ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಸಂಘಪರಿವಾರದ ಕಾರ್ಯಕರ್ತ ಅರೆಸ್ಟ್

ಚಿಕ್ಕಮಗಳೂರು: ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, ಸಂಘಪರಿವಾರದ ಕಾರ್ಯಕರ್ತ ನಿತೇಶ್ ನನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಆರೋಪಿ ನಿತೇಶ್ ನನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಸಾವಿಗೂ ಮೊದಲು ಡೆತ್ ನೋಟ್ ಬರೆದಿದ್ದು, ಈ ಆಧಾರದಲ್ಲಿ ಆರೋಪಿ ನಿತೇಶ್ ನನ್ನು ಬಂಧಿಸಲಾಗಿದೆ.

ನಿತೇಶ್ ಪ್ರೀತಿಸಿ ವಂಚಿಸಿರುವ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ಜನವರಿ 10ರಂದು ವಿಷ ಸೇವಿಸಿದ್ದಳು. ಸಾವಿಗೂ ಮುನ್ನ ಆಸ್ಪತ್ರೆಯಲ್ಲೇ ಡೆತ್ ನೋಟ್ ಬರೆದಿದ್ದಳು.

ನಿತೇಶ್ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಇದೀಗ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್