ಉಳ್ಳಾಲ; ಯುಟಿ ಖಾದರ್ ಭಾವಚಿತ್ರವಿರುವ ಚುನಾವಣಾ ಭರವಸೆಯ ಬ್ಯಾನರ್ ಗೆ ಪೋಸ್ಟರ್ ಅಂಟಿಸಿದ ಸ್ಥಳೀಯರು; ಪೋಸ್ಟರ್ ನಲ್ಲಿ ಏನಿದೆ?

ಉಳ್ಳಾಲ;ಕಾಂಗ್ರೆಸ್ ನ ಚುನಾವಣಾ ಪ್ರಚಾರದ ಬ್ಯಾನರ್ ಗೆ ಸ್ಥಳೀಯರು ಸ್ಟಿಕ್ಕರ್ ಅಂಟಿಸಿ ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ. ಸೋಮೇಶ್ವರ ಕೊಲ್ಯ ಸಮೀಪ ಹಾಕಲಾದ ಬ್ಯಾನರಿಗೆ ಗ್ರಾಮಸ್ಥರು ಸ್ಟಿಕ್ಕರ್ ಅಂಟಿಸಿ 15 ವರ್ಷಗಳಿಂದ ಹದಗೆಟ್ಟಿರುವ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ 15 ವರ್ಷಗಳಿಂದ ಇಲ್ಲಿಯ ರಸ್ತೆ ಕಾಮಗಾರಿ ನಡೆಯದೆ ಜನರು ಕೊಳಚೆಯಲ್ಲಿಯೇ ಬದುಕಬೇಕಾಗಿದೆ.ಯಾವ ಪಕ್ಷಕ್ಕೆ ಮತ ಹಾಕಬೇಕು? ಅನ್ನುವ ಸ್ಟಿಕ್ಕರ್ ಅಂಟಿಸಲಾಗಿದೆ. ಉಳ್ಳಾಲ ಶಾಸಕ ಯು.ಟಿ ಖಾದರ್ ಭಾವಚಿತ್ರ ಹೊಂದಿರುವ ಬ್ಯಾನರ್ ಹಾಗೂ ಕಾಂಗ್ರೆಸ್ ಚುನಾವಣೆ ಭರವಸೆಗಳಿರುವ ಬ್ಯಾನರನ್ನು ಕೊಲ್ಯ … Read more

ಇಬ್ಬರು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡ ಜನಾರ್ದನ ರೆಡ್ಡಿ

ಕೊಪ್ಪಳ;ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಕೊಪ್ಪಳದಲ್ಲಿ ಇಬ್ಬರು ಬಡ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ತಂದೆ-ತಾಯಿ ಇಲ್ಲದೆ ಅನಾಥವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಸ್ವರೂಪ್, ವೇಣು ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ಧನ ರೆಡ್ಡಿ ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮಕ್ಕಳನ್ನು ದತ್ತು ತೆಗೆದುಕೊಂಡ ಬಗ್ಗೆ ಜನಾರ್ದನ ರೆಡ್ಡಿ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.ಇದೇ ವೇಳೆ ಅವರು ಐದು ಸಾವಿರ … Read more

ಕೊಡಗು; 7ನೇ ತರಗತಿ ವಿದ್ಯಾರ್ಥಿನಿ‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೊಡಗು; 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರವಳ್ಳಿ ಗ್ರಾಮದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ (13) ಆತ್ಮಹತ್ಯೆ ಮಾಡಿಕೊಂಡವರು.ಜಿತೇಂದ್ರ ಅಕ್ಷತ ದಂಪತಿಯ ಪುತ್ರಿ ಅಕ್ಷತಾ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ರಜಾ ದಿನವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಒಬ್ಬಳನ್ನೇ ಓದಿಕೊಳ್ಳುವಂತೆ ಬಿಟ್ಟು ಪಾಲಕರು ಹೊರಗೆ ಹೋಗಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. … Read more

ಬಂಟ್ವಾಳ; ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ, ಓರ್ವ ಗಂಭೀರ

ಬಂಟ್ವಾಳ;ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ. ಹೆಜ್ಜೇನು ದಾಳಿಯಿಂದ ಕಲ್ಪನೆ ನಿವಾಸಿ ಪೂವಪ್ಪ (61) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಹೇಶ್ ಮತ್ತು ಗೋಪಾಲ್ ಎಂಬವರು ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮನೆಯಿಂದ ಕಲ್ಪನೆ ಬಸ್ ನಿಲ್ದಾಣಕ್ಕೆ ಬರುವ ವೇಳೆ ದಿಡೀರ್ ಬಂದ ನೊಣಗಳು ಅವರ ಮೇಲೆ ದಾಳಿ ಮಾಡಿವೆ. ಈ ವೇಳೆ ಅಲ್ಲಿದ್ದ ರಿಕ್ಷಾ ಚಾಲಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಿವಮೊಗ್ಗ ಡಿಸಿ ಕಚೇರಿ ಬಳಿ ಅಝಾನ್ ಕೊಟ್ಟ ಆರೋಪ, ದೂರು ದಾಖಲು

ಶಿವಮೊಗ್ಗ:ಅಝಾನ್ ವಿರುದ್ಧ ಶಾಸಕ ಈಶ್ವರಪ್ಪ ಕೊಟ್ಟ ಹೇಳಿಕೆಯನ್ನು ಖಂಡಿಸಿ ನಡೆದ ಪ್ರತಿಭಟನೆ ವೇಳೆ ಯುವಕನೋರ್ವ ಶಿವಮೊಗ್ಗ ಡಿಸಿ ಕಚೇರಿ ಬಳಿ ಅಝಾನ್ ಕೊಟ್ಟು ಪ್ರತಿಭಟಿಸಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಆ ಯುವಕನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಯುವಕ ಅಝಾನ್ ಕೊಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಆಕ್ಷೇಪ ಕೂಡ ಕೇಳಿ ಬಂದಿತ್ತು. ಈ ಕುರಿತು ಯುವಕನಿಗೆ ಕರೆದು ಎಚ್ಚರಿಕೆ ನೀಡಿರುವುದಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಇದಲ್ಲದೆ ಈ … Read more

ಬೆಂಗಳೂರು:ನಿಷೇಧಿತ PFI ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಕಾರ್ಯಕರ್ತರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು:ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಮಂದಿ ಕಾರ್ಯಕರ್ತರ ವಿರುದ್ಧ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಕಾಡುಗೊಂಡನಹಳ್ಳಿ‌ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಸುಮಾರು 10,196 ಪುಟಗಳ ಚಾರ್ಜ್​ಶೀಟ್ ನ್ನು ಕಾಡುಗೊಂಡನಹಳ್ಳಿ‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬಂಧಿತ 9 ಕಾರ್ಯಕರ್ತರ ಮೇಲೆ ಯುಎಪಿಎ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಿಎಫ್ ಐ ನಿಷೇಧದ ವೇಳೆ ರಾಜ್ಯಾದ್ಯಂತ ಪಿಎಫ್ ಐ ಸಕ್ರಿಯ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅದರಲ್ಲಿ ಕೆಲವರ … Read more

ಕರ್ನಾಟಕದಲ್ಲಿ ಬಿಜೆಪಿ ಮತಗಳ ಮೇಲೆ ಶಿವಸೇನೆ ಕಣ್ಣು; ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ, ಉದ್ದವ್ ಸರಕಾರ ಪತನಗೊಳಿಸಿದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಶಿವಸೇನೆ?

ಮಹಾರಾಷ್ಟ್ರದಲ್ಲಿ ಪ್ರಬಲವಾಗಿರುವ ಶಿವಸೇನೆ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ. ಶಿವಸೇನೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವ ಸೇನೆಯಿಂದ 150ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಮಹಾರಾಷ್ಟ್ರದಲ್ಲಿ ಮಾಡಿದ ರಾಜಕೀಯ ಆಟಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಶಿವಸೇನೆ ಸ್ಪರ್ಧೆ ಬಗ್ಗೆ ರಾಜ್ಯಾಧ್ಯಕ್ಷ ಕುಮಾರ್ ಹಕಾರಿ ಮಾಹಿತಿ ನೀಡಿದ್ದು,ಪಕ್ಷದಲ್ಲಿನ ಕೆಲ ಗೊಂದಲಗಳು ಪರಿಹಾರವಾದ … Read more

BREAKING ವಿದ್ಯುತ್ ಶಾಕ್ ಹೊಡೆದು ತಾಯಿ & ಇಬ್ಬರು ಮಕ್ಕಳು‌ ಮೃತ್ಯು

ಕಲಬುರಗಿ;ವಿದ್ಯುತ್ ಶಾಕ್ ಹೊಡೆದು ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಂಚೋಳಿ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಝರಣಮ್ಮ (45), ಮಕ್ಕಳಾದ ಸುರೇಶ್ (16) ಹಾಗೂ ಮಹೇಶ್ (18) ವಿದ್ಯುತ್ ಶಾಕ್ ನಿಂದ ಮೃತರು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟನದ ನಗರ ಗಲ್ಲಿಯಲ್ಲಿ ದುರ್ಘಟನೆ ನಡೆದಿದೆ‌.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ. ಚಾಲಿಂಗಾಲ್ ನ ಸಂಶುದ್ದೀನ್ ರವರ ಪುತ್ರಿ ಫಾತಿಮಾ (18)ಆತ್ಮಹತ್ಯೆ ಮಾಡಿಕೊಂಡವರು.ಇವರು ನರ್ಸಿಂಗ್ ಕಲಿಯುತ್ತಿದ್ದರು ಎನ್ನಲಾಗಿದೆ. ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎ‌ನ್ನಲಾಗಿದೆ.ಮನೆಯವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದರಸಾ ಬ್ಯಾನ್ ಕುರಿತ ಯತ್ನಾಳ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಹಾಸನ:ಮುಂದಿನ‌ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ಬಂದ್ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಳಗಾವಿಯಲ್ಲಿ ಹೇಳಿಕೆ ಕೊಟ್ಟಿದ್ದರು.ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಸಕಲೇಶಪುರ ತಾಲೂಕಿನ ಶುಕ್ರವಾರಸಂತೆಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ತಾನೇ ನಿಷೇಧಿಸುವುದು ಎಂದು ತಿರುಗೇಟು ನೀಡಿದ್ದಾರೆ. ಈ ಚುನಾವಣೆ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಬಿಜೆಪಿಯವರು ಹೋಗುತ್ತಿರುವ ಮಾರ್ಗ ನೋಡಿದರೆ ಅದೇ ರೀತಿ ಅನಿಸುತ್ತಿದೆ‌ ಏನಾದರೂ ಅಲ್ಪಸ್ವಲ್ಪ … Read more