ಮತ್ತೆ ತಾರಕಕ್ಕೇರಿದ ಇಬ್ಬರು ಮಹಿಳಾ ಅಧಿಕಾರಿಗಳ ಜಟಾಪಟಿ; ರೋಹಿಣಿ ಸಿಂಧೂರಿ& ಡಿ.ರೂಪ ನಡುವೆ ಆರೋಪ- ಪ್ರತ್ಯಾರೋಪ

ಬೆಂಗಳೂರು:ಇಬ್ಬರು ಉನ್ನತ ಅಧಿಕಾರಿಗಳ ಹೇಳಿಕೆ, ಪೋಸ್ಟ್ ಗಳು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಹಿಳಾ ಐಎಎಸ್ ರೋಹಿಣಿ ಸಿಂಧೂರಿ ಹಾಗೂ ಮಹಿಳಾ ಐಪಿಎಸ್ ಡಿ.ರೂಪಾ ನಡುವಿನ‌ ಜಟಾಪಟಿ ಮುಂದುವರಿದಿದೆ. ಡಿ.ರೂಪಾ ಬಿಡುಗಡೆ ಮಾಡಿರುವ ಖಾಸಗಿ ಪೋಟೋ ಮತ್ತು 19 ಅಂಶಗಳ ಬಗ್ಗೆ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು, ವೈಯಕ್ತಿಕ ನಿಂದನೆ ಹಾಗೂ ತೇಜೋವಧೆ ವಿರುದ್ಧ ಐಪಿಎಸ್ ಸೆಕ್ಷನ್ ಗಳಡಿ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಆಧಾರರಹಿತ … Read more

ಮದುವೆ ಮನೆಯಲ್ಲಿ ನೋಟುಗಳ ರಾಶಿ ಎಸೆದ ಯುವಕ; ನೋಟು ಸಂಗ್ರಹಿಸಲು ಮುಗಿಬಿದ್ದ ಜನ

ಮದುವೆ ಮನೆಯಲ್ಲಿ ಯುವಕನೋರ್ವ ಮನೆಯ ಮೇಲ್ಛಾವಣಿಯಿಂದ 500 ಮತ್ತು 100 ರೂ.ಗಳ ನೋಟುಗಳನ್ನು ಎಸೆದಿದ್ದು, ಅದನ್ನು ಸಂಗ್ರಹಿಸಲು ಜನರು ಮುಗಿಬಿದ್ದ ಘಟನೆ ಗುಜರಾತಿನ ಮೆಹ್ಸಾನಾದಲ್ಲಿ ನಡೆದಿದೆ. ನೋಟುಗಳನ್ನು ಸಂಗ್ರಹಿಸಲು ಜನರು ಮುಗಿಬಿದ್ದ ವಿಡಿಯೋಗಳು ವೈರಲ್ ಆಗುತ್ತಿದೆ. ಮಾಹಿತಿಯ ಪ್ರಕಾರ ಗುಜರಾತ್‌ನ ಮೆಹ್ಸಾನಾದಲ್ಲಿ ಮಾಜಿ ಸರಪಂಚ್ ತನ್ನ ಸೋದರಳಿಯನ ಮದುವೆಯ ದಿನ ನೋಟುಗಳನ್ನು ಮನೆಯ ಮೇಲಿಂದ ಕೆಳಗೆ ಸುರಿದ್ದಾನೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಪೋಸ್ಟ್ ಭಾರೀ ವೈರಲ್…

ಬೆಂಗಳೂರು:ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಡಿ.ರೂಪ ಅವರು ಸಮರ ಸಾರಿದ್ದಾರೆ. ಬೆಳಗ್ಗೆ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ಐಪಿಎಸ್ ಡಿ.ರೂಪ ಅವರು ಈಗ ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಡಿ. ರೂಪ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಚಿತ್ರಗಳನ್ನು ಫೋಸ್ಟ್ ಮಾಡಿದ್ದು, ಈ ರೀತಿಯ ಪೋಟೊಗಳು ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ … Read more

ವಿಟ್ಲ; ಸಂಘಟನೆಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಆರೋಪ, ಹಿಂದೂ ಸಂಘಟನೆಗಳಿಂದ ದೂರು

ವಿಟ್ಲ; ಅಡ್ಯನಡ್ಕ ಸಭಾಭವನವೊಂದರಲ್ಲಿ ಸಂಘಟನೆ ಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಹಿಂದೂ ಸಂಘಟನೆ ಆರೋಪಿಸಿ ಕೇಸ್ ದಾಖಲಿಸಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಮತ ಪ್ರವಚನ ಮಾಡಿದ್ದಾರೆಂದು ವಿದ್ಯಾರ್ಥಿಗಳನ್ನು ಹೊರಗೆ ಬನ್ನಿ ಎಂದು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.ಮತ ಪ್ರವಚನ ನಡೆಸಿದೆ ಎನ್ನಲಾದ ಸಂಘಟನೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಪರೀಕ್ಷೆಯನ್ನು ಹೇಗೆ ಎದುರಿಸುವುದು ಎಂದು ತರಬೇತಿಗಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು ಎನ್ನಲಾಗಿದೆ.ಇದಕ್ಕೆ ಸಂಘಪರಿವಾರ ವಿರೋಧಿಸಿದೆ.

ಕುಂದಾಪುರ; ಮಗುವಿಗೆ ಎದೆಹಾಲುಣಿಸುವಾಗ ಕುಸಿದು ಬಿದ್ದು ತಾಯಿ ಮೃತ್ಯು

ಕೋಟ;ಮಗುವಿಗೆ ಹಾಲುಣಿಸುವಾಗ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಣವತಿ(35) ಮೃತ ಮಹಿಳೆ. ಇವರು ಡಿ.23ರಂದು ಉಡುಪಿಯ ತಾಯಿ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಗಂಡು ಮಗುವಿನ ಜನ್ಮ ನೀಡಿದ್ದರು.21 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದರು. ನಿನ್ನೆ ಬೆಳಗ್ಗೆ ಮಗುವಿಗೆ ಎದೆಹಾಲು ಉಣಿಸುತ್ತಿದ್ದ ವೇಳೆ ಗುಣವತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ‌.

ಉಳ್ಳಾಲ; ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಉಳ್ಳಾಲ;ಪಿಯುಸಿ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ‌. ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯಾ ದಂಪತಿಯ ಹಿರಿಯ ಪುತ್ರಿ ಧನ್ಯಾ(17) ಮೃತ ವಿದ್ಯಾರ್ಥಿನಿ. ಧನ್ಯಾ ರಾಮಕೃಷ್ಣ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು. ಧನ್ಯಾ ತಾಯಿ ಉಪ್ಪಿನಕಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಫೆ.14ರಂದು ಮದ್ಯಾಹ್ನ ಮನೆಗೆ ಬಂದಾಗ ಕಾಲೇಜಿಗೆ ರಜೆಯಲ್ಲಿದ್ದ ಪುತ್ರಿ ಧನ್ಯಾ ಹೊರಗಡೆ ಹೋಗಿರುವುದನ್ನು ಕಂಡು ಗದರಿಸಿದ್ದಾರೆ.ಇದರಿಂದ ಮನನೊಂದು ಧನ್ಯಾ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ … Read more

ಟರ್ಕಿ; ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಮೃತದೇಹ ಹಲವು ದಿನಗಳ ಕಾರ್ಯಾಚರಣೆ ಬಳಿಕ ಅವಶೇಷಗಳಡಿ ಪತ್ತೆ

ಟರ್ಕಿ;ಭೂಕಂಪನದ ವೇಳೆ ನಾಪತ್ರೆಯಾಗಿದ್ದ ಘಾನಾದ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಅವರ ಮೃತದೇಹ ಪತ್ತೆಯಾಗಿದೆ. ಹಟಾಯ್ನ ಅಂಟಕ್ಯ ನಗರದಲ್ಲಿ ಎತ್ತರದ ಐಷಾರಾಮಿ ಫ್ಲ್ಯಾಟ್ಗಳ ಬ್ಲಾಕ್ ರೋನೆಸನ್ಸ್ ರೆಸಿಡೆನ್ಸಿಯಲ್ಲಿ ಅಟ್ಸು ಅವರ ಶವವನ್ನು ಪತ್ತೆ ಮಾಡಲಾಗಿದೆ‌. ದಕ್ಷಿಣ ಟರ್ಕಿಯಲ್ಲಿ ವಾಸಿಸುತ್ತಿದ್ದ ಕಟ್ಟಡದ ಅಡಿಯಲ್ಲಿ ಅಟ್ಸು ಅವರ ದೇಹವು ಹಲವು ದಿನಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ‌‌. ಭೂಕಂಪ ಸಂಭವಿಸಿದ ಒಂದು ದಿನದ ನಂತರ ಅವರನ್ನು ರಕ್ಷಿಸಲಾಗಿದೆ ಎಂದು ಆರಂಭಿಕ ವರದಿಗಳು ತಿಳಿಸಿದ್ದವು, ಆದರೆ ಇವು ಸುಳ್ಳು ಸುದ್ದಿಯಾಗಿದ್ದು, ಇದೀಗ ಮೃತದೇಹ … Read more

ಆಕ್ಸ್‌ಫರ್ಡ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ನ CEO ಆಗಿ ಭಾರತೀಯ ಮೂಲದ ಮೇಘನಾ ನೇಮಕ

ನವದೆಹಲಿ;ಭಾರತೀಯ ಮೂಲದ ವೈದ್ಯೆ ಪ್ರೊಫೆಸರ್ ಮೇಘನಾ ಪಂಡಿತ್ ಅವರನ್ನು UKಯ ಅತಿದೊಡ್ಡ ಬೋಧನಾ ಆಸ್ಪತ್ರೆಗಳಲ್ಲಿ ಒಂದಾದ ಆಕ್ಸ್‌ಫರ್ಡ್ ಯೂನಿವರ್ಸಿಟಿ ಹಾಸ್ಪಿಟಲ್ಸ್ NHS ಫೌಂಡೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ. ಪಂಡಿತ್ ಅವರು ಟ್ರಸ್ಟ್‌ನ ಮೊದಲ ಮಹಿಳಾ ಮುಖ್ಯಸ್ಥರಾಗುತ್ತಾರೆ. ಅವರು ಬ್ರಿಟನ್ ದೇಶದ ಕೆಲವು ಅತಿದೊಡ್ಡ ಬೋಧನಾ ಆಸ್ಪತ್ರೆಗಳನ್ನು ಪ್ರತಿನಿಧಿಸುವ ಶೆಲ್ಫೋರ್ಡ್ ಗ್ರೂಪ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ಟ್ರಸ್ಟ್‌ನ CEO ಆಗಿ ನೇಮಕಗೊಂಡ ಭಾರತೀಯ ಪರಂಪರೆಯ ಮೊದಲ ವ್ಯಕ್ತಿಯಾಗಿದ್ದಾರೆ. ಜುಲೈ 2022 ರಿಂದ ಆಕ್ಸ್‌ಫರ್ಡ್ ಯೂನಿವರ್ಸಿಟಿ … Read more

ಪೈವಳಿಕೆ ವಿದ್ಯಾರ್ಥಿಯೋರ್ವನ ಮೇಲೆ ರ‍್ಯಾಗಿಂಗ್‌, ಆಸ್ಪತ್ರೆಗೆ ದಾಖಲು

ಕಾಸರಗೋಡು;ರ‍್ಯಾಗಿಂಗ್‌ ಪ್ರಕರಣವೊಂದು ಪೈವಳಿಕೆ ಸರಕಾರಿ ಶಾಲೆಯಲ್ಲಿ‌ ನಡೆದಿದ್ದು, 12ನೇ ತರಗತಿ ವಿದ್ಯಾರ್ಥಿಯೋರ್ವನ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ.ಎಚ್.ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ಹಲ್ಲೆಗೆ ಒಳಗಾದ ವಿದ್ಯಾರ್ಥಿ.ಈತನ ತಲೆ ಮತ್ತು ಹಣೆಗೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಅದ್ನಾನ್ ಶುಕ್ರವಾರ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.ಇದೀಗ ಆತನಿಗೆ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ‌.