ಮೂವರು ಮಕ್ಕಳನ್ನು ಕೆರೆಗೆ ಎಸೆದು ತಾಯಿ ಆತ್ಮಹತ್ಯೆ; ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಘಟನೆ
ವಿಜಯಪುರ;ಮೂವರು ಮಕ್ಕಳನ್ನು ಹೊಂಡಕ್ಕೆ ಎಸೆದು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ-1 ರ ತೋಟದಲ್ಲಿ ಅನಿತಾ ಪಿಂಟು ಜಾಧವ್ (27) ಎಂಬ ಯುವತಿ ತನ್ನ ಮೂವರು ಮಕ್ಕಳನ್ನು ಕೆರೆಗೆ ಎಸೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ತಾಯಿ ಸೇರಿ ಪ್ರವೀಣ(6) ಸುದೀಪ (4) ಮದಿಕಾ (2) ಮೃತಪಟ್ಟಿದ್ದಾರೆ. ಯುವತಿ ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.