BIG NEWS ಮನೆಯಲ್ಲಿ ಸಾಮೂಹಿಕ ನಮಾಜ್ ಮಾಡಿದ 26 ಮಂದಿ ವಿರುದ್ಧ ಕೇಸ್ ದಾಖಲು

ಉತ್ತರಪ್ರದೇಶ;ಮೊರಾದಾಬಾದ್ ಪೊಲೀಸರು ಮನೆಯಲ್ಲಿ ನಮಾಜ್ ಮಾಡಿದ 26 ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಂದ ಪೂರ್ವಾನುಮತಿಯಿಲ್ಲದೆ ಅವರು ಪ್ರಾರ್ಥನೆ ಮಾಡುತ್ತಿದ್ದಾರೆ ಮತ್ತು ಇದು “ಕಾನೂನುಬಾಹಿರ ಸಭೆ” ಎಂದು ಪೊಲೀಸರು ಹೇಳಿದ್ದಾರೆ. ಚಂದ್ರ ಪಾಲ್ ಸಿಂಗ್ ಎಂಬಾತನ ದೂರಿನ‌ ಮೇರೆಗೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಛಾಜ್ಲೆಟ್ ಪ್ರದೇಶದ ದುಲ್ಹೆಪುರ್ ಗ್ರಾಮದ ಇಬ್ಬರು ಸ್ಥಳೀಯ ಗ್ರಾಮಸ್ಥರ ಮನೆಯಲ್ಲಿ ಹಲವು ಜನರು ಜಮಾಯಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಎಂದು ಮೊರಾದಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮೀನಾ ಸುದ್ದಿಗಾರರಿಗೆ ತಿಳಿಸಿದರು. ಸ್ಥಳೀಯ … Read more

ಪ್ರೀತಿ ನಿರಾಕರಿಸಿದ ಅನ್ಯಕೋಮಿನ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ; ಯುವತಿ ಸಾವು, ಭಾರಿ ವಿವಾದ ಎಬ್ಬಿಸಿದ ಒ‌ನ್ ಸೈಡ್ ಲವ್ ಕೇಸ್

ರಾಂಚಿ;ಪ್ರೀತಿ ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಯುವಕನೋರ್ವ ಬೆಂಕಿ ಹಚ್ಚಿದ್ದು,ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.ಪ್ರಕರಣ ಜಾರ್ಖಾಂಡ್ ರಾಜ್ಯದಲ್ಲಿ ವಿಭಿನ್ನ ಆಯಾಮವನ್ನು ಕೂಡ ಪಡೆದುಕೊಂಡಿದೆ ನಾಲ್ಕು ದಿನಗಳ ಹಿಂದೆ ಶಾರುಖ್ ಹುಸೇನ್ ಎಂಬಾತ ಅಂಕಿತ ಎಂಬ ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಂತರ ಜಾರ್ಖಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಕಿತಾ ಕುಮಾರಿ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.ಸ್ವರಾಜ್ಯ ಪತ್ರಕರ್ತೆ ಸ್ವಾತಿ ಗೋಯಲ್ ಶರ್ಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 2.30ಕ್ಕೆ ಅಂಕಿತಾ ಕೊನೆಯುಸಿರೆಳೆದಿದ್ದಾಳೆ ಎಂದು ಬಾಲಕಿಯ ತಂದೆ ಸಂಜೀವ್ … Read more

ಮೋದಿ ಒರಟು ವ್ಯಕ್ತಿ ಎಂದುಕೊಂಡಿದ್ದೆ ಆದರೆ…..; ಮೋದಿ ಬಗ್ಗೆ 2006 ರ ಸ್ಟೋರಿ ಹೇಳಿದ ಗುಲಾಂ ನಬಿ ಆಝದ್

ನವದೆಹಲಿ;ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್‌ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಓರ್ವ ಒರಟುತನದ ವ್ಯಕ್ತಿ ಎಂದುಕೊಂಡಿದ್ದೆ.ಆದರೆ ಅವರಿಗೆ ಮಾನವೀಯತೆ ಇದೆ ಎಂದು 2006 ರ ಘಟನೆಯನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು. ಅಂದು ನಾನು ರಾಜ್ಯಸಭೆಯಿಂದ ನಿರ್ಗಮಿಸುತ್ತಿದ್ದೇನೆ ಎಂಬ ಸಂಸತ್ತಿನಲ್ಲಿ ಮೋದಿ ಕಣ್ಣೀರು ಹಾಕಲಿಲ್ಲ. ನೀವು ಅವರ ಭಾಷಣದಲ್ಲಿದ್ದ ವಿಚಾರಗಳನ್ನು ಓದಿದರೆ ಇದು ಗೊತ್ತಾಗುತ್ತದೆ.ಅಲ್ಲಿ ಮೋದಿ ಒಂದು ಘಟನೆಯ ಬಗ್ಗೆ ಮಾತನಾಡುತ್ತಿದ್ದರು ಎಂದರು. 2006ರಲ್ಲಿ ಕಾಶ್ಮೀರದಲ್ಲಿ ನಡೆದ … Read more

ಕರ್ನಾಟದಿಂದ ಡೆಲ್ಲಿಗೆ ಅಮಿತ್ ಶಾ ಮನೆಮುಂದೆ ಪ್ರತಿಭಟನೆಗೆ ತೆರಳಿದ ಯುವತಿ; ಪೊಲೀಸರಿಂದ‌ ತಡೆ

ನವದೆಹಲಿ; ನಾವು ಅಮಿತ್ ಶಾ ಮನೆಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋಗಿದ್ದೆವು ಆದರೆ ಅನಮತಿ ನೀಡಿಲ್ಲ ಎಂದು ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ಹೇಳಿದ್ದಾರೆ. ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಭೇಟಿಗೆ ಅವಕಾಶ ಸಿಗಲಿಲ್ಲ.ಅಮಿತ್​ ಶಾ ಅವರ ಮನೆ ಬಳಿ ಹೋದಾಗ ನಮ್ಮನ್ನು ಥಾಣಾ ಪೊಲೀಸ್​ ಠಾಣೆಗೆ ಕರೆದೊಯ್ದರು. ನಮ್ಮ ಪ್ರತಿಭಟನೆಗೆ ತಡೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ. ಆ.15 ರಂದು ಕೂಡ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋಗುವಾಗಲೂ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ … Read more

ಕ್ಲಾಸ್ ನಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ವಿದ್ಯಾರ್ಥಿನಿಯರ ಹೊಡೆದಾಟ, ವಿಡಿಯೋ ವೈರಲ್

ಕಾನ್ಪುರ; ಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರ ಜಡೆ ಜಗಳದ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ಭಾರೀ ವೈರಲ್‌ ಅಗಿದೆ. ಮೂವರು ವಿದ್ಯಾರ್ಥಿನಿಯರು ಕ್ಲಾಸ್ ನಲ್ಲಿ ಜಡೆ ಹಿಡಿದು ಎಳೆದಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕ್ಲಾಸ್‌ನಲ್ಲಿದ್ದ ಇತರ ವಿದ್ಯಾರ್ಥಿನಿಯರು ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಮಧ್ಯಪ್ರವೇಶಿಸಿ ಜಟಾಪಟಿಗಿಳಿದಿದ್ದವರನ್ನು ದೂರ ಸರಿಸಲು ಸಹ ಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಕಿತ್ತಾಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ವಿಡಿಯೋವನ್ನು ಪತ್ರಕರ್ತ ಅಮಿತ್ ಸಿಂಗ್ ಹಂಚಿಕೊಂಡಿದ್ದಾರೆ. ಕಾನ್ಪುರದ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿನಿಯರ ಜಗಳ ಎಂದು ಬರೆದುಕೊಂಡಿದ್ದಾರೆ. ಇನ್ನು … Read more

ಮಂಗಳೂರು; ಮೋದಿ ಆಗಮನದ ಹಿನ್ನೆಲೆ ಟೆಂಟ್ ಹಾಕಿ ವಾಸಿಸುತ್ತಿದ್ದ ಅಲೆಮಾರಿಗಳ ತೆರವು, ಕಂಗಾಲಾದ 9 ಕುಟುಂಬಗಳು!

ಮಂಗಳೂರು: ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದ ಹಿನ್ನೆಲೆ ಮುಂಜಾಗರೂಕತೆಯ ಕ್ರಮವಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ ಅಲೆಮಾರಿಗಳನ್ನು ಪೊಲೀಸರು ಬೆದರಿಸಿ ತೆರಳುವಂತೆ ಸೂಚಿಸಿದ್ದು ಅಲೆಮಾರಿಗಳನ್ನು ಬೀದಿಪಾಲು ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಪೊಲೀಸರು ಬಂಗ್ರಕೂಳೂರು ಪ್ರದೇಶಕ್ಕೆ ತೆರಳಿ ಅಲ್ಲಿ ಟೆಂಟ್ ಹಾಕಿ ಬದುಕು ಸಾಗಿಸುತ್ತಿದ್ದ 9 ಕುಟುಂಬಗಳನ್ನು ತೆರವುಗೊಳಿಸಿದ್ದು ಇದರಿಂದ ಸುಮಾರು 30ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ ಎಂದು ವರದಿಯಾಗಿತ್ತು. … Read more

ರಾಷ್ಟ್ರಧ್ವಜವನ್ನು ಹಿಡಿಯಲು ನಿರಾಕಾರಿಸಿದ ಅಮಿತ್ ಶಾ ಪುತ್ರ; ವಿವಾದಕ್ಕೆ ಕಾರಣವಾದ ಜಯ್ ಶಾ ಅವರ ವಿಡಿಯೋ ವೀಕ್ಷಿಸಿ

ನವದೆಹಲಿ;ಬಿಸಿಸಿಐ ಕಾರ್ಯದರ್ಶಿ ಅಮಿತ್ ಶಾ ಪುತ್ರ ವಿವಾದಕ್ಕೆ ಸುದ್ದಿಯಾಗಿದ್ದಾರೆ. ಅವರು ದುಬೈನಲ್ಲಿ ನಡೆದ ಏಷ್ಯಕಪ್ 2022ರ ಭಾರತ ಪಾಕಿಸ್ತಾನದ ಕ್ರಿಕೆಟ್ ಸಂಧರ್ಭದಲ್ಲಿ ಭಾರತದ ಧ್ವಜವನ್ನು ಹಿಡಿಯಲು ನಿರಾಕರಿಸಿರುವ ವಿಡಿಯೋ ವೈರಲ್ ಆಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜವನ್ನು ಕೈಯ್ಯಲ್ಲಿ ಹಿಡಿದುಕೊಂಡು ಸಂಭ್ರಮಿಸುವಂತೆ ಧ್ವಜವೊಂದನ್ನು ನೀಡುತ್ತಾರೆ. ಆದರೆ ಜಯ್ ಶಾ ಅವರು ಅದನ್ನು ಪಡೆಯಲು ನಿರಾಕರಿಸಿದ್ದರು. ಜಯ್ ಶಾ ಅವರ ಈ ವಿಡಿಯೋ ವೈರಲ್ ಬೆನ್ನಲ್ಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ. ತ್ರಿವರ್ಣ ಧ್ವಜ ಪಡೆಯಲು … Read more

ಹೆತ್ತ ತಾಯಿ, ಹೆಂಡತಿ & ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿ; ಬೆಚ್ಚಿಬೀಳಿಸುವ ಘಟನೆ

ಡೆಹ್ರಾಡೂನ್:ತಾಯಿ ಮತ್ತು ಹೆಂಡತಿ ಜೊತೆಗೆ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ನಾಗಘೇರ್ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ‌. ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಅರಾರಿಯಾ ಪ್ರದೇಶದ ನಿವಾಸಿ ಮಹೇಶ್ ಎಂಬಾತ ತನ್ನ ಕುಟುಂಬದ ಐವರನ್ನು ಅಮಾನುಷಯವಾಗಿ ಕೊಲೆ ಮಾಡಿದ್ದು ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ರಾಣಿಪೋಖಾರಿಯ ಶಾಂತಿನಗರದಲ್ಲಿ ವಾಸಿಸುತ್ತಿದ್ದು,ವ್ಯಕ್ತಿಗೆ ನಾಲ್ಕು ಮಕ್ಕಳಿದ್ದರು. ಜನ್ಮ ನೀಡಿದ ತಾಯಿ,ಕಟ್ಟಿಕೊಂಡ ಹೆಂಡತಿ ಹಾಗೂ ಮೂವರು ಮುದ್ದು ಮಕ್ಕಳನ್ನು ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಆದರೆ ಇವರೊಬ್ಬರ ಮಗಳು ಚಿಕ್ಕಮ್ಮನ … Read more

BREAKING ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಪ್ರಕರಣ; ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ ಮುರುಘಾ ಶರಣರ‌ ಬಂಧನ

ಹಾವೇರಿ:ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಹಾವೇರಿ ಜಿಲ್ಲೆಯ ಬಂಕಾಪುರದ ಬಳಿಯ ಹೆದ್ದಾರಿಯಲ್ಲಿ ಇಂದು ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದಂತ ಮುರುಘಾ ಶ್ರೀ ಅಜ್ಞಾತ ಸ್ಥಳಕ್ಕೆ ತೆರಳಲು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.ಈ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ,ಅವರನ್ನು ಬಂಧಿಸಲಾಗಿದೆ.

ಹಿಜಾಬ್ ವಿವಾದ; ಕರ್ನಾಟಕ ಸರಕಾರಕ್ಕೆ ನೊಟೀಸ್, ಇಂದು ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲಾ ಬೆಳವಣಿಗೆ ನಡೆದಿದೆ?

ನವದೆಹಲಿ;ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಮುಂದಿನ ವಿಚಾರಣೆ ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದೆ. ಹಿಜಾಬ್ ವಿವಾದದ ಕುರಿತ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ,ಸುಪ್ರೀಂ ಕೋರ್ಟ್ ನಲ್ಲಿ 24 ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಲಾಗಿದೆ.ಈ ಅರ್ಜಿಗಳನ್ನು ಇಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ … Read more