16 ವರ್ಷದ ಬಾಲಕನ ಜೊತೆ 41ರ ಹರೆಯದ ಮಹಿಳೆಯ ವಿವಾಹ!
ಇಂಡೋನೇಷ್ಯಾದಲ್ಲಿ ವಿಚಿತ್ರ ಮದುವೆ ನಡೆದಿದೆ.41 ವರ್ಷದ ಮರಿಯಾನ ತನ್ನ ಸ್ನೇಹಿತೆಯ ಮಗನಾದ 16 ವರ್ಷದ ಬಾಲಕ ಕೆವಿನ್ ನನ್ನು ಮದುವೆಯಾಗಿದ್ದಾಳೆ.
ಮದುವೆಯ ಕುರಿತ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಕೆವಿನ್ ತಾಯಿ ಲೀಸಾ ಮತ್ತು ಮರಿಯಾನ ಈ ಮೊದಲು ಕ್ಲೋಸ್ ಫ್ರೆಂಡ್ಸ್ ಆಗಿದ್ದರು.
ಮರಿಯಾನ ಕಿರಾಣಿ ಅಂಗಡಿಯ ಮಾಲಕಿಯಾಗಿದ್ದಾರೆ.ಈ ಹಿಂದೆಯೇ ಒಬ್ಬರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.ಹೀಗಾಗಿ ಮರಿಯಾನ ಖಿನ್ನತೆಗೆ ಒಳಗಾಗಿದ್ದರು.
ಸ್ನೇಹಿತೆಯನ್ನು ಕಿನ್ನತೆಯಿಂದ ರಕ್ಷಿಸಲು ಲೀಸಾ ತನ್ನ ಮಗನ ಜೊತೆ ಮದುವೆ ಮಾಡಿದ್ದಾರೆ.ಸ್ನೇಹಿತೆಯನ್ನು ಸೊಸೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾರೆ.ಈ ಪ್ರಕರಣ ಇದೀಗ ವಿಶ್ವದಾದ್ಯಂತ ಸುದ್ದಿಯಾಗಿದೆ.