ಭಾರತದಲ್ಲಿ 12,000ಕ್ಕಿಂತ ಕಡಿಮೆ ಮೌಲ್ಯದ ಮೊಬೈಲ್ ಬ್ಯಾನ್?

12 ಸಾವಿರ ರೂ ಒಳಗಿನ ಚೀನಾ ಮೂಲದ ಕಂಪನಿಗಳ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಭಾರತದಲ್ಲಿ ಚರ್ಚೆ ನಡೆದಿದೆ. ಭಾರತದಲ್ಲಿ ಮೊಬೈಲ್ ಬ್ಯಾನ್ ಮಾಡುವ ಇಂತಹದ್ದೊಂದು ಚರ್ಚೆ ಬಳಿಕ ಬ್ಯಾನ್ ನೀತಿಗೆ Xiaomi, Vivo ಮತ್ತು Oppo ನಂತಹ ಚೀನಾದ ಬ್ರ್ಯಾಂಡ್‌ಗಳು ಅಗ್ಗದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡದೆ ಅಂತರ ಕಾಯ್ದುಕೊಂಡಿರುವ ಬಗ್ಗೆ ಮಾಹಿತಿ ಇದೆ. ಇತ್ತೀಚೆಗೆ ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಮೇಡ್ ಇನ್ ಚೈನಾ ಫೋನ್‌ಗಳನ್ನು ಸರ್ಕಾರ ನಿಷೇಧಿಸಬಹುದು ಎಂಬ ಸುದ್ದಿ ಇತ್ತು. … Read more

ಮಂಗಳೂರು; ಮ್ಯಾಚ್ ಬಾಕ್ಸ್‌ ಕೊಂಡೊಯ್ಯಬಾರದು, ಮೋದಿ ಕಾರ್ಯಕ್ರಮಕ್ಕೆ ತೆರಳುವವರಿಗೆ ಹಲವು ಸೂಚನೆ

ಮಂಗಳೂರು;ಪ್ರಧಾನಿ‌ ಮೋದಿ ನಾಳೆ ಮಂಗಳೂರಿಗೆ ಆಗಮನದ ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ ಬಿಗಿ ಭದ್ರತೆ,ಪೊಲೀಸ್ ಕಣ್ಗಾವಲು ಮುಂದುವರಿದಿದೆ.‌ಇದಲ್ಲದೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಹಲವು ಸೂಚನೆ ಪೊಲೀಸರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಎಡಿಜಿಪಿ(ADGP) ಅಲೋಕ್ ಕುಮಾರ್,ಮೋದಿ ಕಾರ್ಯಕ್ರಮದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲುಆಗಮಿಸುವವರು ಲೈಟರ್,ಮ್ಯಾಚ್‌ಬಾಕ್ಸ್, ಭಿತ್ತಿಪತ್ರ,ಬಾಟಲಿ,ಕಪ್ಪು ಬಟ್ಟೆ,‌ಕರಪತ್ರ ತರಬಾರದು ಎಂದು ಹೇಳಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಬರುವವರು ಕಪ್ಪು ಟಿಶರ್ಟ್ ಧರಿಸಬಾರದು.ಅದನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ ಎಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ‌. ಹೆಲಿಪ್ಯಾಡ್‌ನಿಂದ … Read more

BREAKING NEWS ಬಿಜೆಪಿ ಗೆಲುವಿಗಾಗಿ ಆರೆಸ್ಸೆಸ್ ದೇಶದಾದ್ಯಂತ ಬಾಂಬ್ ಸ್ಪೋಟಗಳನ್ನು ನಡೆಸಿದೆ;ಆರೆಸ್ಸೆಸ್ ಮಾಜಿ ಪ್ರಚಾರಕನಿಂದ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ; ವರದಿ

ಮುಂಬೈ:ಆರ್‌ಎಸ್‌ಎಸ್ ಮಾಜಿ ಪ್ರಚಾರಕನ ವಿಡಿಯೋವೊಂದು ವೈರಲ್ ಆಗಿದ್ದು,ದೇಶದಾದ್ಯಂತ ಭಾರೀ ಸಂಚಲನವನ್ನು ಮೂಡಿಸಿದೆ.ಮುಸ್ಲಿಂ ಮಿರರ್, ಸಿಯಾಸತ್, ನಾಗ್ಫುರ್ ಟುಡೇ ಸೇರಿದಂತೆ ವಿವಿಧ ವೆಬ್ ಮಾದ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ನಿವಾಸಿ ಆರಸ್ಸೆಸ್ ಮಾಜಿ ಪ್ರಚಾರಕ ಯಶವಂತ್ ಶಿಂಧೆ ವಿಡಿಯೋ ಹೇಳಿಕೆಯಲ್ಲಿ ಆರ್‌ಎಸ್‌ಎಸ್ ದೇಶಾದ್ಯಂತ ಬಾಂಬ್‌ ಸ್ಫೋಟಗಳನ್ನು ನಡೆಸಿತ್ತು ಎಂದು ಹೇಳಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕುರಿತು ಯಶವಂತ್ ಶಿಂಧೆ ಅವರು ನಾಂದೇಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು,ಸ್ಫೋಟಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತನ್ನ ಬಳಿ ಇರುವುದರಿಂದ … Read more

BIG NEWS ಬಿಜೆಪಿ ನಾಯಕನ ಬರ್ಬರ ಹತ್ಯೆ

ಗುರುಗ್ರಾಮ್;ಬಿಜೆಪಿ ನಾಯಕ ಸುಖ್ಬೀರ್ ಅಲಿಯಾಸ್ ಸುಖಿ ಅವರನ್ನು ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಗುರುಗ್ರಾಮದ ಸದರ್ ಬಜಾರ್ ಪ್ರದೇಶದಲ್ಲಿ ರಿಥೌಜ್ ನಿವಾಸಿ ಸುಖ್ಬೀರ್ ಮೇಲೆ ಗುಂಡಿನ ದಾಳಿ ನಡೆದಿದೆ.ಇವರು ಸೊಹ್ನಾ ಮಾರುಕಟ್ಟೆಯ ಮಾಜಿ ಉಪಾಧ್ಯಕ್ಷ ಕೊಲೆಯ ನಂತರ,ಇಡೀ ಪ್ರದೇಶದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಹೊರಬಂದಿವೆ,ಇದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಸಿಡಿಲು ಬಡಿದು ಯುವತಿ ಮೃತ್ಯು

ಬೆಳಗಾವಿ;ಸಿಡಿಲು ಬಡಿದು ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ದಡೇರಕೊಪ್ಪ ಗ್ರಾಮದಲ್ಲಿ ನಡೆದಿದೆ. ಕವಿತಾ ಸಿದ್ದಪ್ಪ ‌ಕರಿಕಟ್ಟಿ (23) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.ಕವಿತಾ ಕೃಷಿ ಕೆಲಸಕ್ಕೆಂದು ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್​ ತೆರಳುವ ವೇಳೆ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಆರಂಭವಾಗಿದ್ದು,ಸಿಡಿಲು ಬಡಿದು ಯುವತಿ ಸಾವನ್ನಪ್ಪಿದ್ದಾರೆ.ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Shocking ಶಸ್ತ್ರಚಿಕಿತ್ಸೆ ಬಳಿಕ ಭ್ರೂಣ ಬೆಳೆದಿಲ್ಲ ಎಂದು ಮತ್ತೆ ಶಿಶುವನ್ನು ಹೊಟ್ಟೆಯೊಳಗಿಟ್ಟು ಸ್ಟಿಚ್ ಹಾಕಿದ ವೈದ್ಯ;ಮುಂದೇನಾಯ್ತು

ಅಸ್ಸಾಂ;ಅಸ್ಸಾಂನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿರುವ ಶಿಶುವಿಗೆ ಬೆಳೆದಿಲ್ಲ ಎಂದು ಮತ್ತೆ ಶಿಶುವನ್ನು ಆಕೆಯ ಗರ್ಭದಲ್ಲೇ ವೈದ್ಯರು ಇರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕರೀಂಗಂಜ್​ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ಡಾ.ಆಶಿಶ್ ಕುಮಾರ್ ಬಿಸ್ವಾಸ್ ಹೊಟ್ಟೆ ನೋವು ಎಂದು ಬಂದ ಗರ್ಭಿಣಿಗೆ 12 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ್ದರು.ಹೆರಿಗೆ ಮಾಡಿಸಲೆಂದೇ ಆಪರೇಷನ್​ ಮಾಡಿದ್ದರು.ಆದರೆ, ಆಗ ಶಿಶುವಿಗೆ ಇನ್ನೂ ಏಳೇ ತಿಂಗಳಾಗಿದ್ದು, ಭ್ರೂಣ ಬೆಳೆದಿಲ್ಲ ಎಂದು ತಿಳಿದು ಆ ಶಿಶುವನ್ನು ಮತ್ತೆ ಆಕೆಯ ಗರ್ಭದಲ್ಲೇ … Read more

ದಾವೂದ್ ಇಬ್ರಾಹೀಂ ಮತ್ತು ಸಹಚರರ ಮಾಹಿತಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ NIA ಘೋಷಣೆ

ಮುಂಬೈ;ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಎನ್ ಐಎ ಘೋಷಿಸಿದೆ. ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ ಐಎ), ದಾವೂದ್ ಇಬ್ರಾಹಿಂ ಗ್ಯಾಂಗ್ ನ ಕಿಂಗ್ ಪಿನ್ ಛೋಟಾ ಶಕೀಲ್ ಹಾಗೂ ಇತರ ಉಗ್ರರಾದ ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ,ಟೈಗರ್ ಮೆಮೊನ್ ವಿರುದ್ಧ ತಲಾ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರ ನಟೋರಿಯಸ್ ಉಗ್ರರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ … Read more

9 ತಿಂಗಳ ಗರ್ಭಿಣಿ ಹಂದಿ ಜ್ವರದಿಂದ ಸಾವು

ಮೈಸೂರು; 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಮೃತರು, ಛಾಯಾಗೆ 4 ವರ್ಷದ ಗಂಡು ಮಗು ಇದೆ. 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಇನ್ನೂ ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಗೆ ಎಚ್‌1 ಎನ್‌1 ಸೋಂಕು ತಗುಲಿತ್ತು.ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಉಡುಪಿ; ವಿದ್ಯಾರ್ಥಿಗಳನ್ನು ಅಪಹರಣ; ನಾಲ್ವರು ಅರೆಸ್ಟ್

ಉಡುಪಿ;ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ತಂಡವೊಂದು ಅಪಹರಣ ಮಾಡಿ, ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ತಡರಾತ್ರಿ ನಗರದ ಕಲ್ಸಂಕ ಜಂಕ್ಷನ್ ಬಳಿ ನಡೆದಿದೆ. ಉಡುಪಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾದ ಬಿಜು ಮತ್ತು ಮಹಮ್ಮದ್ ಸಿನಾನ್ ಕರಾವಳಿ ಬೈಪಾಸ್ ಬಳಿಯಿರುವ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಲ್ಸಂಕ ಜಂಕ್ಷನ್ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಕಾರು ಬಂದಿದೆ. ಕಾರಿನಲ್ಲಿ ಬಂದ ನಾಲ್ಕು … Read more

ಭೀಕರ ಅಪಘಾತ; ಒಂದೇ ಮನೆಯ ಮೂವರು ದುರ್ಮರಣ

ವಿಜಯಪುರ:ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರದ ಕುಪಕಡ್ಡಿ ಬಳಿ ನಡೆದಿದೆ. ಮೂರು ತಿಂಗಳ ಮಗು ಸೇರಿ ಅಪಘಾತದಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಮೂವರೂ ಮೃತಪಟ್ಟಿದ್ದಾರೆ. ಸಾರಿಗೆ ಸಂಸ್ಥೆಯ ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರದ ಕುಪಕಡ್ಡಿ ಬಳಿ ನಡೆದಿದೆ. … Read more