಾರ ಅವರು ಭೇಟಿ … Read more

ಲೋಕಸಭೆ ಸದಸ್ಯತ್ವದಿಂದ ಅನರ್ಹರಾದ ಬಳಿಕ ರಾಹುಲ್ ಗಾಂಧಿ ಮೊದಲ ಸುದ್ದಿಗೋಷ್ಠಿ;ನಾನು ಮಾತನಾಡಲು ಅವಕಾಶ ಕೇಳಿದಾಗ ಅವರು‌ ಮನವಿ ನೋಡಿ ನಕ್ಕರು, ಕಾಂಗ್ರೆಸ್ ನಾಯಕ ಏನೆಲ್ಲಾ ಹೇಳಿದ್ರು?

ನವದೆಹಲಿ;ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಲೋಕಸಭೆಯಿಂದ ಅನರ್ಹರಾದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ದೆಹಲಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ರಾಹುಲ್, ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ಆಗುತ್ತಿದೆ ಎಂದು ಹೇಳಿದ್ದಾರೆ.ಪ್ರಧಾನಮಂತ್ರಿಯವರು ನನ್ನ ಮುಂದಿನ ಭಾಷಣದ ಬಗ್ಗೆ ಭಯಪಡುತ್ತಿದ್ದಾರೆ.ಪ್ರಧಾನಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ಕಂಡಿದ್ದೇನೆ.ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡಲು ಅವರು ಬಯಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಅದಾನಿಯವರ ಶೆಲ್ ಕಂಪೆನಿಗಳಿವೆ. ಅದರಲ್ಲಿ 20 ಸಾವಿರ … Read more

ರಾಜ್ಯದ ಇಬ್ಬರು ಬಿಜೆಪಿ ಶಾಸಕರು ಜೈಲು ಶಿಕ್ಷೆಗೆ ಗುರಿಯಾದರೂ ಅವರನ್ನು ಈವರೆಗೆ ಅನರ್ಹ ಮಾಡಲಾಗಿಲ್ಲ!; ಯಾರು ಆ ಶಾಸಕರು ಗೊತ್ತಾ?

ಬೆಂಗಳೂರು;ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ಜೈಲು ಶಿಕ್ಷೆ ಘೋಷಿಸಿದ ಮರುದಿನವೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.ಈ ಬಗ್ಗೆ ಕಾಂಗ್ರೆಸ್ ದ್ವೇಷದ ರಾಜಕೀಯ ಎಂದು ಹೇಳಿದ್ದು, ಕ್ರಮವನ್ನು ಖಂಡಿಸಿದೆ. ರಾಹುಲ್ ಗಾಂಧಿಯ ಅನರ್ಹತೆ ಆದೇಶವನ್ನು ವಿಪಕ್ಷಗಳು ಖಂಡಿಸಿದೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕರ್ನಾಟಕದಲ್ಲಿ ವಂಚಕ ಬಿಜೆಪಿಯ ಇಬ್ಬರು ಶಾಸಕರಿಗೆ ಜೈಲು ಶಿಕ್ಷೆಯಾಗಿತ್ತು, ಆದರೂ ಸ್ಪೀಕರ್ ಅವರನ್ನು ಅನರ್ಹಗೊಳಿಸಿರಲಿಲ್ಲ.ಬಿಜೆಪಿಯವರು ನಿಯಮ, ಕಾನೂನುಗಳಿಗೆ ಅತೀತರೇ? ಇಷ್ಟು ದಿನಗಳವೆರೆಗೆ ಇವರನ್ನು ಅನರ್ಹಗೊಳಿಸದಿದ್ದಿದ್ದು ಏಕೆ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ … Read more

ರಂಝಾನ್ ಹಿನ್ನೆಲೆ;ಕೈದಿಗಳಿಗೆ ಕ್ಷಮಾದಾನ ನೀಡಿದ ಯುಎಇ ಅಧ್ಯಕ್ಷ;ಈ ಬಾರಿ ಎಷ್ಟು ಸಾವಿರ ಕೈದಿಗಳು ಬಿಡುಗಡೆಯಾಗಿದ್ದಾರೆ ಗೊತ್ತಾ?

ಯುಎಇ; ರಂಜಾನ್ ಹಿನ್ನೆಲೆ ವಿಶ್ವಾದ್ಯಂತ 1.9 ಶತಕೋಟಿ ಮುಸ್ಲಿಮರು ಪವಿತ್ರ ತಿಂಗಳ ಆಚರಣೆ ಮಾಡುತ್ತಿದ್ದಾರೆ. ರಂಝಾನ್ ಹಿನ್ನೆಲೆ ಯುಎಇ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಜೈಲಿನಿಂದ 1,025 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಕ್ಷಮಾಪನೆ ಪಡೆದ ಕೈದಿಗಳಿಗೆ ವಿವಿಧ ಅಪರಾಧಗಳಿಗಾಗಿ ಜೈಲು ಶಿಕ್ಷೆ ವಿಧಿಸಲಾಗಿತ್ತು.ಯುಎಇಯ ಪ್ರತಿಯೊಂದು ಎಮಿರೇಟ್‌ಗಳ ಆಡಳಿತಗಾರರು ಮಹತ್ವದ ಇಸ್ಲಾಮಿಕ್ ಆಚರಣೆ ರಂಝಾನ್ ವೇಳೆ ಕೈದಿಗಳಿಗೆ ಕ್ಷಮೆ ನೀಡುವುದು ಸಾಮಾನ್ಯವಾಗಿದೆ. ಅಧ್ಯಕ್ಷರ ಕ್ಷಮಾದಾನವು ಬಿಡುಗಡೆಯಾದ ಕೈದಿಗಳಿಗೆ ತಮ್ಮ ಭವಿಷ್ಯದ … Read more

BIG NEWS ಮಾನಸಿಕ ಅಸ್ವಸ್ಥನ ಕೈಗೆ ಸಿಕ್ಕ ಚೂರಿ, ಬೀದಿಯಲ್ಲಿ ತೆರಳುತ್ತಿದ್ದ ನಾಲ್ವರನ್ನು ಇರಿದು ಕೊಲೆ; ಬೆಚ್ಚಿಬೀಳಿಸುವ ಘಟನೆ

ಮುಂಬೈ:ದಕ್ಷಿಣ ಮುಂಬೈನ ವಸತಿ ಕಟ್ಟಡವೊಂದರಲ್ಲಿ 54 ವರ್ಷದ ಮಾನಸಿಕ ಅಸ್ವಸ್ಥನೋರ್ವ ಶುಕ್ರವಾರ ನಾಲ್ವರು ನೆರೆಹೊರೆಯವರನ್ನು ಇರಿದು ಕೊಂದಿದ್ದಾರೆ ಮತ್ತು ಇನ್ನೋರ್ವನಿಗೆ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಂಟ್ ರಸ್ತೆಯಲ್ಲಿರುವ ಪಾರ್ವತಿ ಮ್ಯಾನ್ಷನ್‌ನಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯಕ್ತಿಯ ಪತ್ನಿ ಮತ್ತು ಮಕ್ಕಳನ್ನು ಎರಡು ತಿಂಗಳ ಹಿಂದೆ ಅವರನ್ನು ತೊರೆದಿದ್ದರು. ಅಂದಿನಿಂದ ಮಾನಸಿಕವಾಗಿ ನೊಂದಿದ್ದ ಈತ ಶುಕ್ರವಾರ ಅಕ್ಕಪಕ್ಕದವರನ್ನು ಕಂಡು ಮನೆಗೆ ತೆರಳಿ … Read more