ಬ್ಯಾಂಕುಗಳ ಐಎಫ್​ಎಸ್​ಸಿ ಕೋಡ್ ಬದಲಾವಣೆ: ಯಾವೆಲ್ಲಾ ಬ್ಯಾಂಕ್ ಗಳ ಕೋಡು ಬದಲಾಗಿದೆ? ಇಲ್ಲಿದೆ ಮಾಹಿತಿ

bank

ನವದೆಹಲಿ(03-05-2021): ದೇಶದ ಕೆಲವು ಬ್ಯಾಂಕುಗಳ ಐಎಫ್​ಎಸ್​ಸಿ ಕೋಡ್​ಗಳನ್ನು ಬದಲಾವಣೆ ಮಾಡಲಾಗಿದೆ. ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​, ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾ, ಸಿಂಡಿಕೇಟ್​ ಬ್ಯಾಂಕ್​, ಆಂಧ್ರ ಬ್ಯಾಂಕ್​ ಹಾಗೂ ಅಲಹಾಬಾದ್​ ಬ್ಯಾಂಕ್​​ನ ಐಎಫ್ ಎಸ್ ಸಿ ಕೋಡು ಬದಲಾವಣೆಯಾಗಿದೆ. ಈ ಕುರಿತು ಆಕ್ಸಿಸ್​​ ಬ್ಯಾಂಕ್​​​ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದ್ದು, ಆರ್​​ಬಿಐನ ಸೂಚನೆಯಂತೆ ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್ ಹಾಗೂ ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾದ ಐಎಫ್​ಎಸ್​ಸಿ ಕೋಡ್​ಗಳನ್ನು ಬದಲಾವಣೆ ಮಾಡಲಾಗಿದೆ. ಹೀಗಾಗಿ ಹೊಸ ಐಎಫ್​ಎಸ್​ಸಿ ಕೋಡ್​ … Read more

ಸಿಂಗಂ ಎಂದು ಕರೆಸಿಕೊಂಡಿದ್ದ ಅಣ್ಣಾ ಮಲೈ ಸೋತ ಬಳಿಕ ಮಾಡಿದ ಟ್ವೀಟ್ ನಲ್ಲೇನಿದೆ?

annamalai

ತಮಿಳುನಾಡು(03-05-2021); ಕರ್ನಾಟಕ ಮಾದ್ಯಮಗಳ ಬಾಯಿಯಲ್ಲಿ  ಸಿಂಗಂ ಎಂದು ಕರೆಸಿಕೊಂಡಿದ್ದ ಅಣ್ಣಾ ಮಲೈ ಚುನಾವಣೆಯಲ್ಲಿ ಸೋತ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸೋಲುಗಳು ಜೀವನದ ಒಂದು ಭಾಗವಾಗಿದ್ದು, ಇಂತಹ ಹಲವು ಸೋಲುಗಳನ್ನು ನೋಡಿದ್ದೇನೆ. ಇವತ್ತು ಮತ್ತೆ ಸೋಲಿನ ದಿನ.  ಗೆಲುವಿನ ನಿರೀಕ್ಷೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಅರಾವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ 68 ಸಾವಿರ ಮತಗಳನ್ನು ಪಡೆದಿದ್ದ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ಎದುರು ಸೋಲನ್ನು ಕಂಡಿದ್ದಾರೆ. ವಿಧಾನಸಭೆ ಚುನಾವಣೆ ಘೋಷಣೆಗೂ … Read more

ಮಧ್ಯರಾತ್ರಿ ಆಕ್ಸಿಜನ್ ಸಿಲಿಂಡರ್ ಖಾಲಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ರೋಗಿಗಳು ಸಾವು

chamarajanagara hospital

ಚಾಮರಾಜನಗರ(03-05-2021); ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ 22 ಜನ ಕೊರೊನಾ ರೋಗಿಗಳು ಮೃತಪಟ್ಟಿರುವ ಹೃದಯ ವಿದ್ರಾಹಕ ಘಟನೆ ನಡೆದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯರಾತ್ರಿ ಆಮ್ಲಜನಕ ಸಿಲಿಂಡರ ಖಾಲಿಯಾಗಿದೆ. ಇದರಿಂದಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22ರೋಗಿಗಳು ಮೃತಪಟ್ಟಿದ್ದಾರೆ. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಆಮ್ಲಜನಕ ಸಿಲಿಂಡರ್ ಬಂದಿಲ್ಲದ ಕಾರಣ ದುರ್ಘಟನೆ ಸಂಭವಿಸಿದೆ. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಬಿಕ್ಕಟ್ಟು ಪ್ರಾರಂಭವಾಗಿ ತಿಂಗಳುಗಳು ಸಮೀಪಿಸಿದರೂ ತುರ್ತು … Read more

ಚುನಾವಣಾ ವಿಶೇಷ: ಬಂಗಾಳದಲ್ಲಿ ಬಿಜೆಪಿಯಿಂದ ಗೆದ್ದ ಕೂಲಿ ಕಾರ್ಮಿಕನ ಪತ್ನಿ

chandana bauri

ಪಶ್ಚಿಮ ಬಂಗಾಳ(03-05-2021); ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ದಿನಗೂಲಿ ಕಾರ್ಮಿಕನ ಪತ್ನಿ ಚಂದನಾ ಬೌರಿ ನಿನ್ನೆ ಗೆಲುವನ್ನು ಸಾಧಿಸಿ ಅಚ್ಚರಿಯನ್ನು ಮೂಡಿಸಿದ್ದಾರೆ. ಪ.ಬಂಗಾಳದ ಹಿಂದುಳಿದ ಪ್ರದೇಶವಾದ ಸಾಲ್ಟೋರಾ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕಿಯಾಗಿ ಚಂದನಾ ಬೌರಿ  ಟಿಎಂಸಿ ನಾಯಕನ ವಿರುದ್ಧ 4,000 ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ. ಚುನಾವಣೆ ಅಫಿಡವಿಟ್ ಪ್ರಕಾರ, ಚಂದನಾ 31,985 ರೂ. ಆಸ್ತಿಯನ್ನು ಮತ್ತು ಅವರ ಪತಿ 30,311ರೂ. ಆಸ್ತಿಯನ್ನು ಹೊಂದಿದ್ದಾರೆ. ಚಂದನಾ ಅವರಿಗೆ ಮೂವರು ಮಕ್ಕಳು. ಅವರ ಪತಿ ಕೂಲಿ ಕೆಲಸವನ್ನು ಮಾಡುತ್ತಾರೆ. ಅವರ … Read more

ವಾಟ್ಸಾಪ್ ನೀಡಿದೆ ಗುಡ್ ನ್ಯೂಸ್: ಒಂದು ಸಂದೇಶದ ಮೂಲಕ ನಿಮ್ಮ ಸಮೀಪದ ವ್ಯಾಕ್ಸಿನೇಷನ್ ಕೇಂದ್ರದ ಪಟ್ಟಿ ಪಡೆಯುವ ವಿಧಾನ ತಿಳಿಯಿರಿ..  

watsup

ನವದೆಹಲಿ(03-05-2021); ವಾಟ್ಸಾಪ್ ಮೂಲಕ ನಿಮ್ಮ ಸಮೀಪದ ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿ ಪಡೆಯುವ ಅವಕಾಶವನ್ನು ವಾಟ್ಸ್ಯಾಪ್ ನೀಡಿದೆ. ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಈ ಕುರಿತು ಮಾಹಿತಿ ನೀಡಿದ್ದು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆರೋಗ್ಯ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಆಯಪ್‌ನಲ್ಲಿ ಚಾಟ್‌ ಬಾಟ್‌ಗಳ ರೂಪದಲ್ಲಿ ಸಹಾಯವಾಣಿಗಳನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ. ಮೈಗೊವ್ ಕೊರೋನಾ ಹೆಲ್ಪ್‌ ಡೆಸ್ಕ್ ಚಾಟ್‌ಬಾಟ್(MyGov Corona Helpdesk chatbot) ಮೂಲಕ  ವ್ಯಾಕ್ಸಿನೇಷನ್ ಕೇಂದ್ರವನ್ನು ಕಂಡು ಹಿಡಿಯಬಹುದಾಗಿದೆ. ಮೈಗೋವ್ ಕರೋನಾ ಹೆಲ್ಪ್‌ ಡೆಸ್ಕ್ ಚಾಟ್‌ ಬಾಟ್ ಬಳಕೆ ಹೇಗೆ? ಬಳಕೆದಾರರು … Read more

ರೈಲ್ವೇಯ ಮೈಸೂರು ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

railway

ಮೈಸೂರು(03-05-2021); ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ವಿವಿಧಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಬಿಬಿಎಸ್ , ಡಿಎನ್ ಬಿ ವೈದ್ಯರು 2 ಹುದ್ದೆಗಳು, ಎಂಬಿಬಿಎಸ್ 12 ವೈದ್ಯ  ಹುದ್ದೆ, ಬಿಎಸ್ಸಿ ನರ್ಸಿಂಗ್ 19 ಹುದ್ದೆ, ಫಾರ್ಮಾಸಿಸ್ಟ್- 2 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು 0821-2428630ಕ್ಕೆ ಕರೆ ಮಾಡಿ ಅಥವಾ ಹೆಚ್ಚಿನ ಮಾಹಿತಿಗಾಗಿ  www.https://swr.indianrailways.gov.in/ ಸೈಟ್ ಗೆ ಸಂಪರ್ಕಿಸಿ.