ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರ ಗಡಿಪಾರು!

ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರ ಗಡಿಪಾರು! ವಿಜಯಪುರ: ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರನ್ನು ಗಡಿಪಾರು ಮಾಡಿ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಆದೇಶ ಹೊರಡಿಸಿದ್ದಾರೆ. 2022 ಮೇ 10 ರಿಂದ 2023 ಮೇ 9 ರವರೆಗೆ ವಿಜಯಪುರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರಿಗೆ ಆದೇಶಿಸಿದ್ದಾರೆ. ಚಾಮರಾಜನಗರ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಿಸಿ ಗಡಿಪಾರು ಮಾಡಲಾಗಿದೆ. ಸೈಯದ್ ವಿರುದ್ಧ ಸಾಮಾಜಿಕ ಸ್ವಾಸ್ತ್ಯ ಹಾಳು ಮಾಡುವ ಆರೋಪ, ಕೋಮು ಗಲಭೆ, ಕಾನೂನು … Read more

ತಾಜ್ ಮಹಲ್‌ ಬಗ್ಗೆ ಪ್ರಶ್ನಿಸಲು ನೀವು ಯಾರು? ಅರ್ಜಿ ದಾರರಿಗೆ ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ತಾಜ್ ಮಹಲ್‌ ಬಗ್ಗೆ ಪ್ರಶ್ನಿಸಲು ನೀವು ಯಾರು? ಅರ್ಜಿ ದಾರರಿಗೆ ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ತಾಜ್ ಮಹಲ್‌ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಮುಚ್ಚಿದ ರೂಂ‌ ಬಗ್ಗೆ ಪ್ರಶ್ನಿಸಲು ನೀವ್ಯಾರು ಎಂದು ಕೇಳಿದೆ. ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ವಿಭಾಗೀಯ ಪೀಠ, ತಾಜ್ ಮಹಲ್ ಕುರಿತು ಸಲ್ಲಿಸಲಾದ ವಿವಾದದ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ಉಲ್ಲೇಖಿಸಿದ ತೀರ್ಪುಗಳನ್ನು‌ ಗಣನೆಗೆ ತೆಗೆದುಕೊಳ್ಳಲು ಹೈಕೋರ್ಟ್ … Read more

ತಾಳಿ ಕಟ್ಟುವ ವೇಳೆ ಕುಸಿದು ಬಿದ್ದು ವಧು ಸಾವು; ಮದುವೆ‌ ಮಂಟಪದಲ್ಲಿ ನಡೆದ ಹೃದಯವಿದ್ರಾಹಕ ಘಟನೆ

ತಾಳಿ ಕಟ್ಟುವ ವೇಳೆ ಕುಸಿದು ಬಿದ್ದು ವಧು ಸಾವು; ಮದುವೆ‌ ಮಂಟಪದಲ್ಲಿ ನಡೆದ ಹೃದಯವಿದ್ರಾಹಕ ಘಟನೆ ವಿಶಾಖಪಟ್ಟಣ(12-05-2022): ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ಕೆಲವೇ ಕ್ಷಣಕ್ಕೆ‌ ಮೊದಲು ವಧು ಕುಸಿದು ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಸೃಜನಾ ಮೃತಪಟ್ಟ ವಧು. ವಿಶಾಖಪಟ್ಟಣ ಜಿಲ್ಲೆಯ ಮಧುರವಾಡದಲ್ಲಿ‌ ಮದುವೆ ಕಾರ್ಯಕ್ರಮದಲ್ಲಿ ಎಲ್ಲರೂ ಸಂಭ್ರಮದಲ್ಲಿದ್ದರು. ತಾಳಿಕೊಟ್ಟುವ ಕೆಲವೇ ಕ್ಷಣಕ್ಕೆ ಮೊದಲು ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು ದಿಢೀರನೇ ಕುಸಿದುಬಿದ್ದು ಮದುವೆ ಮಂಟಪದಲ್ಲೇ ಮೃತಪಟ್ಟಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು … Read more

ದುಬೈ ಲಕ್ಕೀ ಡ್ರಾದಲ್ಲಿ 7 ಕೋಟಿ ಗೆದ್ದ ಮಲಯಾಳಿ; ಒಂದಲ್ಲ, ಇದು ಮೂರನೇ ಗೆಲುವು..ಯಾರು ಈ ಅದೃಷ್ಟಶಾಲಿ ಗೊತ್ತಾ?

ದುಬೈ ಲಕ್ಕೀ ಡ್ರಾದಲ್ಲಿ 7 ಕೋಟಿ ಗೆದ್ದ ಮಲಯಾಳಿ; ಒಂದಲ್ಲ, ಇದು ಮೂರನೇ ಗೆಲುವು..ಯಾರು ಈ ಅದೃಷ್ಟಶಾಲಿ ಗೊತ್ತಾ? ಕೇರಳ; ಕೇರಳ ಮೂಲದ ವ್ಯಕ್ತಿ ದುಬೈನಲ್ಲಿ ಬರೊಬ್ಬರಿ 7 ಕೋಟಿ ಲಕ್ಕೀ ಡ್ರಾ ಬಹುಮಾನ ಗೆದ್ದುಕೊಂಡಿದ್ದಾರೆ. ಸುನೀಲ್ ಶ್ರೀಧರ್ ಎಂಬ ವ್ಯಕ್ತಿ ‌ಈ ಅದೃಷ್ಟವಂತ. ದುಬೈಯ ಮಿಲ್ಲೇನಿಯಂ ಮಿಲಿಯನೇರ್ ಡ್ಯೂಟಿ ಫ್ರೀ ಲಕ್ಕೀ ಡ್ರಾದಲ್ಲಿ 7 ಕೋಟಿ ವಿಜೇತರಾಗಿದ್ದಾರೆ. ಶ್ರೀಧರ ಇದು ಮೂರನೇ ಬಾರಿ ಲಕ್ಕೀ ಡ್ರಾ ಗೆದ್ದುಕೊಂಡಿರುವುದು. ಇವರು ಈ ಹಿಂದೆ 2019ರಲ್ಲಿ ಒಂದು ದಶಲಕ್ಷ … Read more

ಕರ್ನಾಟಕದಲ್ಲಿ ಸುಗ್ರಿವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಂಪುಟ ಒಪ್ಪಿಗೆ

ಕರ್ನಾಟಕದಲ್ಲಿ ಸುಗ್ರಿವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಂಪುಟ ಒಪ್ಪಿಗೆ ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರೋದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರೋದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದು ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ನಡೆದಂತ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ, ಕಾಯ್ದೆ ಕುರಿತಂತೆ ಚರ್ಚಿಸಲಾಯಿತು. ಅಲ್ಲದೇ … Read more

ಮೈಕ್ ವಿರುದ್ಧ ಹೋರಾಡಿ ಬಡ ಹಿಂದೂ ಕಲಾವಿದರ ಹೊಟ್ಟೆಗೆ ಕಲ್ಲು ಹಾಕಿದ ಮುತಾಲಿಕ್, ಶ್ರೀರಾಮ ಸೇನೆ, ಬಿಜೆಪಿ!

ಬೆಂಗಳೂರು: ಮುತಾಲಿಕ್, ಶ್ರೀರಾಮಸೇನೆ ಸೇರಿ ಕೆಲ ಬಿಜೆಪಿ ಪರ ಸಂಘಟನೆಗಳು ಅಬ್ಬರಿಸಿ ಅಝಾನ್ ವಿರೋಧಿಸಿ ರಾಜ್ಯದಲ್ಲಿ ಮೈಕ್ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ಚಾಚು ತಪ್ಪದೆ ಪಾಲಿಸುವಂತೆ ಮಾಡಿದೆ. ರಾಜ್ಯ ಸರಕಾರವು ಈಗಾಗಲೇ ಖಡಕ್ ಆದೇಶದಲ್ಲಿ ಶಬ್ಧದ ಡೆಸಿಬಲ್ ಮಿತಿಯ ಜೊತೆಗೆ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸದಂತೆ ಸೂಚನೆಯನ್ನು ಖಡಕ್ ನೀಡಿದೆ. ಸೂಚನೆ ಮೀರಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ. ಸರಕಾರ ಈ ಹೇಳಿಕೆ ನೀಡುತ್ತಿದ್ದಂತೆ ಅಝಾನ್ ವಿರುದ್ಧದ ಸುಪ್ರಭಾತದ … Read more

ತುಮಕೂರಿನಲ್ಲಿ ನಮಗೆ ವಿವಾಹ ಮಾಡಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ ಇಬ್ಬರು ಯುವತಿಯರು

ತುಮಕೂರಿನಲ್ಲಿ ನಮಗೆ ವಿವಾಹ ಮಾಡಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ ಇಬ್ಬರು ಯುವತಿಯರು ತುಮಕೂರು: ಇಬ್ಬರು ಯುವತಿಯರು ನಮಗೆ ಮದುವೆ ಆಗಿ ಪರಸ್ಪರ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ‌. ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಹಿಂದೆ ಕಾಣೆಯಾಗಿದ್ದ ಈ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಆದರೆ ಇದಕ್ಕೆ ಪೊಲೀಸರು … Read more

ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳು ನೀರುಪಾಲು

ಶಿವಮೊಗ್ಗ: ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಭದ್ರಾ‌ ನಾಲೆಯಲ್ಲಿ ಚಂದನಾ(14), ಹರ್ಷ(10) ನಾಪತ್ತೆಯಾಗಿದ್ದಾರೆ. ಭದ್ರಾ ಬಲದಂಡೆ ನಾಲೆಯಲ್ಲಿ ನಾಲ್ವರು ಮಕ್ಕಳು ಈಜಲು ತೆರಳಿದ್ದರು. ಈ ಸಂದರ್ಭ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೋಟ್ ಬಳಸಿ ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಮಕ್ಕಳು ಪತ್ತೆಯಾಗಿಲ್ಲ. ಇಂದು ಸಹ ಶೋಧ ಕಾರ್ಯ ಮುಂದುವರಿಸಲಾಗಿದೆ.

ನಾಯಿಗಳ ಜೊತೆ 11ರ ಬಾಲಕನನ್ನು ಕೂಡಿ ಹಾಕಿ ಚಿತ್ರಹಿಂಸೆ; ಪೋಷಕರಿಂದಲೇ ಪೈಶಾಚಿಕ ಕೃತ್ಯ

ನಾಯಿಗಳ ಜೊತೆ 11ರ ಬಾಲಕನನ್ನು ಕೂಡಿ ಹಾಕಿ ಚಿತ್ರಹಿಂಸೆ; ಪೋಷಕರಿಂದಲೇ ಪೈಶಾಚಿಕ ಕೃತ್ಯ ಪುಣೆ; 11 ವರ್ಷದ ಬಾಲಕನೊಬ್ಬನನ್ನು ಹೆತ್ತವರೇ ಎರಡು ವರ್ಷಗಳಿಂದ ನಾಯಿಗಳೊಂದಿಗೆ ಕೂಡಿ ಹಾಕಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ವಿಪರ್ಯಾಸ ಎಂದರೆ ಎರಡು ವರ್ಷಗಳಿಂದ ನಾಯಿಗಳ ಜತೆ ಬಂಧಿಯಾಗಿದ್ದ ಬಾಲಕ ಈಗ ನಾಯಿಯಂತೆಯೇ ವರ್ತಿಸಲು ಪ್ರಾರಂಭಿಸಿದ್ದಾನೆ. ಬೊಗಳಲು ಪ್ರಾರಂಭಿಸಿದ್ದಾನೆ. ಆರೋಗ್ಯ ಸ್ಥಿತಿಯೂ ಬಲಹೀನನಾಗಿದ್ದಾನೆ ಕೊಂಡ್ವಾ ಪ್ರದೇಶದ ಕೃಷ್ಣಾಯ್ ಬಾಲಕನ ತಂದೆ ತಾಯಿಗಳೇ ಈ ಕೃತ್ಯವನ್ನು ಎಸಗಿದ್ದಾರೆ. ಇದನ್ನು ಕಂಡು ಅಚ್ಚರಿಗೊಂಡ ಸ್ಥಳೀಯರು ಮಕ್ಕಳ … Read more

ಉಪ್ಪಿನಂಗಡಿಯ ಯುವತಿ ಉಡುಪಿಯಲ್ಲಿ ಆತ್ಮಹತ್ಯೆ

ಉಡುಪಿ: ಉಪ್ಪಿನಂಗಡಿಯ ಯುವತಿ ಕಾಪುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ ನಡೆದಿದೆ. ಸಹನಾ (23 ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ.ಈಕೆ ಕಾಪು ಕಟ್ಟಿಂಗೇರಿಯ ಅಕ್ಕನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ್ದ ಸಹನಾಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಹನಾ ಮೃತಪಟ್ಟಿದ್ದಾಳೆ. ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮುಗಿಸಿದ್ದ ಸಹನಾ, ಉದ್ಯೋಗಕ್ಕಾಗಿ ಅಲೆದಾಡಿದ್ದಳು. ಆದರೆ, ಎಲ್ಲಿಯೂ ತನ್ನ ಅರ್ಹತೆಗೆ ತಕ್ಕ … Read more