ಇಡಿ ಅಧಿಕಾರಿಗಳಂತೆ ವೇಷ ಧರಿಸಿ ಜುವ್ಯೆಲ್ಲರಿ ಶಾಪ್ ಗೆ ಬಂದು ಸಿಕ್ಕಿಬಿದ್ದ ಕಳ್ಳರು

ಬೆಂಗಳೂರು;ನೆಲ್ಲೂರು ಜಿಲ್ಲೆಯಲ್ಲಿ ಕಳ್ಳರ ತಂಡವೊಂದು ಬೆಂಗಳೂರು ಜಾರಿ ನಿರ್ದೇಶನಾಲಯ ಹೆಸರಲ್ಲಿ ಭಾರಿ ಕಳ್ಳತನಕ್ಕೆ ಯೋಜನೆ ರೂಪಿಸಿ ಸಿಕ್ಕಿಬಿದ್ದಿದೆ. ನೆಲ್ಲೂರು ಕಾಕರ್ಲಾವರಿ ಸ್ಟ್ರೀಟ್‌ನ ಲಾವಣ್ಯ ಜ್ಯುವೆಲರ್ಸ್‌ನಲ್ಲಿ ಇಡಿ ಅಧಿಕಾರಿಗಳ ತಪಾಸಣೆ ಹೆಸರಲ್ಲಿ ದಾಳಿ ನಡೆಸಿದ ಕಳ್ಳರು ಸುಮಾರು 12 ಕೆಜಿ ಚಿನ್ನ ಲೂಟಿ ಮಾಡಲು ಯೋಜಿಸಿದ್ದರು. ಇವರ ಚಲನವಲನಗಳ ಮೇಲೆ ಅಂಗಡಿ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನಕಲಿ ವೇಷಾಧರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ.ಈ ವೇಳೆ,ಕಳ್ಳರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಸಿಕ್ಕಿಬಿದ್ದಿದ್ದಾರೆ. … Read more

ಬಾಲ್ಯದ ಗೆಳೆಯನ ಜೊತೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿಬಂದಿದ್ದ ಎರಡು ಮಕ್ಕಳ ತಾಯಿ ಪೊಲೀಸರ ವಶಕ್ಕೆ!

ಉತ್ತರಕನ್ನಡ:ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದ ಜೋಡಿಯೊಂದನ್ನು ಹಿಡಿದು ಕಾರವಾರ ಪೊಲೀಸರು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡು ಮಕ್ಕಳ ತಾಯಿತಾಗಿದ್ದ ಅಯಿಷಾ ರೆಹಮತುಲ್ಲಾಹ್ (24)ಎಂಬಾಕೆಗೆ ಬಾಲ್ಯದಿಂದಲೂ ಬೀರ್ ಮೈದಿನ್(27) ನಡುವೆ ಪ್ರೇಮಾಂಕುರವಾಗಿತ್ತು.ಆದರೆ ಆಯಿಷಾಗೆ ತಂದೆ ಬೇರೆಯವನ ಜೊತೆ ವಿವಾಹ ಮಾಡಿಸಿಕೊಟ್ಟಿದ್ದರು.ಇದರಲ್ಲಿ ದಂಪತಿಗೆ ಎರಡು ಮಕ್ಕಳಿದೆ.ಆದರೂ ಆರು ತಿಂಗಳ ಹಿಂದೆ ಹಳೇ ಪ್ರೇಮಿಗಳು ತಮಿಳುನಾಡಿನಿಂದ ಕಾರವಾರದ ಸೋನಾರವಾಡದಲ್ಲಿ ಬಂದು ನೆಲೆಸಿದ್ದರು.ಮಹಿಳೆ ಈಗ ಮತ್ತೆ ಮೂರು ತಿಂಗಳು ಗರ್ಭಿಣಿಯಾಗಿದ್ದಾರೆ. ಮೆಕಾನಿಕಲ್ ಎಂಜಿನಿಯರ್ ಪದವೀಧರ ಬೀರ್ ಮೈದಿನ್ ಜತೆ ಆಯಿಷಾ ಓಡಿಬಂದಿದ್ದರು.ಮೈದಿನ್ ಬಿಇ … Read more

ಗುಲಾಂ ನಬಿ ಆಝಾದ್ ರಾಹುಲ್ ಗಾಂಧಿ ಬಗ್ಗೆ ಕೊಟ್ಟ ಹೇಳಿಕೆಗೆ ಸಿದ್ದರಾಮಯ್ಯ ಹಲವು ವಿಚಾರಗಳು ಉಲ್ಲೇಖಿಸಿ ಪ್ರತಿಕ್ರಿಯೆ

ಬೆಂಗಳೂರು:ಗುಲಾಂ ನಬಿ ಆಜಾದ್ ರಾಜೀನಾಮೆ ಬಳಿಕ ರಾಹುಲ್ ಗಾಂಧಿಗೆ ಚೈಲ್ಡೀಸ್ ಎಂದು ಹೇಳಿಕೆ ನೀಡಿ ಟೀಕೆಯನ್ನು ಮಾಡಿದ್ದರು.ಪಕ್ಷದ ಅವನತಿಗೆ ರಾಹುಲ್ ಗಾಂಧಿ ಕಾರಣ ಎಂದು ಹೇಳಿದ್ದರು.ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಲವಾಗಿ ಖಂಡಿಸಿದ್ದಾರೆ. 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಹುಲ್ ಗಾಂಧಿಯವರು ತಾವು ಸಚಿವರಾಗದೆ,ಹಿರಿಯರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು.ಈಗ ಆಜಾದ್ ಅವರು ರಾಹುಲ್ ಗಾಂಧಿಯವರ ಮೇಲೆ ವೈಯಕ್ತಿಕ ಮಟ್ಟದ ದಾಳಿಗಿಳಿದಿರುವುದು ಖಂಡನೀಯ ಎಂದು ಹೇಳಿದ್ದಾರೆ. ಕಾಂಗ್ರೆಸ್ ತೊರೆದು ಅವರ ಪಾಡಿಗೆ ಅವರು ಹೋಗಿ ಬಿಟ್ಟಿದ್ದರೆ ಅವರಿಗೆ ಶುಭಕೋರಿ ಬೀಳ್ಕೊಡಬಹುದಿತ್ತೇನೋ? … Read more

ಹೆಂಡತಿಯ ಶವವನ್ನು ಮನೆಯೊಳಗಡೆ ಹೂತ ಶಿಕ್ಷಕ; ಸ್ಥಳೀಯರ ವಿರೋಧ, ಅಪರೂಪದ ಘಟನೆ

ದಿಂಡೋರಿ:ಸರಕಾರಿ ನೌಕರನೋರ್ವ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂತು ಹಾಕಿರುವ ಅಪರೂಪದ ಘಟನೆ ನಡೆದಿದೆ. ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕ ಓಂಕಾರ್ ದಾಸ್ ಎಂಬಾತನ ಪತ್ನಿ ರುಕ್ಮಿಣಿ(45)ಮೃತಪಟ್ಟಿದ್ದು,ನಂತರ ತಮ್ಮ ಮನೆಯ ವರಾಂಡದಲ್ಲಿಯೇ ಓಂಕಾರ ಪತ್ನಿಯ ಮೃತದೇಹ ಹೂತಿದ್ದಾರೆ. ಇವರು ತಮ್ಮ ಸಮುದಾಯದ ಸಂಪ್ರದಾಯವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂತು ಹಾಕಿದ್ದಾರೆ.ಆದರೆ ನೆರೆಹೊರೆಯವರು ವಿರೋಧಿಸಿದ ನಂತರ,ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯೊಳಗೆ ಶವವನ್ನು ಹೂಳಲು ಅಲ್ಲಿನ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ … Read more

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಮಹಡಿ ಮೇಲಿನಿಂದ ಬಿದ್ದು ಸುಹೇಲ್ ಸಾವು

ಕಲಬುರ್ಗಿ;ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸರ್ಕಾರಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ಹಮಾಲವಾಡಿ ಬಡಾವಣೆ ನಿವಾಸಿ ಶೇಖ್ ಸುಹೇಲ್ ಮೃತ ಆರೋಪಿ.ಈತನನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದರು.ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮುನ್ನ ಕೋವಿಡ್ ತಪಾಸಣೆಗೆ ಕರೆದುಕೊಂಡು ಹೋದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

BIG NEWS ಮುರುಘಾ ಶರಣರ ವಿರುದ್ಧ ಫೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಸ್ಪೋಟಕ‌ ಬೆಳವಣಿಗೆ, ಮಾಜಿ ಶಾಸಕನ ವಿರುದ್ಧವೂ ಲೈಂಗಿಕ‌ ದೌರ್ಜನ್ಯ ಕೇಸ್

ಮುರುಘಾ ಶರಣರ ವಿರುದ್ಧ ಫೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಸ್ಪೋಟಕ‌ ಬೆಳವಣಿಗೆ ಚಿತ್ರದುರ್ಗ;ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿರುವ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. ಮಠದ ಹಾಸ್ಟೆಲ್‌ ಲೇಡಿ ವಾರ್ಡನ್‌ ರಶ್ಮೀ ಚಿತ್ರದುರ್ಗ ಪೊಲೀಸ್‌ ಠಾಣೆಯಲ್ಲಿ ಮಾಜಿ‌ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಹಲವು ವರ್ಷಗಳಿಂದ ಸ್ವಾಮೀಜಿ ಹಾಗೂ ಬಸವರಾಜನ್‌ ನಡುವೆ ಜಟಾಪಟಿ ನಡೆಯುತ್ತಿತ್ತು.ಈ ಹಿನ್ನೆಲೆಯಲ್ಲಿ ಬಸವರಾಜನ್‌ ಅವರನ್ನು 2007ರಲ್ಲಿ ಆಡಳಿತಾಧಿಕಾರಿ ಹುದ್ದೆಯಿಂದ ತೆಗೆಯಲಾಗಿತ್ತು.ಆದರೆ ಅವರು … Read more

ದುಬೈಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ, ಅಲರ್ಟ್ ಆದ ಸಿಬ್ಬಂದಿಗಳು

ದುಬೈಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ, ಅಲರ್ಟ್ ಆದ ಸಿಬ್ಬಂದಿಗಳು ಚೆನ್ನೈ;ಚೆನ್ನೈನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಬಗ್ಗೆ ವರದಿಯಾಗಿದೆ. ಸುಮಾರು 160ಮಂದಿ ಪ್ರಯಾಣಿಕರಿದ್ದ ಇಂದು ವಿಮಾನವು ಬೆಳಿಗ್ಗೆ 7.20ಕ್ಕೆ ಚೆನ್ನೈಯಿಂದ ದುಬೈಗೆ ಟೇಕಫ್ ಗೆ ಸಿದ್ದವಾಗಿತ್ತು.ಈ ವೇಳೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ಬೆದರಿಕೆ ಕರೆ ಬಂದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ ಪೊಲೀಸರು ಕಾರ್ಯಾಚರಣೆಗಿಳಿದಿದ್ದು,ವಿಮಾನದೊಳಗೆ ಪರಿಶೀಲನೆ ನಡೆಸಿದ್ದಾರೆ. ಇದೀಗ ಕರೆ … Read more

ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು; ಹಣ್ಣು ಕೊಡಲು ವಾರ್ಡ‌ನ್ ಬಾಲಕಿಯರನ್ನು ಸ್ವಾಮೀಜಿ‌ ಬಳಿ ಕಳುಹಿಸಿ‌ಕೊಡುತ್ತಿದ್ದರು! ಆಪ್ತಸಮಾಲೋಚನೆ ವೇಳೆ ಬಾಲಕಿಯರು ಹೇಳಿದ್ದೇನು?

ಮೈಸೂರು:ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ನಜರಾಬಾದ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ ಮೂರನೇ ಆರೋಪಿ.ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ … Read more

ಬಿಲ್ಕೀಸ್ ಬಾನು ಪ್ರಕರಣ; ಆರೋಪಿಗಳ ಬಿಡುಗಡೆಯಿಂದ ಭಯಗೊಂಡು ಗ್ರಾಮ ತೊರೆದ ಹಲವು ಕಟುಂಬಗಳು!

ಬಿಲ್ಕೀಸ್ ಬಾನು ಪ್ರಕರಣ;ಆರೋಪಿಗಳ ಬಿಡುಗಡೆಯಿಂದ ಭಯಗೊಂಡು ಗ್ರಾಮ ತೊರೆದ ಹಲವು ಕಟುಂಬಗಳು! ನವದೆಹಲಿ:ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು 7 ಸಂಬಂಧಿಕರ ಹತ್ಯೆಗೆ ಸಂಬಂಧಿಸಿ ಜೈಲಿನಲ್ಲಿದ್ದ 11 ಅಪರಾಧಿಗಳ ಬಿಡುಗಡೆಗೆ ಹಿನ್ನೆಲೆ ಗುಜರಾತ್ ನ ರಂಧಿಕ್‌ಪುರ ಗ್ರಾಮದ ಮುಸ್ಲಿಮರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸುತ್ತಿದ್ದಾರೆ. ರಂಧಿಕ್ ಪುರ ಗ್ರಾಮಸ್ಥರು ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋಗದೆ ತಮ್ಮ ಗ್ರಾಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ರಂಧಿಕ್ ಪುರ ಗ್ರಾಮಸ್ಥರು ದೇವಗಢ್ ಬರಿಯಾಗೆ ವಲಸೆ ಹೋಗಿದ್ದಾರೆ.ವಲಸೆ ಹೋಗಿರುವ ಗ್ರಾಮಸ್ಥರು ಅಪರಾಧಿಗಳನ್ನು … Read more

ಯುವಕನಿಗಾಗಿ ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಇಬ್ಬರು ಅಪ್ರಾಪ್ತ ಬಾಲಕಿಯರು;ಯುವಕ ತಪ್ಪಿಸಿಕೊಂಡು ಪರಾರಿ

ಯುವಕನಿಗಾಗಿ ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಇಬ್ಬರು ಅಪ್ರಾಪ್ತ ಬಾಲಕಿಯರು;ಯುವಕ ತಪ್ಪಿಸಿಕೊಂಡು ಪರಾರಿ ಔರಂಗಾಬಾದ್:ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಸಾರ್ವಜನಿಕವಾಗಿ ಯುವಕನಿಗಾಗಿ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಪೈಥಾನ್ ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯರಲ್ಲಿ ಒಬ್ಬಳು ಯುವಕನೊಂದಿಗೆ ಬಸ್ ನಿಲ್ದಾಣಕ್ಕೆ ತೆರಳಿದ್ದಳು ಮತ್ತು ಇನ್ನೊಬ್ಬ ಬಾಲಕಿಗೆ ಈ ವಿಷಯ ತಿಳಿದಿದ್ದು,ಇಬ್ಬರನ್ನು ಹಿಂಬಾಲಿಸಿಕೊಂಡು ಸ್ಥಳಕ್ಕೆ ಬಂದಿದ್ದಾಳೆ. ಬಳಿಕ ಬಾಲಕಿಯರ ನಡುವೆ ವಾಗ್ವಾದ ನಡೆದಿದ್ದು, ಅದು … Read more