ಬೆಂಗಳೂರು;ಐಪಿಎಸ್ ಅಧಿಕಾರಿ ರೂಪಾ.ಡಿ ಹಾಗೂ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆ ನಡೆದಿದೆ.
ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಗಂಗರಾಜು ಅವರು, ಕಳೆದ ತಿಂಗಳು 30ರಂದು ರೂಪಾ ನನಗೆ ಪೋನ್ ಮಾಡಿದ್ದರು. ನನ್ನ ಜೊತೆ 25 ನಿಮಿಷ ಮಾತನಾಡಿದ್ದಾರೆ. ರೂಪಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಅಕ್ರಮಗಳ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇವೆ.ಅವರ ವಿರುದ್ಧ ದೂರು ನೀಡುವಂತೆ ನನಗೆ ರೂಪಾ ಹೇಳಿದ್ದರು.ನಾನು ಅದಕ್ಕೆ ನಿರಾಕರಿಸಿದೆ. ಇದರಿಂದ ಕೋಪಗೊಂಡ ಅವರು ನನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದರು.