BIG BREAKING NEWS ; ಮುಸ್ಲಿಮರಿಗಿದ್ದ 2B ಮೀಸಲಾತಿಯನ್ನು ರದ್ದುಗೊಳಿಸಿದ ರಾಜ್ಯ ಸರಕಾರ

ಬೆಂಗಳೂರು; ಈವರೆಗೆ ಹಿಂದುಳಿದ ವರ್ಗಗಳ ಪ್ರವರ್ಗ 2B ಅಡಿಯಲ್ಲಿ ಮುಸ್ಲಿಮರಿಗೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ‌. ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2b ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲ.ಅವರಿಗೆ ಅನ್ಯಾಯವಾಗದಂತೆ Ews ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ 2C ಅಡಿ ಒಕ್ಕಲಿಗರಿಗೆ ಶೇಕಡಾ 6ರಷ್ಟು ಮೀಸಲಾತಿ ಹಾಗೂ 2D ಅಡಿ ಲಿಂಗಾಯತರಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡಲಾಗುವುದು … Read more

ಮಂಗಳೂರು; ಸ್ಕೂಟರ್ ಗೆ ಬಸ್ ಢಿಕ್ಕಿ, ಬಾಲಕ ಮೃತ್ಯು, ತಾಯಿ ಸ್ಥಿತಿ ಗಂಭೀರ

ಮಂಗಳೂರು:ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ಐದು ವರ್ಷದ ಬಾಲಕ ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಹಾರ್ದಿಕ್‌ ಮೃತ ಬಾಲಕ. ಬಾಲಕನ ತಾಯಿ ಸ್ವಾತಿ ಗಂಭೀರ ಗಾಯಗೊಂಡಿದ್ದಾರೆ. ಸ್ವಾತಿ ತಮ್ಮ ಮಗ ಹಾರ್ದಿಕ್‌ನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೆಂದೂರ್‌ವೆಲ್ ಬಳಿ ಖಾಸಗಿ ಬಸ್‌ವೊಂದು ಓವರ್‌ಟೇಕ್ ಮಾಡುವ ಭರದಲ್ಲಿ ಇನ್ನೊಂದು ಬಸ್‌ಗೆ ಢಿಕ್ಕಿಯಾಗಿದೆ.ಈ ವೇಳೆ ಬಸ್‌ ದ್ವಿಚಕ್ರ ವಾಹನಕ್ಕೆ ತಾಗಿ ತಾಯಿ ಮತ್ತು ಮಗ ಕೆಳಕ್ಕೆ ಬಿದ್ದಿದ್ದಾರೆ. ಬಾಲಕ ಬಸ್‌ನ ಚಕ್ರದಡಿಗೆ … Read more

ಶಾಲೆಯಲ್ಲಿ 7 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕ, ಗಂಭೀರವಾಗಿದ್ದ ಬಾಲಕ ಆಸ್ಪತ್ರೆಗೆ ತಲುಪುವ ವೇಳೆ ಸಾವು; ಆಘಾತಕ್ಕೊಳಗಾದ ಕುಟುಂಬ

ಬಿಹಾರ;ಶಾಲಾ ಶಿಕ್ಷಕನ ಹಲ್ಲೆಯಿಂದಾಗಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಆರೋಪ ಬಿಹಾರದ ಸಹರ್ಸಾ ಜಿಲ್ಲೆಯಿಂದ ಕೇಳಿ ಬಂದಿದೆ. ಮೃತ ಬಾಲಕನನ್ನು ಆದಿತ್ಯ ಕುಮಾರ್(7) ಎಂದು ಗುರುತಿಸಲಾಗಿದೆ. ಸಹರ್ಸಾ ಜಿಲ್ಲೆಯ ಹಳ್ಳಿಯೊಂದರ ಖಾಸಗಿಯಲ್ಲಿ ಎಲ್‌.ಕೆ.ಜಿ ವಿದ್ಯಾರ್ಥಿಯಾಗಿದ್ದ ಆದಿತ್ಯ, ಕಳೆದ 10 ದಿನಗಳಿಂದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದನು. ಮಾರ್ಚ್ 14ರಂದು ನಮ್ಮ ಮಗುವನ್ನು ಸಹರ್ಸಾ ಜಿಲ್ಲೆಯ ಸ್ಕೂಲ್ ಕಮ್ ಹಾಸ್ಟೆಲ್‌ಗೆ ಕಳುಹಿಸಿದ್ದೇವೆ. ಶುಕ್ರವಾರ ಶಾಲೆಯ ಆಡಳಿತದಿಂದ ನಮಗೆ ಫೋನ್ ಕರೆ ಬಂದಿತು. ಆದಿತ್ಯ ಪ್ರಜ್ಞಾಹೀನರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ನಾವು … Read more

ಬಂಟ್ವಾಳ; ಮಸೀದಿಯಲ್ಲಿ 4 ಲಕ್ಷ ರೂ.ಗೆ ಏಲಂ ಆದ ಒಂದು ಹಲಸಿನ ಹಣ್ಣು!; ಅಚ್ಚರಿ ಸುದ್ದಿ

ಬಂಟ್ವಾಳ;ಮಸೀದಿಯಿಂದರಲ್ಲಿ ನಡೆದ ಏಲಂನಲ್ಲಿ ಬರೊಬ್ಬರಿ 4 ಲಕ್ಷ 33 ಸಾವಿರ ರೂ.ಗೆ ಒಂದು ಹಲಸಿನ ಕಾಯಿ ಏಲಂ ಆಗಿದ್ದು, ಸುದ್ದಿ ಇದೀಗ ಕರಾವಳಿಯಲ್ಲಿ ಭಾರೀ ವೈರಲ್ ಆಗಿದೆ. ಮೂಲರಪಟ್ನ ಎಂಬಲ್ಲಿ ನವೀಕೃತ ಮಸೀದಿ ಉದ್ಘಾಟಣೆ ಕಾರ್ಯಕ್ರಮದಲ್ಲಿ ಖ್ಯಾತ ಇಸ್ಲಾಮಿಕ್ ವಾಗ್ಮಿ, ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಕೇರಳ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಒಂದು ಹಲಸಿನ ಕಾಯಿ‌ ಏಲಂಗೆ ತರಲಾಗಿತ್ತು.ಹಲಸಿನ‌ ಕಾಯಿ ಸಿರಾಜುದ್ದೀನ್ ಖಾಸಿಮಿ ಏಲಂ ಕರೆದಾಗ ಲತೀಫ್ ಮತ್ತು ಅಝೀಝ್ ಅವರ ನಡುವೆ ಭಾರೀ ಪೈಪೋಟಿ ನಡೆದಿದೆ. … Read more

ರಾಹುಲ್ ಗೆ ಜೈಲು ಶಿಕ್ಷೆ ತೀರ್ಪು ಬೆನ್ನಲ್ಲೇ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಮಾಜಿ ಸಚಿವೆ; ಏನಿದು ಮೋದಿ ಹೇಳಿಕೆ

ನವದೆಹಲಿ;ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಮೋದಿ ಉಪನಾಮ ಮಾನನಷ್ಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಇದೀಗ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಮೋದಿ ನನ್ನನ್ನು ಶೂರ್ಪನಖಿ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ. … Read more

BIG BREAKING; ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವದಿಂದ ಅನರ್ಹ

ನವದೆಹಲಿ;ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಮೋದಿ ಉಪನಾಮ’ ಹೇಳಿಕೆಗಾಗಿ ಮಾರ್ಚ್ 23 ರಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ಶಿಕ್ಷೆಗೊಳಗಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಗಾಂಧಿಯವರಿಗೆ “ಮೋದಿ ಉಪನಾಮ” ಟೀಕೆಗಳಿಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುರುವಾರ ದೋಷಿ ಎಂದು ಸಾಬೀತಾಯಿತು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು ಮತ್ತು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. … Read more

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ಬೆಂಗಳೂರು;ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ವಿಳಂಬ ಖಂಡಿಸಿ ರಾಜಭವನ ಚಲೋ ನಡೆಸಲು ಮುಂದಾದ ಸಿದ್ದರಾಮಯ್ಯ, ಡಿಕೆಶಿ ಸೇರಿ ಕೈ ನಾಯಕರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು. ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ಕಾಂಗ್ರೆಸ್‌ ನಾಯಕರು ತೆರಳಲು ಮುಂದಾದಾಗ ಅರ್ಧದಲ್ಲೇ ಪೊಲೀಸರು ನಾಯಕರನ್ನು ವಶಕ್ಕೆ ಪಡೆದುಕೊಂಡರು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಶೆಡ್ಯೂಲ್ 9ಕ್ಕೆ ಸೇರಿಸುವಂತೆ … Read more

ಸುಳ್ಯದ ಯುವಕ ಚಿಕ್ಕಮಗಳೂರಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಸುಳ್ಯ;ಸುಳ್ಯದ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲ್ಮಕಾರು ಗ್ರಾಮದ ಮೆಂಟೆಕೆಜೆ ನಿವಾಸಿ ತೇಜುಕುಮಾರ್ ಪುತ್ರ ಲೋಕೇಶ್(25) ಆತ್ಮಹತ್ಯೆ ಮಾಡಿಕೊಂಡವರು. ಲೋಕೇಶ್ ಚಿಕ್ಕಮಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು. ರೂಂ ನಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಲೋಕೇಶ್ ತಂದೆ – ತಾಯಿ ಸಹೋದರನಿಗೆ ಅಗಲಿದ್ದಾರೆ.ಘಟನೆಯಿಂದ ಲೋಕೇಶ್ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

4.5 ಲಕ್ಷಕ್ಕೆ ನವಜಾತ ಶಿಶು ಮಾರಾಟ; ಮಗುವಿನ ತಾಯಿಗೆ 1 ಲಕ್ಷ ಕೊಟ್ಟು ಉಳಿದ ಹಣವನ್ನು ಹಂಚಿಕೊಂಡ ದಲ್ಲಾಳಿಗಳು!

4.5 ಲಕ್ಷಕ್ಕೆ ನವಜಾತ ಶಿಶು ಮಾರಾಟ; ಮಗುವಿನ ತಾಯಿಗೆ 1 ಲಕ್ಷ ಕೊಟ್ಟು ಉಳಿದ ಹಣವನ್ನು ಹಂಚಿಕೊಂಡ ದಲ್ಲಾಳಿಗಳು! ಜಾರ್ಖಂಡ್‍;ಗಂಡು ಮಗುವನ್ನು ತಾಯಿ 4.5 ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ಛತ್ರಾ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನವಜಾತ ಶಿಶುವಿನ ತಾಯಿ ಆಶಾದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಕ್ಕಳ ಕಲ್ಯಾಣ ಇಲಾಖೆಯ ಉಪ ಆಯುಕ್ತ ಅಬು ಇಮ್ರಾನ್ ಮಾಹಿತಿ ನೀಡಿದ್ದು,ಮಗುವಿನ ಮಾರಾಟದ ಬಗ್ಗೆ … Read more

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು ತಿರುವನಂತಪುರಂ:ಲೇಡಿಸ್‌ ಹಾಸ್ಟೆಲ್‌ ಬಳಿ ಆಟೋದಲ್ಲಿ ಬಂದು ಖಾಸಗಿ ಅಂಗ ಪ್ರದರ್ಶನ ಮಾಡಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ. ಮೂನ್ನ ಮೂಡು ವಟಿಯೂರ್ಕಾವಿನ ವಯಲಿಕಾಡದ ಚಂದ್ರಿಕಾ ಭವನದ ನಿವಾಸಿ ರಾತ್ರಿ 11ರ ಸುಮಾರಿಗೆ ಕಾಟನ್‌ ಹಿಲ್‌ ಸ್ಕೂಲ್‌ ಬಳಿಯಿರುವ ಲೇಡಿಸ್‌ ಹಾಸ್ಟೆಲ್‌ ಮುಂದೆ ಆಟೋ ನಿಲ್ಲಿಸಿ ಚಾಲಕ ಖಾಸಗಿ ಅಂಗ ಪ್ರದರ್ಶನ ಮಾಡುವ ಮೂಲಕ … Read more