ಬೈಕ್ ಗೆ ಟೆಂಪೋ ಢಿಕ್ಕಿ ಹೊಡೆದು ನಾಲ್ವರು ದುರ್ಮರಣ
ಮಹಾರಾಷ್ಟ್ರ;ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಾತೂರ್‌ನಲ್ಲಿ ನಡೆದಿದೆ.
ಎಲ್ಲಾ ಆರು ಜನರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಎದುರಿನಿಂದ ವೇಗವಾಗಿ ಬಂದ ಟೆಂಪೋ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಪೊಲೀಸರ ಪ್ರಾಥಮಿಕ ಹೇಳಿಕೆ ಪ್ರಕಾರ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ವೇಳೆ ಟೆಂಪೋ ಕೂಡ ಪಲ್ಟಿಯಾಗಿದ್ದು, ಒಂಬತ್ತು ಕುರಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.