ಸಾಫ್ಟ್ ವೇರ್ ಇಂಜಿನಿಯರ್ ಯುವತಿ ಆತ್ಮಹತ್ಯೆ; ಸ್ಥಳದಲ್ಲಿ ಡೆತ್ ನೋಟು ಪತ್ತೆ

ಒಡಿಶಾ;ಇಂಜಿನಿಯರ್ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭುವನೇಶ್ವರದಲ್ಲಿ ನಡೆದಿದೆ.ಸ್ಥಳದಲ್ಲಿ ಡೆತ್ ನೋಟು ಸಿಕ್ಕಿದ್ದು,ಪ್ರೇಮ ವೈಫಲ್ಯದ ಬಗ್ಗೆ ಬರೆಯಲಾಗಿದೆ‌. ಶ್ವೇತಾ ಆತ್ಮಹತ್ಯೆ ಮಾಡಿಕೊಂಡವರು.ಈಕೆ ಸ್ವಯಂ ಉಸಿರು ಕಟ್ಟಿಸಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.ಘಟನೆಗೆ ಸಂಬಂಧಿಸಿ ಈಕೆಯ ಪ್ರಿಯಕರ‌ ಸೌಮ್ಯಜಿತ್ ಮೇಲೆ‌ ಕುಟುಂಬಸ್ಥರು ದೂರು‌ ದಾಖಲಿಸಿದ್ದಾರೆ. ಶ್ವೇತಾ ಭುವನೇಶ್ವರದ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದರು.ಸೌಮ್ಯಜಿತ್ ಗೆ ಪ್ರೀತಿಸುತ್ತಿದ್ದರು.ಆತ ಇದನ್ನೇ‌ ಬಂಡವಾಳವಾಗಿ ಬಳಸಿ ಆಕೆಯ ಖಾಸಗಿ ಚಿತ್ರ ತೆಗೆದು  ಹಣಕ್ಕಾಗಿ ಬ್ಲಾಕ್ ಮೇಲ್‌ ಮಾಡಿದ್ದಾನೆ.ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಭೀಕರ ಅಪಘಾತ; ಇಬ್ಬರು ಮದರಸಾ ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಮಲಪ್ಪುರಂ;ಇಬ್ಬರು ಮದರಸಾ ಕಾಲೇಜು ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟ ಘಟನೆ ಮೂಡಿಕ್ಕೋಡಿ ಎಂಬಲ್ಲಿ ನಡೆದಿದೆ. ಪಂಡಿಕ್ಕಾಡ್ ಕಾಲೇಜಿನ ಮೊಹಮ್ಮದ್ ಅಮೀನ್, ಮೊಹಮ್ಮದ್ ಇಸಾನ್ ಮೃತ ವಿದ್ಯಾರ್ಥಿಗಳು.‌ಇಬ್ಬರು ಕೂಡ 17 ರ ಹರೆಯದವರು. ಮಂಜೇರಿಯಿಂದ ಪಂಡಿಕ್ಕಾಡ್ ಗೆ ತೆರಳುತ್ತಿದ್ದ ಬಸ್ ವಿದ್ಯಾರ್ಥಿಗಳ ಬೈಕ್ ಗೆ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಮೃತದೇಹವನ್ನು‌ ಮಂಜೇರಿಯ ಆಸ್ಪತ್ರೆಗೆ ರವಾನಿಸಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಪ್ರವಾದಿ ನಿಂದನೆ ಕೇಸ್ ನಲ್ಲಿ ಬಂಧಿತ ಬಿಜೆಪಿ ಶಾಸಕ ರಾಜಾಸಿಂಗ್ ಮೇಲೆ ಬರೊಬ್ಬರಿ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ ಗೊತ್ತಾ?

ಹೈದ್ರಾಬಾದ್;ಪ್ರವಾದಿ ನಿಂದನೆ ಮಾಡಿದ ಬಿಜೆಪಿ ಉಚ್ಛಾಟಿತ ಶಾಸಕ ರಾಜಾಸಿಂಗ್ ಅವರನ್ನು ವ್ಯಾಪಕ ಪ್ರತಿಭಟನೆ ಹಿನ್ನೆಲೆ ಮತ್ತೆ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ರಾಜಾಸಿಂಗ್ ಬಂಧನದ ಬಳಿಕ ಚರಲಾಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. 2004 ರಿಂದ ಇಲ್ಲಿಯವರೆಗೂ ಶಾಸಕ ರಾಜಾಸಿಂಗ್ ಅವರ ವಿರುದ್ಧ ಬರೋಬ್ಬರಿ 101 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.ಈ ಪೈಕಿ 18 ಕೋಮು ಸಂಘರ್ಷದ ಪ್ರಕರಣಗಳಾಗಿವೆ ಎಂದು ತಿಳಿದು ಬಂದಿದೆ. ಬಿಜೆಪಿ ಶಾಸಕರಾಗಿರುವ ರಾಜಾಸಿಂಗ್ ಅವರನ್ನು ವಿವಾದದ ಬೆನ್ನಲ್ಲೇ ಬಿಜೆಪಿಯಿಂದ ಉಚ್ಛಾಟಣೆ ಮಾಡಲಾಗಿದೆ.

ಮದರಸಾಗಳಿಗೆ ಪರಿಶೀಲನೆಗೆ ಭೇಟಿ‌‌ ನೀಡಲಿದೆ ಸರಕಾರಿ‌ ಅಧಿಕಾರಿಗಳ‌‌ ತಂಡ!; ಶಿಕ್ಷಣ ಸಚಿವರು ಹೇಳಿದ್ದೇನು?

ಮದರಸಾಗಳಿಗೆ ಪರಿಶೀಲನೆಗೆ ಭೇಟಿ‌‌ ನೀಡಲಿದೆ ಸರಕಾರಿ‌ ಅಧಿಕಾರಿಗಳ‌‌ ತಂಡ!;ಶಿಕ್ಷಣ ಸಚಿವರು ಹೇಳಿದ್ದೇನು? ಬೆಂಗಳೂರು:ರಾಜ್ಯದ ಒಂದಷ್ಟು ಮದರಸಾಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ’ಶಿಕ್ಷಣ ಹಕ್ಕು ಕಾಯ್ದೆ’ಅನುಸಾರ ಔಪಚಾರಿಕ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಮದರಸಾಗಳಲ್ಲಿ ಔಪಚಾರಿಕ ಶಿಕ್ಷಣದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ … Read more

ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯ ಬರ್ಬರವಾಗಿ ಕೊಲೆ

ವಿಜಯಪುರ;ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಹಳಗುಣಕಿ ಹೊರವಲಯದಲ್ಲಿ ನಡೆದಿದೆ. ಪಲ್ಲವಿ ವಠಾರ್(26)ಕೊಲೆಯಾದ ಯುವತಿ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.ಘಟನೆಯಿಂದ ಯುವತಿಯ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ‌. ಯವತಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.

BIG NEWS ಬಿಜೆಪಿ ನಾಯಕಿ ಸೋನಾಲಿ ಫೋಗಟ್ ವ್ಯವಸ್ಥಿತ ಕೊಲೆ; ಸಿಸಿಟಿವಿಯಲ್ಲಿ ಸ್ಪೋಟಕ ಮಾಹಿತಿ ಸೆರೆ

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ವ್ಯವಸ್ಥಿತ ಕೊಲೆ; ಸಿಸಿಟಿವಿಯಲ್ಲಿ ಸ್ಪೋಟಕ ಮಾಹಿತಿ ಸೆರೆ ದೆಹಲಿ:ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಈ ಕುರಿತು ಗೋವಾ ಪೊಲೀಸರು ಮಾಹಿತಿ ನೀಡಿದ್ದು, ಸೊನಾಲಿಗೆ ಜ್ಯೂಸ್ ನಲ್ಲಿ ವಿಷ ಹಾಕಿ ಕೊಟ್ಟಿರುವುದಾಗಿ ದೃಢಪಡಿಸಿದ್ದಾರೆ‌. ಸೊನಾಲಿಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖವಿಂದರ್ ವಾಸಿ ಅವರು ಉದ್ದೇಶಪೂರ್ವಕವಾಗಿ ಆಕೆಯ ಜ್ಯೂಸ್​ನಲ್ಲಿ ವಿಷವನ್ನು ಹಾಕಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ಶುಕ್ರವಾರ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ … Read more

ಉಡುಪಿ;ಯುವಕನೋರ್ವ ಹೃದಯಾಘಾತದಿಂದ ಮೃತ್ಯು, ಪ್ರೀತಿಸಿ ಮದುವೆಯಾಗಿದ್ದ ಆತನ ಪತ್ನಿ, ಮಗುವಿಗೆ ತಿರಸ್ಕಾರ!

ಉಡುಪಿ;ಯುವಕನೋರ್ವ ಹೃದಯಾಘಾತದಿಂದ ಮೃತ್ಯು, ಪ್ರೀತಿಸಿ ಮದುವೆಯಾಗಿದ್ದ ಆತನ ಪತ್ನಿ, ಮಗುವಿಗೆ ತಿರಸ್ಕಾರ! ಉಡುಪಿ:ಯುವಕ‌ನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಹಲವಾರು ವರ್ಷಗಳಿಂದ ಉಡುಪಿಯಲ್ಲಿ ಮೆಕ್ಯಾನಿಕ್​ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಮೂಲತಃ ಬಾದಾಮಿ ಮೂಲದ ಅಯ್ಯಪ್ಪ(28) ಮೃತರು.ಇವರಿಗೆ ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಾದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯನ್ನು ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆ ವಿವಾಹವಾಗಿದ್ದರು. ಬಳಿಕ ಉಡುಪಿಯಲ್ಲಿ ಪತ್ನಿಯ ಜೊತೆ ವಾಸಿಸುತ್ತಿದ್ದರು.20 … Read more

ಕೇರಳ;ಹಲ್ವಾ ತಿನ್ನುವಾಗ ಶ್ವಾಸನಾಳದಲ್ಲಿ ಸಿಲುಕಿ ವ್ಯಕ್ತಿಯೋರ್ವ ಸಾವು

ಕೇರಳ;ಹಲ್ವಾ ತಿನ್ನುವಾಗ ಶ್ವಾಸನಾಳದಲ್ಲಿ ಸಿಲುಕಿ ವ್ಯಕ್ತಿಯೋರ್ವ ಸಾವು ಕೊಚ್ಚಿ:ಹಲ್ವಾ ತಿನ್ನುವಾಗ ಶ್ವಾಸನಾಳದಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಿಂದ ವರದಿಯಾಗಿದೆ. ನಿಜಾರ್​(49) ಮೃತಪಟ್ಟ ವ್ಯಕ್ತಿ.ಈತ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ.ಹಲ್ವಾ ಶ್ವಾಸನಾಳದಲ್ಲಿ ಸಿಲುಕಿಕೊಂಡು ನಿಜಾರ್ ಮನೆಯಲ್ಲೇ​ ದುರಂತ ಸಾವಿಗೀಡಾಗಿದ್ದಾರೆ.ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ನಿಜಾರ್ ಕಾರ್ಮಿಕನಾಗಿದ್ದ.ಬುಧವಾರ ಬೆಳಗ್ಗೆ ಆತ ಬೇಕರಿಯಲ್ಲಿ ಹಲ್ವಾ ಕೊಂಡು ತಂದು ಸೇವಿಸಿದ್ದ.ಬಳಿಕ ದೇಹದಲ್ಲಿ ಕೊಂಚ ಇರುಸುಮುರುಸು ಉಂಟಾಗಿ, ಕುಸಿದುಬಿದ್ದಿದ್ದ.ತಕ್ಷಣ ಆತನನ್ನು ಸ್ಥಳೀಯರು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ … Read more

BIG NEWS ಕಾಂಗ್ರೆಸ್ ಪಕ್ಷಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ: ಜಿ-23 ಗುಂಪಿನ ಸದಸ್ಯರಾಗಿದ್ದ ಗುಲಾಂ ನಬಿ ಆಜಾದ್! ಏನಿದು ಗ್ರೂಪ್ -23!

ಕಾಂಗ್ರೆಸ್ ಪಕ್ಷಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ: ಜಿ-23 ಗುಂಪಿನ ಸದಸ್ಯರಾಗಿದ್ದ ಗುಲಾಂ ನಬಿ ಆಜಾದ್! ಏನಿದು ಗ್ರೂಪ್-23! ನವದೆಹಲಿ;ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ. ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಝಾದ್ ಕಾಂಗ್ರೆಸ್ ತ್ಯಜಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಕಾಂಗ್ರೆಸ್ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವ ಗುಲಾಂ … Read more

ಮನೆಗೆ‌ ನುಗ್ಗಿ ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿ ಎಳೆದೊಯ್ದ ಪೊಲೀಸರು; ಹೈದ್ರಾಬಾದ್ ಪ್ರತಿಭಟನೆ ವೇಳೆ ಏನೆಲ್ಲಾ ಕರಾಳ ಘಟನೆ ನಡೆದಿದೆ? ಸ್ಥಳೀಯರು ಏನೆಲ್ಲಾ ಹೇಳಿದ್ರು?

ಹೈದರಾಬಾದ್‌;ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಶಾಸಕ ವಿಡಿಯೋ ರಿಲೀಸ್ ಬೆನ್ನಲ್ಲೇ ಹೈದ್ರಾಬಾದ್ ನಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು.ರಾಜಾ ಸಿಂಗ್ ಬಂಧಿಸಿ ಬಿಡುಗಡೆ ಬೆನ್ನಲ್ಲೇ ಮತ್ತೆ ಭುಗಿಲೆದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು.ಪೊಲೀಸರು ಲಾಠೀ ಚಾರ್ಜ್ ಮಾಡಿದ್ದರು. ಓಲ್ಡ್ ಸಿಟಿಯ ಮುಸ್ಲಿಂ ಪ್ರಾಬಲ್ಯದ ಷಾ ಅಲಿ ಬಂದಾ ಪ್ರದೇಶದಲ್ಲಿ ಈ ವೇಳೆ ಭಾರೀ ಪೊಲೀಸ್ ದಬ್ಬಾಳಿಕೆ ನಡೆದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲಾಗಿದೆ. ಅಲ್ಪಸಂಖ್ಯಾತ ಸಮುದಾಯದ‌ ಮೇಲೆ … Read more