-ಪೈಝಲ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಉಳ್ಳಾಲ; ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ.
ಫೈಝಲ್ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.
ಫೈಸಲ್ ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.