ಮಂಗಳೂರು;ಕಮಿಷನರೇಟ್ ವ್ಯಾಪ್ತಿಯ 783 ಮಂದಿ ರೌಡಿಶೀಟರ್ ಪಟ್ಟಿಯಿಂದ ತೆರವು

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ783 ಮಂದಿಯ ರೌಡಿ ಶೀಟ್ ತೆರವು ಮಾಡಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಮಾತನಾಡಿದ ಕಮಿಷನರ್ ಎನ್.ಶಶಿಕುಮಾರ್, ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 2305 ಮಂದಿ ರೌಡಿಗಳಿದ್ದಾರೆ. ಅದರಲ್ಲಿ 783 ಮಂದಿಯ ರೌಡಿ ಶೀಟ್ ತೆರವು ಮಾಡಲಾಗಿದೆ. ಇನ್ನೂ 1522 ಮಂದಿ ರೌಡಿ ಶೀಟರ್ ಗಳಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಒಂದು ಸಾವಿರಕ್ಕೂ ಅಧಿಕ ಮಂದಿಯ ರೌಡಿ ಶೀಟ್ ತೆರವುಗೊಳಿಸಲಾಗಿತ್ತು.ಮುಂದೆ ಸಮಾಜದಲ್ಲಿ ಉತ್ತಮ‌ ವ್ಯಕ್ತಿಗಳಾಗಿ ಬದುಕಲು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಅಪರಾಧ ಪ್ರಕರಣಗಳನ್ನು ತಡೆಯಲು ನೆರವಾಬೇಕು ಎಂದು ಕಮಿಷನರ್ ಹೇಳಿದರು.

ಟಾಪ್ ನ್ಯೂಸ್