ಜೈಲಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ: ಪೋಷಕರಿಂದ ಗಂಭೀರ ಆರೋಪ

kasmir jail

ಪುಲ್ವಮಾ (17-04-2021): 2018 ರ ಮಕ್ಸುದನ್ ಪೊಲೀಸ್ ಠಾಣೆ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ 7 ಕಾಶ್ಮೀರಿ ವಿದ್ಯಾರ್ಥಿಗಳ ಕುಟುಂಬಗಳು ಜೈಲಿನಲ್ಲಿರುವ ತಮ್ಮ ಮಕ್ಕಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪಂಜಾಬ್‌ ಜಲಂಧರ್‌ನ ಕಪುರ್ಥಾಲಾ ಜೈಲಿನಲ್ಲಿ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಸೆಪ್ಟೆಂಬರ್ 14, 2018 ರಂದು ಮಕ್ಸುದ್ದಾನ್ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದ ನಂತರ 2019 ರ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಯುವಕರನ್ನು ಬಂಧಿಸಿತ್ತು. ಕಾಶ್ಮೀರಿ ಕೈದಿಗಳ ಕುಟುಂಬಗಳು 2019 ರ … Read more

ಲಾಲೂ ಪ್ರಸಾದ್ ಯಾದವ್ ಗೆ ಷರತ್ತುಬದ್ಧ ಜಾಮೀನು: ಏನಿದು ಕೇಸ್?  

lalu yadav

ಬಿಹಾರ(17-04-2021): ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗೆ ಮೇವು ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಝಾರ್ಖಾಂಡ್ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು ಲಾಲುಗೆ ಜಾಮೀನು ಮಂಜೂರು ಮಾಡಿದ್ದು ಪೂರ್ವಾನುಮತಿ ಇಲ್ಲದೆ ದೇಶವನ್ನು ಬಿಟ್ಟು ಹೋಗಬಾರದು ಹಾಗೂ ತಮ್ಮ ವಿಳಾಸ ಅಥವಾ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬದಲಾಯಿಸಬಾರದು ಎಂದು ಷರತ್ತುಗಳನ್ನು ವಿಧಿಸಿದ್ದಾರೆ ಹಾಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲುಗೆ ಮೇವು ಹಗರಣಕ್ಕೆ ಸಂಬಂಧಿಸಿ ಮೂರು ಪ್ರಕರಣಗಳಲ್ಲಿ … Read more

ಮಾಜಿ ಸಿಎಂ ಕುಮಾರಸ್ವಾಮಿಗೇ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿಲ್ಲ!

ಬೆಂಗಳೂರು(17-04-2021): ಕೋವಿಡ್ ಸೋಂಕಿತರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿಲ್ಲ ಎನ್ನುವ ಸುದ್ದಿ ಬಹಿರಂಗವಾಗಿದ್ದು ಮಾಜಿ ಸಿಎಂ ಸ್ಥಿತಿ ಈ ರೀತಿಯಾದರೆ ಇನ್ನು ಜನಸಾಮಾನ್ಯನ ಪಾಡು ಹೇಗಿರಬಹುದು ಎನ್ನುವ ಪ್ರಶ್ನೆ ಮೂಡಿದೆ. ನಿನ್ನೆಯವರೆಗೆ ಚುನಾವಣಾ ಪ್ರಚಾರದಲ್ಲಿದ್ದ ಕುಮಾರಸ್ವಾಮಿಗೆ ಇಂದು ಬೆಳಿಗ್ಗೆ ಕೋವಿಡ್ ಪಾಸಿಟಿವ್ ಧೃಢಪಟ್ಟಿದೆ. ಹೀಗಾಗಿ ವೈದ್ಯರ ಬಳಿ ಮಾತುಕತೆ ನಡೆಸಿ,ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುವುದಾಗಿ ತೀರ್ಮಾನಿಸಿದ್ದರು. ಆದರೆ ಇದಕ್ಕೆ ವೈದ್ಯರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಗೆ ವಿಚಾರಿಸಿದ್ದರು. … Read more

ಸುಳ್ಯ ಕೆವಿಜಿ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ: ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನಿರಾಕರಿಸಿದ ಪ್ರಾಂಶುಪಾಲ

cfi

ಸುಳ್ಯ(17-04-2021): ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಮತ್ತೆ ಸ್ಕಾರ್ಪ್ ವಿವಾದ ಭುಗಿಲೆದ್ದಿದೆ. ಸ್ಕಾರ್ಪ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಗೆ ಪರೀಕ್ಷೆಗೆ ಬರೆಯಲು ಕೆವಿಜಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರವೇಶವನ್ನು ನಿರಾಕರಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲರು ತನಗೆ ಪರೀಕ್ಷೆಗೆ ಬರೆಯಲು ಅವಕಾಶವನ್ನು ನಿರಾಕರಿಸಿದ್ದಾರೆ ಎಂದು ಕೆವಿಜಿ ಕಾನೂನು ವಿದ್ಯಾರ್ಥಿನಿ ಮಾತನಾಡುವ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿನಿಯ ವಿಡಿಯೋದಲ್ಲಿ ನ್ಯಾಯವನ್ನು ಒದಗಿಸುವಂತೆ ಮನವಿಯನ್ನು ಮಾಡಿದ್ದಾರೆ. ನನ್ನ ಭವಿಷ್ಯದ ಜೊತೆ ಪ್ರಾಂಶುಪಾಲರು ಚೆಲ್ಲಾಟವಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆ ಬಗ್ಗೆ … Read more

ಕುಖ್ಯಾತ ರೌಡಿಶೀಟರ್ ಅಬೀದ್ ಅಲಿಯನ್ನು ಕೊಚ್ಚಿ ಕೊಂದ 16ವರ್ಷದ ಮಗ

rajasthana

ರಾಜಸ್ಥಾನ(17-04-2021): ತಂದೆಯ ನಿರಂತರ ಕಿರುಕುಳದಿಂದ ಬೇಸತ್ತು ಅಪ್ರಾಪ್ತ ಮಗ ರೌಡೀ ಶೀಟರ್ ತಂದೆಯನ್ನು ಕೊಡಲಿಯಿಂದ ಹಲವು ಬಾರಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಮುಂಜಾನೆ 3.30ರ ವೇಳೆಗೆ ನಿದ್ದೆ ಮಾಡುವಾಗ 16 ವರ್ಷದ ಬಾಲಕ ತನ್ನ ತಂದೆಯನ್ನು ಕೊಡಲಿಯಿಂದ ಹಲವು ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು  ಇಟವಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಭಜರಂಗ್ ಲಾಲ್ ಹೇಳಿದ್ದಾರೆ. ಮೃತ ಅಬಿದ್ ಅಲಿ (45) ಹತ್ಯೆ ಮತ್ತು ಲೂಟಿ ಸೇರಿದಂತೆ 27 … Read more

ಚರ್ಚ್ ದಾಳಿಯ ಆರೋಪಿಯೆಂದು ಶಂಕಿಸಿ ಓರ್ವನ ಹತ್ಯೆ

indonesya

ಇಂಡೋನೇಷ್ಯಾ(17-04-2021): ಇಂಡೋನೇಷ್ಯಾ ಪೊಲೀಸರು ಭಯೋತ್ಪಾದಕನೆಂದು ಶಂಕಿಸಿ ಓರ್ವನ ಹತ್ಯೆ ಮಾಡಿದ್ದಾರೆ.  ದಕ್ಷಿಣ ಸುಲಾವೇಸಿ ಪ್ರಾಂತ್ಯದ ಚರ್ಚ್‌ ಬಳಿ ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ. ವಕ್ತಾರ ಜುಲ್ಫಾನ್ ಪ್ರಕಾರ ಮಕಾಸ್ಸರ್‌ನ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕ್ಯಾಥೆಡ್ರಲ್ ಚರ್ಚ್ ಮೇಲೆ ದಾಳಿ ಮಾಡಿದ ಗುಂಪಿನಲ್ಲಿ ಶಂಕಿತ ಭಾಗಿಯಾಗಿದ್ದಾನೆ. ಮಾರ್ಚ್ 28ರಂದು  ಈ ದಾಳಿ ನಡೆದಿತ್ತು. ಈಗಾಗಲೇ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 31 ಜನರನ್ನು ಬಂಧಿಸಿದ್ದು, ಇಬ್ಬರು ದಾಳಿಕೋರರು ಸಾವನ್ನಪ್ಪಿದ್ದಾರೆ. ಜಮಾ ಅನ್ಷರುದ್ ದೌಲಾದ (ಜೆಎಡಿ) … Read more

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: ರೈಲ್ವೇಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

railway

ಬೆಂಗಳೂರು(17-04-2021): ಯಲಹಂಕದ ರೈಲು ಗಾಲಿ  ಕಾರ್ಖಾನೆ ಖಾಲಿ ಹುದ್ದೆಗಳ ಭರ್ತಿಯನ್ನು ಸಂದರ್ಶನದ ಮೂಲಕ ಮಾಡಲು ಮುಂದಾಗಿದೆ. ಆಶಕ್ತಿ ಇರುವ ಅಭ್ಯರ್ಥಿಗಳು ಏ.20ರಂದು ನೇರ ಸಂದರ್ಶನಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸ್ಟಾಫ್ ನರ್ಸ್, ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞರು, ಲ್ಯಾಬ್ ತಂತ್ರಜ್ಞ ಹಾಗೂ ಆಸ್ಪತ್ರೆ ಪರಿಚಾರಕರ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 20, 2021ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ತೆರಳುವಂತೆ ಸೂಚಿಸಲಾಗಿದೆ.  ಹುದ್ದೆಗಳು ಸ್ಟಾಫ್ ನರ್ಸ್ – 13, ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞ – 01, ಲ್ಯಾಬ್ … Read more

ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಿದಾಗ ಓಡಿ ಹೋಗುತ್ತಿರುವ ಪ್ರಯಾಣಿಕರು: ವಿಡಿಯೋ ವೈರಲ್

railway

ಬಿಹಾರ(17-04-2021): ಬಿಹಾರದ ಬಕ್ಸಾರ್‌ನ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್ ನಡೆಸುವಂತೆ ಕೇಳಿಕೊಂಡಾಗ ಅನೇಕ ಪ್ರಯಾಣಿಕರು ಓಡಿಹೋಗಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಗ್ಯ ಕಾರ್ಯಕರ್ತರು COVID-19 ಪರೀಕ್ಷೆಗೆ ಪ್ರಯಾಣಿಕರನ್ನು ನಿಲ್ಲುವಂತೆ ಸೂಚಿಸಿದಾಗ ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ. ಕರೋನವೈರಸ್ ಪ್ರಕರಣಗಳು ತೀವ್ರವಾಗಿ ಏರುತ್ತಿವೆ ಎಂದು ವಿವಿಧ ರಾಜ್ಯಗಳಿಂದ ವಲಸೆ ಬಂದವರು ಹಿಂದಿರುಗುವ ಭೀತಿಯಿಂದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ COVID ಪರೀಕ್ಷೆಯನ್ನು ನಡೆಸಲಾಗುವುದು ಎಂದು … Read more

ರೈತನ ಸುತ್ತ ತ್ರಿವರ್ಣಕ್ಕೆ ಅಪಮಾನದ ಆರೋಪ

ಹುತಾತ್ಮ ಎನ್ನುವುದು ನಾಮಪದ. ಇದರ ಕ್ರಿಯಾತ್ಮಕ ಅರ್ಥ ಧರ್ಮಕ್ಕಾಗಿ ಬಲಿಯಾಗು. ಧರ್ಮ ಎಂದರೆ ಆಯಾ ವ್ಯಕ್ತಿಯ ಕ್ರಿಯಾತ್ಮಕ ನಿಷ್ಠೆ, ಗುಣಸ್ವಭಾವ. ಅಂದರೆ ಕ್ಷತ್ರಿಯನ ಧರ್ಮ ಹೋರಾಡುವುದು, ವ್ಯಾಪಾರಿಯ ಧರ್ಮ ಮೋಸವಿಲ್ಲದೆ ವ್ಯಾಪಾರ ಮಾಡುವುದು. ಅದರಂತೆ ರೈತನ ಧರ್ಮ ಫಲವತ್ತಾದ ಬೆಳೆಗಳನ್ನು ಬೆಳೆಯುವುದು. ಜನರಿಗೆ ತಲುಪುವಂತಹ ಕೆಲಸವನ್ನು ಮಾಡುವುದು, ಹಾಗಾದ್ರೆ ತನ್ನ ಕಾಯಕ ಧರ್ಮಕ್ಕೆ ಅಡ್ಡಿಪಡಿಸಿದಾಗ ಅದರ ವಿರುದ್ಧ ಹೋರಾಡುವುದು ಧರ್ಮವಲ್ಲವೇ? ಧರ್ಮಕ್ಕಾಗಿ ಮಡಿದವನು ಹುತಾತ್ಮನಲ್ಲವೇ? ಭಾರತೀಯ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಭಾರತದಾದ್ಯಂತ ಲಕ್ಷಾಂತರ ರೈತರು … Read more

ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳು ಹಾಸ್ಯ ನಟ ವಿವೇಕ್ ನಿಧನ

actor vivek

ತಮಿಳು ನಾಡು(17-04-2021): ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳು ಹಾಸ್ಯ ನಟ ವಿವೇಕ್ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ತೀವ್ರ ಹೃದಯಾಘಾತವಾಗಿದ್ದರಿಂದ ವಿವೇಕ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ 4.30ಕ್ಕೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ವಿವೇಕ್ ಗುರುವಾರ ಕೊರೋನಾ ಲಸಿಕೆ ಪಡೆದುಕೊಂಡಿದ್ದರು. ಇದಾದ ನಂತರ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಆದರೆ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿವೇಕ್ ತಮಿಳು, ಕನ್ನಡ ಸೇರಿ 200 ಕ್ಕೂ … Read more