ಜೂನಿಯರ್ ವಿದ್ಯಾರ್ಥಿನಿಯರಿಗೆ ಲೆಸ್ಬಿಯನ್( ಸಲಿಂಗ) ಸಂಬಂಧಕ್ಕೆ ಒತ್ತಾಯದ ಆರೋಪ; ಪ್ರತಿಷ್ಠಿತ ಗುರುಕುಲದ ಹಾಸ್ಟೆಲ್ ನ ಕೆಲ ವಿದ್ಯಾರ್ಥಿನಿಯರ ವಿರುದ್ಧ ಗಂಭೀರ ಆರೋಪ

ಪೋರಬಂದರ್ (ಗುಜರಾತ್): ಪೋರಬಂದರ್‌ನ ಪ್ರತಿಷ್ಠಿತ ಆರ್ಯ ಕನ್ಯಾ ಗುರುಕುಲದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಇತರ ಹಾಸ್ಟೆಲ್ ಮೇಟ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ಹಾಸ್ಟೆಲ್‌ನಲ್ಲಿರುವ ಹುಡುಗಿಯರನ್ನು ಲೆಸ್ಬಿಯನ್ (ಸಲಿಂಗ) ಬಂಧಗಳಿಗೆ ಬಲವಂತಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಗುರುಕುಲದ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದು ಸಂಸ್ಥೆಯ ಪ್ರತಿಷ್ಠೆಗೆ ಮಸಿ ಬಳಿಯುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ. ಈ ವಿಷಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ … Read more

ಫ್ಲೈಓವರ್ ಮೇಲಿನಿಂದ ನೋಟಿನ ರಾಶಿಯನ್ನು ಎಸೆದ ಯುವಕ ಪೊಲೀಸ್ ವಶಕ್ಕೆ; ನೋಟಿನ ರಾಶಿ ಎಸೆದ ಈತ ಯಾರು ಗೊತ್ತಾ?

ಬೆಂಗಳೂರು:ಬೆಳಗ್ಗೆ ಕೆ ಆರ್ ಮಾರ್ಕೆಟ್ ಫ್ಲೈಓವರ್ ಮೇಲಿನಿಂದ 10 ರೂ.‌ನೋಟಿನ ರಾಶಿಯನ್ನು ಎಸೆದ ಯುವಕನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅರುಣ್ ಎಂಬಾತನಿಗೆ ಪೊಲೀಸರು ವಶಕ್ಕೆ ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಆತ ದುಡ್ಡು ಯಾಕೆ ಎಸೆದೆ ಅನ್ನೋದನ್ನು ಮಾತ್ರ ಬಾಯಿಬಿಡಲಿಲ್ಲ. ಒಂದು ಬ್ಯಾಗ್‌ನಲ್ಲಿ 10ರೂ. ನೋಟುಗಳನ್ನು ತಂದು ಆಕಾಶಕ್ಕೆ ಎಸೆದ ಆತನನ್ನು ಕೆಲವರು ಹಿಡಿದುಕೊಳ್ಳಲು ಪ್ರಯತ್ನಿಸಿದರಾದರೂ ಆತ ಸ್ಕೂಟರ್‌ ಏರಿ ತಪ್ಪಿಸಿಕೊಂಡಿದ್ದಾನೆ. ಆತ ಒಬ್ಬ ನಿರೂಪಕ, ಇವೆಂಟ್‌ ಮ್ಯಾನೇಜರ್‌ ಎಂದು ತಿಳಿದುಬಂದಿದೆ. ಅರುಣ್‌ ಮೂಲತಃ ಸಾರ್ವಜನಿಕ … Read more

ಕದ್ದ ಬೈಕ್ ನ ಟ್ಯಾಂಕ್‌ ಮೇಲೆ ಪತ್ನಿಯನ್ನು ಕೂರಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತನೆ; ವಿಡಿಯೋ ವೈರಲ್

ಛತ್ತೀಸ್ ಗಢ;ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತನೆ ಪ್ರಕರಣದಲ್ಲಿ ದಂಪತಿಯನ್ನು ಛತ್ತೀಸ್ಗಢದ ದುರ್ಗ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ಕುರಿತ ವೀಡಿಯೊ ವೈರಲ್ ಆಗಿದೆ.ವಿಡಿಯೋದಲ್ಲಿ ಬೈಕ್ ನ ಟ್ಯಾಂಕ್ ನಲ್ಲಿ ಯುವತಿಯನ್ನು ಕೂರಿಸಿಕೊಂಡು ಕಿಸ್ಸಿಂಗ್‌, ರೊಮ್ಯಾನ್ಸ್‌ ಮಾಡುತ್ತಾ ಸಂಚರಿಸುವುದು ಸೆರೆಯಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಕದ್ದ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಇದೀಗ ಬೈಕ್ ಸಹಿತ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ; ಮಹಿಳೆ ಸ್ಥಳದಲ್ಲೇ ಮೃತ್ಯು

ಬೆಂಗಳೂರು: ಖಾಸಗಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಭೀಕರ ಘಟನೆ ಯಶವಂತಪುರದಲ್ಲಿ ನಡೆದಿದೆ. ವಿನುತಾ (32) ಮೃತ ಮಹಿಳೆ. ದ್ವಿಚಕ್ರ ವಾಹನದಲ್ಲಿ ವಿನುತಾ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ.ಈ ವೇಳೆ ವಿನುತಾ ಕೆಳಕ್ಕೆ ಬಿದ್ದಿದ್ದು ಅವರ ಮೇಲೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ಲೈಓವರ್ ಮೇಲಿಂದ ಹಣದ ರಾಶಿಯನ್ನು ಎಸೆದ ಯುವಕ;ನೋಟು ಸಂಗ್ರಹಿಸಲು ಮುಗಿಬಿದ್ದ ಜನ, ವಿಡಿಯೋ ವೈರಲ್

ಬೆಂಗಳೂರು;ವ್ಯಕ್ತಿಯೋರ್ವ ಫ್ಲೈಓವರ್ ಮೇಲಿಂದ 10 ರೂ.ಮುಖಬೆಲೆಯ ನೋಟುಗಳ ರಾಶಿಯನ್ನು ಎಸೆದಿದ್ದು ನೋಟು ಹೆಕ್ಕಲು ಜನ ಮುಗಿಬಿದ್ದಿರುವ ಘಟನೆ ನಡೆದಿದೆ. ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲಿಂದ 10 ರೂ. ಮುಖಬೆಲೆಯ ನೋಟುಗಳನ್ನು ಶೂಟ್ ಧರಿಸಿ, ಕೊರಳಿಗೆ ಗಡಿಯಾರ ನೇತು ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿ ಎಸೆದಿದ್ದಾನೆ ಎನ್ನಲಾಗಿದೆ. ಫ್ಲೈಓವರ್ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿದ್ದವರು ಅದನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಹಿಂದೂ ಯುವತಿಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಸ್ಲಿಂ ಯುವಕರಿಗೆ ಥಳಿಸಿದ ಗುಂಪು

ಮಧ್ಯಪ್ರದೇಶ;ಹಿಂದೂ ಯುವತಿಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಸ್ಲಿಂ‌ ಯುವಕರಿಗೆ ಭಜರಂಗದಳದ ಕಾರ್ಯಕರ್ತರು ಥಳಿಸಿರುವ ಘಟನೆ ಇಂದೋರ್ ನ ಎಂಐಜಿ ಕಾಲೋನಿಯಲ್ಲಿ ನಡೆದಿದೆ. ಹುಟ್ಟು ಹಬ್ಬ‌ ಕಾರ್ಯಕ್ರಮದ ವೇಳೆ ಏಕಾಏಕಿ ನುಗ್ಗಿದ ಬಜರಂಗದಳ ಕಾರ್ಯಕರ್ತರ ಗುಂಪು ಅಕ್ರಮವಾಗಿ ಮನೆ ಪ್ರವೇಶಿಸಿದೆ. ಅಲ್ಲದೆ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ಆರೋಪಿಸಿ ಯುವಕರನ್ನು ಥಳಿಸಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.ಬಳಿಕ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

BREAKING ಈಜಲು ನೀರಿಗಿಳಿದ ಯುವಕ ನಾಪತ್ತೆ;ಮುಂದುವರಿದ ರಕ್ಷಣಾ ಕಾರ್ಯ

ಸಾಗರ;ಕೆರೆಗೆ ಈಜಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಭೀಮನಕೋಣೆ ಕೆರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸಾಗರ ಪಟ್ಟಣದ ಯಶ್ವಂತ್ (22) ನಾಪತ್ತೆಯಾದ ಯುವಕ. ಯಶ್ವಂತ್ ಬೆಳಿಗ್ಗೆ ತನ್ನ ಸ್ನೇಹಿತರೊಂದಿಗೆ ಭೀಮನಕೋಣೆ ಕೆರೆಗೆ ಹೋಗಿದ್ದರು.ಈ ವೇಳೆ ಯಶ್ವಂತ್, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಇಳಿದಿದ್ದಾನೆ.ಆದರೆ ಆತನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ ಟ್ರಕ್​​ನಿಂದ ಕಿಲೋಮೀಟರ್​ಗಟ್ಟಲೇ ಎಳೆದೊಯ್ದ ದುಷ್ಕರ್ಮಿಗಳು; ಅಮಾನವೀಯ ಘಟನೆ ವರದಿ

ಗುಜರಾತ್​; ಸೂರತ್​ನಲ್ಲಿ ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ ಟ್ರಕ್​​ನಿಂದ ಕಿಲೋಮೀಟರ್​ಗಟ್ಟಲೇ ಎಳೆದೊಯ್ದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಗುಜರಾತ್‌ನ ಸೂರತ್ ಜಿಲ್ಲೆಯ ಹಜಿರಾ ಪ್ರದೇಶದಲ್ಲಿ ಘನೆಯ ವಿಡಿಯೋ ವೈರಲ್ ಆಗಿದೆ.ಘಟನೆಯಲ್ಲಿ ವ್ಯಕ್ತಿಯ ತಲೆ, ಕೈ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಟ್ರಕ್‌ನಿಂದ ಕಾಲಿಗೆ ಹಗ್ಗ ಬಿಗಿದು ವ್ಯಕ್ತಿಯನ್ನು ಎಳೆದೊಯ್ಯುವುದನ್ನು ಕಂಡ ಕಾರು ಚಾಲಕನೊಬ್ಬ ರಕ್ಷಣೆಗೆ ಧಾವಿಸಿದ್ದಾನೆ. ಟ್ರಕ್​ ಬೆನ್ನತ್ತಿದ ಕಾರು ಚಾಲಕ ಟ್ರಕ್ ತಡೆದು ಟ್ರಕ್​​ಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಿದ್ದಾನೆ. ಈ ವೇಳೆ ಚಾಲಕ ಟ್ರಕ್​ ಸಮೇತ ಪರಾರಿಯಾಗಿದ್ದಾನೆ.

ಹಿಜಾಬ್ ವಿವಾದದ ಕುರಿತು ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆಗೆ ಮುಂದಾದ ಸುಪ್ರೀಂ‌ಕೋರ್ಟ್

ನವದೆಹಲಿ;ಹಿಜಾಬ್ ನಿರ್ಬಂಧಿಸಿದ ಆದೇಶದ ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಲು ಮುಂದಾಗಿದೆ. ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಾನ್ಯ ಮಾಡಿತ್ತು, ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು ಹೀಗಾಗಿ ಇದರ ವಿಚಾರಣೆ ದ್ವಿಸದಸ್ಯ ಪೀಠದಲ್ಲಿ ನಡೆದು ಭಿನ್ನ ತೀರ್ಪು ಹೊರ ಬಿದ್ದಿತ್ತು. ಈ ಮೊದಲು ಕರ್ನಾಟಕ ಹೈಕೋರ್ಟ್, ಸರ್ಕಾರದ ತೀರ್ಮಾನವನ್ನು ಮಾನ್ಯ ಮಾಡಿ ನೀಡಿದ್ದ ತೀರ್ಪನ್ನೇ ಮುಂದುವರಿಸಲಾಗಿತ್ತು. ಇದೀಗ ಇದರ ವಿಚಾರಣೆಗಾಗಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ … Read more

ಬೈಕ್​ಗೆ ಫುಟ್​ಬಾಲ್​ ಬಡಿದು ಸಂಭವಿಸಿದ ಅಪಘಾತ; ಮಹಿಳೆ ಮೃತ್ಯು

ಮಲಪ್ಪುರಂ;ಚಲಿಸುತ್ತಿದ್ದ ಬೈಕ್​ಗೆ ಫುಟ್​ಬಾಲ್​ ಬಡಿದು ನಿಯಂತ್ರಣ ಕಳೆದುಕೊಂಡು ಬೈಕ್​ ಕೆಳಗೆ ಬಿದ್ದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆ ಲಾರಿ ಹರಿದು ಮೃತಪಟ್ಟ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಒಥಾಯಿಯಲ್ಲಿ ನಡೆದಿದೆ. ಮೃತರನ್ನು ಫಾತಿಮಾ ಸುಹ್ರಾ (38) ಎಂದು ಗುರುತಿಸಲಾಗಿದೆ.ಸುಹ್ರಾ ತನ್ನ ಸಹೋದರ ಮತ್ತು ಮಕ್ಕಳೊಂದಿಗೆ ಅತ್ತೆಯ ಮನೆಗೆ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಮಕ್ಕಳು ಫುಟ್​ಬಾಲ್​ ಆಡುವಾಗ ರಸ್ತೆಯಲ್ಲಿ ಬೈಕ್​ ಹಾದು ಹೋಗುತ್ತಿತ್ತು.ಮಕ್ಕಳು ಒದ್ದ ಫುಟ್​ಬಾಲ್​ ಬೈಕ್​ಗೆ ಬಡಿದು ಬೈಕ್​ ಸವಾರ ನಿಯಂತ್ರಣ ಕಳೆದುಕೊಂಡು ಬೈಕ್​ … Read more

Developed by eAppsi.com