ಉಡುಪಿ ಬೈಕ್ ಅಪಘಾತ;19ರ ಹರೆಯದ ಯುವಕ ಮೃತ್ಯು

ಉಡುಪಿ:ಬೈಕ್‌ ಒಂದು ಚರಂಡಿಗೆ ಬಿದ್ದು ಸವಾರ ಮೃತಪಟ್ಟ ಘಟನೆ ಅಂಬಲಪಾಡಿ ಕಿನ್ನಿಮೂಲ್ಕಿ ರಾ.ಹೆ. 66ರ ಸರ್ವಿಸ್‌ ರಸ್ತೆಯಲ್ಲಿ ನಡೆದಿದೆ‌. ಮಲ್ಪೆ ಕೊಡವೂರು ನಿವಾಸಿ,ಮಣಿಪಾಲದ ಕಾಲೇಜಿನ ವಿದ್ಯಾರ್ಥಿ ಲಿಯಾನ್‌ ವಿಲ್ಸನ್‌(19)ಮೃತ. ಸರ್ವಿಸ್‌ ರಸ್ತೆಯಲ್ಲಿ ಅಂಬಲಪಾಡಿಯಿಂದ ಕಿನ್ನಿಮೂಲ್ಕಿ ಕಡೆಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಸವಾರ ಬೈಕ್‌ ಸಮೇತ ಚರಂಡಿಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದು,ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಈ ಕುರಿತು ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ 7ರ ಬಾಲಕ

ತೆಲಂಗಾಣ;7 ವರ್ಷದ ಬಾಲಕನೋರ್ವ ತಂದೆಯ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸುದ್ದಿಯಾಗಿದ್ದಾನೆ. ತೆಲಂಗಾಣ ಮುಸ್ತಾಬಾದ್ ನಿವಾಸಿ ಬಾಲಕೃಷ್ಣ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ.ಕುಡಿತದ ಅಮಲಿನಲ್ಲಿ ತನ್ನ ಪತ್ನಿಯ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಿದ್ದು,ಇದನ್ನು ನೋಡಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಭರತ್ ರೋಸಿ ಹೋಗಿದ್ದ. ತಾಯಿಯ‌ ಮೇಲೆಯಲ್ಲದೆ ತನಗೂ ಹಾಗು ತನ್ನ ಸಹೋದರಿ ಗೂ ತಂದೆ ಹೊಡೆಯುತ್ತಿದ್ದ ಇದರಿಂದ ನೊಂದು ಕೊಂಡು‌ಬಾಲಕ ನೇರ ಪೊಲೀಸ್ ಠಾಣೆಗೆ ತೆರಳಿ‌‌ ದೂರು ನೀಡಿದ್ದಾನೆ. … Read more

ಮಗನ ಸಾವಿನ ತನಿಖೆಯಲ್ಲಿ ಅನ್ಯಾಯವಾಗಿದೆ ಎಂದು ದುಃಖ ವ್ಯಕ್ತಪಡಿಸಿದ ಫಾಝಿಲ್ ತಂದೆ

ಸುರತ್ಕಲ್;ಫಾಝಿಲ್ ಹತ್ಯೆಗೆ ಪೊಲೀಸರು ತೋರ್ಪಡಿಕೆಗೆ ಮಾತ್ರ ಸಿಸಿಟಿವಿಯಲ್ಲಿ ಇರುವ ಆರೋಪಿಗಳನ್ನು ಬಂಧಿಸಿದ್ದಾರೆ‌. ಆದರೆ ಕೃತ್ಯದ ಹಿಂದಿನ ಆರೋಪಿಗಳ ಬಂಧನ ಆಗಿಲ್ಲ ಎಂದು ಫಾಝಿಲ್ ತಂದೆ ಫಾರೂಕ್ ಕಣ್ಣೀರು ಹಾಕಿದ್ದು,ನನ್ನ ಮಗನಿಗೆ ಬಂದ ಸ್ಥಿತಿ ಇನ್ಯಾರಿಗೂ ಬರಬಾರದು,ಇವರನ್ನು ಶಿಕ್ಷಿಸದೆ ಬಿಟ್ಟರೆ ಮತ್ತೆ ಇಂತದ್ದೇ ಕೃತ್ಯ ನಡೆಯುತ್ತದೆ ಎಂದು ಹೇಳಿದ್ದಾರೆ. ಸುರತ್ಕಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮತನಾಡಿದ ಫಾರೂಕ್ ಅವರು, 27 ವರ್ಷಗಳ ಹಿಂದಿನ ಕಾರಿನಲ್ಲಿ 7 ಆರೋಪಿಗಳು ಪರಾರಿಯಾಗಲು ಸಾಧ್ಯನಾ? ಇದ್ರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ಮೃತ … Read more

ಬೀದರ್ ; ಕುಡಿದ ಮತ್ತಿನಲ್ಲಿ ಗುದದ್ವಾರದಲ್ಲಿ ಲೋಟ ತುರುಕಿಸಿದ ವ್ಯಕ್ತಿ, ಸ್ಥಿತಿ ಗಂಭೀರ

ಬೀದರ್;ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಗುದದ್ವಾರದಲ್ಲಿ ಲೋಟ ತುರುಕಿಸಿದ ವಿಚಿತ್ರ ಪ್ರಸಂಗ ನಡೆದಿದೆ. ಬೀದರ್‌ ಜಿಲ್ಲೆಯ ಚಿಟಗುಪ್ಪಾದ 38 ವರ್ಷದ ವ್ಯಕ್ತಿಗೆ ಕಲಬುರಗಿಯ ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಶಸ್ತಚಿಕಿತ್ಸೆ ಮಾಡಿ ರಕ್ಷಿಸಿದೆ. ಕುಡಿದ ನಶೆಯಲ್ಲಿ ವಿಕೃತಿ ಮೆರೆದು ಈತ ಸ್ಟೀಲ್ ಲೋಟವನ್ನು ಗುದದ್ವಾರದ ಮೂಲಕ ಹೊಟ್ಟೆಗೆ ತುರುಕಿದ್ದ. ಘಟನೆಯಿಂದ ವ್ಯಕ್ತಿಯ ಕರುಳಿಗೆ ಡ್ಯಾಮೇಜ್ ಆಗಿತ್ತು. ಕರುಳು ಡ್ಯಾಮೇಜ್ ಆಗಿದ್ದರಿಂದ ವಿಪರೀತ ರಕ್ತಸ್ರಾವ ಉಂಟಾಗಿತ್ತು. ಅತೀವ ರಕ್ತಸ್ರಾವದಿಂದ ಕಂಗೆಟ್ಟ ಈತ ಬೀದರ್‌ನಿಂದ ಕಲಬುರಗಿಗೆ ತೆರಳಿ ಆಸ್ಪತ್ರೆಗೆ … Read more

BIG NEWS ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸುಪ್ರೀಂಕೋರ್ಟ್‌ ತಡೆ

ಚಾಮರಾಜಪೇಟೆ;ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದ್ದು ಈ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ. ಈ ಕುರಿತು ಹೈಕೋರ್ಟ್​ನಲ್ಲಿ ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.ಪೂಜೆಯನ್ನು ಬೇರೆ ಕಡೆ ನಡೆಸುವಂತೆ ಮತ್ತು ಹೈಕೋರ್ಟ್‌ ನಲ್ಲಿ ಈ ಕುರಿತು ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಸುದೀರ್ಘ ಎರಡು ಗಂಟೆಗಳ ವಾದ ವಿವಾದವನ್ನು ಆಲಿಸಿದ ನಂತರ ತ್ರಿಸದಸ್ಯ ಪೀಠ, ಎರಡೂ ಬದಿಯ ಪಕ್ಷಕಾರಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ವಕ್ಛ್ ಬೋರ್ಡ್ ಪರ ಕಪಿಲ್ … Read more

ಈದ್ಗಾ ಮೈದಾನ ವಿವಾದ; ಸುಪ್ರೀಂಕೋರ್ಟ್ ಜಡ್ಜ್ ಗಳ ನಡುವೆ ಭಿನ್ನ ಅಭಿಪ್ರಾಯದ ಹಿನ್ನೆಲೆ, ವಿಚಾರಣೆ ಸಿಜೆಐಗೆ ವರ್ಗಾವಣೆ; ವರದಿ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶಕ ತಡೆ ನೀಡಲು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ಅಭಿಪ್ರಾಯಗಳು ಬಂದ ಕಾರಣ ಪ್ರಕರಣವನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ವಹಿಸಲಾಗಿದೆ ಎಂದು ವರದಿಯಾಗಿದೆ. ಗಣೇಶ ಚತುರ್ಥಿ ಆಚರಿಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಮೊರೆ ಹೋಗಲಾಗಿತ್ತು.ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ಸುಧಾಂಶು … Read more

ನೆಲ್ಯಾಡಿ; ಮಹಿಳೆ ಅನುಮಾನಾಸ್ಪದ ಸಾವು, ಹಲ್ಲೆಗೊಳಗಾಗಿರುವ ಶಂಕೆ

ನೆಲ್ಯಾಡಿ;ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದಿದೆ. ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ ಎಂಬವರ ಪತ್ನಿ ಮೋಹಿನಿ(36)ಮೃತ ಮಹಿಳೆ.ಇಂದು ಬೆಳಿಗ್ಗೆ ಗಣೇಶ ಮತ್ತು ಮೋಹಿನಿ ನಡುವೆ ಜಗಳವಾಗಿದೆ ಎನ್ನಲಾಗಿದೆ.ಈ ವೇಳೆ ಪತ್ನಿ ಮೇಲೆ ಗಣೇಶ್ ಹಲ್ಲೆ ಮಾಡಿದ ಕಾರಣ ಮೋಹಿನಿ ಮೃತಪಟ್ಟ ಬಗ್ಗೆ ಆರೋಪ ಕೇಳಿ ಬಂದಿದೆ. ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ಮನೆಯಲ್ಲಿ ಇಬ್ಬರು ಒಂದೇ ದಿ‌‌ನ ಹೃದಯಾಘಾತದಿಂದ ಸಾವು;ಮನಕಲಕುವ ಘಟನೆ

ಮೈಸೂರು:ತಾಯಿ-ಮಗ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟ ಘಟನೆ,ಮೈಸೂರು ಜಿಲ್ಲೆ ಎಚ್​.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ಬಳಿ ನಡೆದಿದೆ. ಸಣ್ಣಮಂಚಮ್ಮ(58),ಇವರ ಪುತ್ರ ಕೃಷ್ಣ(45)ಮೃತರು. ​ಪಟ್ಟಣದ ಸೇಂಟ್​ ಮೇರಿಸ್​ ಆಸ್ಪತ್ರೆ ಬಳಿ ಕೃಷ್ಣ ಅವರು ಟೀ ಅಂಗಡಿ ನಡೆಸುತ್ತಿದ್ದರು.ಕೃಷ್ಣ ಅವರ ತಾಯಿ ಸಣ್ಣಮಂಚಮ್ಮ ಭಾನುವಾರ ಪಾರ್ಶ್ವವಾಯುಗೆ ತುತ್ತಾಗಿದ್ದರು.ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ ಈ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ತಾಯಿಗೆ ಅನಾರೋಗ್ಯದ ವಿಚಾರ ಕೇಳಿದ ಕೃಷ್ಣ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಕೃಷ್ಣ … Read more

ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಕೇಸ್ ರದ್ದು, ಎಲ್ಲಾ ಪ್ರಕ್ರಿಯೆಗಳನ್ನು ತೀರ್ಪಿನೊಂದಿಗೆ ಮುಕ್ತಾಯ ಮಾಡಲಾಗಿದೆ ಎಂದ ಸುಪ್ರೀಂಕೋರ್ಟ್

ಹೊಸದಿಲ್ಲಿ:ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ,ದಿ.ಕಲ್ಯಾಣ್ ಸಿಂಗ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ಕೈಬಿಟ್ಟಿರುವುದಾಗಿ ತಿಳಿಸಿದೆ. ನ್ಯಾಯಾಂಗ ನಿಂದನೆ ಅರ್ಜಿಯನ್ನು ಮೊದಲೇ ಪಟ್ಟಿ ಮಾಡಬೇಕಿತ್ತು, ಆದರೆ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಅಯೋಧ್ಯೆ ಭೂ ವಿವಾದವನ್ನು ನಿರ್ಧರಿಸುವ ನವೆಂಬರ್ 9, 2019 ರ ತೀರ್ಪಿನೊಂದಿಗೆ ಈ ಸಮಸ್ಯೆ ಮುಕ್ತಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉತ್ತರಪ್ರದೇಶ ಸರ್ಕಾರವು ರಥಯಾತ್ರೆಗೆ ಅವಕಾಶ ನೀಡಿದ್ದು, ಇದರ ಪರಿಣಾಮ … Read more

ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಕೇಸ್ ದಾಖಲು

ಚಿತ್ರದುರ್ಗ;ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂಕಷ್ಠದಲ್ಲಿರುವ ಮುರುಘಾ ಶ್ರೀಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತಂತ್ರಸ್ತ ಬಾಲಕಿಯಲ್ಲಿ ಒಬ್ಬಳು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು,ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ ಕೇಸ್ ದಾಖಲಾಗಿದೆ ಎನ್ನಲಾಗಿದೆ. ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆ ಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಈಗಾಗಲೇ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿಯನ್ನು ಸೋಮವಾರ ಶ್ರೀಗಳ ಪರ ವಕೀಲರು ಚಿತ್ರದುರ್ಗ ಕೋರ್ಟ್‌ ಗೆ … Read more