ಮಂಗಳೂರು; ಗಿನ್ನೆಸ್ ದಾಖಲೆ ಬರೆದ ದೇರಳಕಟ್ಟೆಯ ಯುವಕ

ಮಂಗಳೂರು;ದೇರಳಕಟ್ಟೆಯ ಯುವಕ ಮೊಹಮ್ಮದ್ ಶಲೀಲ್ ಫುಟ್ಬಾಲ್‌ನಲ್ಲಿ ಗಿನ್ನೆಸ್‌ ನ ವಿಶ್ವದ ಇಬ್ಬರ ದಾಖಲೆ ಮುರಿದು ತನ್ನದೇ ಆದ ಹೊಸ ದಾಖಲೆ ಬರೆದಿದ್ದಾರೆ. ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್‌ಗಳ ನಟ್ ಮೆಗ್ ಸಾಧಿಸುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ‌. 2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.2021ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ … Read more

ಟ್ರಾಫಿಕ್ ದಂಡವನ್ನು 50% ರಿಯಾಯಿತಿಯೊಂದಿಗೆ ಪಾವತಿಸಲು ಅವಕಾಶ; ಎಷ್ಟು ದಿನ ಮಾತ್ರ ಈ ಅವಕಾಶ ಇರಲಿದೆ?ಪಾವತಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ…

ಬೆಂಗಳೂರು;ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರು ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಲು ಕರ್ನಾಟಕ ಸರ್ಕಾರ 50% ರಿಯಾಯಿತಿಯೊಂದಿಗೆ ನಿಗದಿತ ಸಮಯದಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಈ ಅವಕಾಶ ಕೇವಲ 10 ದಿನವರೆಗೆ ಚಾಲ್ತಿಯಲ್ಲಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೋಲಿಸ್‌ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಕಾರ್ಯಾಧ್ಯಕ್ಷರ ಮನವಿಯ ಮೇರೆಗೆ ನಡೆಯಲಿರುವ ಲೋಕ್‌ ಅದಾಲತ್ತನ್ನು ಗಮನದಲ್ಲಿಕೊಂಡು 10 ದಿನದವರೆಗೆ ಅವಕಾಶ ಚಾಲ್ತಿಯಲ್ಲಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೋಲಿಸ್‌ ಆದೇಶ ಹೊರಡಿಸಿದೆ. ರಿಯಾಯಿತಿ … Read more

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ಕೊಟ್ಟ ಬಾಬಾ ರಾಮ್ ದೇವ್

ರಾಜಸ್ಥಾನ;ಬಾರ್ಮರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಯೋಗ ಗುರು ರಾಮ್‌ದೇವ್ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಅವಹೇಳನಾಕಾರಿಯಾಗಿ ಭಾಷಣ ಮಾಡಿದ್ದಾರೆ. ಈ ಕುರಿತು ಮುಸ್ಲಿಮರು ‘ನಮಾಜ್ ಮಾಡುತ್ತಾರೆ, ಜೊತೆಗೆ ಭಯೋತ್ಪಾದನೆ ಮಾಡುವಲ್ಲಿ ನಿರತರಾಗಿದ್ದರೆ, ಕ್ರಿಶ್ಚಿಯನ್ನರು ಧಾರ್ಮಿಕ ಮತಾಂತರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಬಾರ್ಮರ್ ಜಿಲ್ಲೆಯಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡುತ್ತಾ, ಇಸ್ಲಾಂ ಧರ್ಮದಲ್ಲಿ ವ್ಯಕ್ತಿಗಳಿಗೆ ನಮಾಜ್‌ ಮಾಡುವ ಬಗ್ಗೆ ಮಾತ್ರವೇ ಹೇಳಿಕೊಡಲಾಗುತ್ತದೆ. ಅವರು ಕೂಡ ನಮಾಜ್ ಮಾಡಿದ ಬಳಿಕ, ಎಂಥಾ ಪಾಪಗಳನ್ನು ಬೇಕಾದರೂ ಮಾಡುತ್ತಾರೆ. ದಿನಕ್ಕೆ 5 ಬಾರಿ … Read more

BREAKING ಮಂಗಳೂರು; ಜ್ಯುವೆಲ್ಲರಿ ಅಂಗಡಿಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಕೊಲೆ

ಮಂಗಳೂರು:ವ್ಯಕ್ತಿಯೋರ್ವನಿಗೆ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದ ಘಟನೆ ನಗರದ ಹಂಪನಕಟ್ಟೆಯ ಬಳಿ ನಡೆದಿದೆ. ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ರಾಘವ ಆಚಾರಿ(50) ಮೇಲೆ ಚೂರಿಯಿಂದ ಇರಿಯಲಾಗಿದೆ. ಚೂರಿ ಇರಿತದಿಂದ ಗಾಯಗೊಂಡಿರುವ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ದರೋಡೆಯೆ ಅಥವಾ ಬೇರೆ ವಿಚಾರ ಇದೆಯಾ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಅಂಗಡಿ ಮಾಲಕರು ಊಟ ಮಾಡಿ ವಾಪಸ್ ಆದಾಗ ಘಟನೆ ಗಮನಕ್ಕೆ ಬಂದಿದೆ ಎನ್ನಲಾಗಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಅಪ್ತಾಪ್ತ ಬಾಲಕಿಯನ್ನು ವಿವಾಹವಾದ ಮೂರು ಮಕ್ಕಳ ತಂದೆ!

ಹುಬ್ಬಳ್ಳಿ;ಹಣದ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಪ್ರಕರಣ ಹುಬ್ಬಳ್ಳಿಯಿಂದ ವರದಿಯಾಗಿದೆ. ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ‌ ಪತ್ನಿ ನೇತ್ರಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹನಮಂತ ಉಪ್ಪಾರ ಮೊದಲ ಪತ್ನಿ ಬಿಟ್ಟು ದೇವಸ್ಥಾನದಲ್ಲಿ 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ್ದಾನೆ ಎಂದು ಮೊದಲ ಪತ್ನಿ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಮೊದಲ ಹೆಂಡತಿ ಮೇಲೆ ಸಂಶಯದಿಂದ ಈತ ಎರಡನೇ‌ ವಿವಾಹವಾಗಿದ್ದಾನೆ ಎನ್ನಲಾಗಿದೆ.ಈತನಿಗೆ ಮೊದಲ ಮದುವೆಯಲ್ಲಿ … Read more

Shocking ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ, ಸಾವಿರಾರು ಮಂದಿಯ ಬಂಧನ, ಒಂದೇ ರಾಜ್ಯದಲ್ಲಿ ಬಂಧಿತರೆಷ್ಟು ಗೊತ್ತಾ?

ನಿಯಮ ಉಲ್ಲಂಘಿಸಿ ವಿವಾಹವಾದ 1,800ಕ್ಕೂ ಅಧಿಕ ಮಂದಿಯ ಬಂಧನ ಅಸ್ಸಾಂ;ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ವಿವಾಹವಾದವರನ್ನು ಅಸ್ಸಾಂನಲ್ಲಿ ಬಂಧನಗಳು ನಡೆಯುತ್ತಿವೆ. ಇದುವರೆಗೆ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ನಾಗಾವ್ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬಾಲ್ಯವಿವಾಹದ ವಿರುದ್ಧ ಅವರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮಹಿಳೆಯರ ಮೇಲಿನ ಅಕ್ಷಮ್ಯ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ನಾನು ಅಸ್ಸಾಂ ಪೊಲೀಸರನ್ನು ಕೇಳಿಕೊಂಡಿದ್ದೇನೆ ಎಂದು ಬಿಸ್ವಾ … Read more

ಬಿಬಿಸಿ ಸಾಕ್ಷ್ಯಾ ಚಿತ್ರಕ್ಕೆ ನಿರ್ಬಂಧ ವಿವಾದ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೊಟೀಸ್

ನವದೆಹಲಿ;ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ. ಈ ಕುರಿತು ಸಲ್ಲಿಕೆಯಾದ ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಈ ಕುರಿತು ಹಿರಿಯ ಪತ್ರಕರ್ತ ಎನ್. ರಾಮ್, ಸಾಮಾಜಿಕ ಹೋರಾಟಗಾರರಾದ ವಕೀಲ ಪ್ರಶಾಂತ್ ಭೂಷಣ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೇಂದ್ರಕ್ಕೆ ನೊಟೀಸ್ ನೀಡಿ ವಿವರಣೆ ಕೇಳಿದೆ.

ಬಂಟ್ವಾಳ;ರೈಲ್ವೆ ಓವರ್ ಬ್ರಿಡ್ಜ್‌‌ ನಲ್ಲಿ ಮೃತದೇಹ ಪತ್ತೆ

ಬಂಟ್ವಾಳ:ಬಿಸಿರೋಡಿನ ರೈಲ್ವೆ ಓವರ್ ಬ್ರಿಡ್ಜ್‌‌ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಸುಮಾರು 55 ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಇಂದು ಬೆಳಿಗ್ಗೆ ಸಾರ್ವಜನಿಕರು ಮೃತದೇಹವನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಎಸ್. ಐ.ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬೆಂಗಳೂರು; ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್, ಮಗು ಮೃತ್ಯು

ಬೆಂಗಳೂರು;ಟ್ರಾಫಿಕ್​​​ ನಿಂದಾಗಿ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪುವಲ್ಲಿ ವಿಫಲವಾಗಿ ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟ ಘಟನೆಯೊಂದು ನಡೆದಿದೆ. ಅಹಮದ್​​ ಮತ್ತು ರುಕ್ಸಾನಾ ದಂಪತಿಯು ನಿನ್ನೆ ಪುತ್ರಿ ಹುದಾ ಕೌಸರ್ ಜೊತೆ ತೆರಳುತ್ತಿದ್ದಾಗ ಬೈಕ್ ತುಮಕೂರು ಜಿಲ್ಲೆ ತಿಪಟೂರಿನ ಕೈಮರಾ ಬಳಿ ಬೊಲೆರೋ ವಾಹನಕ್ಕೆ ಢಿಕ್ಕಿಯಾಗಿತ್ತು. ಈ ವೇಳೆ ಗಾಯಗೊಂಡ ಅಹಮದ್​​, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನದಿಂದ ಬೆಂಗಳೂರಿಗೆ ರವಾನಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ರು. ಆಸ್ಪತ್ರೆಗೆ ಸಾಗಿಸುವ ವೇಳೆ … Read more

ವೇಶ್ಯಾವಾಟಿಕೆ ಕೇಸ್ ನಲ್ಲಿ ಬಂಧಿತನಾಗಿದ್ದವನಿಗೆ ಬಿಜೆಪಿ ಟಿಕೆಟ್!

ವೇಶ್ಯಾವಾಟಿಕೆ ಕೇಸ್ ನಲ್ಲಿ ಬಂಧಿತನಾಗಿದ್ದವನಿಗೆ ಬಿಜೆಪಿ ಟಿಕೆಟ್! ಮೇಘಾಲಯ;ದಕ್ಷಿಣ ತುರಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ವರದಿಯಾಗಿದೆ. ತುರಾದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಕಳೆದ ವರ್ಷ ಮರಕ್ ಅವರ ಫಾರ್ಮ್‌ಹೌಸ್‌ನಲ್ಲಿ 6 ಮಂದಿ ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. … Read more