ಉಳ್ಳಾಲ;ಪೊಲೀಸ್ ಪೇದೆಗೆ ಢಿಕ್ಕಿ‌ ಹೊಡೆದು ಕಾರು ಪರಾರಿ, ಹೆಡ್ ಕಾನ್ಸ್ಟೇಬಲ್ ಸ್ಥಿತಿ ಗಂಭೀರ

ಉಳ್ಳಾಲ;ಹಿಟ್ & ರನ್ ಪ್ರಕರಣ ನಡೆದಿದ್ದು, ಕರ್ತವ್ಯ ನಿರತ ಪೇದೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉಳ್ಳಾಲ ಬೈಲಿನಲ್ಲಿ ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹೆಡ್ ಕಾನ್ಸ್‌ಟೇಬಲ್ ಲೋಕೇಶ್ ನಾಯ್ಕ್ ಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೇಶ್ ನಾಯ್ಕ್ ಮತ್ತು ಎಎಸ್ಐ ಮಂಜುಳ ಅವರು ಗಸ್ತು ವಾಹನದಲ್ಲಿ ರವಿವಾರ ಸಂಜೆ ಉಳ್ಳಾಲ ಬೈಲಲ್ಲಿ ಗಸ್ತಲ್ಲಿದ್ದ ವೇಳೆ ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಧಾವಿಸುತ್ತಿದ್ದ ಸ್ವಿಫ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ … Read more

ಭಾರತ್ ಜೋಡೋ ಯಾತ್ರೆಯ ಬಹುದೊಡ್ಡ ಯಶಸ್ಸು, 29 ವರ್ಷಗಳಿಂದ ದ್ವೇಷದಿಂದಿದ್ದ ಎರಡು ಸಮುದಾಯವನ್ನು ಒಟ್ಟುಗೂಡಿಸಿದ ರಾಹುಲ್ ಗಾಂಧಿ; ಏನಿದು ಬದನವಾಳು ಗ್ರಾಮದ ಎರಡು ಸಮುದಾಯದ ನಡುವಿನ ವೈಷಮ್ಯ?

ಸತತ 29 ವರ್ಷಗಳಿಂದ ದ್ವೇಷ ಕಟ್ಟಿಕೊಂಡ ಎರಡು ಸಮುದಾಯ ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ಒಂದಾಗಿದೆ.ಇದು ಭಾರತ್ ಜೋಡೋ ಯಾತ್ರೆಯ ಬಹುದೊಡ್ಡ ಯಶಸ್ಸಾಗಿದೆ. 1993ರಲ್ಲಿ ಬದನವಾಳು ಗ್ರಾಮದಲ್ಲಿ ವೀರಶೈವ ಮತ್ತು ಲಿಂಗಾಯುತ ಸಮುದಾಯದ ನಡುವಿನ ದ್ವೇಷ ಬಳಿಕ ನಡೆದಿದ್ದ ಹತ್ಯಾಕಾಂಡದ ಬಳಿಕ ಇದೇ ಮೊದಲ ಬಾರಿಗೆ ಎರಡು ಸಮುದಾಯದ ಜನ ಒಟ್ಟಾಗಿ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದ್ದಾರೆ. ಹತ್ಯಾಕಾಂಡ ಸಂಬಂಧ ಬೇರೆಯಾಗಿದ್ದ ಸಮುದಾಯಗಳು ಇಂದು ಒಂದಾಗಿ ರಾಹುಲ್ ಜೊತೆ ಊಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ … Read more

ಆರು ವರ್ಷದ ಬಾಲಕನನ್ನು ಹೊತ್ತೊಯ್ದು ನರಬಲಿ; ಅಮಾನವೀಯ ಘಟನೆ ವರದಿ

ನವದೆಹಲಿ;ಆರು ವರ್ಷದ ಬಾಲಕನನ್ನು ನರಬಲಿ ನೀಡಿರುವ ಘಟನೆ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ. ಕೇಸ್ ಗೆ ಸಂಬಂಧಿಸಿ ಬಿಹಾರ ಮೂಲದ ಆರೋಪಿಗಲಾದ ವಿಜಯ್ ಕುಮಾರ್ ಮತ್ತು ಅಮರ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಆರೋಪಿಗಳು ಮತ್ತು ಬಾಲಕನ ಪೋಷಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ವಿಜಯ್ ಮತ್ತು ಅಮರ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಬಾಲಕ ಶನಿವಾರ ರಾತ್ರಿ ತನ್ನ ಶೆಡ್‌ಗೆ ಹೋಗುತ್ತಿದ್ದಾಗ, ಆರೋಪಿಗಳು ಅವನನ್ನು ತಮ್ಮ ಅಡುಗೆ ಸ್ಥಳಕ್ಕೆ ಹೊತ್ತೊಯ್ದು, ಮೊದಲು ತಲೆಯ ಮೇಲೆ ಹಲ್ಲೆ ನಡೆಸಿ ನಂತರ … Read more

ಮೂವರು ವೈದ್ಯರಿಂದ ಯುವತಿ ಮೇಲೆ ಗ್ಯಾಂಗ್ ರೇಪ್

ಬಸ್ತಿ(ಉತ್ತಪ್ರದೇಶ);ಬಸ್ತಿ ಜಿಲ್ಲೆಯ ಆಸ್ಪತ್ರೆಯೊಂದರ ಮೂವರು ವೈದ್ಯರ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್ತಿ ಸದರ್ ಕೊಟ್ವಾಲಿಯ ಕೈಲಿ ಆಸ್ಪತ್ರೆಯ ವೈದ್ಯ ಲಕ್ನೋದ ಹುಡುಗಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದ.ಆಗಸ್ಟ್ 10 ರಂದು ತನ್ನ ಆಸ್ಪತ್ರೆಗೆ ಭೇಟಿ ಮಾಡಲು ಯುವತಿಯನ್ನು ಕೇಳಿದನು. ಆಕೆ ಬಂದ ನಂತರ ಅವನು ತನ್ನ ಹಾಸ್ಟೆಲ್ ಗೆ ಯುವತಿಯನ್ನು ಕರೆದೊಯ್ದನು, ಅಲ್ಲಿ ಅವನು ಮತ್ತು ಇಬ್ಬರು ಸಹೋದ್ಯೋಗಿಗಳು ಅವಳ ಮೇಲೆ ಅತ್ಯಾಚಾರವೆಸಗಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. … Read more

BIG NEWS ಯುವಕನನ್ನು 50 ಬಾರಿ ಇರಿದು ಬರ್ಬರವಾಗಿ ಕೊಲೆ

ಚಿಕ್ಕಬಳ್ಳಾಪುರ;ಯುವಕನನ್ನು 50 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದನ್ ಕೊಲೆತಯಾದ ಯುವಕ.ಈತನಿಗೆ ದರ್ಶನ್ ಮತ್ತು ಆತನ ಸ್ನೇಹಿತ ಆಶ್ರಯ್ ಒಟ್ಟು ಸೇರಿ ಇರಿದು ಕೊಲೆ‌‌ ಮಾಡಿದ್ದಾರೆ. ದೊಡ್ಡಬಳ್ಳಾಫುರದ ನಂದಾ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಖಾಸಗಿ ವಿಡಿಯೋ ಹಾಗೂ ಫೋಟೋ ನಂದನ್ ಎಂಬ ಯುವಕನ‌ ಮೊಬೈಲ್ ನಲ್ಲಿತ್ತು. ನಂದನ್‌ ಮತ್ತು ದರ್ಶನ್ ತಂಗಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾತಿಗೆ ಮಾತು ಬೆಳೆದು ದರ್ಶನ್ ತನ್ನ ಗೆಳೆಯ … Read more

ಮುಖ್ಯಮಂತ್ರಿಯ ಬೆಂಗಾವಲು ವಾಹನದಿಂದ ಬಿದ್ದ ಮಹಿಳಾ ಪೇದೆ; ವಿಡಿಯೋ ವೀಕ್ಷಿಸಿ

ತೆಲಂಗಾಣ;ಮುಖ್ಯಮಂತ್ರಿ ಕೆಸಿಆರ್ ಅವರ ಬೆಂಗಾವಲು ವಾಹನದಿಂದ ಬಿದ್ದು ಮಹಿಳಾ ಪೇದೆ ಗಾಯಗೊಂಡ ಘಟನೆ ನಡೆದಿದೆ.ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಕೆಸಿಆರ್ ಅವರು ವಾರಂಗಲ್ ಭೇಟಿಯ ವೇಳೆ ಈ ಘಟನೆ ನಡೆದಿದೆ.ಘಟನೆ ವೇಳೆ ಮಹಿಳಾ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಸಿಎಂ ಕೆಸಿಆರ್ ಕೆಲವು ಜನಾಂವ್ ನಿಂದ ವಾರಂಗಲ್‌ಗೆ ತೆರಳುತ್ತಿದ್ದರು.ಬೆಂಗಾವಲು ಪಡೆಯ ಭಾಗವಾಗಿದ್ದ ಮಹಿಳಾ ನಿರೀಕ್ಷಕರು ಸಿಎಂ ಅವರ ವಾಹನದ ಹಿಂದೆಯೇ ಕಾರಿನಲ್ಲಿ ಕುಳಿತುಕೊಳ್ಳಬೇಕಾಗಿತ್ತು.ಈ ವೇಳೆ ಮಹಿಳಾ ಪೇದೆ ಸಂಪೂರ್ಣವಾಗಿ ಕಾರನ್ನು ಹತ್ತಲು ಸಾಧ್ಯವಾಗದೆ ನಡುರಸ್ತೆಯಲ್ಲೇ ಜಾರಿ … Read more

ಮೂರು ತಿಂಗಳ ಹಿಂದೆಯಷ್ಠೇ ಬಂಧಿತ ವಿಚಾರಣಾಧೀನ ಕೈದಿ‌ ಜೈಲಿನಲ್ಲಿ ಆತ್ಮಹತ್ಯೆ

ಬೆಳಗಾವಿ;ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಪೋಕ್ಸೊ ಆರೋಪಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದ ಯುವಕ ಮಂಜುನಾಥ ಮಹಾಂತೇಶ ನಾಯ್ಕರ (20) ಎಂಬ ಯುವಕನೇ ಇಂದು ಜೈಲಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಆರೋಪಿ ಮಹಾಂತೇಶ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಕುರಿತು ಕಳೆದ 3 ತಿಂಗಳ ಹಿಂದೆ ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದೀಗ ಆರೋಪಿಯು ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆಯಲ್ಲಿ ನೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

BIG BREAKING ಇಂಡೋನೇಷ್ಯಾ ಪುಟ್ಬಾಲ್‌ ಸ್ಟೇಡಿಯಂನಲ್ಲಿ ಗಲಭೆ, ಕಾಲ್ತುಳಿತ ಮತ್ತು ಉಸಿರುಕಟ್ಟಿ 129 ಮಂದಿ ಸಾವು, ಗಲಭೆ ಆರಂಭವಾಗಿದ್ದೇಗೆ ಗೊತ್ತಾ?

ಇಂಡೋನೇಷ್ಯಾ;ಫುಟ್ಬಾಲ್ ಪಂದ್ಯದ ವೇಳೆ ಪೂರ್ವ ಜಾವಾ ಪ್ರಾಂತ್ಯದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದು,ಕಾಲ್ತುಳಿತದಲ್ಲಿ 129 ಮಂದಿ ಮೃತಪಟ್ಟು,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪರ್ಸೆಬಯಾ ಸುರಬಯಾ ವಿರುದ್ಧ 3-2 ಗೋಲುಗಳಿಂದ ಸೋತ ನಂತರ ಅರೆಮಾ ಎಫ್‌ಸಿ ಬೆಂಬಲಿಗರು ಪೂರ್ವ ನಗರದ ಮಲಾಂಗ್‌ನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಪಿಚ್‌ಗೆ ನುಗ್ಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಶಾಂತಿಗಾಗಿ ಅಭಿಮಾನಿಗಳನ್ನು ಮನವೊಲಿಸಲು ಅವರು ಪ್ರಯತ್ನಿಸಿದರು.ಈ ವೇಳೆ ಇಬ್ಬರು ಅಧಿಕಾರಿಗಳ ಕೊಲೆಯಾಗಿದೆ.ನಂತರ “ಗಲಭೆಗಳನ್ನು” ನಿಯಂತ್ರಿಸಲು ಅಶ್ರುವಾಯು ಹಾರಿಸಿದರು ಎಂದು ಪೊಲೀಸರು ಹೇಳಿದರು. … Read more

ಖಾಲಿ ಇರುವ ಒಂದು ಹುದ್ದೆಗೆ ಬರೊಬ್ಬರಿ 22,000 ಕ್ಕೂ ಅಧಿಕ ಅರ್ಜಿ; 43 ಪರೀಕ್ಷಾ ಕೇಂದ್ರ! ಅಷ್ಟಕ್ಕೂ ಯಾವುದು ಈ ಹುದ್ದೆ ಗೊತ್ತಾ?

ಹಿಮಾಚಲ ಪ್ರದೇಶ:ದೇಶದಲ್ಲಿ ನಿರುದ್ಯೋಗ ತಾಂಡವವಾಗುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ ಇದಾಗಿದ್ದು, ಖಾಲಿ ಇರುವ ಒಂದೇ ಹುದ್ದೆಗೆ ಬರೊಬ್ಬರಿ 22,410 ಅರ್ಜಿಗಳು ಸಲ್ಲಿಕೆ ಆಗಿವೆ. ಹಿಮಾಚಲ ಪ್ರದೇಶ ಲೋಕಸೇವಾ ಆಯೋಗ (ಎಚ್‌ಪಿಎಸ್‌ಸಿ)ವು ತಾಂತ್ರಿಕ ವಿಶ್ವವಿದ್ಯಾಲಯ ಹಮೀರ್‌ಪುರದಲ್ಲಿ ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಒಂದು ಹುದ್ದೆಗೆ ಇದುವರೆಗೆ ಸುಮಾರು 22,410 ಅರ್ಜಿಗಳು ಬಂದಿವೆ. ವಿಶೇಷವೆಂದರೆ ಈ ಒಂದು ಹುದ್ದೆಗೆ 10,386 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿದ್ದು, ರೋಲ್ ನಂಬರ್ ಕೂಡ ಕಳುಹಿಸಲಾಗಿದೆ. ಆದರೆ, ಸುಮಾರು 12 … Read more

ರೈಲ್ವೇ ನಿಲ್ಧಾಣದಲ್ಲಿ‌ ಪತಿಗೆ ಹೃದಯಾಘಾತ; ಕಂಗಾಲಾಗದೆ ಉಸಿರು ತುಂಬಿ ಪ್ರಾಣ ರಕ್ಷಿಸಿದ ಪತ್ನಿ!

ಮಥುರಾ;ಮಥುರಾ ರೈಲ್ವೆ ನಿಲ್ದಾಣದಲ್ಲಿ​ ಹೃದಯಾಘಾತಕ್ಕೆ ಒಳಗಾದ ಪತಿಗೆ ಪತ್ನಿ ಸಮಯ ಪ್ರಜ್ಞೆಯಿಂದ ಮರು ಜೀವ ಕೊಟ್ಟ ಘಟನೆ‌ ನಡೆದಿದೆ. ನಿನ್ನೆ ಬೆಳಗ್ಗೆ ಮಥುರಾ ಜಂಕ್ಷನ್‌ನಲ್ಲಿ 70 ವರ್ಷದ ಕೇಶವನ್ ಎಂಬುವವರಿಗೆ ಹೃದಯಾಘಾತವಾಗಿತ್ತು.ಆಗ ಜೊತೆಗಿದ್ದ ಪತ್ನಿ ದಯಾ ಬುದ್ದಿ ಬಳಸಿ ಸುಮಾರು 10 ನಿಮಿಷಗಳ ಕಾಲ ತನ್ನ ಬಾಯಿಯ ಮೂಲಕ ಪತಿಗೆ ಉಸಿರಾಟ ತುಂಬಿದ್ದಾರೆ. ಇದರಿಂದಾಗಿ ಗಂಡನ ಹೃದಯ ಬಡಿತ ಮತ್ತು ಉಸಿರಾಟವು ಮುಂದುವರೆದಿದೆ.ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಕೂಡ ನೆರವಿಗೆ ಬಂದಿದ್ದಾರೆ. ಆರ್‌ಪಿಎಫ್ ಸಿಬ್ಬಂದಿ … Read more