“ನನಗೆ ಕೋವಿಡ್ ಬಂದ ಮೇಲೆ‌ ಏನೂ‌ ನೆನಪಿಲ್ಲ”- ಭ್ರಷ್ಟಾಚಾರದ‌ ಬಗ್ಗೆ ಇ.ಡಿ. ದಾಖಲೆ ಮುಂದಿಟ್ಟು ವಿಚಾರಣೆ ‌ನಡೆಸಿದಾಗ ಸಚಿವರಿಂದ ನಟನೆ!

ನವದೆಹಲಿ: ಹವಾಲಾ ಹಣದ ಆರೋಪದ ಮೇಲೆ ಬಂಧಿತ AAP ಸಚಿವ ಸತ್ಯೇಂದರ್ ಜೈನ್​ ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಬಾಯ್ಬಿಡದೆ ತನಗೆ ಕೋವಿಡ್ ಬಂದ ಮೇಲೆ ಎಲ್ಲವೂ ಮರೆತು ಹೋಗಿದೆ ಎಂದು ಹೇಳಿರುವ ಬಗ್ಗೆ ಇದೀಗ ಮಾಹಿತಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಸತ್ಯೇಂದರ್​ ಪ್ರತಿಕ್ರಿಯೆ ಕುರಿತು ಇ.ಡಿ.ಯ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್​.ವಿ.ರಾಜು ಅವರು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸತ್ಯೇಂದರ್​​ ಅವರಿಂದ ಯಾವುದೇ ಹೇಳಿಕೆ ಪಡೆಯುವುದಿದ್ದರೂ ಲಿಖಿತ ರೂಪದಲ್ಲೇ ಪಡೆಯಬೇಕು. ಇಲ್ಲದಿದ್ದರೆ ಅವರು ನಾನು ಆ … Read more

ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ ಪಡುಕೋಣೆ; ಬಾಲಿವುಡ್ ಕ್ವೀನ್ ಗೆ ಆಗಿದ್ದೇನು ಗೊತ್ತಾ?

ಮುಂಬೈ: ಶೂಟಿಂಗ್ ವೇಳೆ ದಿಢೀರ್ ಹೃದಯಬಡಿತದಲ್ಲಿ ಏರಿಳಿತವಾಗಿ ಅಸ್ವಸ್ಥಗೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ‌‌‌‌ ಬ್ಯುಸಿಯಾಗಿದ್ದ ಬಾಲಿವುಡ್ ಕ್ವೀನ್ ದೀಪಿಕಾ‌ ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆ ಪಡೆದುಕೊಂಡು ಮತ್ತೆ ಮನೆಗೆ ವಾಪಾಸ್ಸಾಗಿದ್ದಾರೆ.

ಬಂಟ್ವಾಳ ಬೈಕ್ ಗೆ ಢಿಕ್ಕಿ ಹೊಡೆದು ಪರಾರಿಯಾದ ಲಾರಿ; ಇಬ್ಬರು ಯುವಕರು ಮೃತ್ಯು

ಬಂಟ್ವಾಳ ಬೈಕ್ ಗೆ ಢಿಕ್ಕಿ ಹೊಡೆದು ಪರಾರಿಯಾದ ಲಾರಿ; ಇಬ್ಬರು ಯುವಕರು ಮೃತ್ಯು ಬಂಟ್ವಾಳ: ಲಾರಿ‌ ಡಿಕ್ಕಿ ಹೊಡೆದು ದ್ವಿಚಕ್ರ ಸವಾರಿಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಸಿದ್ದಕಟ್ಟೆ ಸಮೀಪದ ಸೋರ್ನಾಡು ಎಂಬಲ್ಲಿ ನಡೆದಿದೆ. ನಿತಿನ್ ಹಾಗೂ ಶಶಿರಾಜ್ ಮೃತ ಯುವಕರು. ಸಿದ್ದಕಟ್ಟೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ಬಿ.ಸಿ‌ ರೋಡಿನಿಂದ ಕಾರ್ಕಳಕ್ಕೆ ಅತೀ ವೇಗದಿಂದ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, … Read more

ಸಕಲೇಶಪುರ: ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ

ಸಕಲೇಶಪುರ; ಯುವಕನೋರ್ವ ನೇಣು‌ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಶಬೀರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸಕಲೇಶಪುರದ ಕುಶಲಾನಗರ ಎಂಬಲ್ಲಿನ ನಿವಾಸಿ. ನಿನ್ನೆ ಶಬೀರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಶಬೀರ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಕಲೇಶಪುರ: ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ

ಸಕಲೇಶಪುರ; ಯುವಕನೋರ್ವ ನೇಣು‌ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಶಬೀರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸಕಲೇಶಪುರದ ಕುಶಲಾನಗರ ಎಂಬಲ್ಲಿನ ನಿವಾಸಿ. ನಿನ್ನೆ ಶಬೀರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಶಬೀರ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಡಬ; ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ಸಹಾಯಕಿ ಬಿಸಿ ಸಾಂಬಾರ್ ಪಾತ್ರೆಗೆ ಕಾಲು ಜಾರಿ‌ಬಿದ್ದು ಸಾವು

ಕಡಬ: ಶಾಲೆಯ ಬಿಸಿಯೂಟದ ಅಡುಗೆ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳಾ ಸಹಾಯಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಗ್ನೆಸ್ ಪ್ರಮೀಳಾ ಡಿಸೋಜಾ (37) ಎಂದು ಗುರುತಿಸಲಾಗಿದೆ. ಪ್ರಮೀಳಾ ಡಿಸೋಜಾ ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು.ಮೇ.30 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಕ್ಕಳಿಗೆ ಬಿಸಿ ಊಟದ ಅಡುಗೆ … Read more

ಪ್ರವಾದಿ ನಿಂದನೆ‌ ಖಂಡಿಸಿ ಬಿಜೆಪಿಗೆ ರಾಜೀನಾಮೆ‌ ನೀಡಿದ ಕೌನ್ಸಿಲರ್

  ರಾಜಸ್ಥಾನ:ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಮಾಡಿದ ನಿಂದನೆ‌ ವಿರೋಧಿಸಿ ರಾಜಸ್ಥಾನದ ಬಿಜೆಪಿ ಕೌನ್ಸಿಲರ್ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದಕ್ಷಿಣದ ಕೋಟಾ ಮುನ್ಸಿಪಲ್ ಕಾರ್ಪೋರೇಶನ್‌ನ ವಾರ್ಡ್ ಸಂಖ್ಯೆ 14 ರ ಬಿಜೆಪಿಯ ಪುರಸಭೆ ಸದಸ್ಯೆ ತಬಸ್ಸುಮ್ ಮಿರ್ಜಾ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸತೀಶ್ ಪೂನಿಯಾ ಮತ್ತು ಕೋಟಾ ಜಿಲ್ಲಾ ಅಧ್ಯಕ್ಷ ಕ್ರಿಶನ್ ಕುಮಾರ್ ಸೋನಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ಹಿಂದಿನ ಕಾರಣವನ್ನು … Read more

ಪತಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಯುವಕರ ಗ್ಯಾಂಗ್‌ ನ್ನು ಹೊಡೆದು ಓಡಿಸಿದ ಪತ್ನಿ; ಮೈಸೂರಿನಲ್ಲಿ ಅಚ್ಚರಿ ಘಟನೆ

  ಮೈಸೂರು‌: ಪತಿಯ ಜೊತೆ ಜಗಳವಾಡುತ್ತಿದ್ದ ದುಷ್ಕರ್ಮಿಗಳನ್ನು ಪತ್ನಿ ಹೊಡೆದು ಓಡಿಸಿದ ಘಟನೆ ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದಿದೆ. ರಮೇಶ್ ಮತ್ತು ಶೋಭಾ ದಂಪತಿ ನರಸೀಪುರದಲ್ಲಿ ಟೀ ಜೊತೆಗೆ ಇತರ ಚಿಕ್ಕಪುಟ್ಟ ವಸ್ತುಗಳನ್ನು ಮಾರುವ ಅಂಗಡಿ ನಡೆಸುತ್ತಿದ್ದರು. ಲೈಟರ್ ತೆಗೆದುಕೊಳ್ಳಲು ಬಂದ ಯುವಕರು ಲೈಟರ್​ಗೆ 20 ರೂಪಾಯಿ ಕೊಡದೆ ರಮೇಶ್ ಜೊತೆ ಜಗಳಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿದ್ದಾರೆ.ರಮೇಶ್ ಅವರನ್ನು ಅಂಗಡಿಯಿಂದ ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿದ್ದಾರೆ. ಈ ವೇಳೆ ಪತಿಯ ರಕ್ಷಣೆಗೆ ಮುಂದಾದ ಪತ್ನಿ ಶೋಭಾ … Read more

ಉಡುಪಿ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಪೋಟ

ಉಡುಪಿ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಪೋಟ ಉಡುಪಿ: ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡ ಘಟ‌ನೆ ಉಡುಪಿ ಜಿಲ್ಲೆಯ ಕೊಡವೂರು ಮೂಡಬೆಟ್ಟು ಗೋಪಾಲ ಎಂಬುಬರ ಮನೆಯಲ್ಲಿ ನಡೆದಿದೆ. ಸ್ಪೋಟದ ತೀವ್ರತೆಗೆ ಮನೆಯ ಪೀಠೋಪಕರಣಗಳು ನಾಶವಾಗಿದೆ. ಘಟ‌ನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಸಿಲಿಂಡರ್ ಸ್ಪೋಟವಾಗಿ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಮನೆಗೆ ವ್ಯಾಪಿಸಿದ್ದು,ಸ್ಥಳೀಯ ಸಮಾಜ ಸೇವಕ ಈಶ್ವರ ಮಲ್ಪೆ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಈ‌ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ‌ ಸಿಎಂ ಪಿಣರಾಯ್ ವಿಜಯನ್ ಮೇಲೆ ಹಲ್ಲೆ!

ನವದೆಹಲಿ: ವಿಮಾನದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅರುಣ್ ಕುಮಾರ್ ಗೆ ರಾಜ್ಯಸಭಾ ಸಂಸದ ಡಾ.ವಿ.ಶಿವದಾಸನ್ ಅವರು ಪತ್ರ ಬರೆದಿದ್ದಾರೆ. ಜೂ.13ರಂದು ಕಣ್ಣೂರಿನಿಂದ ತಿರುವನಂತಪುರಂಗೆ ಇಂಡಿಗೋ ವಿಮಾನದಲ್ಲಿ ತೆರಳುವಾಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು‌ ಆರೋಪಿಸಲಾಗಿದೆ. ಶಿವದಾಸನ್ ಜೂನ್ 13 ರಂದು ಬರೆದ ಪತ್ರದಲ್ಲಿ ಘಟನೆ ಖಂಡನೀಯ, ಈ ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಿ … Read more