ಕಾಸರಗೋಡು; 29 ವರ್ಷಗಳ ಬಳಿಕ ಮರು ಮದುವೆಯಾದ ಮುಸ್ಲಿಂ ದಂಪತಿ; ಅಪರೂಪದ ಘಟನೆ…

ಕಾಸರಗೋಡು;ಮುಸ್ಲಿಂ ದಂಪತಿ ಮದುವೆಯಾಗಿ ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೊಮ್ಮೆ ವಿವಾಹವಾಗಿ ಸುದ್ದಿಯಾಗಿದ್ದಾರೆ.

ವಕೀಲ ಶುಕೂರ್‌ ಮತ್ತು ಡಾ.ಶೀನಾ 2ನೇ ಬಾರಿಗೆ ವಿವಾಹವಾದ ದಂಪತಿ.ತಮ್ಮ ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ದಂಪತಿ ಹೊಸದಾಗಿ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ.

ಶುಕೂರ್ ಮತ್ತು ಡಾ.ಶೀನಾ 1994ರ ಅಕ್ಟೋಬರ್‌ನಲ್ಲೇ ವಿವಾಹವಾಗಿದ್ದರು.ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಗಂಡು ಮಕ್ಕಳಿಲ್ಲ.

ಶರಿಯಾ ಕಾನೂನಿನ ಪ್ರಕಾರ ಅವರು ಮದುವೆಯಾಗಿದ್ದರು. ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪಿತ್ರಾರ್ಜಿತ
ಆಸ್ತಿಯ ಮೂರನೇ ಎರಡು ಭಾಗವಷ್ಟೇ ಅವರ ಹೆಣ್ಣುಮಕ್ಕಳಿಗೆ ಸಲ್ಲುತ್ತದೆ.ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಉಳಿದ ಆಸ್ತಿಯೆಲ್ಲ ಆ ವ್ಯಕ್ತಿಯ ಸಹೋದರರ ಪಾಲಾಗುತ್ತದೆ.

ಆದ್ದರಿಂದ ತಾವು ತಮ್ಮ ಮಕ್ಕಳಿಗಾಗಿ ದುಡಿದು, ಉಳಿತಾಯ ಮಾಡಿಟ್ಟ ಆಸ್ತಿಯು ಹೆಣ್ಣು ಮಕ್ಕಳಿಗೆ ಸಿಗಲಿ ಎಂದು ದಂಪತಿ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ಮರುನೋಂದಣಿ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com